Odysse: 10,000 ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೃಹತ್ ಆರ್ಡರ್ ಪಡೆದುಕೊಂಡ ಒಡಿಸ್ಸೆ

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದಿನದಿಂದ ದಿನಕ್ಕೆ ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ಈ ವಿಭಾಗದಲ್ಲಿ ದೇಶೀಯ ಗ್ರಾಹಕರ ದಿನಬಳಕೆಗಾಗಿ ಕೆಲವೇ ತಿಂಗಳ ಹಿಂದೆ, ಒಡಿಸ್ಸೆ (Odysse) ಕಂಪನಿ, ಬಹುನೀರಿಕ್ಷಿತ ವಾಡರ್ ಎಲೆಕ್ಟ್ರಿಕ್ ಬೈಕ್ (Vader Electric Bike) ಬಿಡುಗಡೆಗೊಳಿಸಿತ್ತು. ಇದೀಗ, ಕಂಪನಿಯು ದೊಡ್ಡ ಸಾಧನೆ ಮಾಡಿದೆ.

ಮುಂಬೈ ಮೂಲದ ಒಡಿಸ್ಸೆ ಎಲೆಕ್ಟ್ರಿಕ್ ವೆಹಿಕಲ್ಸ್, ಪೂರೈಕೆದಾರ ಕಂಪನಿ ಬಡ್-ಇ, (ಇವಿ ಟೂ ವೀಲರ್ ಮೊಬಿಲಿಟಿ ಸರ್ವಿಸ್ - MaaS) ಒಡಂಬಡಿಕೆ ಮಾಡಿಕೊಂಡಿವೆ. ಅದರ ಭಾಗವಾಗಿ ಒಡಿಸ್ಸೆ, ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಬಡ್-ಇಯಿಂದ 10,000 ಯುನಿಟ್‌ ಬೃಹತ್ ಆರ್ಡರ್ ಪಡೆದುಕೊಂಡಿದೆ. ಮುಂದಿನ 2 ವರ್ಷಗಳಲ್ಲಿ ಹಂತ ಹಂತವಾಗಿ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆಯನ್ನು ಪೂರ್ಣಗೊಳಿಸಲು ಕಂಪನಿ ನಿರ್ಧರಿಸಿದೆ.

Odysse: 10,000 ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಬೃಹತ್ ಆರ್ಡರ್ ಪಡೆದುಕೊಂಡ ಒಡಿಸ್ಸೆ

ಎಲೆಕ್ಟ್ರಿಕ್ ಸ್ಕೂಟರ್‌ ಪೂರೈಕೆಯೊಂದಿಗೆ ಬಡ್-ಇಗೆ ಉತ್ತಮ ಸೇವೆ ನೀಡಲು ಒಡಿಸ್ಸೆ ಕಂಪನಿ ಬಯಸಿದೆ. ಸರ್ವಿಸ್ ಸೇರಿದಂತೆ ಎಲ್ಲ ಸಪೋರ್ಟ್ ಕೊಡಲಿದೆ. ಪ್ರಸ್ತುತ, ಬಡ್-ಇ, ಹೈದರಾಬಾದ್‌ನಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಆಹಾರ ವಿತರಣೆ ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ತಿಂಗಳ ಬಾಡಿಗೆ ಆಧಾರದ ಮೇಲೆ ಇ - ಸ್ಕೂಟರ್‌ಗಳನ್ನು ನೀಡುತ್ತದೆ. ಸದ್ಯ, ಒಡಿಸ್ಸೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ವಹಿವಾಟು ಹೆಚ್ಚಾಗುವ ವಿಶ್ವಾಸದಲ್ಲಿ ಬಡ್-ಇ ಇದೆ.

ಭಾರತದ ಮಾರುಕಟ್ಟೆಯಲ್ಲಿ ಒಡಿಸ್ಸೆ ಕಂಪನಿ ಮಾರಾಟ ಮಾಡುವ ಸ್ಕೂಟರ್‌ಗಳ ಬಗ್ಗೆ ತಿಳಿದುಕೊಳ್ಳುವುದಾದರೆ, ಎಲೆಕ್ಟ್ರಿಕ್ ಹಾಕ್, ರೂ.99,400 ಲಕ್ಷದಿಂದ ರೂ.1.18 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 2.96 KW ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 170 km ರೇಂಜ್ ನೀಡುತ್ತದೆ. ಎಲೆಕ್ಟ್ರಿಕ್ ರೇಸರ್ ರೂ.85,000 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಫುಲ್ ಚಾರ್ಜಿನಲ್ಲಿ 70 km ರೇಂಜ್ ಕೊಡುತ್ತದೆ.

Odysse: 10,000 ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಬೃಹತ್ ಆರ್ಡರ್ ಪಡೆದುಕೊಂಡ ಒಡಿಸ್ಸೆ

ಒಡಿಸ್ಸೆ ಎಲೆಕ್ಟ್ರಿಕ್ V2 ರೂ.77,250 ದಿಂದ ರೂ.1 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಇದರಲ್ಲಿ 2.6 KW ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಉಪಯೋಗ ಮಾಡಲಾಗಿದ್ದು, ಸಂಪೂರ್ಣ ಚಾರ್ಜಿನಲ್ಲಿ 150 km ರೇಂಜ್ ನೀಡುತ್ತದೆ. 25 kmph ಟಾಪ್ ಸ್ವೀಡ್ ಪಡೆಯಲಿದೆ. ಎಲೆಕ್ಟ್ರಿಕ್ E2Go ರೂ.59,750 ದಿಂದ 71,100 ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. 60V/28 Ah ಬ್ಯಾಟರಿ ಪ್ಯಾಕ್ ಹೊಂದಿದ್ದು, 60 km ರೇಂಜ್ ಕೊಡುತ್ತದೆ.

ಈ ವರ್ಷದ ಆರಂಭದಲ್ಲಿ, ಒಡಿಸ್ಸೆ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಫ್ಲಿಪ್‌ಕಾರ್ಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಗ್ರಾಹಕರು, ಮನೆಯಲ್ಲಿಯೇ ಕುಳಿತು ಒಡಿಸ್ಸೆ ಕಂಪನಿಯ ಎಲೆಕ್ಟ್ರಿಕ್ ಬೈಕ್‌ ಮತ್ತು ಸ್ಕೂಟರ್‌ಗಳನ್ನು ಫ್ಲಿಪ್‌ಕಾರ್ಟ್ ವೆಬ್‌ಸೈಟ್ ಮೂಲಕ ಮುಂಗಡ ಆರ್ಡರ್ ಮಾಡಬಹುದು. ಜೊತೆಗೆ ಕೊಂಡುಕೊಳ್ಳಬಹುದು. ಒಡಿಸ್ಸೆಯ ಜನಪ್ರಿಯ ವಾಡರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ರೂ.1.10 ಲಕ್ಷ (ಎಕ್ಸ್ ಶೋರೂಂ) ದರಕ್ಕೆ ಲಭ್ಯವಿದೆ.

ಈ ವಾಡರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಬಗ್ಗೆ ಮಾತನಾಡುವುದಾದರೆ, ಇದು, 3.7kWh ಲಿಥಿಯಂ ಐಯಾನ್ (NMC) ಬ್ಯಾಟರಿ ಪ್ಯಾಕ್ ಹೊಂದಿದೆ. ಇದರ 3kW ಎಲೆಕ್ಟ್ರಿಕ್ ಮೋಟಾರ್ 4.02 bhp ಪವರ್, 4.5kW ಮೋಟಾರ್ 6.03 bhp ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜಿನಲ್ಲಿ 125 km ರೇಂಜ್ ನೀಡಲಿದೆ. 85km/h ಟಾಪ್ ಸ್ವೀಡ್ ಪಡೆಯಲಿದೆ.

ವಾಡರ್ ಎಲೆಕ್ಟ್ರಿಕ್ ಬೈಕ್, ಇಕೋ, ಡ್ರೈವ್ ಹಾಗೂ ಸ್ಪೋರ್ಟ್ಸ್ ಎಂಬ ಮೂರು ರೈಡಿಂಗ್ ಮೋಡ್ ಆಯ್ಕೆಗಳನ್ನು ಹೊಂದಿದೆ. ಜೊತೆಗೆ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ. ಈ ಬೈಕ್ ಭರಪೂರ ವೈಶಿಷ್ಟ್ಯಗಳನ್ನು ಪಡೆದಿದೆ. ಅವುಗಳೆಂದರೆ, 7 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಲೊಕೇಟರ್, ಜಿಯೋಫೆನ್ಸಿಂಗ್, ಇಮೊಬಿಲೈಸೇಶನ್, ಆಂಟಿ ಥೆಫ್ಟ್, LED ಲೈಟಿಂಗ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, August 5, 2023, 10:29 [IST]
English summary
Odysse 10000 electric scooters order from bud e details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+