ಅಗ್ಗದ ಬೆಲೆ, 10 ವರ್ಷಗಳ ವಾರಂಟಿಯ ಹೋಂಡಾ ಶೈನ್ 125 ವಿಶೇಷತೆಗಳು
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ ಹೊಸ 2023ರ ಹೋಂಡಾ ಶೈನ್ 125 (Honda Shine 125) ಬೈಕ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಹೋಂಡಾ ಶೈನ್ 125 ಬೈಕಿನ ಪ್ರಾರಂಭಿಕ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.79,800 ಆಗಿದೆ.
ಎಂಜಿನ್: ಹೋಂಡಾ ಶೈನ್ 125 ಅದೇ ಫ್ಯೂಯಲ್-ಇಂಜೆಕ್ಟೆಡ್ 123.94cc ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಮುಂದುವರೆಸಿದೆ. ಆದರೆ ಈ ಎಂಜಿನ್ ಹೊಸ ನವೀಕರಣಗಳನ್ನು ಪಡೆದುಕೊಂಡಿವೆ. ಹೋಂಡಾ ಎಂಜಿನ್ ಅನ್ನು ನವೀಕರಿಸರಿಸುವುದರಿಂದ ಈಗ OBD2 ಹೊರಸೂಸುವಿಕೆಯ ಮಾನದಂಡಗಳನ್ನು ಅನುಸರಿಸುತ್ತದೆ. ಹೋಂಡಾದ ACG ಸ್ಟಾರ್ಟರ್ ಮೋಟರ್ ಅನ್ನು ಒಳಗೊಂಡಿರುವ ಮತ್ತು E20 ಮಿಶ್ರಿತ ಇಂಧನದಲ್ಲಿ ಚಲಿಸಬಲ್ಲ ಎಂಜಿನ್ ಇದಾಗಿದೆ.

ಈ ಎಂಜಿನ್ 7,500rpm ನಲ್ಲಿ 10.59bhp ಮತ್ತು 6,000rpm ನಲ್ಲಿ 11Nm ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನ್ನು ಹೊಂದಿದೆ. ಈ ಎಂಜಿನ್ ಅನ್ನು ಸ್ಪೀಡ್ ಗೇರ್‌ಬಾಕ್ಸ್ ಮೂಲಕ ಹಿಂದಿನ ವ್ಹೀಲ್ ಗಳಿಗೆ ಪವರ್ ಕಳುಹಿಸಲಾಗುತ್ತದೆ. ಈ ಹೊಸ ಹೋಂಡಾ ಶೈನ್ 125 ಬೈಕ್ ಬ್ಲ್ಯಾಕ್, ಜೆನಿ ಗ್ರೇ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ, ರೆಬೆಲ್ ರೆಡ್ ಮೆಟಾಲಿಕ್ ಮತ್ತು ಡಿಸೆಂಟ್ ಬ್ಲೂ ಮೆಟಾಲಿಕ್ ಎಂಬ ಬಣ್ಣಗಳ ಆಯ್ಕೆಗಳನ್ನು ಹೊಂದಿವೆ.
ರೂಪಾಂತರಗಳು ಮತ್ತು ಬೆಲೆಗಳು: 2023ರ ಹೋಂಡಾ ಶೈನ್ 125 ಬೈಕ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಹೋಂಡಾ ಶೈನ್ 125 ಬೈಕಿನ ಡ್ರಮ್ ಬ್ರೇಕ್ ರೂಪಾಂತರದ ಬೆಲೆಯು ರೂ. 79,800 ಆಗಿದ್ದರೆ ಡಿಸ್ಕ್ ಬ್ರೇಕ್ ರೂಪಾಂತರವು ರೂ. 83,800 ಆಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಸಸ್ಪೆಕ್ಷನ್ ಸೆಟಪ್: ಈ ಹೊಸ ಹೋಂಡಾ ಶೈನ್ 125 ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್ ಸ್ಪ್ರಿಂಗ್‌ಗಳು 5 ಹಂತದ ಹೊಂದಾಣಿಕೆಯನ್ನು ನೀಡುತ್ತವೆ. ಇನ್ನು ಈ ಹೊಸ ಶೈನ್ 125 ಬೈಕ್ 162 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ.
ಬ್ರೇಕಿಂಗ್ ಸಿಸ್ಟಂ: ಹೊಸ ಹೋಂಡಾ ಶೈನ್ 125 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೇಸ್ ಸ್ಪೆಕ್ ಮಾದರಿಯಲ್ಲಿ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಇನ್ನು ಈ ಬೈಕಿನ ಟಾಪ್ ಸ್ಪೆಕ್ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಪಡೆಯುತ್ತದೆ. ಇನ್ನು ಬ್ರೇಕ್‌ಗಳಿಗೆ ಕಾಂಬಿ-ಬ್ರೇಕ್ ಸಿಸ್ಟಮ್ ಮತ್ತು ಕಮ್ಯೂಟರ್ ಮೋಟಾರ್‌ಸೈಕಲ್ 18-ಇಂಚಿನ ವ್ಹೀಲ್ 80/100 ಟ್ಯೂಬ್‌ಲೆಸ್ ಟೈರ್‌ಗಳಿವೆ.

ವಿನ್ಯಾಸ: ಈ ಹೊಸ ಹೋಂಡಾ ಶೈನ್ 125 ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಶೈನ್ 125 ಬಾಡಿ-ಬಣ್ಣದ ಕೌಲ್ ಮತ್ತು ಕ್ರೋಮ್ ಅಲಂಕರಣದೊಂದಿಗೆ ಸಿಂಗಲ್-ಪಾಡ್ DC ಹೆಡ್‌ಲೈಟ್ ಅನ್ನು ಹೊಂದಿದೆ. ಸೈಡ್ ಪ್ಯಾನೆಲ್‌ಗಳಲ್ಲಿ ಮತ್ತು ಸೈಡ್-ಸ್ಲಂಗ್ ಮಫ್ಲರ್‌ಗಾಗಿ ಹೀಟ್ ಕವರ್ ಅನ್ನು ಹೊಂದಿದೆ.
ಈ ಹೊಸ ಹೋಂಡಾ ಶೈನ್ 125 ಬೈಕ್ ಈಗ ಹೋಂಡಾದಿಂದ ವಿಶೇಷ 10 ವರ್ಷಗಳ ವಾರಂಟಿ ಪ್ಯಾಕೇಜ್‌ನೊಂದಿಗೆ ನೀಡಲಾಗುತ್ತಿದೆ. ಇದು ನಿಯಮಿತ 3-ವರ್ಷದ ಸ್ಟ್ಯಾಂಡರ್ಡ್ ವಾರಂಟಿ ಪ್ಯಾಕೇಜ್ ಮತ್ತು ಆಯ್ಕೆಯ 7-ವರ್ಷದ ವಿಸ್ತೃತ ವಾರಂಟಿಯನ್ನು ಒಳಗೊಂಡಿದೆ. ಕೈಗೆಟುಕುವ ಬೆಲೆಯಲ್ಲಿ ಹೊಸ ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯಾಗಿರುತ್ತದೆ.


Click it and Unblock the Notifications