ಆಫ್‌ರೋಡ್ ವಿಭಾಗದಲ್ಲಿ ಕೈಗೆಟುಕುವ ಬೆಲೆಗೆ ಲಭ್ಯವಿರುವ 5 ಅಡ್ವೆಂಚರ್ ಬೈಕ್‌ಗಳು

ಅಡ್ವೆಂಚರ್ ಮೋಟಾರ್‌ಸೈಕಲ್‌ಗಳು ದೇಶದಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಇದರ ಪರಿಣಾಮವಾಗಿ, ಅನೇಕ ಪ್ರಮುಖ ದ್ವಿಚಕ್ರ ವಾಹನ ತಯಾರಕರು ಈ ವಿಭಾಗದಲ್ಲಿ ಉನ್ನತ ಶೈಲಿಯ ಅಡ್ವೆಂಚರ್ ಬೈಕ್‌ಗಳನ್ನು ಪರಿಚಯಿಸುತ್ತಿದ್ದಾರೆ. ಈ ಲೇಖನದಲ್ಲಿ ಕಡಿಮೆ ಬೆಲೆಗೆ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುವ ಟಾಪ್ 5 ಅಡ್ವೆಂಚರ್ ಬೈಕ್‌ಗಳನ್ನು ನೋಡೋಣ. (ಎಲ್ಲಾ ಬೆಲೆಗಳು ಎಕ್ಸ್‌ ಶೋರೂಂ)

ಹೋಂಡಾ CB200X
ಹೋಂಡಾ CB200X ಅತ್ಯಂತ ಕೈಗೆಟುಕುವ ಮೋಟಾರ್‌ಸೈಕಲ್ ಆಗಿದೆ. ಇದು ಕೂಡ ಅಡ್ವೆಂಚರ್ ರೈಡ್‌ಗೆ ಹೇಳಿ ಮಾಡಿಸಿದ ಬೈಕ್ ಆಗಿದೆ. ಈ ಬೈಕ್‌ನ ಬೆಲೆಯು ರೂ. 1.48 ಲಕ್ಷ ಇದ್ದು, ಅತ್ಯುತ್ತಮ ಫೀಚರ್ಸ್ ಒಳಗೊಂಡಿದೆ. ಇದು 184.4 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಈ ಮೋಟಾರ್ ಗರಿಷ್ಠ 17.2 ಪಿಎಸ್ ಟಾರ್ಕ್ ಮತ್ತು 16.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಫ್‌ರೋಡ್ ವಿಭಾಗದಲ್ಲಿ ಕೈಗೆಟುಕುವ ಬೆಲೆಗೆ ಲಭ್ಯವಿರುವ 5 ಅಡ್ವೆಂಚರ್ ಬೈಕ್‌ಗಳು

ಈ ಮೋಟಾರ್ ಸೈಕಲ್ 5 ಸ್ಪೀಡ್ ಟ್ರಾನ್ಸ್ಮಿಷನ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಹೀರೋ ಎಕ್ಸ್‌ಪಲ್ಸ್‌ನಂತೆ, ಈ ಬೈಕನ್ನು ಆನ್ ಮತ್ತು ಆಫ್ ರೋಡ್ ಟ್ರಿಪ್‌ಗಳಿಗೆ ಬಳಸಬಹುದು. ಡಿಜಿಟಲ್ ಸ್ಪೀಡೋಮೀಟರ್ ಡಿಜಿಟಲ್, ಡಿಜಿಟಲ್ ಟ್ಯಾಕೋಮೀಟರ್, ಎಂಜಿನ್ ಕಿಲ್ ಸ್ವಿಚ್, ವಾಚ್, ಡಿಜಿಟಲ್ ಟ್ರಿಪ್‌ಮೀಟರ್, ಸ್ಟಾರ್ಟ್-ಸ್ಟಾಪ್ ಸ್ವಿಚ್ ಈ ಬೈಕ್‌ನಲ್ಲಿರುವ ಹೆಚ್ಚುವರಿ ವೈಶಿಷ್ಟ್ಯಗಳಾಗಿವೆ. 8 ಆನ್-ಬೋರ್ಡ್ ಸೆನ್ಸಾರ್‌ಗಳೊಂದಿಗೆ ಫ್ಯೂಯಲ್ ಇಂಜೆಕ್ಷನ್ ಅನ್ನು ಸಹ ಒದಗಿಸಲಾಗಿದೆ.

ಹೀರೋ ಎಕ್ಸ್‌ಪಲ್ಸ್ 200
Hero MotoCorp ನ Xpls 200 ದೇಶದ ಅತ್ಯಂತ ಅಗ್ಗದ ಅಡ್ವೆಂಚರ್ ಬೈಕ್ ಆಗಿದೆ. ಈ ಬೈಕ್ ಬೆಲೆ ರೂ. 1.23 ಲಕ್ಷದಿಂದ ರೂ. 1.32 ಲಕ್ಷದವರೆಗೆ ಮಾರಾಟಕ್ಕೆ ಲಭ್ಯವಿದೆ. ಈ ಬೈಕ್‌ನಲ್ಲಿ 199.6 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಮೋಟಾರ್ ಅನ್ನು ಬಳಸಲಾಗಿದೆ. ಇದು 19.1 PS ಪವರ್ ಮತ್ತು 17.35 Nm ಟಾರ್ಕ್ ಉತ್ಪಾದಿಸುತ್ತದೆ. ವಿಶೇಷ ಅನುಕೂಲಕ್ಕಾಗಿ ಬೈಕ್‌ನಲ್ಲಿ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್, ಅಪ್-ಸ್ವೆಪ್ಟ್ ಎಕ್ಸಾಸ್ಟ್ ನೀಡಲಾಗಿದೆ.

ಹಾಗೆಯೇ ಅಲ್ಯೂಮಿನಿಯಂ ಬ್ಯಾಷ್ ಪ್ಲೇಟ್ ಅನ್ನು ಎಂಜಿನ್‌ನ ತಳದಲ್ಲಿ ಅಳವಡಿಸಲಾಗಿದೆ. ಈ ವಿನ್ಯಾಸದಿಂದಾಗಿ ಆಫ್‌ರೋಡ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲದೇ ರೈಡ್ ಮಾಡಬಹುದು. ಇದರ ಜೊತೆಗೆ, ಮುಂಭಾಗದಲ್ಲಿ 190mm ಸಸ್ಪೆನ್ಶನ್ ಅನ್ನು ಒದಗಿಸಲಾಗಿದ್ದು, ದೀರ್ಘಾವಧಿಯ ಪ್ರಯಾಣಕ್ಕಾಗಿ ಹಿಂಭಾಗದಲ್ಲಿ 10-ಹಂತದ ಹೊಂದಾಣಿಕೆಯ ಮೊನೊ ಶಾಕ್ ಅನ್ನು ಒದಗಿಸಲಾಗಿದೆ. ಇದರ ಜೊತೆಗೆ, ಸ್ಮಾರ್ಟ್ಫೋನ್ ಸಂಪರ್ಕ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಪೂರ್ಣ ಎಲ್ಇಡಿ ಹೆಡ್ಲೈಟ್, ದೊಡ್ಡ ಡಿಸ್ಕ್ ಬ್ರೇಕ್‌ಗಳು ​​ಮತ್ತು ಎಬಿಎಸ್‌ನೊಂದಿಗೆ ಸಜ್ಜುಗೊಂಡಿದೆ.

ಸುಜುಕಿ V-Strom SX
ಈ ಸುಜುಕಿ ವಿ-ಸ್ಟ್ರೋಮ್ ಬೈಕ್ ಯಜ್ಡಿ ಅಡ್ವೆಂಚರ್ ಬೈಕ್‌ಗಿಂತ ಸ್ವಲ್ಪ ಕಡಿಮೆ ಸಿಸಿ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ 249 ಸಿಸಿ ಸಾಮರ್ಥ್ಯದ ಆಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಮೋಟಾರ್ ಗರಿಷ್ಠ 26.5 PS ಮತ್ತು 22.2 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಸುಜುಕಿ ವಿ-ಸ್ಟ್ರೋಮ್ ಭಾರತದಲ್ಲಿ ರೂ. 2.12 ಲಕ್ಷದ ಆರಂಭಿಕ ಬೆಲೆಯೊಂದಿಗೆ ಮಾರಾಟಕ್ಕೆ ಲಭ್ಯವಿದೆ. ಇದು ಪ್ರೀಮಿಯಂ ಗುಣಮಟ್ಟದ ಅಡ್ವೆಂಚರ್ ಬೈಕ್ ಆಗಿದ್ದು, ಇತರೆ ಮೋಟಾರ್ ಸೈಕಲ್ ಗಳಿಗಿಂತ ಸ್ವಲ್ಪ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ.

ಯೆಜ್ಡಿ ಅಡ್ವೆಂಚರ್
ಯೆಜ್ಡಿ ಇತ್ತೀಚೆಗೆ ಭಾರತದಲ್ಲಿ ತನ್ನ ಹೊಸ ಮಾದರಿಗಳೊಂದಿಗೆ ರೀ ಎಂಟ್ರಿ ಕೊಟ್ಟಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಮೂರು ಪ್ರಮುಖ ಮೋಟಾರ್‌ಸೈಕಲ್‌ಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಿದೆ. ಅಂದಹಾಗೆ ಅಡ್ವೆಂಚರ್ ವಿಭಾಗದಲ್ಲಿ ಕಂಪನಿಯ ಯೆಜ್ಡಿ ಅಡ್ವೆಂಚರ್ ಮಾರಾಟಕ್ಕಿರುವ ಏಕೈಕ ದ್ವಿಚಕ್ರ ವಾಹನವಾಗಿದೆ. ಈ ಬೈಕ್ ಪ್ರಸ್ತುತ ರೂ. 2.10 ಲಕ್ಷದಿಂದ ರೂ. 2.19 ಲಕ್ಷದವರೆಗಿನ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಈ ಬೈಕ್ 334ಸಿಸಿ ಲಿಕ್ವಿಡ್, ಸಿಂಗಲ್ ಪಾಟ್ ಮೋಟಾರ್ ಹೊಂದಿದೆ.

ಇದರ ಬಲಿಷ್ಟ ಎಂಜಿನ್ ಗರಿಷ್ಠ 30.2 PS ಮತ್ತು 29.9 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ ಅನ್ನು ಆಫ್ ರೋಡ್ ಮಾತ್ರವಲ್ಲದೆ ಆನ್ ರೋಡ್ ಟ್ರಿಪ್‌ಗಳಿಗೂ ಬಳಸಬಹುದು. ಡ್ಯುಯಲ್ ಚಾನೆಲ್ ಎಬಿಎಸ್, ಬ್ಲೂಟೂತ್ ಕನೆಕ್ಟಿವಿಟಿ, ಹೊಂದಾಣಿಕೆಯ ವಿಂಡ್‌ಶೀಲ್ಡ್, ಡಿಜಿಟಲ್ ಆಟೋಮೀಟರ್, ಚಾರ್ಜಿಂಗ್ ಪಾಯಿಂಟ್, ಮೂರು ವಿಭಿನ್ನ ರೈಡಿಂಗ್ ಮೋಡ್‌ಗಳು, ಡಿಜಿಟಲ್ ಸ್ಪೀಡೋ ಮತ್ತು ಟ್ರಿಪ್ ಮೀಟರ್ ಈ ಬೈಕಿನ ಹೆಚ್ಚುವರಿ ವೈಶಿಷ್ಟ್ಯಗಳಾಗಿವೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಬೆಲೆ ರೂ. 2.15 ಲಕ್ಷದಿಂದ ರೂ. 2.22 ಲಕ್ಷದವರೆಗಿನ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಈ ಬೈಕ್‌ಗೆ ಭಾರತೀಯ ಸಾಹಸ ಬೈಕ್ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೈಕ್ 411 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದೆ. ಇದು 24.31 PS ಪವರ್ ಮತ್ತು 32 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕು ತುಂಬಾ ಒರಟಾಗಿ ಕಾಣುವ ಹೊರತಾಗಿಯೂ ಬಳಕೆಯಲ್ಲಿ ಅತ್ಯಂತ ಸ್ನೇಹಪರವಾಗಿರುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.

Article Published On: Tuesday, January 3, 2023, 16:47 [IST]
English summary
Top 5 affordable adventure bikes in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+