ಬೆಂಗಳೂರಿನ ಎಥರ್‌ನ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪ್ರಾರಂಭ: ಮುಗಿಬಿದ್ದ ಗ್ರಾಹಕರು!

ಬೆಂಗಳೂರು ಮೂಲದ ಎಥರ್ ಎನರ್ಜಿ ತನ್ನ ಬಹು ನಿರೀಕ್ಷಿತ ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಎಥರ್ 450S (Ather 450S) ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಯನ್ನು ಪ್ರಾರಂಭಿಸಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್‌ಗಿಂತ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.

ಹೊಸ ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 1.30 ಲಕ್ಷವಾಗಿದೆ. ಹೊಸ ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್ ಸಣ್ಣ 2.9kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಈ ಚಿಕ್ಕ ಬ್ಯಾಟರಿ ಪ್ಯಾಕ್ ಹೊರತಾಗಿಯೂ, ಮಾದರಿಯ ಸ್ಟ್ಯಾಂಡರ್ಡ್ 115 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಹೊಸ ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್ 7.24bhp ಮತ್ತು 22Nm ಪೀಕ್ ಟಾರ್ಕ್ ಉತ್ಪಾದಿಸುವ PMSM ಎಲೆಕ್ಟ್ರಿಕ್ ಮೋಟಾರ್‌ ಅನ್ನು ಒಳಗೊಂಡಿದೆ.

Ather 450S

ಇದು ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್‌ಗಿಂತ ಸ್ವಲ್ಪ ಕಡಿಮೆಯಾಗಿದೆ. ಇದಲ್ಲದೆ, ಹೊಸ ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್‌ನ ಕಾರ್ಯಕ್ಷಮತೆಯ ಅಂಕಿಅಂಶಗಳ ಬಗ್ಗೆ ಹೇಳುವುದಾದರೆ, ಇದು ಕೇವಲ 3.9 ಸೆಕೆಂಡುಗಳಲ್ಲಿ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದಲ್ಲದೆ, ಈ ಮಾದರಿಯು ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಹೊಸ ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು ಹೊಸ ಡೀಪ್‌ವ್ಯೂ ಡಿಸ್‌ಪ್ಲೇಯನ್ನು ಹೊಂದಿದೆ. ಎಥೆರ್ ಪ್ರಕಾರ, ಹೊಸ ಡಿಸ್‌ಪ್ಲೇಯು ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ವಿಭಜಿತ ಡಿಸ್ ಪ್ಲೇಗಿಂತ 20X ಹೆಚ್ಚಿನ ಕಾಂಟ್ರಾಸ್ಟ್ ಮತ್ತು 4X ಹೆಚ್ಚಿನ ವಿಭಾಗಗಳನ್ನು ಹೊಂದಿದೆ.

ಈ ಹೊಸ ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್ ಟಚ್-ಆಧಾರಿತ ಇಂಟರ್ಫೇಸ್ನೊಂದಿಗೆ ಬರುವುದಿಲ್ಲ. ಪರಿಣಾಮವಾಗಿ, ಮೆನುಗಳನ್ನು ಈಗ ಹೊಸ 5-ವೇ ಸ್ವಿಚ್ ಬಳಸಿ ನ್ಯಾವಿಗೇಟ್ ಮಾಡಲಾಗುತ್ತದೆ. ಹೇಳುವುದಾದರೆ, 450S ಎಲೆಕ್ಟ್ರಿಕ್ ಸ್ಕೂಟರ್ ಸ್ಪಾರ್ಟಾನ್ ಅಲ್ಲ ಮತ್ತು ಸಾಕಷ್ಟು ತಂತ್ರಜ್ಞಾನವನ್ನು ಹೊಂದಿದೆ. ಈ ಕೈಗೆಟುಕವ ಬೆಲೆಯ ಈ ಸ್ಕೂಟರ್ ನಲ್ಲಿ ಅತ್ಯಂತ ಉತ್ತಮ ತಂತ್ರಜ್ಞಾನವನ್ನು ಒಳಗೊಂಡಿದೆ.

ಹೊಸ ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಶನ್, ಬ್ಲೂಟೂತ್ ಕನೆಕ್ಟಿವಿಟಿ, ಮಲ್ಟಿಪಲ್ ರೈಡ್ ಮೋಡ್‌ಗಳು, ಪಾರ್ಕ್ ಅಸಿಸ್ಟ್, ಆಟೋ ಹೋಲ್ಡ್, ಫಾಲ್ ಸೇಫ್, ಕೋಸ್ಟಿಂಗ್ ರೆಜೆನ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ (ಇಎಸ್‌ಎಸ್) ಮತ್ತು ಹೆಚ್ಚಿನ ಫೀಚರ್ಸ್ ಗಳನ್ನು ನೀಡಲಾಗಿದೆ. ಈ ಸ್ಕೂಟರ್, ಉತ್ತಮವಾದ ಟೈಯರ್ ಆಯ್ಕೆಯನ್ನು ಹೊಂದಿದ್ದು, ಉತ್ತಮವಾಗಿ ಸ್ಕೂಟರ್ ಓಡಿಸಲು ಸಹಾಯಕವಾಗಿದೆ.

ಅದರಲ್ಲೂ, ಸಸ್ಪೆನ್ಷನ್ ಸೆಟಪ್‌ ಅತ್ಯುತ್ತಮವಾಗಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಿರುವ ರಸ್ತೆಗಳಲ್ಲಿ ಸುಲಭವಾಗಿ 450ಎಸ್ ಇ-ಸ್ಕೂಟರ್‌ನ್ನು ಓಡಿಸಬಹುದು. ಒಂದಷ್ಟು ಸಣ್ಣಪುಟ್ಟ ಸಮಸ್ಯೆಗಳಿವೆ. ಆದರೂ, ಸವಾರರಿಗೆ ಉತ್ತಮವಾದ ರೈಡಿಂಗ್ ಅನುಭವನ್ನು ನೀಡುತ್ತದೆ. ಕಾಂಬಿ-ಬ್ರೇಕಿಂಗ್ ಸಿಸ್ಟಮ್ ಇದ್ದು, ಬ್ರೇಕ್ ಹಾಕಿದೊಡನೆ ಸ್ಕೂಟರ್ ನಿಲ್ಲುತ್ತದೆ. ಥರ್ ಎನರ್ಜಿಯ ಸ್ಕೂಟರ್ 450 ಸರಣಿಯ ಹೊಸ ಸ್ಕೂಟರ್ ಇದಾಗಿದೆ.

ನೀವು ಎಂಟ್ರಿ ಲೆವೆಲ್ ಸ್ಕೂಟರ್ ಹುಡುಕುತ್ತಿದ್ದಾರೆ, ಈ 450ಎಸ್ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ. ನಗರ ಸಂಚಾರಕ್ಕೆ ಸೂಕ್ತವಾಗಿದೆ. ಬೆಲೆಯು ಕೈಗೆಟುಕುವಂತಿದ್ದು, ಅತ್ಯಾಕರ್ಷಕ ವೈಶಿಷ್ಟ್ಯವನ್ನು ಹೊಂದಿದ್ದು, ನಿಮ್ಮ ಆಯ್ಕೆಯ ದ್ವಿಚಕ್ರ ವಾಹನವಾಗಿ ಪರಿಗಣಿಸಬಹುದು. ಈ ಹೊಸ ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್ ತನ್ನ ಕೈಗೆಟುಕುವ ಬೆಲೆಯೊಂದಿಗೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Tuesday, September 12, 2023, 11:44 [IST]
English summary
New ather 450s electric scooter deliveries commence in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+