ಪ್ರಸಿದ್ಧ ಬಜಾಜ್ ನಿರ್ಮಿತ ಹೊಸ ಯುಲು ಇ-ಬೈಕ್ ಅನಾವರಣ
ಯುಲು (Yulu) ತನ್ನ ಹೊಸ ಇ-ಬೈಕ್ನ್ನು ಯುಎಸ್ಎಯ ಲಾಸ್ ವೇಗಾಸ್‌ನಲ್ಲಿ 2023ರ ಕನ್ಸೂಮರ್ ಎಲೆಕ್ಟ್ರಾನಿಕ್ ಶೋ (ಸಿಇಎಸ್)ನಲ್ಲಿ ಬಹಿರಂಗಪಡಿಸಿದೆ. ಈ ನೂತನ ಇ-ಬೈಕ್ ಅನ್ನು ಪ್ರಸಿದ್ಧ ದ್ವಿಚಕ್ರ ವಾಹನ ತಯಾರಿಕ ಬಜಾಜ್ ನಿರ್ಮಿಸಿದೆ. ಬಜಾಜ್ ಮಾರುಕಟ್ಟೆಯಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡುತ್ತದೆ.
ನೂತನ ಇ-ಬೈಕ್, ಬಜಾಜ್ ರೆಡಿ ಮಾಡಿರುವ ಸಂಪೂರ್ಣ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದೆ. ಯುಲು ಕಂಪನಿಯಲ್ಲಿ ದೊಡ್ಡ ಪಾಲನ್ನು ಬಜಾಜ್ ಹೊಂದಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಬಜಾಜ್ ಕಂಪನಿ, ಯುಲು ಷೇರುಗಳನ್ನು ಸ್ವಾಧೀನಪಡಿಸಿಕೊಂಡು ಹಲವು ತಿಂಗಳಾಗಿದ್ದು, ಈ ವೇಳೆ, ಕಂಪನಿಯು ಸಿಇಎಸ್ ಶೋನಲ್ಲಿ ತನ್ನ ಚಕನ್ ಉತ್ಪಾದನಾ ಘಟಕದಲ್ಲಿ ವಿನ್ಯಾಸಗೊಳಿಸಿದ ಇ-ಬೈಕ್ ಅನ್ನು ಪ್ರದರ್ಶಿಸುತ್ತಿದೆ. ಇದರ ಮೇಲೆ ಖರೀದಿದಾರರಿಗೆ ಸಾಕಷ್ಟು ನೀರಿಕ್ಷೆಗಳು ಹೆಚ್ಚಿದೆ ಎಂದು ಹೇಳಬಹುದು.

ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಸಣ್ಣ ನಗರಗಳಲ್ಲಿ ಸಂಚಾರ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಬಹುದು. ಇದನ್ನು ಡೈಲಿವರಿ ವಾಹನವಾಗಿಯೂ ಉಪಯೋಗ ಮಾಡಬಹುದು. ಈ ಇ-ಬೈಕ್ನ ಫ್ರಂಟ್ ಮತ್ತು ರೇರ್ ನಲ್ಲಿ ಕಾರ್ಗೋ ಜಾಗವನ್ನು ನೀಡಲಾಗಿದೆ. ಯುಲು ಹಿಂದೆ ಚೀನಾದ ಕಂಪನಿಯ ಮಾಲೀಕತ್ವ ಹೊಂದಿತ್ತು. ಅದರ ಹಿಂದಿನ ಮಾದರಿ ತಯಾರಿಕೆಯಲ್ಲಿ ಬಳಸಿದ್ದಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾದ ಸಾಧನಗಳನ್ನು ಈಗ ರೆಡಿ ಮಾಡಿರುವ ಯುಲು ಇ-ಬೈಕಿನಲ್ಲಿ ಉಪಯೋಗಿಸಲಾಗಿದೆ.
ವರದಿಗಳ ಪ್ರಕಾರ, ನೂತನ ಇ-ಬೈಕಿನಲ್ಲಿ ಬಜಾಜ್ ಕೆಲವು ವಿಶೇಷ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಅದರಲ್ಲೂ ಬಜಾಜ್ ಇದನ್ನು ನಮ್ಮ ದೇಶದ ಪರಿಸರಕ್ಕೆ ಸೂಕ್ತವಾದ ವಾಹನವನ್ನಾಗಿ ರೂಪಿಸಿದೆ. ಆದಾಗ್ಯೂ, ಇ-ಬೈಕಿನ ನಿರ್ಮಾಣವು ಯಾವ ರೀತಿಯ ಪ್ರಮುಖ ಅಂಶಗಳನ್ನು ಆಧರಿಸಿವೆ ಎಂಬುದರ ಕುರಿತು ಬಜಾಜ್ ವಿವರಗಳನ್ನು ಬಹಿರಂಗಪಡಿಸಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಕಂಪನಿಗಳು ಪ್ರಕಟಿಸುವ ನಿರೀಕ್ಷೆಯಿದ್ದು, ಇದು ಮಾರುಕಟ್ಟೆಗೆ ಬಂದ ಮೇಲೆ ಹೆಚ್ಚಿನ ಗ್ರಾಹಕರು ಖರೀದಿಸಬಹುದು.
ಭಾರತದ ಪರಿಸರಕ್ಕೆ ಅನುಗುಣವಾಗಿ ಯುಲು ಇ-ಬೈಕ್ ಅಭಿವೃದ್ಧಿಪಡಿಸಲಾಗಿದ್ದು, ಅತಿ ಶೀಘ್ರದಲ್ಲಿ ಈ ವಾಹನ ಭಾರತದಲ್ಲಿ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಇದೆ. ಆದಾಗ್ಯೂ, ಯುಲು ಇ-ಬೈಕ್ ಲಾಂಚ್ ಮಾಡುವ ಯಾವುದೇ ಯೋಜನೆಗಳ ವಿವರಗಳನ್ನು ಬಜಾಜ್ ಈವರೆಗೆ ಬಹಿರಂಗಪಡಿಸಿಲ್ಲ. ಬಜಾಜ್ ಸದ್ಯ ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಸೂಪರ್ ಎಲೆಕ್ಟ್ರಿಕ್ ಸ್ಕೂಟರ್ ಚೇತಕ್ ಅನ್ನು ಮಾರಾಟ ಮಾಡುತ್ತಿದೆ. ಇದರ ಕಾರ್ಯವೈಖರಿಯು ಹೆಚ್ಚಿನ ಖರೀದಿದಾರರನ್ನು ಸೆಳೆಯುತ್ತಿದೆ ಎಂದು ಹೇಳಬಹುದು.
ಭಾರತೀಯರ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆಯನ್ನು ಪೂರೈಸಲು ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟ ಮಾಡುತ್ತಿದೆ. ಈ ಹಿಂದೆ, ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಪ್ರೀಮಿಯಂ ಮತ್ತು ಅರ್ಬನ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿತ್ತು. ಆದರೆ, ಈಗ ಪ್ರೀಮಿಯಂ ವೆರಿಯಂಟ್ ಮಾತ್ರ ಮಾರಾಟದಲ್ಲಿದೆ. ಇದರ ಎಕ್ಸ್ ಶೋರೂಂ ಬೆಲೆ ರೂ.1,52,409 ಆಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಎರಡು ರೀತಿಯ ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ. ಅವುಗಳೆಂದರೆ ಇಕೋ ಮತ್ತು ಸ್ಪೋರ್ಟ್ಸ್.
ಈ ಸ್ಕೂಟರ್ ಖರೀದಿದಾರರು ಇಕೋ ಮೋಡ್‌ನಲ್ಲಿ ಪ್ರಯಾಣಿಸುವ ಮೂಲಕ ಗರಿಷ್ಠ ರೇಂಜ್ ಪಡೆಯಬಹುದು. ಬಜಾಜ್ ಚೇತಕ್ ಸಂಪೂರ್ಣ ಚಾರ್ಜ್ ಮಾಡಿದರೆ 95 ಕಿ.ಮೀ ವರೆಗೆ ಮೈಲೇಜ್ ನೀಡಲಾಗಿದೆ. ಇದು IP67 ಪ್ರಮಾಣೀಕೃತ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಶೇಕಡ 0 - 100 ಬ್ಯಾಟರಿ ಸಂಪೂರ್ಣ ಚಾರ್ಜ್ ಮಾಡಲು 5 ಗಂಟೆ ಸಮಯಬೇಕಾಗುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ 5 bhp ಮತ್ತು 16.2 Nm ಟಾರ್ಕ್ ಅನ್ನು ಹೊರಹಾಕುವ 3.8 kW ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಲಿದ್ದು, ಇದರ ಗರಿಷ್ಠ ವೇಗ ಗಂಟೆಗೆ 70 ಕಿ.ಮೀ ಇದೆ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications