2 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಸಿಗುವ ಟಾಪ್ 5 ಫೇರ್ಡ್ ಸ್ಪೋರ್ಟ್ಸ್ ಬೈಕ್‌ಗಳು

ಭಾರತದಲ್ಲಿ ಫೇರ್ಡ್ ಮೋಟಾರ್‌ಸೈಕಲ್‌ಗಳೆಂದರೆ ಯುವಕರಲ್ಲಿ ಭಾರೀ ಕ್ರೇಜ್ ಇದೆ. ಒಂದು ಕಾಲದಲ್ಲಿ ಯಾವುದೇ ಫೇರ್ಡ್ ಬೈಕ್‌ಗಳು ಇರಲಿಲ್ಲವಾದರೂ, ಪ್ರಸ್ತುತ ಸಾಕಷ್ಟು ಆಯ್ಕೆಗಳು ಇವೆ. ಬಜೆಟ್‌ನಲ್ಲಿ 2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ನೋಡುತ್ತಿರುವವರಿಗಾಗಿ ಟಾಪ್ ಐದು ಫೇರ್ಡ್ ಮೋಟಾರ್‌ಸೈಕಲ್‌ಗಳು ಇಲ್ಲಿವೆ (ಎಲ್ಲ ಬೆಲೆಗಳು ಎಕ್ಸ್ ಶೋ ರೂಂ ದೆಹಲಿ).

Yamaha R15 V4:
ಯಮಹಾ R15 ಎಂಥವರಲ್ಲೂ ಜೋಷ್ ತರಿಸುವ ಖ್ಯಾತಿಯನ್ನು ಪಡೆದಿದೆ. ಅತ್ಯದ್ಭುತ ವಿನ್ಯಾಸ ಮತ್ತು ಕಾರ್ಯಕ್ಷಮತೆಯನ್ನು ಹೊಂದಿರುವ ಈ ಯಮಹಾ ಬೈಕ್ ನೀವು 2 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ ದ್ವಿಚಕ್ರ ವಾಹನಗಳಲ್ಲಿ ಒಂದಾಗಿದೆ. ಇತ್ತೀಚಿನ M ವೇರಿಯಂಟ್‌ನಲ್ಲಿ ಬ್ಲೂಟೂತ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಕ್ವಿಕ್‌ಶಿಫ್ಟರ್‌ನೊಂದಿಗೆ TFT ಡಿಸ್‌ಪ್ಲೇಯಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಇದರ ಬೆಲೆಯು 1,80,900 ರೂ. (ಎಕ್ಸ್ ಶೋ ರೂಂ ದೆಹಲಿ) ಇದೆ.

2 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಸಿಗುವ ಟಾಪ್ 5 ಫೇರ್ಡ್ ಸ್ಪೋರ್ಟ್ಸ್ ಬೈಕ್‌ಗಳು

ಬಜಾಜ್ ಪಲ್ಸರ್ RS200:
ಈ ಬಜಾಜ್ ಪಲ್ಸರ್ RS200 ಬೈಕ್ 2015 ರಿಂದಲೂ ಇದೆ, ಇದನ್ನು ಬಿಡುಗಡೆ ಮಾಡಿದ್ದ ವೇಳೆ ಅತ್ಯಂತ ವೇಗದ ಪಲ್ಸರ್ ಬೈಕ್ ಎಂದು ಹೇಳಿಕೊಳ್ಳಲಾಯಿತು. ಇದು ಪ್ರಸ್ತುತ ವೇಗದ ಪಲ್ಸರ್ ಆಗಿರಬಹುದು ಅಥವಾ ಇಲ್ಲದಿರಬಹುದು, ಇದು ಖಂಡಿತವಾಗಿಯೂ ಭಾರತದಲ್ಲಿನ ಅತ್ಯಂತ ಬೇಡಿಕೆ ಪಡೆದಿರುವ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿತ್ತು. 1,71,021 ರೂ. ಬೆಲೆ ಹೊಂದಿರುವ ಬಜಾಜ್ ಪಲ್ಸರ್ ಆರ್‌ಎಸ್200 ಉತ್ತಮ ಕಾರ್ಯಕ್ಷಮತೆ ಮತ್ತು ನಿರ್ವಹಣೆಯನ್ನು ನೀಡುತ್ತದೆ, ಆದರೆ ಆಧುನಿಕ ವೈಶಿಷ್ಟ್ಯಗಳ ಕೊರತೆಯಿಂದಾಗಿ ಇದು ಹಳೆಯದಾಗಿದೆ.

KTM RC 125:
ಈ ಆಸ್ಟ್ರಿಯನ್ ಆರೆಂಜ್ ಬಣ್ಣದ ದೈತ್ಯ ಈ ಪಟ್ಟಿಯಲ್ಲಿರುವ ಅತ್ಯಂತ ದುಬಾರಿ ಬೈಕು ಮತ್ತು ಚಿಕ್ಕ ಎಂಜಿನ್ ಹೊಂದಿರುವ ಬೈಕ್ ಆಗಿದೆ. ಇದು ತನ್ನ ಇತರ ಟಾಪ್ ಮಾದರಿಗಳಂತೆಯೇ ಅದೇ ವಿನ್ಯಾಸವನ್ನು ಹೊಂದಿದೆ. ಅದೇ ಪ್ರೀಮಿಯಂ ಹಾರ್ಡ್‌ವೇರ್ ಅನ್ನು ಸಹ ನೀಡುತ್ತದೆ. ಇದು ಯಮಹಾ R15 ಅನ್ನು ಪ್ರತಿಸ್ಪರ್ಧಿಯಾಗಿ ತೆಗೆದುಕೊಳ್ಳತ್ತದೆ. 1,88,640 ರೂ. ಬೆಲೆ ಹೊಂದಿರುವ KTM RC 125 ಕಡಿಮೆ ತೂಕದೊಂದಿಗೆ ಉತ್ತಮ ಕಾರ್ಯಕ್ಷಮತೆ ನೀಡುವಲ್ಲಿ ಜನಪ್ರಿಯತೆ ಗಳಿಸಿದೆ.

2 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಸಿಗುವ ಟಾಪ್ 5 ಫೇರ್ಡ್ ಸ್ಪೋರ್ಟ್ಸ್ ಬೈಕ್‌ಗಳು

Hero Xtreme 200S:
ತೊಂಬತ್ತರ ದಶಕದ ಯುವಕರಿಗೆ ಸ್ಪೋರ್ಟಿ ಹೀರೋ ಬೈಕ್‌ನ ಬಗ್ಗೆ ಯೋಚಿಸಿದರೆ ಮೊದಲು ನೆನಪಾಗುವುದು ಕರಿಜ್ಮಾ. ಆದರೆ ಕರಿಜ್ಮಾ ಬಹಳ ಹಿಂದೆಯೇ ಸ್ಥಗಿತಗೊಂಡಿದೆ, ಈ ಸ್ಥಾನವನ್ನು ತುಂಬುವುದು ಹೀರೋ ಎಕ್ಸ್‌ಟ್ರೀಮ್ 200S ಎಂದು ನೀವು ನಿರೀಕ್ಷಿಸಬಹುದು. ಆದರೆ ಇದು 200cc ಮೋಟಾರ್‌ಸೈಕಲ್ ಆಗಿದ್ದು, ಭಾರತದಲ್ಲಿ ನೀವು ಪಡೆಯಬಹುದಾದ ಅತ್ಯಂತ ಕೈಗೆಟುಕುವ ಫೇರ್ಡ್ ಬೈಕ್ ಆಗಿದೆ. ಇದರ ಬೆಲೆ ನೋಡುವುದಾದರೆ 1,35,360 ರೂ. ಇದೆ.

ಸುಜುಕಿ Gixxer SF:
Suzuki Gixxer SF ಒಂದು ಸಂವೇದನಾಶೀಲ ಬೈಕ್ ಆಗಿದ್ದು, ನೀವು ಉನ್ನತ ದರ್ಜೆಯ ಜಪಾನೀಸ್ ಮೋಟಾರ್‌ಸೈಕಲ್‌ನಿಂದ ನಿರೀಕ್ಷಿಸಿದಂತೆ ಮಿತವ್ಯಯ ಮತ್ತು ಪರಿಷ್ಕರಣೆಯನ್ನು ನೀಡುತ್ತದೆ. ಅನುಭವಿ ಸವಾರರಿಗೆ ಸಮಾನವಾಗಿ ಆತ್ಮವಿಶ್ವಾಸವನ್ನು ನೀಡುತ್ತದೆ ಎಂಬುದು ಈ ಕುರಿತು ಹಲವರ ಅಭಿಪ್ರಾಯವಾಗಿದೆ. ಇನ್ನು ಇದರ ಬೆಲೆಯನ್ನು ನೋಡಿಕೊಂಡರೆ 1,37,100 ರೂ. ಇದೆ. ಮೇಲಿನ ಮೋಟಾರ್ ಸೈಕಲ್‌ಗಳಿಗೆ ಹೋಲಿಸಿಕೊಂಡರೆ ಕಡಿಮೆಯೆಂದೇ ಹೇಳಬಹುದು.

2 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಸಿಗುವ ಟಾಪ್ 5 ಫೇರ್ಡ್ ಸ್ಪೋರ್ಟ್ಸ್ ಬೈಕ್‌ಗಳು

ಮೇಲೆ ತಿಳಿಸಿದ ಎಲ್ಲಾ ಬೈಕ್‌ಗಳು ಫೆರ್ಡ್ ಸ್ಪೋರ್ಟ್ಸ್ ಬೈಕ್‌ಗಳಾಗಿದ್ದು, ಇವು ಆಯಾ ವಿಭಾಗದಲ್ಲಿ ಕೈಗೆಟೆಕುವ ಬೆಲೆಗೆ ಲಭ್ಯವಿವೆ. ಮೊದಲೇ ಹೇಳಿದಂತೆ ಇವು ಎಕ್ಸ್‌ ಶೋರೂಂ ಬೆಲೆಗಳಾಗಿವೆ. ಅಗ್ಗದ ಬೆಲೆಗೆ ಉತ್ತಮ ಪರ್ಫಾಮೆನ್ಸ್ ಹಾಗೂ ವೈಶಿಷ್ಯಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಿವೆ. ಕೇವಲ ಎರಡು ಲಕ್ಷ ರೂ. ಒಳಗೆ ಮೈಲೇಜ್ ಅನ್ನು ಹೆಚ್ಚಾಗಿ ಲೆಕ್ಕಿಸುವುದಿಲ್ಲ ಎನ್ನುವ ಗ್ರಾಹಕರು ಈ ಫೇರ್ಡ್ ಸ್ಪೋರ್ಟ್ಸ್‌ ಬೈಕ್‌ಗಳನ್ನು ಖರೀದಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, February 25, 2023, 15:46 [IST]
English summary
Top 5 faired sports bikes under rs 2 lakhs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+