Hero, Ola, Simple One: 125 kmಗೂ ಹೆಚ್ಚು ರೇಂಜ್.. ಕಡಿಮೆ ಬೆಲೆಗೆ ಸಿಗುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳು
ಕಳೆದ ಎರಡು ವರ್ಷದಿಂದ ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಅಬ್ಬರಿಸುತ್ತಿವೆ. ಕೈಗೆಟುಕುವ ಬೆಲೆ, ಗರಿಷ್ಠ ರೇಂಜ್ ಹಾಗೂ ಅತ್ಯಾಕರ್ಷಕ ವೈಶಿಷ್ಟ್ಯದೊಂದಿಗೆ ಖರೀದಿಗೆ ಸಿಗುವುದರಿಂದ ಹೆಚ್ಚಿನ ಗ್ರಾಹಕರು ಇವುಗಳನ್ನು ಖರೀದಿಸಲು ಬಯಸುತ್ತಾರೆ. ಹೀರೋ, ಓಲಾ ಸೇರಿದಂತೆ ಪ್ರಮುಖ ಕಂಪನಿಗಳು ಮಾರಾಟ ಮಾಡುವ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ತಿಳಿಯೋಣ.
ಮೊದಲಿಗೆ ಬೆಂಗಳೂರು ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಸಿಂಪಲ್ ಎನರ್ಜಿ ತಯಾರಿಸುವ ಸಿಂಪಲ್ ಒನ್ (Simple One) ಇ-ಸ್ಕೂಟರ್ ಬಗ್ಗೆ ಮಾತನಾಡೋಣ. ಇದು, ರೂ.1.45 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಮೇ (2023)ನಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. 5 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 212 km (IDC) ರೇಂಜ್ ನೀಡಲಿದೆ.

ಮನೆಯ ವಿದ್ಯುತ್ ಬಳಕೆಯಲ್ಲಿ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಶೇಕಡ 0 - 80% ಚಾರ್ಜ್ ಆಗಲು 5 ಗಂಟೆ 54 ನಿಮಿಷ ಬೇಕು. ಈ ಸ್ಕೂಟರ್, ಕೇವಲ 2.77 ಸೆಕೆಂಡ್‌ಗಳಲ್ಲಿ ಗಂಟೆಗೆ 0-40 ಕಿಮೀ ವೇಗವನ್ನು ಪಡೆಯಲಿದ್ದು, 105 kmph ಟಾಪ್ ಸ್ವೀಡ್ ಹೊಂದಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ, ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಬೆಂಗಳೂರಿನ ಜನಪ್ರಿಯ ಕಂಪನಿಯಾದ ಓಲಾ (Ola) ಮಾರಾಟ ಮಾಡುವ ಎಸ್1 ಪ್ರೊ (S1 Pro) ಎಲೆಕ್ಟ್ರಿಕ್ ಸ್ಕೂಟರ್, ರೂ.1.40 ಲಕ್ಷ ಎಕ್ಸ್ ಶೋರೂಂ ದರಕ್ಕೆ ಖರೀದಿಗೆ ಲಭ್ಯವಿದೆ. ಇದರಲ್ಲಿ, 4 kWh ಬ್ಯಾಟರಿ, 8.5 kW ಮೋಟಾರ್ ಬಳಕೆ ಮಾಡಲಾಗಿದ್ದು, ಫುಲ್ ಚಾರ್ಜ್‌ನಲ್ಲಿ 181 km ರೇಂಜ್ ನೀಡಲಿದ್ದು, 115 kmph ಟಾಪ್ ಸ್ವೀಡ್ ಹೊಂದಿದೆ. 2.9 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯುತ್ತದೆ.
ಓಲಾ ಎಸ್1 ಪ್ರೊ, 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ನವೀನ ವೈಶಿಷ್ಟ್ಯಗಳನ್ನು ಪಡೆದಿದ್ದು, ನಾರ್ಮಲ್, ಇಕೋ, ಸ್ಪೋರ್ಟ್ ಹಾಗೂ ಹೈಪರ್ ಎಂಬ ರೈಡಿಂಗ್ ಮೋಡ್ ಗಳನ್ನು ಹೊಂದಿದೆ. ನಿಯೋ ಮಿಂಟ್, ಕೋರಲ್ ಗ್ಲಾಮ್, ಜೆಟ್ ಬ್ಲಾಕ್, ಲಿಕ್ವಿಡ್ ಸಿಲ್ವರ್, ಮಾರ್ಷ್‌ಮ್ಯಾಲೋ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ.
ಹೀರೋ (Hero) ಕಂಪನಿ ಜನಪ್ರಿಯ ವಿಡಾ ವಿ1 (Vida V1) ಎಲೆಕ್ಟ್ರಿಕ್ ಸ್ಕೂಟರ್, ಪ್ಲಸ್ ಹಾಗೂ ಪ್ರೊ ಎಂಬ ರೂಪಾಂತರದ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, ಕ್ರಮವಾಗಿ ರೂ.1.45 ಲಕ್ಷ ಹಾಗೂ ರೂ.1.59 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ವಿಡಾ ವಿ1 ಪ್ಲಸ್ ರೂಪಾಂತರದಲ್ಲಿ 3.44 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 142 km ರೇಂಜ್ ನೀಡುತ್ತದೆ.
ಹೀರೋ ವಿಡಾ ವಿ1 ಪ್ರೊ ವೇರಿಯೆಂಟ್ ನಲ್ಲಿ 3.94 kWh ಸಾಮರ್ಥ್ಯದ ಬ್ಯಾಟರಿ
ಉಪಯೋಗಿಸಲಾಗಿದ್ದು, 165 km ರೇಂಜ್ ಕೊಡುತ್ತದೆ. ಬಹುತೇಕ ಇವೆರೆಡು ರೂಪಾಂತರಗಳು, ಕೇವಲ 3.2 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದ್ದು, 80 kmph ಟಾಪ್ ಸ್ವೀಡ್ ಹೊಂದಿವೆ. TFT ಟಚ್‌ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಕೀಲೆಸ್ ಕಂಟ್ರೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿವೆ.
ಬೆಂಗಳೂರಿನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಎಥರ್ (Ather) ಮಾರಾಟ ಮಾಡುವ 450ಎಕ್ಸ್ ಇ ಸ್ಕೂಟರ್, ರೂ.1.45 ಲಕ್ಷದಿಂದ ರೂ.1.65 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದರಲ್ಲಿ 3.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಫುಲ್ ಚಾರ್ಜ್‌ನಲ್ಲಿ 146 km ರೇಂಜ್ ನೀಡಲಿದ್ದು, 90 kmph ಟಾಪ್ ಸ್ವೀಡ್ ಹೊಂದಿದೆ.
ಕಡೆಯಾದ ಓಕಿನಾವಾ ಐಪ್ರೆಸ್ಸೆ ಪ್ಲಸ್ (Okinawa iPraise+) ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿಯೋಣ. ಇದು, 1.46 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ 3.3 kWh ಸಾಮರ್ಥ್ಯದ ಲಿಥಿಯಂ - ಐಯಾನ್ ಬ್ಯಾಟರಿ ಪ್ಯಾಕ್ ಹಾಗೂ 2.5 kW BLDC ಮೋಟಾರ್ ಬಳಕೆ ಮಾಡಲಾಗಿದೆ. ಈ ಸ್ಕೂಟರ್, ಸಂಪೂರ್ಣ ಚಾರ್ಜ್‌ನಲ್ಲಿ 137 km ರೇಂಜ್ ಕೊಡಲಿದ್ದು, 56 kmph ಟಾಪ್ ಸ್ವೀಡ್ ಹೊಂದಿದೆ.


Click it and Unblock the Notifications