ಭಾರತದಲ್ಲಿ 'Hero' ನಂಬರ್ 1, ಅದನ್ನು ಯಾರು ಹಿಂದಿಕ್ಕಲು ಸಾಧ್ಯವಿಲ್ಲ!

ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಪ್ರತಿ ಬಾರಿಯಂತೆ ಕಳೆದ ಜುಲೈ ತಿಂಗಳಲ್ಲಿಯೂ ಹೀರೋ (Hero)ನೇ ಅಬ್ಬರಿಸಿದೆ. ಇತ್ತೀಚೆಗೆ ವಿವಿಧ ಕಂಪನಿಗಳ ಸೇಲ್ಸ್ ವರದಿ ಪ್ರಕಟಗೊಂಡಿದ್ದು, ಹಬ್ಬದ ಋತು ಇಲ್ಲದ ಕಾರಣ, ಬಹುತೇಕ ಎಲ್ಲ ಸಂಸ್ಥೆಗಳು ವರ್ಷದಿಂದ ವರ್ಷದ (YoY) ಮಾರಾಟದಲ್ಲಿ ಶೇಕಡ 7% ಕುಸಿತ ದಾಖಲಿಸಿವೆ.

ಮೊದಲಿಗೆ ಎಂದಿನಂತೆ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿರುವ ಹೀರೋ ಮೋಟೊಕಾರ್ಪ್ ಮಾರಾಟದ ಅಂಕಿಅಂಶಗಳ ಬಗ್ಗೆ ತಿಳಿಯೋಣ. ಕಂಪನಿಯು ಜುಲೈ (2023) ತಿಂಗಳಲ್ಲಿ 3,71,204 ಯುನಿಟ್ ಬೈಕ್ ಹಾಗೂ ಸ್ಕೂಟರ್ ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ (YoY) ಶೇಕಡ 13% ಕುಸಿತ ಕಂಡಿದೆ. ಯಾವುದೇ ಹಬ್ಬಗಳು ಹಾಗೂ ಬಿಡುಗಡೆ ಇಲ್ಲದಿರುವುದರಿಂದ ಕೊಂಚ ಹಿನ್ನೆಡೆಯಾಗಿದೆ.

ಭಾರತದಲ್ಲಿ Hero ನಂಬರ್ 1, ಅದನ್ನು ಯಾರು ಹಿಂದಿಕ್ಕಲು ಸಾಧ್ಯವಿಲ್ಲ!

ಹೀರೋ ಕಂಪನಿಗೆ ದ್ವಿಚಕ್ರ ವಾಹನ ಮಾರಾಟದಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಹೋಂಡಾ ಕೂಡ ಆಷಾಡ ಮಾಸದ ಕಾರಣ, ಸೇಲ್ ನಲ್ಲಿ ಹಿನ್ನೆಡೆ ಅನುಭವಿಸಿದೆ. ಕಂಪನಿಯು ಕಳೆದ ತಿಂಗಳು, 3,10,867 ಯುನಿಟ್‌ ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ ಶೇಕಡ 23% ನಷ್ಟ ಅನುಭವಿಸಿದೆ. ಆದರೆ, ತನ್ನ ಬಹುಬೇಡಿಕೆಯ ಆಕ್ಟಿವಾ ಸ್ಕೂಟರ್ ಸೇಲ್ಸ್ ಉತ್ತಮವಾಗಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿಲ್ಲ.

ತಮಿಳುನಾಡಿನ ಹೊಸೂರು ಮೂಲದ ಟಿವಿಎಸ್ ಮೋಟಾರ್ ಮಾತ್ರ ಜುಲೈ ತಿಂಗಳಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ 2,35,230 ಯುನಿಟ್ ದ್ವಿಚಕ್ರ ವಾಹನ ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ (YoY) ಶೇಕಡ 16% ಪ್ರಗತಿ ಸಾಧಿಸಿದೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್ ಐಕ್ಯೂಬ್ ಮಾರಾಟದಲ್ಲಿ ಅಬ್ಬರಿಸುತ್ತಿದ್ದು, 13,306 ಯುನಿಟ್‌ ಐಕ್ಯೂಬ್ ಸ್ಕೂಟರ್ ಮಾರಿದೆ.

ಭಾರತದಲ್ಲಿ Hero ನಂಬರ್ 1, ಅದನ್ನು ಯಾರು ಹಿಂದಿಕ್ಕಲು ಸಾಧ್ಯವಿಲ್ಲ!

ಯಾವುದೇ ಹಬ್ಬಗಳು ಇಲ್ಲದ ಕಾರಣ, ಹೀರೋ ಮೋಟೊಕಾರ್ಪ್ ಹಾಗೂ ಹೋಂಡಾ ಕಂಪನಿಗಳಂತೆ ಬಜಾಜ್ ಕೂಡ ಹಿಂದೆ ಬಿದ್ದಿದೆ. ಕಳೆದ ತಿಂಗಳು, 1,41,990 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ (YoY) ಶೇಕಡ 13.5% ಹಿನ್ನೆಡೆ ಅನುಭವಿಸಿದೆ. ಟಿವಿಎಸ್ ಭಾರತದ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ರೈಡರ್ 125 ಬೈಕ್ ಮಾರಾಟ ಮಾಡಲಿದ್ದು, ರೂ. 1,16,419 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಬೇರೆಲ್ಲ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಮಾರಾಟದಲ್ಲಿ ಹಿನ್ನೆಡೆ ಅನುಭವಿಸುತ್ತಿದ್ದರೆ, ಸುಜುಕಿ ಮಾತ್ರ ಭರ್ಜರಿಯಾಗಿ ಮುನ್ನುಗುತ್ತಿದೆ. ಜುಲೈನಲ್ಲಿ ಬರೋಬ್ಬರಿ 80,309 ಯುನಿಟ್ ಬೈಕ್ ಹಾಗೂ ಸ್ಕೂಟರ್ ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ ಶೇಕಡ 32% ಬೆಳವಣಿಗೆ ಕಂಡಿದೆ. ಇದರ ಆಕ್ಸೆಸ್ 125 ಸ್ಕೂಟರ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುವುದರಿಂದ ಈ ಮಟ್ಟಿಗೆ ಪ್ರಗತಿ ಸಾಧಿಸಿದೆ.

ಭಾರತದಲ್ಲಿ Hero ನಂಬರ್ 1, ಅದನ್ನು ಯಾರು ಹಿಂದಿಕ್ಕಲು ಸಾಧ್ಯವಿಲ್ಲ!

ಜುಲೈನಲ್ಲಿ ರಾಯಲ್ ಎನ್‌ಫೀಲ್ಡ್ ಪ್ರಚಂಡ ಬೆಳವಣಿಗೆ ಕಂಡಿದೆ. 66,062 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದು, ಶೇಕಡ 42% ವಾರ್ಷಿಕ ಪ್ರಗತಿಯನ್ನು ಸಾಧಿಸಿದೆ. ಕಂಪನಿಯ ಬಹುಬೇಡಿಕೆಯ ಬುಲೆಟ್ ರೂ.1.53 ಲಕ್ಷದಿಂದ ರೂ.1.69 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ. ಹಿಮಾಲಯನ್ ರೂ.2.16 - 2.28 ಲಕ್ಷ ಬೆಲೆಯಲ್ಲಿ ದೊರೆಯುತ್ತದೆ.

ಒಟ್ಟಾರೆ, ಕಳೆದ ತಿಂಗಳ ಮಾರಾಟ ವಿವರವನ್ನು ಗಮನಿಯಾದಾಗ ಯಾವುದೇ ಹಬ್ಬಗಳು ಹಾಗೂ ಬಿಡುಗಡೆ ಇಲ್ಲದಿರುವುದರಿಂದ ಹೀರೋ ಮೋಟೊಕಾರ್ಪ್ ಹಾಗೂ ಹೋಂಡಾ ಕಂಪನಿ ಕೊಂಚ ಹಿನ್ನೆಡೆ ಅನುಭವಿಸಿವೆ. ಅದು ಈ ತಿಂಗಳು ಸುಧಾರಿಸುವ ನೀರಿಕ್ಷೆಯಿದೆ. ಇದರೊಟ್ಟಿಗೆ ರಾಯಲ್ ಎನ್‌ಫೀಲ್ಡ್ ಪ್ರಚಂಡ ಪ್ರಗತಿ ಸಾಧಿಸಿ, ಪ್ರಮುಖ ಕಂಪನಿಗಳಿಗೆ ಫೈಟ್ ನೀಡಲು ಸಿದ್ದವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, August 7, 2023, 19:08 [IST]
English summary
Two wheeler sales july 2023 domestic market details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+