Tvs - Hero - Bajaj: 65 ಕಿಮೀ ಮೈಲೇಜ್‌ನೊಂದಿಗೆ ಕಡಿಮೆ ಬೆಲೆಗೆ ಸಿಗುವ ಪ್ರಮುಖ ಕಂಪನಿ ಬೈಕ್‌ಗಳಿವು!
ದೇಶದಲ್ಲಿ ಕೈಗೆಟುಕುವ ಬೆಲೆಗೆ ಪ್ರಯಾಣಿಕ ದ್ವಿಚಕ್ರ ವಾಹನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಟಿವಿಎಸ್ (Tvs), ಹೀರೋ (Hero) ಹಾಗೂ ಬಜಾಜ್ (Bajaj) ಕಂಪನಿಗಳು ಹೆಚ್ಚು ಜನಪ್ರಿಯವಾಗಿವೆ. 65 ಕಿಮೀ ಮೈಲೇಜ್‌ನೊಂದಿಗೆ ಖರೀದಿಗೆ ಸಿಗುವ ಪ್ರಮುಖ ಬೈಕ್‌ಗಳ ವಿವರ ಇಲ್ಲಿದ್ದು, ಅವು ದಿನನಿತ್ಯದ ಬಳಕೆಗೆ ಸಾಕಷ್ಟು ಹೊಂದಾಣಿಕೆಯಾಗುತ್ತವೆ.
ಹೀರೋ ಹೆಚ್ಎಫ್ 100 (Hero HF 100) ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಬೈಕ್ ಆಗಿದ್ದು, ರೂ.59,108 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು 97.2 ಸಿಸಿ ಸಾಮರ್ಥ್ಯದ ಎಂಜಿನ್ ಪಡೆದಿದ್ದು, 8 hp ಗರಿಷ್ಠ ಪವರ್ ಹಾಗೂ 8.05 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 70 kmpl ಮೈಲೇಜ್ ನೀಡುತ್ತದೆ.

ಈ ಹೀರೋ ಹೆಚ್ಎಫ್ ಡಿಲಕ್ಸ್ (Hero HF Deluxe) ಸಹ ಕಡಿಮೆ ದರದಲ್ಲಿ ಸಿಗುವ ಮೋಟಾರ್ ಸೈಕಲ್ ಆಗಿದ್ದು, ಬೆಂಗಳೂರಿನಲ್ಲಿ ರೂ.64,410 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದರ 97.2 ಸಿಸಿ ಎಂಜಿನ್ 7.91 bhp ಪವರ್ ಮತ್ತು 8.05 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 4 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ. 65 kmpl ಮೈಲೇಜ್ ನೀಡುತ್ತದೆ.
ಹೀರೋ ಹೆಚ್ಎಫ್ ಡಿಲಕ್ಸ್ ಬೈಕ್, ಫ್ರಂಟ್ ಹಾಗೂ ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, 112 ಕೆಜಿ ತೂಕವಿದೆ. ಜೊತೆಗೆ 9.6 ಲೀಟರ್ ಸಾಮರ್ಥ್ಯ ಫ್ಯುಯೆಲ್ ಟ್ಯಾಂಕ್ ಪಡೆದಿದೆ. 'i3S' ಸಿಸ್ಟಮ್ (ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಬೈಕ್‌ಗೆ ಬಜಾಜ್ ಸಿಟಿ100, ಟಿವಿಎಸ್ ಸ್ಪೋರ್ಟ್ಸ್, ಹೋಂಡಾ ಸಿಡಿ 110 ಡ್ರಿಮ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಟಿವಿಎಸ್ (Tvs) ಕಂಪನಿಯ ಜನಪ್ರಿಯ ಸ್ಪೋರ್ಟ್ಸ್ (Sport) ಬೈಕ್ ಬಗ್ಗೆ ಮಾತನಾಡುವುದಾದರೆ, ಇದು ಬೆಂಗಳೂರಿನಲ್ಲಿ ರೂ.81,512 ಆನ್-ರೋಡ್ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. 109.7 ಸಿಸಿ ಬಿಎಸ್6 ಎಂಜಿನ್ ಹೊಂದಿದ್ದು, 8.18 bhp ಗರಿಷ್ಠ ಪವರ್ ಹಾಗೂ 8.7 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಈ ಬೈಕ್, 67.5 kmpl ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, 110 ಕೆಜಿ ತೂಕವಿದ್ದು, 10 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಒಳಗೊಂಡಿದ್ದು, ಎರಡು ತುದಿಯಲ್ಲಿ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲ್ಇಡಿ DRLs ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ವಿವಿಧ ಬಣ್ಣಗಳ ಆಯ್ಕೆಯಲ್ಲೂ ಖರೀದಿದಾರರಿಗೆ ಸಿಗುತ್ತದೆ.
ಹೋಂಡಾ ಶೈನ್ 100 (Honda Shine 100) ಬೆಂಗಳೂರಿನಲ್ಲಿ 85,447 ಆನ್-ರೋಡ್ ದರದಲ್ಲಿ ಖರೀದಿಗೆ ಲಭ್ಯವಿದೆ. ಇದು, 99.7 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, 7.61 hp ಗರಿಷ್ಠ ಪವರ್ ಮತ್ತು 8.05 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 65 kmpl ಮೈಲೇಜ್ ನೀಡುತ್ತದೆ. 9 ಲೀ.ನಷ್ಟು ಫ್ಯುಯೆಲ್ ಟ್ಯಾಂಕ್ ಒಳಗೊಂಡಿದೆ.
ಕಡೆಯದಾಗಿ ಬಜಾಜ್ ಪ್ಲಾಟಿನಾ 100 (Bajaj Platina 110) ಬಗ್ಗೆ ತಿಳಿಯೋಣ. ಈ ಬೈಕ್, ರೂ.67,808 ಎಕ್ಸ್ ಶೋರೂಂ (ದೆಹಲಿ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದರ, 102 ಸಿಸಿ ಎಂಜಿನ್ 7.9 hp ಪವರ್ ಮತ್ತು 8.3 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 75 - 80 kmpl ಮೈಲೇಜ್ ನೀಡುತ್ತದೆ. ಜೊತೆಗೆ ಗ್ರಾಹಕರನ್ನು ಆಕರ್ಷಿಸಿವ ಹಲವು ಫೀಚರ್ಸ್ ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications