ಬಹುನಿರೀಕ್ಷಿತ ಹೋಂಡಾ Activa 6G vs Ola ಎಸ್1 ಏರ್: ಹೇಗಿವೆ.. ಯಾವುದು ಇಷ್ಟವಾಯ್ತು?

ಭಾರತದಲ್ಲಿ ಎಲೆಕ್ಟ್ರಿಕ್, ಪೆಟ್ರೋಲ್ ದ್ವಿಚಕ್ರ ವಾಹನಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಒಂದಿಕ್ಕಿಂತ ಒಂದು ಅತ್ಯಾಕರ್ಷಕವಾಗಿದ್ದು, ಸದ್ಯ, ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಓಲಾ ಎಸ್1 ಏರ್ ಹಾಗೂ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಕೀಯ ಪವರ್‌ಟ್ರೇನ್, ಬೆಲೆ ಮತ್ತು ನಿರ್ವಹಣಾ ವೆಚ್ಚದ ಬಗ್ಗೆ ಹೋಲಿಕೆ ಮಾಡಲಾಗಿದ್ದು, ಯಾವುದೇ ಬೆಸ್ಟ್ ತಿಳಿಯೋಣ.

ಎಲ್ಲದಕ್ಕಿಂತ ಮೊದಲು ಹೋಂಡಾ ಆಕ್ಟಿವಾ, ತನ್ನ ಅತ್ಯುತ್ತಮ ಕಾರ್ಯಕ್ಷಮತೆಯಿಂದ ಭಾರತದ ಗ್ರಾಹಕರಿಗೆ ಇಷ್ಟವಾದ ಸ್ಕೂಟರ್ ಆಗಿದೆ ಎಂದು ಹೇಳಬಹುದು. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೂ ಮೊದಲೇ ಖರೀದಿದಾರರಲ್ಲಿ ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿತ್ತು. ಡಿಸೆಂಬರ್ 2022ರ ಎರಡು ಸ್ಕೂಟರ್ ಮಾರಾಟ ಪ್ರಗತಿಯನ್ನು ಗಮನಿಸಿದಾಗ ಜಮಾನದಿಂದಲ್ಲೂ ಖ್ಯಾತಿಗಳಿಸಿರುವ ಹೋಂಡಾ IECಚಾಲಿತ ಆಕ್ಟಿವಾದ 96,451 ಯುನಿಟ್‌ಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ. ಓಲಾ, 17,294 ಯುನಿಟ್‌ ಎಲೆಕ್ಟ್ರಿಕ್ ಸ್ಕೂಟರ್ ಸೇಲ್ ಮಾಡಿದೆ.

ಬಹುನಿರೀಕ್ಷಿತ ಹೋಂಡಾ Activa 6G vs Ola ಎಸ್1 ಏರ್: ಹೇಗಿವೆ.. ಯಾವುದು ಇಷ್ಟವಾಯ್ತು?

ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಓಲಾ ಎಸ್1 ಏರ್ ಸ್ಕೂಟರ್ ಪವರ್ ಟ್ರೇನ್ ಬಗ್ಗೆ ಹೇಳುವುದಾದರೆ, ಇದು ಹಬ್ ಮೌಂಟೆಡ್ ಮೋಟಾರ್ ಹೊಂದಿದ್ದು, ಟಾಪ್ ಎಂಡ್ ಮಾದರಿ 4.5kW (6.11 hp) ಪವರ್ ಉತ್ಪಾದಿಸಲಿದೆ. ಇದು 2 kWh, 3 kWh ಹಾಗೂ 4 kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಬ್ಯಾಟರಿ ಪ್ಯಾಕ್ ಅನುಗುಣವಾಗಿ 85 km ರಿಂದ 165 km ರೇಂಜ್ ನೀಡಲಿದ್ದು, ಗರಿಷ್ಠ 85 kmph ಟಾಪ್ ಸ್ವೀಡ್ ಹೊಂದಿದೆ.

ಕಳೆದ ತಿಂಗಳು ದೇಶದ ಗ್ರಾಹಕರಿಗೆ ಖರೀದಿಗೆ ಲಭ್ಯವಾದ ಹೋಂಡಾ ಆಕ್ಟಿವಾ 6G, 109 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 7.84 hp ಗರಿಷ್ಠ ಪವರ್ 8.90 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5.3 ಲೀಟರ್ ಫ್ಯುಯೆಲ್ ಟ್ಯಾಂಕ್ ಪಡೆದಿದೆ. 60kpl ಮೈಲೇಜ್ ನೀಡುತ್ತದೆ. ಈ ಎರಡು ಸ್ಕೂಟರ್ ಗಮನಿಸಿದಾಗ ಬಹುತೇಕ ಓಲಾ ಸ್ಕೂಟರ್ ಉತ್ತಮ ಎಂದು ಹೇಳಬಹುದು. ಆದರೆ, ದಶಕಗಳಿಂದ ಹೋಂಡಾ ಆಕ್ಟಿವಾ ತನ್ನ ಉತ್ತಮ ಕಾರ್ಯಕ್ಷಮತೆಯಿಂದಲೇ ಖ್ಯಾತಿಗಳಿಸಿದೆ. ಮುಂಬರುವ ದಿನಗಳಲ್ಲಿ ಓಲಾದ ಕಾರ್ಯಕ್ಷಮತೆ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.

ಬಹುನಿರೀಕ್ಷಿತ ಹೋಂಡಾ Activa 6G vs Ola ಎಸ್1 ಏರ್: ಹೇಗಿವೆ.. ಯಾವುದು ಇಷ್ಟವಾಯ್ತು?

ಓಲಾ ಎಸ್1 ಏರ್ ಹಾಗೂ ಹೋಂಡಾ ಆಕ್ಟಿವಾ 6G ತನ್ನದೇ ಆದ ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಪಡೆಯುವ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ಎರಡು ಸ್ಕೂಟರ್ ಗಳು ಡ್ರಮ್ ಬ್ರೇಕ್ಸ್, CBS ಕಾಂಬಿ ಬ್ರೇಕ್ ಸಿಸ್ಟಮ್ ಹಾಗೂ LED ಹೆಡ್ ಲೈಟ್ ಅನ್ನು ಪಡೆದಿವೆ. ಓಲಾ ಎಸ್ 1 ಏರ್, 7- ಇಂಚಿನ ಟಚ್‌ಸ್ಕ್ರೀನ್, ಬ್ಲೂಟೂತ್ ಕನೆಕ್ಟಿವಿಟಿ, ಮ್ಯೂಸಿಕ್ ಪ್ಲೇಬ್ಯಾಕ್, ಓವರ್-ದಿ-ಏರ್ (OTA) ಅಪ್‌ಡೇಟ್‌ಗಳನ್ನು ಹೊಂದಿದೆ. ಹೋಂಡಾ ಆಕ್ಟಿವಾದ ಟಾಪ್ ಎಂಡ್ ಆವೃತ್ತಿಯಾದ ಹೆಚ್-ಸ್ಮಾರ್ಟ್ ನಲ್ಲಿ ಅಲಾಯ್ ವೀಲ್ಸ್, ಕೀಲೆಸ್, ಸೈಲೆಂಟ್ ಸ್ಟಾರ್ಟರ್ ಮತ್ತು ಆಟೋ ಸ್ಟಾರ್ಟ್/ಸ್ಟಾಪ್ ಆಯ್ಕೆಯನ್ನು ಪಡೆದಿದೆ.

ಓಲಾ ಎಸ್1 ಏರ್ ಬ್ಯಾಟರಿ ಪ್ಯಾಕ್ ಗೆ ಅನುಗುಣವಾಗಿ ಬೇರೆ ಬೇರೆ ದರವನ್ನು ಹೊಂದಿದೆ. 2kWh ಬ್ಯಾಟರಿ ಪ್ಯಾಕ್ ಹೊಂದಿರುವ ಸ್ಕೂಟರ್ ರೂ.84,999 ಬೆಲೆಯಲ್ಲಿ ಖರೀದಿಗೆ ದೊರೆತರೆ, 3kWh ಬ್ಯಾಟರಿ ಪ್ಯಾಕ್ ಪಡೆದಿರುವ ಸ್ಕೂಟರ್ ರೂ.99,999 ದರದಲ್ಲಿ ಸಿಗಲಿದ್ದು, 4kWh ಬ್ಯಾಟರಿ ಪ್ಯಾಕ್ ಹೊಂದಿರುವ ಸ್ಕೂಟರ್ ರೂ.1,09,999 ದರದಲ್ಲಿ ಗ್ರಾಹಕರಿಗೆ ಸಿಗಲಿದೆ. ಇನ್ನು, ಹೋಂಡಾ ಆಕ್ಟಿವಾ ಸ್ಕೂಟರ್ ಕೂಡ ಅಗ್ಗದ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ ರೂ.75,655 ರಿಂದ ರೂ.81,656 ದರವನ್ನು ಹೊಂದಿರಲಿದೆ.

ಮನೆಯ ವಿದ್ಯುತ್ ಬಳಕೆಯಲ್ಲಿ ಓಲಾ ಸ್ಕೂಟರ್ ಚಾರ್ಜ್ ಮಾಡಲು 2-4 ಯುನಿಟ್ ಬೇಕು. ಈ ಲೆಕ್ಕಾಚಾರದಲ್ಲಿ ಒಂದು ಯುನಿಟ್ ವಿದ್ಯುತ್ ಗೆ ಸರಿ ಸುಮಾರು ರೂ.5.5 ಖರ್ಚಾಗುತ್ತದೆ. 85 km ರೇಂಜ್ ನೀಡುವ 2kWh ಬ್ಯಾಟರಿ ಪ್ಯಾಕ್ ಹೊಂದಿರುವ ಸ್ಕೂಟರ್ ಚಾರ್ಜ್ ಮಾಡಲು ಕೇವಲ ರೂ.11 ವೆಚ್ಚವಾಗುತ್ತದೆ. ಅಂದರೆ, ಪ್ರತಿ ಕಿಲೋಮೀಟರ್ ಗೆ 13 ಪೈಸೆ ಖರ್ಚಾಗುತ್ತದೆ. ಹೋಂಡಾ ಆಕ್ಟಿವಾ, 5.3 ಲೀಟರ್ ಫ್ಯುಯೆಲ್ ಟ್ಯಾಂಕ್ ಹೊಂದಿದೆ. ಭಾರತದಲ್ಲಿ ಪೆಟ್ರೋಲ್ ದರ ಸರಾಸರಿ ರೂ.95 ರಿಂದ ರೂ.110 ಇದ್ದು, ಆಕ್ಟಿವಾ 60kpl ಮೈಲೇಜ್ ನೀಡಲಿದ್ದು, 1 ಕಿ.ಮೀ.ಗೆ ರೂ.1.7 ವೆಚ್ಚವಾಗುತ್ತದೆ.

ಇದನ್ನು ಗಮನಿಸಿದಾಗ ಓಲಾ ಸ್ಕೂಟರ್ ನಲ್ಲಿ 50,000 ಕಿ.ಮೀ ದೂರ ಕ್ರಮಿಸಲು ರೂ.6,500 ಖರ್ಚಾದರೆ, ಅದೇ ರೀತಿ ಹೋಂಡಾ ಆಕ್ಟಿವಾಗೆ ರೂ.85,000 ವೆಚ್ಚವಾಗುತ್ತದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ನಿರ್ವಹಣಾ ವೆಚ್ಚ ಕಡಿಮೆ ಇರುವುದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಗ್ರಾಹಕರು ಖರೀದಿಸಬಹುದು. ಹೋಂಡಾ ಕೂಡ ಎಲೆಕ್ಟ್ರಿಕ್ ಆಕ್ಟಿವಾ ಆವೃತ್ತಿಯನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿದೆ. ಆಕ್ಟಿವಾ 6G, 3 ವರ್ಷ/36,000 km, ಓಲಾ 3 years/40,000 km ವಾರಂಟಿಯನ್ನು ಹೊಂದಿದೆ. ನಿಮಗೆ ಯಾವುದು ಇಷ್ಟವಾಯಿತು ಕಾಮೆಂಟ್ ಮಾಡಿ.

Article Published On: Monday, February 20, 2023, 16:00 [IST]
English summary
Ola s1 air vs honda activa 6g which is best details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+