ಮಧ್ಯಮ ವರ್ಗದವರಿಗಾಗಿ ಅಗ್ಗದ ಬೆಲೆಯಲ್ಲಿ ಹೊಸ ಹೋಂಡಾ ಸಿಡಿ110 ಡ್ರೀಮ್ ಡಿಲಕ್ಸ್ ಬೈಕ್ ಬಿಡುಗಡೆ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ತನ್ನ ಬಹುನಿರೀಕ್ಷಿತ ಹೊಸ ಹೋಂಡಾ ಸಿಡಿ110 ಡ್ರೀಮ್ ಡಿಲಕ್ಸ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಸಿಡಿ110 ಡ್ರೀಮ್ ಡಿಲಕ್ಸ್ (Honda CD110 Dream Deluxe) ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.73,400 ಆಗಿದೆ.
ಹೊಸ ಹೋಂಡಾ ಸಿಡಿ110 ಡ್ರೀಮ್ ಡಿಲಕ್ಸ್ ಬೈಕ್ ಕೇವಲ ಒಂದ್ಯ್ ರೂಪಾಂತರದಲ್ಲಿ ಮಾತ್ರ ಲಬ್ಯವಿದೆ. ಈ ಬೈಕ್ ಮೇಲೆ ವಿಶೇಷ 10-ವರ್ಷದ ವಾರಂಟಿ ಪ್ಯಾಕೇಜ್ (3 ವರ್ಷಗಳ ಸ್ಟ್ಯಾಂಡರ್ಡ್ + 7 ವರ್ಷಗಳ ಆಯ್ಕೆಯ ವಿಸ್ತೃತ ವಾರಂಟಿ) ಅನ್ನು ಸಹ ನೀಡುತ್ತಿದೆ. ಈ ಹೋಂಡಾ ಸಿಡಿ110 ಡ್ರೀಮ್ ಡಿಲಕ್ಸ್ ಬೈಕಿನಲ್ಲಿ 4-ಸ್ಟ್ರೋಕ್, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ BS6 ಹಂತ 2 ಮಾನದಂಡಗಳಿಗೆ ಅನುಗುಣವಾಗಿರುತ್ತದೆ.

ಇದು ಇಂಧನ-ಇಂಜೆಕ್ಟ್ ಆಗಿದ್ದು, ಹೋಂಡಾದ ವರ್ಧಿತ ಸ್ಮಾರ್ಟ್ ಪವರ್ (eSP) ತಂತ್ರಜ್ಞಾನದೊಂದಿಗೆ ಬರುತ್ತದೆ. ಈ ಎಂಜಿನ್ 109.51 cc ಏರ್-ಕೂಲ್ಡ್ ಎಂಜಿನ್ 7,500 rpm ನಲ್ಲಿ 8.67 bhp ಮತ್ತು 5,500 rpm ನಲ್ಲಿ 9.30 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಹೋಂಡಾ ಸಿಡಿ110 ಡ್ರೀಮ್ ಡಿಲಕ್ಸ್ ಬೈಕ್ ಕಿಕ್ ಸ್ಟಾರ್ಟರ್ ಜೊತೆಗೆ ಆಟೋ-ಸ್ಟಾರ್ಟರ್‌ನೊಂದಿಗೆ ಬರುತ್ತದೆ.
ಹೊಸ ಹೋಂಡಾ ಸಿಡಿ110 ಡ್ರೀಮ್ ಡಿಲಕ್ಸ್ ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಡೈಮಂಡ್ ಮಾದರಿಯ ಫ್ರೇಮ್ ನೊಂದಿಗೆ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳಿಂದ ಒಳಗೊಂಡಿದೆ. ಇನ್ನು ಪ್ರಮುಖವಾಗಿ, ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಗಳನ್ನು ನೀಡಲಾಗಿದೆ.

ಹೊಸ ಹೋಂಡಾ ಸಿಡಿ110 ಡ್ರೀಮ್ ಡಿಲಕ್ಸ್ ಬೈಕ್18 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ 80/100-18 ಟ್ಯೂಬ್‌ಲೆಸ್ ಟೈರ್‌ಗಳನ್ನು ಬಳಸುತ್ತಿದೆ. ಹೊಸ ಹೊಸ ಹೋಂಡಾ ಸಿಡಿ110 ಡ್ರೀಮ್ ಡಿಲಕ್ಸ್ ಬೈಕ್ ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ವೈಶಿಷ್ಟ್ಯವನ್ನು ಹೊಂದಿದೆ, ಇದು ಸೈಡ್ ಸ್ಟ್ಯಾಂಡ್ ಹಾಕಿಕೊಂಡಿದ್ದರೆ ಎಂಜಿನ್ ಅನ್ನು ಸ್ಟ್ರಾರ್ಟ್ ಆಗುವುದನ್ನು ತಡೆಯುತ್ತದೆ.
ಈ ಹೊಸ ಹೋಂಡಾ ಬೈಕಿನಲ್ಲಿ ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್ ಕೂಡ ಇದೆ, ಅದು ಸ್ಟಾರ್ಟರ್ ಬಟನ್ ಆಗಿ ದ್ವಿಗುಣಗೊಳ್ಳುತ್ತದೆ. ಕೊಡುಗೆಯಲ್ಲಿ ಕಾಂಬಿ-ಬ್ರೇಕ್ ಸಿಸ್ಟಮ್ ಮತ್ತು ಹ್ಯಾಲೊಜೆನ್ ಲೈಟಿಂಗ್ ಸಹ ಇದೆ. CB110 ಉದ್ದವಾದ ಸಿಂಗಲ್ ಪೀಸ್ ಸೀಟ್‌ನೊಂದಿಗೆ ಬರುತ್ತದೆ. ಇನ್ನು ಈ ಹೊಸ ಹೋಂಡಾ ಸಿಡಿ110 ಡ್ರೀಮ್ ಡಿಲಕ್ಸ್ ಬೈಕ್ 720 ಎಂಎಂ ಸೀಟ್ ಎತ್ತರವನ್ನು ಹೊಂದಿದೆ.
ಈ ಹೊಸ ಬೈಕಿನ ಬಿಡುಗಡೆಯ ಕುರಿತು, ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ, ವ್ಯವಸ್ಥಾಪಕ ನಿರ್ದೇಶಕರಾದ ಟುತ್ಸುಮು ಒಟಾನಿ ಅವರು ಮಾತನಾಡಿ, ಹೊಸ OBD2 ಕಂಪ್ಲೈಂಟ್ CD110 ಡ್ರೀಮ್ ಡಿಲಕ್ಸ್ ಬಿಡುಗಡೆಯೊಂದಿಗೆ, ನಾವು ಭಾರತದಲ್ಲಿ ಕೈಗೆಟುಕುವ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನು ಮರು ವ್ಯಾಖ್ಯಾನಿಸಲು ಉತ್ಸುಕರಾಗಿದ್ದೇವೆ. ಈ ಹೊಸ ತಲೆಮಾರಿನ ಬೈಕ್ ಸೌಕರ್ಯ, ಅನುಕೂಲತೆ ಮತ್ತು ವಿಶ್ವಾಸಾರ್ಹತೆಯಿಂದ ಕೂಡಿದೆ ಎಂದು ಹೇಳಿದರು.
ಇನ್ನು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ತನ್ನ ಹೋಂಡಾ SP160 ಬೈಕ್ ಅನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ಹೋಂಡಾ SP160 ಬೈಕ್ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಈ ಬೈಕಿನ ಮೂಲ ರೂಪಾಂತರ ಸಿಂಗಲ್-ಡಿಸ್ಕ್ ಬ್ರೇಕ್ ಸೆಟಪ್ ಬೈಕಿನ ಬೆಲೆಯು ರೂ.1,17,500 ಆಗಿದ್ದರೆ, ಇನ್ನು ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳೊಂದಿಗೆ ಟಾಪ್-ಸ್ಪೆಕ್ ಮಾಡೆಲ್ ಬೆಲೆಯು ರೂ.1,21,900 ಆಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications