ಭಾರತದಲ್ಲಿ Olaನೇ ದೊಡ್ಡಣ್ಣ: ಅದಕ್ಕೆ ಎಲ್ಲರೂ ಮೆಚ್ಚುತ್ತಾರೆ, ಅಂತಹದ್ದೇನು ಸಾಧನೆ.. ಇಲ್ಲಿದೆ ಮಾಹಿತಿ

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು (ಇವಿ) ಭಾರೀ ಜನಪ್ರಿಯತೆ ಗಳಿಸುತ್ತಿವೆ. ಪ್ರಮುಖವಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಏಪ್ರಿಲ್ ತಿಂಗಳಲ್ಲಿ ಯಾವ ಕಂಪನಿಯು ಎಷ್ಟು ಇವಿ ಸೇಲ್ ಮಾಡಿದೆ ಎಂಬುದರ ಬಗ್ಗೆ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​(ಎಫ್‌ಎಡಿಎ) ವರದಿ ಪ್ರಕಟಿಸಿದೆ.

ಇದರ ಪ್ರಕಾರ, ಓಲಾ ಎಲೆಕ್ಟ್ರಿಕ್ ಮೊದಲ ಸ್ಥಾನನಲ್ಲಿದ್ದು, ಈ ವರ್ಷದ ಏಪ್ರಿಲ್ ನಲ್ಲಿ ಬರೋಬ್ಬರಿ 21,882 ಯುನಿಟ್ ಮಾರಾಟ ಮಾಡಿ, ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ (12,708) ಉತ್ತಮ ಪ್ರಗತಿಯನ್ನು ಸಾಧಿಸಿದೆ. ಭಾರತದ ಮಾರುಕಟ್ಟೆಯಲ್ಲಿ ಓಲಾ ಕಂಪನಿ ಎಸ್1 ಏರ್, ಎಸ್1 ಹಾಗೂ ಎಸ್1 ಪ್ರೊ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತದೆ.

ಭಾರತದಲ್ಲಿ Olaನೇ ದೊಡ್ಡಣ್ಣ: ಅದಕ್ಕೆ ಎಲ್ಲರೂ ಮೆಚ್ಚುತ್ತಾರೆ, ಅಂತಹದ್ದೇನು ಸಾಧನೆ.. ಇಲ್ಲಿದೆ ಮಾಹಿತಿ

ಓಲಾ ಎಸ್1 ಏರ್, 2 kWh, 3 kWh ಹಾಗೂ 4 kWh ಎಂಬ ಮೂರು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಕ್ರಮಾವಾಗಿ ರೂ.84,999, ರೂ.99,999 ಹಾಗೂ ರೂ.1,09,999 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಓಲಾ ಎಸ್1 ರೂ.1,09,999 ದರ ಹೊಂದಿದ್ದು, 141 km ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. ಟಾಪ್ ಎಂಡ್ ಮಾದರಿ ಓಲಾ ಎಸ್1 ಪ್ರೊ ರೂ.1,24,999 ಎಕ್ಸ್ ಶೋರೂಂ ಬೆಲೆಗೆ ಸಿಗಲಿದೆ.

ಭಾರತದಲ್ಲಿ ಟಿವಿಎಸ್ ಕಂಪನಿ ಕೂಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ತಿಂಗಳು 8,318 ಯುನಿಟ್ ಐಕ್ಯೂಬ್ ಸ್ಕೂಟರ್ ಮಾರಾಟ ಮಾಡಿ ದಾಖಲೆ ನಿರ್ಮಿಸಿದ್ದು, ನಾಲ್ಕು ಪಟ್ಟು ಹೆಚ್ಚಿನ ಬೆಳವಣಿಗೆ ಕಂಡಿದೆ. ಅದೇ 2022ರ ಏಪ್ರಿಲ್ ನಲ್ಲಿ 1,498 ಯುನಿಟ್ ಸೇಲ್ ಮಾಡಿತ್ತು. ಟಿವಿಎಸ್ ಐಕ್ಯೂಬ್ ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ.

ಭಾರತದಲ್ಲಿ Olaನೇ ದೊಡ್ಡಣ್ಣ: ಅದಕ್ಕೆ ಎಲ್ಲರೂ ಮೆಚ್ಚುತ್ತಾರೆ, ಅಂತಹದ್ದೇನು ಸಾಧನೆ.. ಇಲ್ಲಿದೆ ಮಾಹಿತಿ

ಅವುಗಳೆಂದರೆ, ಐಕ್ಯೂಬ್, ಐಕ್ಯೂಬ್ S ಹಾಗೂ ಐಕ್ಯೂಬ್ ST. ಪ್ರಸ್ತುತ ಐಕ್ಯೂಬ್ ST ದೇಶೀಯ ಮಾರುಕಟ್ಟೆಯಲ್ಲಿ ಇನ್ನೂ ಬಿಡುಗಡೆಯಾಗಿಲ್ಲ. ಐಕ್ಯೂಬ್ ರೂ.1,13,721 ಹಾಗೂ ಐಕ್ಯೂಬ್ S ರೂ.1,21,674 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇವುಗಳಲ್ಲಿ ಬಳಕೆ ಮಾಡಿರುವ 3.04 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಸಂಪೂರ್ಣ ಚಾರ್ಜಿನಲ್ಲಿ 100 ಕಿಲೋಮೀಟರ್ ರೇಂಜ್ ನೀಡುತ್ತದೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಆಂಪಿಯರ್ ವೆಹಿಕಲ್ಸ್, ಎಥರ್ ಎನರ್ಜಿಯನ್ನು ಹಿಂದಿಕ್ಕಿ ಮುಂದೆ ಸಾಗಿದ್ದು, ಬರೋಬ್ಬರಿ 8,318 ಯುನಿಟ್ ಸೇಲ್ ಮಾಡಿ, 27.18% ಪ್ರಗತಿ ಸಾಧಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 6,540 ಯುನಿಟ್‌ ಮಾರಾಟ ಮಾಡಲು ಯಶಸ್ವಿಯಾಗಿತ್ತು. ಆಂಪಿಯರ್ ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಸ್ಕೂಟರ್ ಮಾರಾಟ ಮಾಡುತ್ತಿದ್ದು, ಆಂಪಿಯರ್ Primus ರೂ.1,09,900, ಆಂಪಿಯರ್ ಝೀಲ್ EX ರೂ.75,000 ಬೆಲೆಯನ್ನು ಹೊಂದಿದೆ.

ಭಾರತದಲ್ಲಿ Olaನೇ ದೊಡ್ಡಣ್ಣ: ಅದಕ್ಕೆ ಎಲ್ಲರೂ ಮೆಚ್ಚುತ್ತಾರೆ, ಅಂತಹದ್ದೇನು ಸಾಧನೆ.. ಇಲ್ಲಿದೆ ಮಾಹಿತಿ

ಎಥರ್ ಎನರ್ಜಿ, ದೇಶದಲ್ಲಿ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರೂ ಮಾರಾಟದಲ್ಲಿ ಮಾತ್ರ ಹಿಂದೆ ಬಿದ್ದಿದೆ. ಆದರೂ ಕಳೆದ ತಿಂಗಳು 7,746 ಯುನಿಟ್ ಮಾರಾಟ ಮಾಡಿ, 2022 ಏಪ್ರಿಲ್ (2,451) ತಿಂಗಳಿಗೆ ಹೋಲಿಸಿದರೆ, ಕೊಂಚ ಒಳ್ಳೆಯ ಪ್ರಗತಿ ಸಾಧಿಸಿದೆ. ಸದ್ಯ, ಭಾರತದಲ್ಲಿ ಖರೀದಿಗೆ ದೊರೆಯುವ ಎಥರ್ 450, ರೂ.1,06,926 ದರದಲ್ಲಿ ಸಿಗಲಿದೆ.

ಇನ್ನುಳಿದಂತೆ ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಬಜಾಜ್, ಕಳೆದ ಏಪ್ರಿಲ್ ತಿಂಗಳು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ನ 4,013 ಯುನಿಟ್ ಮಾರಾಟ ಮಾಡಿದ್ದು, ಸಾಧಾರಣ ಬೆಳವಣಿಗೆ ಕಂಡಿದೆ. ಅಲ್ಲದೆ, ಇಂಧನ ಚಾಲಿತ ದ್ವಿಚಕ್ರ ವಾಹನ ಮಾರಾಟದಲ್ಲಿ ಯಾವಾಗಲು ಮೊದಲ ಸ್ಥಾನದಲ್ಲಿರುವ 'ಹೀರೋ' ಇವಿ ಮಾರಾಟದಲ್ಲಿ ಹಿಂದೆ ಇದ್ದು, ಕೇವಲ 3,331 ಯುನಿಟ್ ಸೇಲ್ ಮಾಡಿದೆ.

Article Published On: Saturday, May 20, 2023, 14:25 [IST]
English summary
Ola lead electric two wheeler sales april details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+