KTM 250 Duke: ಕೆಟಿಎಂ 250 ಡ್ಯೂಕ್ ಬಿಡುಗಡೆ, 'ರಸ್ತೆ ರಾಜ' ಪಕ್ಕಾ.. ಪ್ರತಿಸ್ಪರ್ಧಿಗಳಿಗೆ ನುಡುಕ!

ಆಸ್ಟ್ರಿಯನ್ ಮೋಟಾರ್‌ಸೈಕಲ್ ಕಂಪನಿ ಕೆಟಿಎಂ (KTM), ಕೆಲವು ವರ್ಷಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ಮುನ್ನೆಲೆಗೆ ಬರುತ್ತಿದೆ. ಸದ್ಯ, ಹೆಚ್ಚಿನ ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ತನ್ನತ್ತ ಸೆಳೆಯಲು 250 ಡ್ಯೂಕ್ (250 Duke) ಬೈಕ್‍ನ್ನು ಲಾಂಚ್ ಮಾಡಿದೆ. ಆ ಕುರಿತು ಸಂಪೂರ್ಣ ವಿವರವನ್ನು ತಿಳಿಯೋಣ ಬನ್ನಿ.

ಮೊದಲಿಗೆ ಈ ಹೊಸ ತಲೆಮಾರಿನ ಕೆಟಿಎಂ 250 ಡ್ಯೂಕ್ (KTM 250 Duke) ಮೋಟಾರ್‌ಸೈಕಲ್ ಬೆಲೆ ಬಗ್ಗೆ ಮಾತನಾಡೋಣ. ಇದು 2,39,000 (ಎಕ್ಸ್ ಶೋರೂಂ, ದೆಹಲಿ) ದರದಲ್ಲಿ ಖರೀದಿಗೆ ಲಭ್ಯವಿದೆ. ಆಸಕ್ತರ ಗ್ರಾಹಕರು, ರೂ.4,499 ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಬಹುದು. ಈ ತಿಂಗಳ (ಸೆಪ್ಟೆಂಬರ್) ಮಧ್ಯ ಭಾಗದಲ್ಲಿ ಡೀಲರ್‌ಶಿಪ್‌ ತಲುಪಲಿದ್ದು, ಆ ಬಳಿಕ, ಕೆಲವೇ ದಿನಗಳಲ್ಲಿ ವಿತರಣೆ ಶುರುವಾಗಲಿದೆ.

KTM 250 Duke: ಕೆಟಿಎಂ 250 ಡ್ಯೂಕ್ ಬಿಡುಗಡೆ, ರಸ್ತೆ ರಾಜ ಪಕ್ಕಾ.. ಪ್ರತಿಸ್ಪರ್ಧಿಗಳಿಗೆ ನುಡುಕ!

ನೂತನ ಕೆಟಿಎಂ 250 ಡ್ಯೂಕ್ ಬೈಕ್ ಹಿಂದಿನ ಮಾದರಿಗೆ ಹೋಲಿಸಿದರೆ ಶಕ್ತಿಯುತ 250 ಸಿಸಿ ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿದ್ದು, 31 hp ಗರಿಷ್ಠ ಪವರ್ ಹಾಗೂ 25 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

ವಿನ್ಯಾಸದ ದೃಷ್ಟಿಯೊಂದಲ್ಲೂ ಹೊಸ ತಲೆಮಾರಿನ ಕೆಟಿಎಂ 250 ಡ್ಯೂಕ್ ಮೋಟಾರ್‌ಸೈಕಲ್ ಅತ್ಯಾಧುನಿಕವಾಗಿದ್ದು, ನೂತನ 2 ಪೀಸ್ ಫ್ರೇಮ್ ಅನ್ನು ಹೊಂದಿದೆ. ಹಳೆಯ ಮಾದರಿಗೆ ಹೋಲಿಸಿದರೆ, ಸಾಕಷ್ಟು ಮರು ವಿನ್ಯಾಸಗೊಂಡಿದೆ. ಹೊಸದಾದ ಅಲಾಯ್ ವೀಲ್ಸ್ ಪಡೆದಿದೆ. ಬಣ್ಣಗಳ ಆಯ್ಕೆ ಬಗ್ಗೆ ಹೇಳುವುದಾದರೆ, ಎಲೆಕ್ಟ್ರಾನಿಕ್ ಆರೆಂಜ್ ಮತ್ತು ಸೆರಾಮಿಕ್ ವೈಟ್ ಕಲರ್ ಆಯ್ಕೆಯಲ್ಲಿ ಸಿಗುತ್ತದೆ.

ಹೊಸ ಕೆಟಿಎಂ 250 ಡ್ಯೂಕ್ ಬೈಕ್ ಒಳಗೊಂಡಿರುವ ವೈಶಿಷ್ಟ್ಯಗಳ ಬಗ್ಗೆ ತಿಳಿಯುವುದಾದರೆ, ಈ ಮೋಟಾರ್‌ಸೈಕಲ್, ಕ್ವಿಕ್‌ಶಿಫ್ಟರ್, ರೈಡ್-ಬೈ-ವೈರ್, ಸ್ಲಿಪ್ಪರ್ ಕ್ಲಚ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌, ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 5 ಇಂಚಿನ LCD ಡಿಸ್ಪ್ಲೇ, 800 ಎಂಎಂ ಎತ್ತರದ ಸೀಟ್ ಹಾಗೂ ದೊಡ್ಡದಾದ ಏರ್ ಬಾಕ್ಸ್ ಅನ್ನು ಪಡೆದಿದೆ.

ಹೊಸ ಮೋಟಾರ್‌ಸೈಕಲ್ ನ ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆನ್ಷನ್ ಸೆಟಪ್ ಬಗ್ಗೆ ತಿಳಿಯುವುದಾದರೆ, ಇದು ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಫ್ರಂಟ್ ಅಪ್ಸೆಡ್ - ಡೌನ್ ಫೋರ್ಕ್ಸ್, ರೇರ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿರುವ ಮೂಲಕ ಹಿಂದಿನ ಮಾದರಿಗೆ ಹೋಲಿಕೆ ಮಾಡಿದರೆ, ಹೆಚ್ಚು ಅತ್ಯಾಧುನಿಕವಾಗಿದೆ.

ಇದರೊಟ್ಟಿಗೆ ಲಾಂಚ್ ಆಗಿರುವ ಕೆಟಿಎಂ 390 ಡ್ಯೂಕ್ (KTM 390 Duke) ಬೈಕ್ ಬಗ್ಗೆ ಮಾತನಾಡುವುದಾದರೆ, ಇದು ರೂ.3.11 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. 399 ಸಿಸಿ ಲಿಕ್ವಿಡ್ ಕೋಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 45 hp ಗರಿಷ್ಠ ಪವರ್ ಹಾಗೂ 39 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

ಕೆಟಿಎಂ 390 ಡ್ಯೂಕ್ ಮೋಟಾರ್‌ಸೈಕಲ್ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, ರೈಡ್ - ಬೈ - ವೈರ್ ಥ್ರೊಟಲ್, ಟ್ರಾಕ್ಷನ್ ಕಂಟ್ರೋಲ್, ರೈಡ್ ಮೋಡ್ಸ್, ಕಾರ್ನರಿಂಗ್ ABS, ಸೂಪರ್‌ಮೋಟೋ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಟ್ರ್ಯಾಕ್ ಸ್ಕ್ರೀನ್, ಲಾಂಚ್ ಕಂಟ್ರೋಲ್, ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 5 - ಇಂಚಿನ ಟಿಎಫ್‌ಟಿ ಡಿಸ್ಪ್ಲೇ, ಟೈಪ್ - ಸಿ ಚಾರ್ಜಿಂಗ್ ಪೋರ್ಟ್ ಅನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, September 11, 2023, 12:37 [IST]
English summary
New gen ktm 250 duke launched india details
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+