160 ಸಿಸಿ ಸೆಗ್ಮೆಂಟ್ ಆಳಲು Hero Xtreme 160R 4V ಎಂಟ್ರಿ... ಹಳೇ ಪಂಟರ ಕಥೆಯೇನು?
ಹೀರೋ ಮೋಟೋಕಾರ್ಪ್ ಇತ್ತಿಚೆಗೆ ತನ್ನ ಜನಪ್ರಿಯ ಎಕ್ಸ್‌ಟ್ರಿಮ್ 160R 4V ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹಿಂದೆ 2V ಎಂಜಿನ್‌ನಿಂದ ಬರುತ್ತಿದ್ದ ಎಕ್ಸ್‌ಟ್ರಿಮ್ 160 ಅಷ್ಟೇನು ಜನಪ್ರಿಯವಾಗಿರಲಿಲ್ಲ. ಆದ್ರೆ ಈಗ 4V ಎಂಜಿನ್‌ನೊಂದಿಗೆ ಬರುತ್ತಿದ್ದು, 160 ಸಿಸಿ ಸೆಗ್ಮೆಂಟ್‌ನಲ್ಲಿ ಟಾಪ್ ಬ್ರಾಂಡ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.
ಪ್ರಮುಖವಾಗಿ Xtreme 160R ನ 4V ಬೈಕ್, 160 ಸಿಸಿ ಸೆಗ್ಮೆಂಟ್‌ನಲ್ಲಿ ಟಾಪ್‌ನಲ್ಲಿರುವ ಬಜಾಜ್ ಪಲ್ಸರ್ N160 ಬೈಕನ್ನು ಪ್ರಮುಖ ಪ್ರತಿಸ್ಪರ್ಧಿಯಾಗಿ ತೆಗೆದುಕೊಳ್ಳುತ್ತದೆ. ಸದ್ಯ ಪಲ್ಸರ್ N160 ಮಿಡ್ ರೇಂಜ್ ಖರೀದಿದಾರರಗೆ ಉತ್ತಮ ಆಯ್ಕೆಯಾಗಿದೆ. ಆದ್ರೆ ಈಗ ಬಿಡುಗಡೆಯಾಗಿರುವ ಹೊಸ ಹೀರೋ ಎಕ್ಸ್‌ಟ್ರಿಮ್ 160R 4V ಯಾವ ಮಟ್ಟಿಗೆ ಪಲ್ಸರ್ N160 ಗಿಂತ ಉತ್ತಮವಾಗಿದೆ ಎಂಬುದನ್ನು ಇಲ್ಲಿ ನೋಡೊಣ.

ಬೆಲೆ: ಹೀರೋ ಎಕ್ಸ್‌ಟ್ರೀಮ್ 160ಆರ್ 4ವಿ ವೇರಿಯೆಂಟ್‌ಗಳ ಆಧಾರದ ಮೇಲೆ ಬೆಲೆಯು ರೂ. 1.19 ಲಕ್ಷದಿಂದ ಆರಂಭವಾಗಿ ರೂ. 1.30 ಲಕ್ಷದವರೆಗೆ (ಎಕ್ಸ್ ಶೋರೂಂ)ಇದೆ. ಬಜಾಜ್ ಪಲ್ಸರ್ ಎನ್160 ಬೆಲೆಯು ರೂ. 1.23 ಲಕ್ಷದಿಂದ ಆರಂಭವಾಗಿ ರೂ. 1.30 ಲಕ್ಷದವರೆಗೆ ಇದೆ. ಎರಡೂ ಮೋಟಾರ್ ಸೈಕಲ್‌ಗಳ ಬೆಲೆಯು ಹೆಚ್ಚು ಕಡಿಮೆ ಒಂದೇ ಆಗಿವೆ. ಹಾಗಾಗಿ ಖರೀದಿದಾರರಿಗೆ ಈಗ ಪವರ್, ಡಿಸೈನ್, ಪರ್ಫಾಮೆನ್ಸ್ ಪ್ರಮುಖ ಆದ್ಯೆಯಾಗುತ್ತದೆ.
ಡಿಸೈನ್: ಎರಡೂ ಮೋಟಾರ್‌ಸೈಕಲ್‌ಗಳು ಸಖತ್ ಮಸ್ಕುಲರ್ ಲುಕ್ ಹೊಂದಿವೆ. ಆಕ್ರಮಣಕಾರಿ ಹೆಡ್‌ಲ್ಯಾಂಪ್, ಷಾರ್ಪ್ ಫ್ಯೂಲ್ ಟ್ಯಾಂಕ್‌ನೊಂದಿಗೆ ಬರುತ್ತವೆ. ಇದೀಗ ಬಿಡುಗಡೆಯಾಗಿರುವ Xtreme 160R 4V ಫ್ಯೂಲ್ ಟ್ಯಾಂಕ್, ಎಂಜಿನ್ ಕವರ್, ಹೆಡ್‌ಲ್ಯಾಂಪ್ ಮತ್ತು ಸೀಟ್‌ಗಳಿಗೆ ಹಲವಾರು ಬದಲಾವಣೆಗಳನ್ನು ಮಾಡಿದೆ. ಪಲ್ಸರ್ ಎನ್160 ಪಲ್ಸರ್ ಎನ್250 ನಂತೆ ಅದೇ ವಿನ್ಯಾಸವನ್ನು ಹೊಂದಿದೆ. ಆದ್ರೂ ಈ ಡಿಸೈನ್ ಎಷ್ಟು ಫೇಮಸ್ ಎಂಬುದು ಎಲ್ಲರಿಗೂ ಗೊತ್ತು.

ವೈಶಿಷ್ಟ್ಯಗಳು: ಎರಡೂ ಮೋಟಾರ್‌ಸೈಕಲ್‌ಗಳು ಎಲ್‌ಇಡಿ ಲೈಟ್‌ಗಳೊಂದಿಗೆ ಬರುತ್ತವೆ. ಆದ್ರೆ ಪಲ್ಸರ್ N160 ಮಾತ್ರ ಇಂಡಿಕೇಟರ್‌ಗಳನ್ನು ಹ್ಯಾಲೋಜನ್ ಸೆಟಪ್‌ನಲ್ಲಿ ಪಡೆದಿದೆ. 160R 4V ಬ್ಲೂಟೂತ್ ಸಂಪರ್ಕದೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದಿದೆ. ಆದ್ರೆ ಪಲ್ಸರ್ N160 ಅನಾಲಾಗ್ ಟ್ಯಾಕೋಮೀಟರ್‌ನೊಂದಿಗೆ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದಿದೆ. ಜೊತೆಗೆ ಆಪ್ಷನಲ್ ಆಗಿ ಡ್ಯುಯಲ್-ಚಾನೆಲ್ ABS ನೊಂದಿಗೆ ಬರುತ್ತದೆ.
ಹೀರೋ Xtreme ಎಂಜಿನ್: ಹೊಸ ಹೀರೋ Xtreme 160R 4V ಬೈಕ್ 163.2 cc ಆಯಿಲ್-ಕೂಲ್ಡ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 8,500 rpm ನಲ್ಲಿ 16.66 bhp ಪವರ್ ಮತ್ತು 6,500 rpm ನಲ್ಲಿ 14.6 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಪಲ್ಸರ್ N160 ಎಂಜಿನ್: ಪಲ್ಸರ್ N160 ಬೈಕ್ 164.82 cc ಆಯಿಲ್ ಕೂಲ್ಡ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 8,750 rpm ನಲ್ಲಿ 15.78 bhp ಮತ್ತು 6,750 rpm ನಲ್ಲಿ 14.65 Nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಟ್ರಾನ್ಸ್ಮಿಷನ್‌ಗೆ ಜೋಡಿಸಲಾಗಿದೆ.
ಎರಡೂ ಮೋಟಾರ್ ಸೈಕಲ್‌ಗಳು ಆಯಾ ಬ್ರಾಂಡ್‌ಗಳಿಗೆ ತಕ್ಕಂತೆ ತಮ್ಮದೇ ವಿನ್ಯಾಸ, ವೈಶಿಷ್ಟ್ಯ, ಪವರ್‌ಗಳನ್ನು ನೀಡವೆ. ಬೆಲೆ, ವಿನ್ಯಾಸ, ವೈಶಿಷ್ಟ್ಯಗಳು ಬಹುತೇಕ ಒಂದೇ ಆಗಿದ್ದರೂ ಅಲ್ಲೊಂದು ಇಲ್ಲೊಂದನ್ನು ಕೈಬಿಟ್ಟಿವೆ. ಮುಕ್ಯವಾಗಿ ಪಲ್ಸರ್ ಎಂಜಿನ್ ಪರ್ಫಾಮೆನ್ಸ್ ಅನ್ನು ನೋಡುವುದಾದರೆ 1 bhp ಪವರ್ ಕಡಿಮೆಯಿದೆ. ಉಳಿದಂತೆ ಎಲ್ಲದರಲ್ಲೂ ಎರಡೂ ಕೂಡ 160 ಸಿಸಿ ಸೆಗ್ಮೆಂಟ್‌ಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಪಡೆದಿವೆ.


Click it and Unblock the Notifications