ಜ.23ಕ್ಕೆ ಭಾರತದಲ್ಲಿ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ: ಆಕ್ಟಿವಾ ಇವಿ ಮಾರುಕಟ್ಟೆಗೆ?

ಭಾರತಕ್ಕೆ ಹೋಂಡಾ ಬ್ರ್ಯಾಂಡ್ ಎಂಟ್ರಿ ಕೊಟ್ಟು ಬಹಳಷ್ಟು ಸಮಯವಾಗಿದೆ. ತನ್ನ ಆಕ್ಟಿವಾ ಸ್ಕೂಟರ್ ಮಾರಾಟದಿಂದ ಅದು ಭಾರೀ ಜನಪ್ರಿಯತೆಗಳಿಸಿದೆ. ಆಕ್ಟಿವಾ ನೀಡುವ ಉತ್ತಮ ಮೈಲೇಜ್ ಪ್ರತಿಯೊಬ್ಬರಿಗೂ ಇಷ್ಟವಾಗುವುದರಿಂದ ಅದೇ ಸ್ಕೂಟರ್ ಖರೀದಿಸಲು ಲೈಕ್ ಮಾಡುತ್ತಾರೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಆಕ್ಟಿವಾಗೆ ಸರಿಸಾಟಿಯೇ ಇಲ್ಲ.

ಜಪಾನಿನ ದ್ವಿಚಕ್ರ ವಾಹನ ತಯಾರಕ ಕಂಪನಿ ಹೋಂಡಾ 2025ರ ವೇಳೆಗೆ ಜಾಗತಿಕ ಮಾರುಕಟ್ಟೆಯಲ್ಲಿ 10 ಅಥವಾ ಅದಕ್ಕಿಂತ ಹೆಚ್ಚಿನ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ ಲಾಂಚ್ ಮಾಡುವ ಯೋಜನೆಯನ್ನು ಪ್ರಕಟ ಮಾಡಿದೆ. ಏಷ್ಯಾ, ಜಪಾನ್ ಮತ್ತು ಯುರೋಪ್‌ನಾದ್ಯಂತ ಪ್ರತ್ಯೇಕವಾಗಿ ಬಿಡುಗಡೆ ಮಾಡಲು ಎರಡು ಪ್ರಯಾಣಿಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕಂಪನಿಯು ಈಗಾಗಲೇ ದೃಢಪಡಿಸಿದೆ. ಇದರ ಮೇಲೆ ಖರೀದಿದಾರರಿಗೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ.

ಜ.23ಕ್ಕೆ ಭಾರತದಲ್ಲಿ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ: ಆಕ್ಟಿವಾ ಇವಿ ಮಾರುಕಟ್ಟೆಗೆ?

ಭಾರತದ ಮಾರುಕಟ್ಟೆಯಲ್ಲಿ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಜನವರಿ 23, 2023ರಂದು ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಸ್ಕೂಟರ್ ಭವಿಷ್ಯದ ದೃಷ್ಟಿಯಿಂದ ಅತ್ಯುನ್ನತ ಎಲೆಕ್ಟ್ರಿಕ್ ವಾಹನವಾಗಬಹುದು. ಆದರೆ, ಈ ಇವಿಯ ಬೆಲೆ, ವಿನ್ಯಾಸ ಹಾಗೂ ವೈಶಿಷ್ಟ್ಯಗಳ ಬಗ್ಗೆ ವಿವರಗಳು ಇನ್ನೂ ಬಹಿರಂಗವಾಗಬೇಕಾಗಿದೆ. ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬದಲಾಯಿಸಬಹುದಾದ ಬ್ಯಾಟರಿಯನ್ನು ಕಂಪನಿ ಅಳವಡಿಸಿರಬಹುದು ಎಂದು ನಿರೀಕ್ಷಿಸಲಾಗಿದ್ದು, ಇದು ದೇಶದ ಮಾರುಕಟ್ಟೆಯಲ್ಲಿ ಕ್ರಾಂತಿ ಸೃಷ್ಟಿಸಬಹುದು.

ಬಹುತೇಕರು ಅಂದಾಜಿಸಿದಂತೆ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ತನ್ನ ಟಾಪ್-ಸೆಲ್ಲಿಂಗ್ ಆಕ್ಟಿವಾ ಸ್ಕೂಟರ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಈ ಬಾರಿ ಮಾರುಕಟ್ಟೆಗೆ ತರಬಹುದು. ಸದ್ಯ ಗ್ರಾಹಕರಿಗೆ ಖರೀದಿಗೆ ಲಭ್ಯವಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್, ಅಥರ್ 450 ಎಕ್ಸ್, ಸಿಂಪಲ್ ಎನರ್ಜಿ ಒನ್ ಮತ್ತು ಬೌನ್ಸ್ ಇನ್ಫಿನಿಟಿ ಇ1 ಸ್ಕೂಟರ್ ಗಳಿಗೆ ತೀವ್ರ ಪೈಪೋಟಿ ನೀಡಬಹುದು. ಈಗಾಗಲೇ ಪೆಟ್ರೋಲ್ ಆವೃತ್ತಿಯ ಆಕ್ಟಿವಾ ಸ್ಕೂಟರ್‌ ಗ್ರಾಹಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದು, ಅದೇರೀತಿ ಎಲೆಕ್ಟ್ರಿಕ್ ಸ್ಕೂಟರ್‌ ಸಹ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದು.

ಹೋಂಡಾ ತನ್ನ ಬ್ಯಾಟರಿ ವಿನಿಮಯ ಸೇವೆಯನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಜೊತೆಗೆ ಪ್ರಾರಂಭಿಸುವುದಾಗಿ ಇತ್ತೀಚೆಗೆ ಘೋಷಿಸಿತ್ತು. ಕಂಪನಿಯ ಅಂಗಸಂಸ್ಥೆಯಾದ ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಭಾರತದಲ್ಲಿ ಬ್ಯಾಟರಿ ಸ್ವಾಪ್ ಸೇವೆಯನ್ನು ಶುರು ಮಾಡಿದೆ. ಈ ಬ್ಯಾಟರಿ ಪ್ಯಾಕ್ ಸೇವೆಯನ್ನು ಆರಂಭದಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಬಳಸಲಾಗುತ್ತದೆ. ಆದಾಗ್ಯೂ, ಬದಲಾಯಿಸಬಹುದಾದ ಬ್ಯಾಟರಿಗಳೊಂದಿಗೆ ಹೋಂಡಾ, ಭವಿಷ್ಯದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೂ ಈ ಸೇವೆಯನ್ನು ಉಪಯೋಗಿಸಲಿದೆ.

ವರದಿಗಳ ಪ್ರಕಾರ, ಹೋಂಡಾ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬಳಸುವ ಬ್ಯಾಟರಿಗಳನ್ನು ಸ್ಥಳೀಯವಾಗಿಯೇ ತಯಾರಿಸಲು ಯೋಜಿಸಿದೆ. ಬ್ಯಾಟರಿ ವಿನಿಮಯದಂತಹ ಆಯ್ಕೆಗಳು ಹೋಂಡಾಗೆ ಇವಿ ತಯಾರಿಸುವ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದು ಮುಂದೆ ದೇಶದಲ್ಲಿ ಹೋಂಡಾದಿಂದ ಖರೀದಿಗೆ ಲಭ್ಯವಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಯನ್ನು ಅಗ್ಗವಾಗಿಸಲಿದೆ ಎಂದು ಅಂದಾಜಿಸಲಾಗಿದೆ. ಇವುಗಳನ್ನು ಗಮನಿಸಿದಾಗ ಹೋಂಡಾ ಇವಿ ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಬಹುದು. ಇದರಿಂದ ನೀರಿಕ್ಷೆಗಳು ಹೆಚ್ಚಿಗಿವೆ ಎಂದು ಹೇಳಬಹುದು.

ಭಾರತದಲ್ಲಿ ಈಗ ಖರೀದಿಗೆ ಲಭ್ಯವಿರುವ ಹೋಂಡಾ ಆಕ್ಟಿವಾ 6G ಬೆಲೆ ರೂ.73,359 ದಿಂದ ರೂ.76,859 ತನಕ ಇದೆ. ಆಕ್ಟಿವಾ 6G, 3 ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ ಆಕ್ಟಿವಾ 6G STD, ಆಕ್ಟಿವಾ 6G DLX ಸೇರಿವೆ. ಟಾಪ್ ವೇರಿಯಂಟ್ ಹೋಂಡಾ ಆಕ್ಟಿವಾ 6G ಪ್ರೀಮಿಯಂ ಎಡಿಷನ್ ಆಗಿದ್ದು, ಇದರ ಬೆಲೆ ರೂ.76,859 ಇದೆ. ಆಕ್ಟಿವಾ 6G 109.51ಸಿಸಿ, ಸಿಂಗಲ್-ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, ಇದು 7.79PS ಪವರ್ ಹಾಗೂ 8.84Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಆಕ್ಟಿವಾ 6G ವೈಶಿಷ್ಟ್ಯ ಹಾಗೂ ವಿನ್ಯಾಸದ ಬಗ್ಗೆ ಹೇಳುವುದಾದರೆ, ಎಲ್ಇಡಿ ಹೆಡ್‌ಲೈಟ್ ಡೀಲಕ್ಸ್ ರೂಪಾಂತರದಲ್ಲಿ ಮಾತ್ರ ಲಭ್ಯವಿದೆ. ಆಕ್ಟಿವಾ 5Gಯಿಂದ ಹೋಂಡಾ ಆಕ್ಟಿವಾ 6Gಯ ಮಹತ್ವದ ಬದಲಾವಣೆಯೆಂದರೆ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ದೊಡ್ಡ 12-ಇಂಚಿನ ಫ್ರಂಟ್ ವೀಲ್ಸ್. ಅಲ್ಲದೆ, ಆಕ್ಟಿವಾ 6G ಸ್ಕೂಟರ್ 130 ಎಂಎಂ ಡ್ರಮ್ ಬ್ರೇಕ್‌ ಹೊಂದಿದ್ದು, ಇದು ಅತ್ಯುತ್ತಮ ಮೈಲೇಜ್ ನೀಡುವ ಸ್ಕೂಟರ್ ಆಗಿರುವುದರಿಂದ ಗ್ರಾಹಕರು ಇವತ್ತಿಗೂ ಇಷ್ಟಪಟ್ಟು ಖರೀದಿ ಮಾಡುತ್ತಾರೆ ಎಂದು ಹೇಳಬಹುದು.

Most Read Articles

Kannada
Read more on ಹೋಂಡಾ honda
English summary
New honda electric scooter launch in india on january 23
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X