ರಾಕೆಟ್ ವೇಗದಲ್ಲಿ ಮಿಂಚಲಿರುವ KTM 1390 ಸೂಪರ್ ಡ್ಯೂಕ್ ಆರ್ ಬೈಕ್ ವಿಶೇಷತೆಗಳು

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕೆಟಿಎಂ ತನ್ನ ಐಕಾನಿಕ್ ಡ್ಯೂಕ್ ಸರಣಿಯ 30 ವರ್ಷಗಳ ನೆನಪಿಗಾಗಿ ಕೆಟಿಎಂ 1390 ಸೂಪರ್ ಡ್ಯೂಕ್ ಆರ್ (KTM 1390 Super Duke R) ಎಂಬ ಸೂಪರ್ ನೇಕೆಡ್ ಬೈಕ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಿತು. ಈ ಕೆಟಿಎಂ 1390 ಸೂಪರ್ ಡ್ಯೂಕ್ ಆರ್ ಬೈಕ್ ಒಂದು ತಾಂತ್ರಿಕ ಅದ್ಭುತವಾಗಿದೆ.

ವಿನ್ಯಾಸ: ಕೆಟಿಎಂ 1390 ಸೂಪರ್ ಡ್ಯೂಕ್ ಆರ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ. ಮರುಹೊಂದಿಸಲಾದ LED ಹೆಡ್‌ಲೈಟ್, ಫ್ಯೂಯಲ್ ಟ್ಯಾಂಕ್‌ನ ಕೆಳಗೆ ಏರೋಡೈನಾಮಿಕ್ ವಿಂಗ್‌ಲೆಟ್‌ಗಳು ಮತ್ತು ಹಗುರವಾದ 17-ಇಂಚಿನ ವ್ಹೀಲ್ ಗಳನ್ನು ಹೊಂದಿವೆ. ಕೆಟಿಎಂ 1390 ಸೂಪರ್ ಡ್ಯೂಕ್ R ಪರಿಷ್ಕೃತ ರಾಮ್ ಏರ್ ಇನ್‌ಟೇಕ್ ಸಿಸ್ಟಮ್ ಮತ್ತು ಏರ್‌ಬಾಕ್ಸ್ ಜೊತೆಗೆ ಕಡಿಮೆ ಥ್ರೊಟಲ್ ಬೈಕಿನ ಬಾಡಿಗಳನ್ನು ದೊಡ್ಡ ಪವರ್‌ಪ್ಲಾಂಟ್‌ಗೆ ಹೆಚ್ಚಿನ ಗಾಳಿಯಲ್ಲು ಮುನ್ನುಗಲು ಸಹಾಯ ಮಾಡುತದೆ.

KTM 1390 Super Duke R

ಫೀಚರ್ಸ್: ಹೊಸ ಕೆಟಿಎಂ ಸೂಪರ್ ಡ್ಯೂಕ್ ಆರ್ ಲೀನ್-ಸೆನ್ಸಿಟಿವ್ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಐದು ಇಂಚಿನ TFT ಡಿಸ್ಪ್ಲೇಯೊಂದಿಗೆ ಸಜ್ಜುಗೊಂಡಿದೆ. ಈ ಹೊಸ ಬೈಕ್ ರೈನ್, ಸ್ಟ್ರೀಟ್ ಮತ್ತು ಸ್ಪೋರ್ಟ್ ಎಂಬ ವಿಭಿನ್ನ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿವೆ. ಈ ಕೆಟಿಎಂ 1390 ಸೂಪರ್ ಡ್ಯೂಕ್ ಆರ್ ಬೈಕ್ 17.5-ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ, ನೀವು ಫುಲ್ ಟ್ಯಾಂಕ್ ಮಾಡಿದರೆ ಸುಮಾರು 300 ಕಿಮೀ ವರೆಗೆ ಹೋಗಬಹುದು.

ಎಂಜಿನ್: ಹೊಸ ಕೆಟಿಎಂ 1390 ಸೂಪರ್ ಡ್ಯೂಕ್ ಆರ್ ಬೈಕ್ ಪವರ್ ಫುಲ್ 1350cc ಎಂಜಿನ್ ಅನ್ನು ಹೊಂದಿದೆ. ಈ ಹೊಸ ಕೆಟಿಎಂ ಬೈಕ್ ಸ್ಟ್ಯಾಂಡರ್ಡ್ ಮಾಡೆಲ್ ಮತ್ತು ಸುಧಾರಿತ ಇವೊ ಆವೃತ್ತಿ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಕೆಟಿಎಂ 1390 ಸೂಪರ್ ಡ್ಯೂಕ್ ಆರ್ ಬೈಕಿನಲ್ಲಿ ಹೊಸ ಲಿಕ್ವಿಡ್-ಕೂಲ್ಡ್, 75-ಡಿಗ್ರಿ V-ಟ್ವಿನ್ ಇಲ್ಲಿಯವರೆಗೆ KTM ಬೈಕುಗಳಲ್ಲಿ ಅಳವಡಿಸಲಾಗಿಂತ ದೊಡ್ಡದಾಗಿದೆ.

KTM 1390 Super Duke R

ಎಂಜಿನ್ ಶಿಫ್ಟ್-ಕ್ಯಾಮ್ ತಂತ್ರಜ್ಞಾನವನ್ನು ಸಹ ಹೊಂದಿದೆ ಇದು ಜಗತ್ತಿಗೆ ವೇರಿಯಬಲ್ ವಾಲ್ವ್ ಟೈಮಿಂಗ್ ಎಂದು ಹೆಸರುವಾಸಿಯಾಗಿದೆ ಮತ್ತು 10,000rpm ನಲ್ಲಿ 187.4bhp ಮತ್ತು 8,000rpm ನಲ್ಲಿ 145Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕೇವಲ 200 ಕಿಲೋಗಳಷ್ಟು ತೂಕದ, ಹೊಸ ಸೂಪರ್ ಡ್ಯೂಕ್ R 937bhp ಪವರ್-ಟು-ತೂಕದ ಅನುಪಾತವನ್ನು ಹೊಂದಿದೆ.

ಕೆಟಿಎಂ 1390 ಸೂಪರ್ ಡ್ಯೂಕ್ ಆರ್ ಬೈಕ್ ಔಟ್‌ಪುಟ್ ಅನ್ನು ಹಿಂದಿನ ಚಕ್ರಕ್ಕೆ ಕಳುಹಿಸಲು ಸಹಾಯ ಮಾಡಲು, ದೊಡ್ಡ ಡ್ಯೂಕ್ ಬೈಕಿನಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ನೀಡಲಾಗಿದೆ. ಈ ಹೊಸ ಎಂಜಿನ್ ಸುಧಾರಿತ ಬಾಳಿಕೆಯನ್ನು ಸಹ ನೀಡುತ್ತದೆ, ಗಣನೀಯ 60,000 ಕಿಮೀ ಸವಾರಿಯ ನಂತರ ಮಾತ್ರ ವಾಲ್ವ್ ಕ್ಲಿಯರೆನ್ಸ್ ತಪಾಸಣೆಯ ಅಗತ್ಯವಿದೆ.

KTM 1390 Super Duke R

ಸಸ್ಪೆನ್ಶನ್: ಕೆಟಿಎಂ 1390 ಸೂಪರ್ ಡ್ಯೂಕ್ ಆರ್ ಬೈಕಿನ ಟಾಪ್ ಸ್ಪೆಕ್ ಇವೊ ರೂಪಾಂತರದಲ್ಲಿ, ಸ್ಟಾಕ್ ಮಾದರಿಯಲ್ಲಿ WP ಯಿಂದ ಸೆಮಿ-ಆಕ್ಟಿವ್ ಸಸ್ಪೆನ್ಶನ್‌ನೊಂದಿಗೆ ಐದು ಡ್ಯಾಂಪಿಂಗ್ ಮೋಡ್‌ಗಳು ಮತ್ತು ಥ್ರಿಲ್-ಸೀಕರ್‌ಗಳಿಗಾಗಿ ಹೆಚ್ಚುವರಿ ಟ್ರ್ಯಾಕ್-ಫೋಕಸ್ಡ್ ಆಯ್ಕೆಗಳೊಂದಿಗೆ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಮುಂಭಾಗದ ಫೋರ್ಕ್‌ಗಳಲ್ಲಿ ಆಂಟಿ-ಡೈವ್ ಸೆಟ್ಟಿಂಗ್ ಮತ್ತು ಸ್ಟ್ಯಾಂಡ್‌ನಲ್ಲಿ ಹಿಂಬದಿ ಶಾಕ್ ಪ್ರಿಲೋಡ್ ಅನ್ನು ಆಟೋಮ್ಯಾಟಿಕ್ ಕಡಿಮೆ ಮಾಡುವಂತಹ ವಿಶಿಷ್ಟ ವೈಶಿಷ್ಟ್ಯಗಳು ಸವಾರಿ ಸೌಕರ್ಯ ಮತ್ತು ಸ್ಥಿರತೆಯನ್ನು ಹೆಚ್ಚಿಸುತ್ತದೆ.

ಬ್ರೇಕಿಂಗ್ ಸಿಸ್ಟಂ: ಈ ಹೊಸ ಕೆಟಿಎಂ 1390 ಸೂಪರ್ ಡ್ಯೂಕ್ ಆರ್ ಮಾದರಿಯು ಪವರ್ ಫುಲ್ ಬೈಕ್ ಆಗಿದ್ದು, ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟ್ವಿನ್ 320mm ಡಿಸ್ಕ್‌ಗಳು ಬ್ರೆಂಬೊ ಸ್ಟೈಲ್ಮಾ ಮೊನೊಬ್ಲಾಕ್ ಫೋರ್-ಪಿಸ್ಟನ್, ರೇಡಿಯಲ್ ಮೌಂಟೆಡ್ ಕ್ಯಾಲಿಪರ್‌ಗಳನ್ನು ಹೊಂದಿವೆ. ಇನ್ನು ಈ ಬೈಕಿನ ಹಿಂಭಾಗದಲ್ಲಿ ಬ್ರೇಕ್ ಬ್ರೆಂಬೊ ಟ್ವಿನ್-ಪಿಸ್ಟನ್ ಸ್ಥಿರ ಕ್ಯಾಲಿಪರ್‌ಗಳೊಂದಿಗೆ 240 ಎಂಎಂ ಡಿಸ್ಕ್ ಆಗಿದೆ.

KTM 1390 Super Duke R

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, December 2, 2023, 9:50 [IST]
English summary
New ktm 1390 super duke r bike top things details
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+