ಭಾರತದಲ್ಲಿ ಉತ್ತಮ ಅಂಡರ್‌ ಸೀಟ್ ಸ್ಟೋರೇಜ್ ಹೊಂದಿರುವ ಟಾಪ್ 5 ಸ್ಕೂಟರ್‌ಗಳು

ವಯಸ್ಸಾದವರಿಗೆ ಹಾಗೂ ಯುವತಿಯರಿಗೆ ಸ್ಕೂಟರ್‌ಗಳೇ ಅಚ್ಚುಮೆಚ್ಚು. ಇನ್ನು ಪುರುಷರಾದರೇ ನಿತ್ಯ ಆಫೀಸ್ ಅಥವಾ ಇತರ ಸಮಾರಂಭಗಳಿಗೆ ಕಾರು ಅಥವಾ ಬೈಕ್ ಬಳಸಿದರೂ, ಮನೆ ಕೆಲಸಕ್ಕಾಗಿ ಸ್ಕೂಟರ್ ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಉತ್ತಮ ಅಂಡರ್ ಸೀಟ್‌ ಸ್ಟೋರೇಜ್ ಹೊಂದಿರುವ ಸ್ಕೂಟರ್‌ಗಳನ್ನು ಹುಡುಕುತ್ತಿದ್ದರೇ ಈ ಕೆಳಗಿನವುಗಳನ್ನು ಒಮ್ಮೆ ನೋಡಿ.

1. ಹೀರೋ ವಿಡಾ V1: 26 ಲೀಟರ್:
Hero Vida V1 ಎಲೆಕ್ಟ್ರಿಕ್ ಸ್ಕೂಟರ್ ಈ ಪಟ್ಟಿಯಲ್ಲಿ ತುಸು ದುಬಾರಿ ಸ್ಕೂಟರ್ ಆಗಿದೆ. ಇದರಲ್ಲಿ ಎರಡು ವೇರಿಯಂಟ್‌ಗಳಿದ್ದು ಪ್ಲಸ್ ಆವೃತ್ತಿಗೆ 1.45 ಲಕ್ಷ ಮತ್ತು ಪ್ರೊ ರೂಪಾಂತರಕ್ಕೆ 1.59 ಲಕ್ಷ (ಎಕ್ಸ್ ಶೋ ರೂಂ, ಬೆಂಗಳೂರು)ಬೆಲೆಯಿದೆ. ಇದು ಹೀರೋ ಮೋಟೋಕಾರ್ಪ್‌ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದರ ಅಂಡರ್ ಸೀಟ್ ಸ್ಟೋರೇಜ್ ಸಾಮರ್ಥ್ಯವು 26 ಲೀಟರ್ ಇದೆ.

ಭಾರತದಲ್ಲಿ ಉತ್ತಮ ಅಂಡರ್‌ ಸೀಟ್ ಸ್ಟೋರೇಜ್ ಹೊಂದಿರುವ ಟಾಪ್ 5 ಸ್ಕೂಟರ್‌ಗಳು

2. Ola S1 ಏರ್: 34 ಲೀಟರ್:
Ola ಇತ್ತೀಚಿಗೆ ತನ್ನ ಪ್ರವೇಶ ಮಟ್ಟದ ಕೊಡುಗೆಯಾದ S1 ಏರ್ ಅನ್ನು ಬಿಡುಗಡೆ ಮಾಡಿದ್ದು, ಇದು ರೂ. 84,999 (ಎಕ್ಸ್-ಶೋರೂಮ್, ಬೆಂಗಳೂರು) ನಿಂದ ಪ್ರಾರಂಭವಾಗುತ್ತದೆ. S1 ಮತ್ತು S1 Pro ಗಿಂತ Ola S1 ಏರ್ ಸ್ವಲ್ಪ ಕಡಿಮೆ ಸ್ಟೋರೇಜ್ ನೀಡುತ್ತದೆ. ಅದೇನೇ ಇದ್ದರೂ, 34 ಲೀಟರ್‌ ಸ್ಟೋರೇಜ್ ಗಮನಾರ್ಹ ಪ್ರಮಾಣದ ಶೇಖರಣಾ ಸ್ಥಳವಾಗಿದೆ.

3. TVS ಜುಪಿಟರ್ 125: 33 ಲೀಟರ್:
ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಮೊದಲ ಮತ್ತು ಏಕೈಕ ಪೆಟ್ರೋಲ್ ಸ್ಕೂಟರ್ ಟಿವಿಎಸ್ ಜುಪಿಟರ್. ಭಾರತದಲ್ಲಿನ ಇತರ ಸ್ಕೂಟರ್‌ಗಳಂತೆ ಅಲ್ಲದೇ ಟಿವಿಎಸ್ ಜುಪಿಟರ್ 125 ಶೇಖರಣೆಗಾಗಿ ಹೆಚ್ಚಿನ ಅಂಡರ್ ಸೀಟ್ ಜಾಗವನ್ನು ನೀಡಿದೆ. ಇದು ಎರಡು ಹೆಲ್ಮೆಟ್‌ಗಳನ್ನು ತೆಗೆದುಕೊಳ್ಳುವಷ್ಟು ಉದ್ದ, ಅಗಲ ಮತ್ತು ಆಳವಾದ 33-ಲೀಟರ್ ಸ್ಟೋರೇಜ್ ಹೊಂದಿದೆ. ಜುಪಿಟರ್ 125 ಬೆಲೆಗಳು ರೂ. 85,525 ರಿಂದ ಪ್ರಾರಂಭವಾಗಿ ರೂ. 92,375 (ಎಕ್ಸ್-ಶೋ ರೂಂ, ಬೆಂಗಳೂರು)ವರೆಗೆ ಹೋಗುತ್ತವೆ.

ಭಾರತದಲ್ಲಿ ಉತ್ತಮ ಅಂಡರ್‌ ಸೀಟ್ ಸ್ಟೋರೇಜ್ ಹೊಂದಿರುವ ಟಾಪ್ 5 ಸ್ಕೂಟರ್‌ಗಳು

4. Ola S1, S1 Pro: 36 ಲೀಟರ್:
Ola S1 ಮತ್ತು S1 Pro ಬೃಹತ್ ಸ್ಟೋರೇಜ್‌ಗಳನ್ನು ಹೊಂದಿದ್ದು, ಬರೋಬ್ಬರಿ 36 ಲೀ. ಇದೆ. ಓಲಾ ಸ್ಕೂಟರ್‌ಗಳು ಸಂಪೂರ್ಣವಾಗಿ ಸಮತಟ್ಟಾದ ನೆಲದೊಂದಿಗೆ ಅಚ್ಚುಕಟ್ಟಾಗಿ, ಆಯತಾಕಾರದ ಸ್ಟೋರೇಜ್ ಅನ್ನು ಹೊಂದಿವೆ. ಈ ಉತ್ತಮವಾದ ನಿಯಮಿತವಾದ ಆಕಾರವು ಹೆಚ್ಚಿನ ವಸ್ತುಗಳನ್ನು ತುಂಬಲು ಪ್ರಯಾಣಿಕರಿಗೆ ಸಹಕರಿಸುತ್ತದೆ. S1 ಬೆಲೆ 1.10 ಲಕ್ಷ ರೂ. ಇದ್ದು S1 Pro ಬೆಲೆಯು 1.30 ಲಕ್ಷ ರೂ. (ಎಕ್ಸ್ ಶೋ ರೂಂ, ಬೆಂಗಳೂರು) ಇದೆ.

5. ರಿವರ್ ಇಂಡಿ: 43 ಲೀಟರ್:
ಈ ಪಟ್ಟಿಯಲ್ಲಿರುವ ಟಾಪ್ ಸ್ಟೋರೇಜ್ ಹೊಂದಿರುವ ಸ್ಕೂಟರ್, ಇತ್ತೀಚೆಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ರಿವರ್ ಇಂಡಿ. ತೀರಾ ಇತ್ತೀಚೆಗೆ ಪ್ರವೇಶಿಸಿದರೂ ಬಲವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಳೆದ ತಿಂಗಳಷ್ಟೇ ರೂ. 1.25 ಲಕ್ಷಕ್ಕೆ (ಎಕ್ಸ್ ಶೋ ರೂಂ, ಬೆಂಗಳೂರು) ಬಿಡುಗಡೆಯಾದ ಹೊಸ ರಿವರ್ ಇಂಡಿ ಎಲೆಕ್ಟ್ರಿಕ್ ಸ್ಕೂಟರ್, ಹಲವು ಪ್ರಮುಖ ಕಾರಣಗಳಿಂದಾಗಿ ಬೇಡಿಕೆ ಹೆಚ್ಚಿಸಿಕೊಂಡಿದೆ ಎಂದು ಹೇಳಬಹುದು.

ಭಾರತದಲ್ಲಿ ಉತ್ತಮ ಅಂಡರ್‌ ಸೀಟ್ ಸ್ಟೋರೇಜ್ ಹೊಂದಿರುವ ಟಾಪ್ 5 ಸ್ಕೂಟರ್‌ಗಳು

ಇದರ ಅತ್ಯುತ್ತಮ ಸ್ಟೈಲಿಂಗ್ ಎಂತವರನ್ನೂ ಸೆಳೆಯುತ್ತದೆ. ಇದರೊಂದಿಗೆ ಕಂಪನಿಯರು ನೀಡಿರುವ ಕೆಲವು ವೈಶಿಷ್ಟ್ಯಗಳು ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪೈಪೋಟಿ ನೀಡುವಂತಿವೆ. ಇಲ್ಲಿ ಮುಖ್ಯವಾಗಿ ಹೇಳಬಾಕದ್ದದ್ದು ಇದರ ಸ್ಟೋರೇಜ್ ಕುರಿತು, ಬರೋಬ್ಬರಿ ಬೃಹತ್ 43- ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಸ್ಥಳವನ್ನು ಹೊಂದಿದೆ. ಇದು ಭಾರತದಲ್ಲಿ ಪ್ರಸ್ತುತ ಮಾರಾಟದಲ್ಲಿರುವ ಟಾಪ್ ಅಂಡರ್‌ ಸೀಟ್ ಸ್ಟೋರೇಜ್ ಹೊಂದಿರುವ ಸ್ಕೂಟರ್ ಆಗಿದೆ. ಬುಕಿಂಗ್ಸ್ ಆರಂಭವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, March 4, 2023, 11:20 [IST]
English summary
Top 5 scooters with best underseat storage in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+