World EV Day: ನೀವು ಖರೀದಿಸಬಹುದಾದ ಪ್ರಮುಖ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು, TVS iQube..

ವಿಶ್ವದಾದ್ಯಂತ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿ ಎದುರಿಸಲು ಎಲೆಕ್ಟ್ರಿಕ್ ವಾಹನಗಳ ಅಗತ್ಯತೆಯನ್ನು ತಿಳಿಸಲು ಸೆಪ್ಟೆಂಬರ್ 9ರಂದು ವಿಶ್ವ ಇವಿ ದಿನ (World EV Day) ಆಚರಿಸಲಾಗುತ್ತದೆ. ಭಾರತದಲ್ಲೂ ಕಳೆದ ಎರಡು ವರ್ಷದಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಪ್ರಾಮುಖ್ಯತೆ ಗಳಿಸುತ್ತಿದ್ದು, ಪ್ರಮುಖ ಕಂಪನಿಯ ಇ-ಸ್ಕೂಟರ್‌ಗಳ ಬಗ್ಗೆ ಇಲ್ಲಿದೆ ವಿವರ.

ಮೊದಲಿಗೆ, ಬೆಂಗಳೂರಿನ ಓಲಾ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಮಾತನಾಡೋಣ. ಕಂಪನಿಯ ಎಂಟ್ರಿ ಲೆವೆಲ್ ಎಸ್1 ಎಕ್ಸ್ ಸ್ಕೂಟರ್, ಮೂರು ರೂಪಾಂತರದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂ.80,000 ದಿಂದ ರೂ.1 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ವೇರಿಯೆಂಟ್ಸ್ ಅನುಗುಣವಾಗಿ, 91 ಕಿಲೋಮೀಟರ್ ನಿಂದ 151 ಕಿಲೋಮೀಟರ್ ವರೆಗೆ ರೇಂಜ್ ನೀಡುತ್ತದೆ.

World EV Day: ನೀವು ಖರೀದಿಸಬಹುದಾದ ಪ್ರಮುಖ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು, TVS iQube, Ola..

ಮಿಡ್ ಲೆವೆಲ್ ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್, ರೂ.1.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೇಶೀಯ ಗ್ರಾಹಕರಿಗೆ ಸಿಗುತ್ತದೆ. ಫುಲ್ ಚಾರ್ಜಿನಲ್ಲಿ 151 ಕಿಲೋಮೀಟರ್ ರೇಂಜ್ ನೀಡಲಿದ್ದು, 90 kmph ಟಾಪ್ ಸ್ವೀಡ್ ಹೊಂದಿದೆ. 7 ಇಂಚಿನ TFT ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರಿವರ್ಸ್ ಮೋಡ್, OTA ಅಪ್‌ಡೇಟ್ಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಓಲಾ ಕಂಪನಿಯ ಟಾಪ್ ಎಂಡ್ ಮಾದರಿ, ಎಸ್1 ಪ್ರೊ, ರೂ.1.47 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಸಂಪೂರ್ಣ ಚಾರ್ಜಿನಲ್ಲಿ 195 ಕಿಲೋಮೀಟರ್ ರೇಂಜ್ ಕೊಡಲಿದ್ದು, 120 kmph ಟಾಪ್ ಸ್ವೀಡ್ ಪಡೆದಿದೆ. ನಿಯೋ ಮಿಂಟ್, ಕೋರಲ್ ಗ್ಲಾಮ್, ಜೆಟ್ ಬ್ಲಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

World EV Day: ನೀವು ಖರೀದಿಸಬಹುದಾದ ಪ್ರಮುಖ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು, TVS iQube, Ola..

ಟಿವಿಎಸ್ (TVS) ಕಂಪನಿ ಜನಪ್ರಿಯ ಐಕ್ಯೂಬ್ (iQube) ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿಯೋಣ. ಇದು ಎರಡು ರೂಪಾಂತರದ ಆಯ್ಕೆಯಲ್ಲಿ ರೂ.1,13 ಲಕ್ಷ (ದೆಹಲಿ) ಆರಂಭಿಕ ಬೆಲೆಯಲ್ಲಿ ಸಿಗುತ್ತದೆ. 3.04 kWh ಲಿಥಿಯಂ - ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿದ್ದು, 100 ಕಿಲೋಮೀಟರ್ ರೇಂಜ್ ನೀಡುತ್ತದೆ. 75 km/h ಟಾಪ್ ಸ್ವೀಡ್ ಹೊಂದಿದೆ.

ಕೆಲವೇ ದಿನಗಳ ಹಿಂದೆ, ಟಿವಿಎಸ್ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ 'ಎಕ್ಸ್' ಲಾಂಚ್ ಮಾಡಿತ್ತು. ಇದು, ರೂ.2.50 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದರಲ್ಲಿ, 4.44 kWh ಬ್ಯಾಟರಿ ಪ್ಯಾಕ್ ಬಳಸಲಾಗಿದ್ದು, ಪುಲ್ ಚಾರ್ಜ್‌ನಲ್ಲಿ 140 ಕಿಮೀ ರೇಂಜ್ ನೀಡುತ್ತದೆ. ಗಂಟೆಗೆ 105 ಕಿಮೀ ಟಾಪ್ ಸ್ವೀಡ್ ಹೊಂದಿದೆ. ಜೊತೆಗೆ ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

World EV Day: ನೀವು ಖರೀದಿಸಬಹುದಾದ ಪ್ರಮುಖ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು, TVS iQube, Ola..

ಮತ್ತೊಂದು, ಬೆಂಗಳೂರಿನ ಎಥರ್ ಎನರ್ಜಿ ಸ್ಕೂಟರ್ ಬಗ್ಗೆ ಮಾತನಾಡೋಣ. ಇದರ ಎಂಟ್ರಿ ಲೆವೆಲ್ '450ಎಸ್' ಇ-ಸ್ಕೂಟರ್, ರೂ.1,29,999 ಆರಂಭಿಕ ದರದಲ್ಲಿ ಖರೀದಿಗೆ ಲಭ್ಯವಿದೆ. ಇದು, 2.9 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 115 km ರೇಂಜ್ ನೀಡುತ್ತದೆ. 90 kmph ಟಾಪ್ ಸ್ವೀಡ್ ಪಡೆದಿದ್ದು, ಸ್ಮಾರ್ಟ್ಇಕೋ, ಇಕೋ, ರೈಡ್, ಸ್ಪೋರ್ಟ್ ಎಂಬ ರೈಡಿಂಗ್ ಮೋಡ್ ಒಳಗೊಂಡಿದೆ.

ಎಥರ್ 450ಎಕ್ಸ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಸಿಗುತ್ತದೆ. ಅವುಗಳೆಂದರೆ, 2.9 kWh ಹಾಗೂ 3.7kWh ಪ್ಯಾಕ್. ಕ್ರಮವಾಗಿ ರೂ.1,38,000 ಹಾಗೂ ರೂ.1,44,921 ಬೆಲೆಯಲ್ಲಿ ಲಭ್ಯವಿದ್ದು, ಸಂಪೂರ್ಣ ಚಾರ್ಜಿನಲ್ಲಿ 115 km ರಿಂದ 145 km ರೇಂಜ್ ನೀಡುತ್ತವೆ. ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Saturday, September 9, 2023, 8:30 [IST]
English summary
World ev day top company electric scooters india tvs ola ather
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+