ಭಾರತದಲ್ಲಿ ರೂ.2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಕ್ರೂಸರ್ ಬೈಕ್‌ಗಳು...

ರಿಲ್ಯಾಕ್ಸ್ ರೈಡಿಂಗ್ ಸ್ಥಾನವನ್ನು ಹೊಂದಿರುವ ಮತ್ತು ಆರಾಮದಾಯಕ, ದೂರದ ಸವಾರಿಗಾಗಿ ವಿನ್ಯಾಸಗೊಳಿಸಲಾದ ಮೋಟಾರ್‌ಸೈಕಲ್‌ಗಾಗಿ ಹುಡುಕುತ್ತಿರುವ ಜನರು, ಕ್ರೂಸರ್‌ಗಳು ಅವರಿಗೆ ಅತ್ಯುತ್ತಮ ಆಯ್ಕೆಗಳಾಗಿವೆ. ಕ್ರೂಸರ್ ಮೋಟಾರ್‌ಸೈಕಲ್‌ಗಳು ತಮ್ಮ ಆರಾಮದಾಯಕ ಸವಾರಿ ಮತ್ತು ಸೊಗಸಾದ ನೋಟಕ್ಕಾಗಿ ಜನಪ್ರಿಯವಾಗಿವೆ. ಭಾರತದಲ್ಲಿ ಕೈಗೆಟುಕುವ ದರದಲ್ಲಿರುವ ಕ್ರೂಸರ್ ಬೈಕ್‌ಗಳ ಮಾಹಿತಿ ಇಲ್ಲಿದೆ.

ಬಜಾಜ್ ಅವೆಂಜರ್ 160
ಅವೆಂಜರ್ 160 ಸ್ಟ್ರೀಟ್ ಬಜಾಜ್‌ನ ಅತ್ಯಂತ ಕೈಗೆಟುಕುವ ಕ್ರೂಸರ್ ಆಗಿದೆ. ಇದು ವಿಶ್ರಾಂತಿ ಸವಾರಿ ಸ್ಥಾನವನ್ನು ಹೊಂದಿದ್ದು, ಸವಾರನು ಆರಾಮವಾಗಿ, ನೇರವಾದ ಭಂಗಿಯಲ್ಲಿ ಕುಳಿತುಕೊಳ್ಳುತ್ತಾನೆ. ಈ ರೆಟ್ರೊ-ಪ್ರೇರಿತ ಮೋಟಾರ್‌ಸೈಕಲ್‌ನ ಕೆಲವು ಪ್ರಮುಖ ವೈಶಿಷ್ಟ್ಯಗಳೆಂದರೆ ಉದ್ದವಾದ ವೀಲ್‌ಬೇಸ್ ಮತ್ತು ಫಾರ್ವರ್ಡ್-ಮೌಂಟೆಡ್ ಫುಟ್‌ಪೆಗ್ ಸ್ಥಾನವನ್ನು ಹೊಂದಿದೆ. ಈ ಅವೆಂಜರ್ ಸ್ಟ್ರೀಟ್ 160 ಬೈಕಿನಲ್ಲಿ 160 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಅವೆಂಜರ್ 160 ಸ್ಟ್ರೀಟ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.12 ಲಕ್ಷವಾಗಿದೆ.

ಭಾರತದಲ್ಲಿ ರೂ.2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಕ್ರೂಸರ್ ಬೈಕ್‌ಗಳು...

ಅವೆಂಜರ್ ಕ್ರೂಸ್ 220
ಅವೆಂಜರ್ ಕ್ರೂಸ್ 220 ಸ್ಟ್ರೀಟ್ 160 ನ ದೊಡ್ಡ ಆವೃತ್ತಿಯಾಗಿದೆ ಮತ್ತು ದೊಡ್ಡ ಎಂಜಿನ್ ಮತ್ತು ಸ್ಟೈಲಿಂಗ್ ಬದಲಾವಣೆಗಳೊಂದಿಗೆ ಬರುತ್ತದೆ. ಇದು ಸುತ್ತಲೂ ಹೆಚ್ಚು ಕ್ರೋಮ್ ಅನ್ನು ಪಡೆಯುತ್ತದೆ ಮತ್ತು ಹೆಡ್‌ಲ್ಯಾಂಪ್‌ನ ಮೇಲೆ ದೊಡ್ಡ ವಿಂಡ್‌ಸ್ಕ್ರೀನ್ ಅನ್ನು ಸಹ ಹೊಂದಿದೆ.ಇದು 220cc, ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಅವೆಂಜರ್ ಕ್ರೂಸ್ 220 ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.38 ಲಕ್ಷವಾಗಿದೆ.

ರಾಯಲ್ ಎನ್‌ಫೀಲ್ಡ್ ಹಂಟರ್ 350
ಜನಪ್ರಿಯ ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ತಿಂಗಳಿನಲ್ಲಿ ತನ್ನ ಹೊಸ ಹಂಟರ್ 350 ಬೈಕ್ ಅನ್ನು ಬಿಡುಗಡೆಗೊಳಿಸಿತು. ಭಾರತೀಯ ಮಾರುಕಟ್ಟೆಯಲ್ಲಿ ರೆಟ್ರೊ-ಥೀಮ್ ಹೊಂದಿರುವ ಹಂಟರ್ 350 ಬೈಕ್ ಪ್ರಸ್ತುತ ಸ್ವದೇಶಿ ತಯಾರಕರಿಂದ ಅತ್ಯಂತ ಕೈಗೆಟುಕುವ ಕೊಡುಗೆಯಾಗಿದೆ. ಹಂಟರ್ 350 ಯಶಸ್ಸಿಗೆ ಪ್ರಮುಖ ಕಾರಣವೆಂದರೆ ಅದರ ಉತ್ತಮ ರೈಡ್ ಗುಣಮಟ್ಟ ಮತ್ತು ಪ್ರಸ್ತುತ ಲಭ್ಯವಿರುವ ಹಗುರವಾದ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಆಗಿದ್ದು, ಇದು ಉತ್ತಮ ಗುಣಲಕ್ಷಣಗಳನ್ನು ಹೊಂದಿದೆ.

ಹಂಟರ್ 350 ಇತ್ತೀಚಿನ ಕ್ಲಾಸಿಕ್ 350 ಮತ್ತು ಮೆಟಿಯರ್ 350 ರಂತೆಯೇ ಅದೇ ಟ್ವಿನ್ ಕ್ರೇಡಲ್ ಚಾಸಿಸ್‌ನಿಂದ ಸಾಕಷ್ಟು ಯಾಂತ್ರಿಕ ಬಿಟ್‌ಗಳನ್ನು ಹಂಚಿಕೊಳ್ಳುತ್ತದೆ. ಈ ಹೊಸ ಹಂಟರ್ 350 ಬೈಕ್ ಮಾದರಿಯು ಮಿಟಿಯೊರ್ 350 ಮತ್ತು ಕ್ಲಾಸಿಕ್ 350 ಮಾದರಿಯಲ್ಲಿರುವಂತೆಯೇ 349 ಸಿಸಿ ಸಿಂಗಲ್ ಸಿಲಿಂಡರ್, ಟು ವಾಲ್ವ್, ಎಸ್‌ಓಹೆಚ್‌ಸಿ ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಅಳವಡಿಸಲಾಗಿದೆ. ಈ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.50 ಲಕ್ಷವಾಗಿದೆ.

ಯೆಜ್ಡಿ ರೋಡ್‌ಸ್ಟರ್
ಯೆಜ್ಡಿ ರೋಡ್‌ಸ್ಟರ್ ಕಂಪನಿಯ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಈ ಯೆಜ್ಡಿ ರೋಡ್‌ಸ್ಟರ್ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2 ಲಕ್ಷವಾಗಿದೆ. ರೋಡ್‌ಸ್ಟರ್ ಮಾದರಿಗಳು ಸಾಮಾನ್ಯವಾಗಿ ದಿನಬಳಕೆಯ ಮೋಟಾರ್‌ಸೈಕಲ್‌ ಮಾದರಿಗಳಾಗಿದೆ. ಈ ಹಿಂದೆ ಯೆಜ್ಡಿಯ ನಿರ್ಮಾಣದ ಬಹುತೇಕ ಮೋಟಾರ್‌ಸೈಕಲ್‌ಗಳು ರೋಡ್‌ಸ್ಟರ್‌ಗಳಾಗಿದ್ದವು. ರೋಡ್‌ಸ್ಟರ್ ಮಾದರಿಗಳು ತಮ್ಮದೆ ಆದ ಹೊಸ ವೈಶಿಷ್ಟ್ಯತೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಹೊಂದಿದೆ. ಯೆಜ್ಡಿ ರೋಡ್‌ಸ್ಟರ್ ಬೈಕ್ ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಯೆಜ್ಡಿ ರೋಡ್‌ಸ್ಟರ್ ಬೈಕ್ ಮುಂಭಾಗದಲ್ಲಿ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್ ಲ್ಯಾಂಪ್ ಪಡೆದುಕೊಂಡಿದೆ. ಆದರೆ ಹೊಸ ಬೈಕಿನಲ್ಲಿರುವ ಇಂಡಿಕೇಟರ್‌ಗಳು ಹ್ಯಾಲೊಜೆನ್ ಬಲ್ಬ್‌ಗಳಿಂದ ಕೂಡಿದ್ದು, ಡಿಜಿಟಲ್ ಸ್ಪೀಡೋಮೀಟರ್ ಅನ್ನು ಮುಂಭಾಗದ ಫೋರ್ಕ್‌ನ ಮೇಲ್ಭಾಗದಲ್ಲಿ ಜೋಡಿಸಲಾಗಿದೆ. ಈ ಬೈಕ್ 7,300rpm ನಲ್ಲಿ 29.29bhp ಮತ್ತು 6,500rpm ನಲ್ಲಿ 29Nm ಅನ್ನು ಉತ್ಪಾದಿಸುವ 334cc, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಬಳಸುವುದನ್ನು ಮುಂದುವರೆಸಿದೆ. ಯೆಜ್ಡಿ ರೋಡ್‌ಸ್ಟರ್ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ಗೆ ಪ್ರತಿಸ್ಪರ್ಧಿಯಾಗಿದೆ.

ಕೊಮಾಕಿ ರೇಂಜರ್
ಎಲೆಕ್ಟ್ರಿಕ್ ಕ್ರೂಸರ್‌ಗಾಗಿ ಹುಡುಕುತ್ತಿರುವ ಜನರು, ಕೊಮಾಕಿ ರೇಂಜರ್ ಅನ್ನು ಆಯ್ಕೆ ಮಾಡಲು ಅತ್ಯುತ್ತಮ ಆಯ್ಕೆಯಾಗಿದೆ. ಈ ಕೊಮಾಕಿ ರೇಂಜರ್ 4kWh ಬ್ಯಾಟರಿ ಪ್ಯಾಕ್ ಮತ್ತು 5.3bhp ಅನ್ನು ಹೊರಹಾಕಲು ಸಾಕಷ್ಟು ಉತ್ತಮವಾದ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ. ಇದರ ಬೆಲೆ ಎಕ್ಸ್ ಶೋರೂಂ ಪ್ರಕಾರ ಸುಮಾರು 1.74 ಲಕ್ಷ ವಾಗಿದೆ.ಇದು ಪ್ರತಿ ಚಾರ್ಜ್‌ಗೆ 180-200 ಕಿ.ಮೀ ರೇಂಜ್ ಅನ್ನು ಹೊಂದಿದೆ ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ ಬರುತ್ತದೆ.

Article Published On: Tuesday, January 3, 2023, 12:04 [IST]
English summary
Top cruiser motorcycles available under rs 2 lakh details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+