MotoGP: ಕೆಲವೇ ಗಂಟೆಯಲ್ಲಿ ಚಾಂಪಿಯನ್ ಯಾರೆಂದು ನಿರ್ಧಾರ! ಮನೆಯಲ್ಲೇ ವೀಕ್ಷಿಸಿ

ಪ್ರತಿಷ್ಠಿತ ಮೋಟಾರ್‌ಸೈಕಲ್ ರೇಸ್‌ಗಳಲ್ಲಿ ಮೋಟೋಜಿಪಿ ವಿಶ್ವ ಚಾಂಪಿಯನ್‌ಶಿಪ್ (MotoGP World Championship) ಒಂದಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿಯಾಗಿದ್ದು, ಉತ್ತರಪ್ರದೇಶದ ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದು, ರೇಸ್ ಪ್ರಿಯರಿಗೆ ಇಂದು, ನಾಳೆ ಹಬ್ಬವೇ ಸರಿ ಎಂದು ಬಣ್ಣಿಸಬಹುದು.

ಈ ಸ್ಪರ್ಧೆಯು ಮೋಟೋಜಿಪಿ (MotoGP), ಮೋಟೋ 2 (Moto 2) ಮತ್ತು ಮೋಟೋ 3 (Moto 3) ಎಂಬ ಮೂರು ವಿಭಾಗಗಳಲ್ಲಿ ಜರುಗುತ್ತಿದ್ದು, 41 ತಂಡಗಳಿಂದ 82 ರೈಡರ್‌ಗಳು ಭಾಗವಹಿಸಿದ್ದಾರೆ. ಪ್ರಮುಖವಾಗಿ, ಡುಕಾಟಿ, ಕೆಟಿಎಂ, ಅಪ್ರಿಲಿಯಾ, ಯಮಹಾ ಸೇರಿದಂತೆ ಹಲವು ತಂಡಗಳು ಪಾಲ್ಗೊಂಡಿದ್ದು, ವಿಶ್ವವಿಖ್ಯಾತ ರೈಡರ್‌ಗಳಾದ ಫ್ರಾನ್ಸೆಸ್ಕೊ ಮರ್ಕ್ವೆಜ್, ಫ್ರಾನ್ಸೆಸ್ಕೊ ಮಾರ್ಕ್ನೇಜ್ ಬೆಝೆಚಿ, ಬ್ರಾಡ್ ಬೈಂಡರ್, ಜ್ಯಾಕ್ ಮಿಲ್ಲರ್ ಅವರನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.

MotoGP: ಕೆಲವೇ ಗಂಟೆಯಲ್ಲಿ ಚಾಂಪಿಯನ್ ಯಾರೆಂದು ನಿರ್ಧಾರ! ಮನೆಯಲ್ಲೇ ವೀಕ್ಷಿಸಿ

ಇಂದು ಬೆಳಗ್ಗಿನಿಂದಲೇ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದು, ಮೋಟೋ 3, ಮೋಟೋ 2 ವಿಭಾಗದಲ್ಲಿ ಪ್ರಾಕ್ಟೀಸ್ ಮತ್ತು ಕ್ವಾಲಿಫೈ ರೇಸ್ ಮುಕ್ತಾಯಗೊಂಡಿದೆ. ಅದೇ ರೀತಿಯಲ್ಲಿ ಮೋಟೋಜಿಪಿ ವಿಭಾಗದ ಫ್ರಿ ಪ್ರಾಕ್ಟೀಸ್ ಹಾಗೂ ಕ್ವಾಲಿಫೈ ಸ್ಪರ್ಧೆಗಳು ಕೊನೆಗೊಂಡಿವೆ. ಮೋಟೋ 2 ವಿಭಾಗದಲ್ಲಿ ಮಧ್ಯಾಹ್ನ 2.15 ರಿಂದ 2.30 ಕ್ವಾಲಿಫೈ 1 ಹಾಗೂ 2.40 ರಿಂದ 2.55 ವರೆಗೆ ಕ್ವಾಲಿಫೈ 2 ರೇಸ್ ಜರುಗಲಿದೆ.

ಮಧ್ಯಾಹ್ನ 3.30ಕ್ಕೆ ಮೋಟೋಜಿಪಿ ವಿಭಾಗದಲ್ಲಿ ಟಿಸ್ಸಾಟ್ ಸ್ಪ್ರಿಂಟ್ (11 ಸುತ್ತು) ನಡೆಯಲಿದೆ. ಒಂದರ್ಥದಲ್ಲಿ ಅಭ್ಯಾಸ ಪಂದ್ಯದ ರೀತಿ. ನಾಳೆ (ಸೆ.23) ಅಂತಿಮ ಸ್ಪರ್ಧಿಗಳು ಜರುಗಲಿದೆ. ಬೆಳಗ್ಗೆ 11.10 ರಿಂದ 11.20 ರವರೆಗೆ ಮೋಟೋಜಿಪಿ ವಿಭಾಗದಲ್ಲಿ ವಾರ್ಮ್ ಅಪ್ ರೇಸ್ ನಡೆಯಲಿದೆ. ಆ ಬಳಿಕ, 11.30ಕ್ಕೆ ರೈಡರ್ ಫ್ಯಾನ್ ಪರೇಡ್ ಇರಲಿದೆ. ಆ ನಂತರ ಅಸಲಿ ರೇಸ್ ಶುರುವಾಗಲಿದೆ.

ಮಧ್ಯಾಹ್ನ 12.30ಕ್ಕೆ ಮೋಟೋ 3 ರೇಸ್ (16 ಸುತ್ತು) ನಡೆಯಲಿದೆ. ಅದು ಮುಗಿದಕೊಡಲೇ ಪತ್ರಿಕಾಗೋಷ್ಠಿ ಹಾಗೂ ಪ್ರಶಸ್ತಿ ವಿತರಣೆ ನಡೆಯಲಿದೆ. ಮಧ್ಯಾಹ್ನ 1.45ಕ್ಕೆ ಮೋಟೋ 2 ರೇಸ್ (18 ಸುತ್ತು) ಇದೆ. ಆ ಬಳಿಕ ಮಧ್ಯಾಹ್ನ 3.50ಕ್ಕೆ ಎಲ್ಲರ ನೀರಿಕ್ಷೆಯ ಮೋಟೋಜಿಪಿ ರೇಸ್ (21 ರೇಸ್) ಜರುಗಲಿದ್ದು, ಅಲ್ಲಿ ಭಾರತದ ನೆಲದಲ್ಲಿ ಯಾರು ಚಾಂಪಿಯನ್ ಪಟ್ಟ ಅಲಂಕರಿಸುತ್ತಾರೆ ಎಂಬುದು ಗೊತ್ತಾಗುತ್ತದೆ.

ನೀವು, ಈ ಮೋಟೋಜಿಪಿ ವಿಶ್ವ ಚಾಂಪಿಯನ್‌ಶಿಪ್ ರೇಸ್ ಅನ್ನು ಮನೆಯಿಂದಲ್ಲೇ ವೀಕ್ಷಣೆ ಮಾಡಬಹುದು. ಜಿಯೋಸಿನಿಮಾ (JioCinema) ಅಪ್ಲಿಕೇಶನ್, ವೆಬ್‌ಸೈಟ್ ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತಿದೆ. ಜೊತೆಯಲ್ಲಿ ಸ್ಪೋರ್ಟ್ಸ್ 18 (Sports18) ವಾಹಿನಿಯಲ್ಲಿ ನೇರ ಪ್ರಸಾರವಿರುತ್ತದೆ. ವಾರಾಂತ್ಯವಾಗಿರುವುದರಿಂದ ರೇಸ್ ವೀಕ್ಷಿಸಲು ಹೆಚ್ಚಿನ ಜನ ಬರುತ್ತಿರವುದರಿಂದ ನೋಯ್ಡಾ ಪೊಲೀಸರು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಇನ್ನು, ಪ್ರತಿಷ್ಠಿತ ಮೋಟಾರ್‌ಸೈಕಲ್ ರೇಸ್‌ಗಳಲ್ಲಿ ಒದಗಿರುವ ಮೋಟೋಜಿಪಿ ವಿಶ್ವ ಚಾಂಪಿಯನ್‌ಶಿಪ್ ಭಾರತದಲ್ಲಿ ನಡೆಯುತ್ತಿರುವುದು ರೇಸ್ ಪ್ರಿಯರಿಗೆ ಸಖತ್ ಖುಷಿ ನೀಡಿದೆ. ನಾಳೆ ಅಂತಿಮ ರೇಸ್ ಜರುಗಲಿದ್ದು, ಯಾರು ಚಾಂಪಿಯನ್ ಆಗಿ ಹೊರಹೊಮ್ಮುತ್ತಾರೆ ಎನ್ನುವುದನ್ನು ಲಕ್ಷಾಂತರ ಜನರು ಕುತುಹಲದಿಂದ ಎದುರು ನೋಡುತ್ತಿದ್ದು, ಕೆಲವೇ ಗಂಟೆಗಳಲ್ಲಿ ಎಲ್ಲದಕ್ಕೂ ಅಂತಿಮ ತೆರೆ ಬೀಳಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, September 23, 2023, 13:43 [IST]
English summary
Motogp bharat 2023 here the time table details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+