Tata Stryder: ಭಾರತದ ಮೊದಲ ಮೆಗ್ನೀಶಿಯಂ ಬೈಸಿಕಲ್ ಬಿಡುಗಡೆಗೊಳಿಸಿದ ಟಾಟಾ, ವಿಶೇಷತೆಗಳೇನು?
ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲು ಹಲವು ಮಂದಿ ಪರಿಸರ ಸ್ನೇಹಿ ವಾಹನಗಳನ್ನು ಹುಡುಕುತ್ತಿರುತ್ತಾರೆ. ಅಂತಹರಿಗೆ ಇಲ್ಲಿದೆ ಸಿಹಿಸುದ್ದಿ. ಟಾಟಾ ಇಂಟರ್‌ನ್ಯಾಷನಲ್ (Tata International) ಅಂಗಸಂಸ್ಥೆ ಸ್ಟ್ರೈಡರ್ ಸೈಕಲ್ಸ್ (Stryder Cycles) ಹೊಚ್ಚ ಹೊಸ ಬೈಸಿಕಲ್ ಲಾಂಚ್ ಮಾಡಿದೆ.
ಸ್ಟ್ರೈಡರ್ ಸೈಕಲ್ಸ್, ಕಾಂಟಿನೋ (Contino) ಸರಣಿ ಬೈಸಿಕಲ್ ಬಿಡುಗಡೆಗೊಳಿಸಿದೆ. ನೂತನ ರೇಂಜ್ ಬೈಸಿಕಲ್‌ಗಳು, ಎಂಟು ವಿವಿಧ ಮಾದರಿಗಳನ್ನು ಒಳಗೊಂಡಿವೆ. ಅದರಲ್ಲಿ ಮೌಂಟೇನ್, ಫ್ಯಾಟ್, ಬಿಎಂಎಕ್ಸ್, ಸಿಟಿ ಸೇರಿದಂತೆ ಅನೇಕ ಮಾಡೆಲ್‌ಗಳಿವೆ. ಹೊಸ ಕಾಂಟಿನೋ ಗ್ಯಾಲಕ್ಟಿಕ್ 27.5ಟಿ (Contino Galactic 27.5T) ಬೈಸಿಕಲ್ ಬಗ್ಗೆ ಮಾತನಾಡುವುದಾದರೆ, ಇದೊಂದು ಭಾರತದ ಮೊದಲ ಮೆಗ್ನೀಶಿಯಂ ಬೈಸಿಕಲ್ ಆಗಿರುವುದು ಪ್ರಮುಖ ಹೈಲೈಟ್ ಎಂದು ಹೇಳಬಹುದು.

ಸದ್ಯ, ಎಲ್ಲ ಬೈಸಿಕಲ್‌ಗಳಲ್ಲಿ ಬಳಕೆ ಮಾಡುವ ಅಲ್ಯೂಮಿನಿಯಂ ಫೇಮ್ (aluminum frames)ಗೆ ಹೋಲಿಸಿದರೆ, ಮೆಗ್ನೀಶಿಯಂ ಫ್ರೇಮ್ (Magnesium frames) ಹಗುರವಾಗಿರುತ್ತವೆ. ಜೊತೆಗೆ ಹೆಚ್ಚು ಶಕ್ತಿಯುತವಾಗಿರುತ್ತದೆ. ಆ ಕಾರಣಕ್ಕೆ ಎಂತಹ ಬೆಟ್ಟ ಗುಡ್ಡದ ರಸ್ತೆಯಲ್ಲಿಯೂ ಈ ಬೈಸಿಕಲ್‌ನ್ನು ಸುಲಭವಾಗಿ ಓಡಿಸಬಹುದು. ದೇಶೀಯ ಮಾರುಕಟ್ಟೆಯಲ್ಲಿ ಗ್ಯಾಲಕ್ಟಿಕ್ ಬೆಲೆ ರೂ.27,896 ಇದೆ.
ಕಾಂಟಿನೋ ಗ್ಯಾಲಕ್ಟಿಕ್ 27.5ಟಿ ಬೈಸಿಕಲ್ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುಗಮವಾಗಿ ಕಾರ್ಯನಿರ್ವಹಿಸುವ ಡ್ಯುಯಲ್ ಡಿಸ್ಕ್ ಬ್ರೇಕ್ ಒಳಗೊಂಡಿದೆ. ಫ್ರಂಟ್, ರೇರ್ ಡೆರೈಲರ್ಸ್, ಲಾಕ್ - ಇನ್/ಲಾಕ್ - ಔಟ್ ತಂತ್ರಜ್ಞಾನ ಪಡೆದಿದೆ. ಇದರೊಟ್ಟಿಗೆ ಫ್ರಂಟ್ ಫೋರ್ಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಇದರಿಂದ ವಿವಿಧ ಭೂ ಪ್ರದೇಶದಲ್ಲಿ ಸುಲಭವಾಗಿ ಬೈಸಿಕಲ್ ಚಲಾಯಿಸಲು ಸಾಧ್ಯವಾಗುತ್ತದೆ.
ನೂತನ ಕಾಂಟಿನೋ ಗ್ಯಾಲಕ್ಟಿಕ್ 27.5ಟಿ ಬೈಸಿಕಲ್ ಅನ್ನು ದೇಶಾದ್ಯಂತ ಎಲ್ಲ ರಿಟೇಲ್ ಸ್ಟೋರ್, ಸ್ಟ್ರೈಡರ್ ಕಂಪನಿಯ ವೆಬ್‌ಸೈಟ್ ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಿಂದಲೂ ಕೊಂಡುಕೊಳ್ಳಬಹುದು. ಈ ಬಗ್ಗೆ ಮಾತನಾಡಿರುವ ಸ್ಟ್ರೈಡರ್ ಸೈಕಲ್ಸ್‌ನ ಬಿಸಿನೆಸ್ ಹೆಡ್ ರಾಹುಲ್ ಗುಪ್ತಾ ಅವರು, 'ಈ ಬೈಸಿಕಲ್ ರೈಡರ್ ಗಳಿಗೆ ಅತ್ಯುತ್ತಮ ಅನುಭವ ನೀಡುತ್ತದೆ' ಎಂದು ಹೇಳಿದ್ದಾರೆ.
ಕಳೆದ ತಿಂಗಳು ಕೂಡ ಸ್ಟ್ರೈಡರ್ ಸೈಕಲ್ಸ್, ರೂ.29,995 ಪರಿಚಯಾತ್ಮಕ ಬೆಲೆಗೆ ಜೀಟಾ ಮ್ಯಾಕ್ಸ್ (Zeeta Max) ಹೆಸರಿನ ಇ-ಬೈಸಿಕಲ್ ಲಾಂಚ್ ಮಾಡಿತ್ತು. ಇದು, 36V/ 7.5Ah ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿತ್ತು, ಪುಲ್ ಚಾರ್ಜಿನಲ್ಲಿ 35 km ಕ್ರಮಿಸುತ್ತದೆ. ಪೆಡಲ್ ಮೂಲಕ ಓಡಿಸಬಹುದು. 25 km/hr ಟಾಪ್ ಹೊಂದಿದ್ದು, ಮ್ಯಾಟ್ ಗ್ರೇ ಹಾಗೂ ಮ್ಯಾಟ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.
ಇದರ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಮುಂಭಾಗ ಅತ್ಯುತ್ತಮ ಸಸ್ಪೆನ್ಷನ್ ಸೆಟಪ್ ಹಾಗೂ ಆಟೋ - ಕಟ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ. ಬ್ಯಾಟರಿ ಲೆವೆಲ್, ಓಡೋಮೀಟರ್ ಸೇರಿದಂತೆ ಇತರೆ ಮಾಹಿತಿಯನ್ನು ತೋರಿಸಲು LCD ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ ಐದು ರೈಡಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ. ಈ ಮೂಲಕ ಹೆಚ್ಚು ಅತ್ಯಾಧುನಿಕವಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಸಿಗುವ ಮತ್ತೊಂದು, ಇ-ಬೈಸಿಕಲ್ ಜೀಟಾ ಪ್ಲಸ್ ಕುರಿತು ತಿಳಿಯೋಣ. ಇದು, ರೂ.26,995 ಬೆಲೆಯಲ್ಲಿ ಲಭ್ಯವಿದೆ. 6-volt/6 Ah ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, 25 kmph ಟಾಪ್ ಸ್ವೀಡ್ ಹೊಂದಿದೆ. ಸಂಪೂರ್ಣ ಚಾರ್ಜಿನಲ್ಲಿ 30 kmವರೆಗೆ ಚಲಿಸಬಲ್ಲದು. ಜೊತೆಗೆ ಪೆಡಲ್ ಆಯ್ಕೆಯಲ್ಲಿಯೂ ಓಡಿಸಬಹುದು. ಮನೆಯ ವಿದ್ಯುತ್ ಬಳಕೆಯಲ್ಲಿ ಇದರ ಬ್ಯಾಟರಿ ಪ್ಯಾಕ್, 3 - 4 ಗಂಟೆಯೊಳಗೆ ಚಾರ್ಜ್ ಆಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications