ಏಥರ್ ಫ್ಯಾಮಿಲಿ ಸ್ಕೂಟರ್ 'ರಿಜ್ಟಾ' ಆಗಮನ: ಓಲಾ, ಬಜಾಜ್, ಟಿವಿಎಸ್ ಐಕ್ಯೂಬ್ ಎದೆಯಲ್ಲಿ ಢವ ಢವ!
ಏಥರ್ ಎಂಬ ಹೆಸರು ಕೇಳಿದ ಕೂಡಲೇ ನಮಗೆಲ್ಲಾ ನೆನಪಾಗುವುದು ಏಥರ್‌ನ ಎಲೆಕ್ಟ್ರಿಕ್ ಸ್ಕೂಟರ್ 450 ಎಕ್ಸ್. ಏಥರ್ ಹೆಸರು ಕೇಳಿದ ಕೂಡಲೇ ಈ ಸ್ಕೂಟರ್‌ನ ಡಿಸೈನ್ ಮತ್ತು ಪವರ್ ನೆನಪಿಗೆ ಬರುತ್ತದೆ. ಆದರೆ ಇನ್ನು ಮುಂದೆ ಇದು ಕೊಚ ಬದಲಾಗಲಿದೆ. ಹೀಗೆನ್ನಲು ಕಾರಣ ಏನೆಂದರೆ, ಏಥರ್‌ನ ರಿಜ್ಟಾ.
ಏಥರ್ ಇತ್ತೀಚೆಗಷ್ಟೇ ಮಾರುಕಟ್ಟೆಗೆ ತಂದ ಸ್ಕೂಟರ್ ಈ ರಿಜ್ಟಾ ಎಂಬುದು. ಇದೊಂದು, ಫ್ಯಾಮಿಲಿ ಕೇಂದ್ರೀಕೃತವಾದ ಸ್ಕೂಟರ್ ಆಗಿದೆ. ಒಂದು ಕುಟುಂಬಕ್ಕೆ ಬೇಕಾದ ರಿತಿಯಲ್ಲಿ ಬಳಸಲು ಅನುವು ಮಾಡಿಕೊಡುವ ಸ್ಕೂಟರ್ ಇದಾಗಿದ್ದು, ವಿಶಾಲವಾದ ಸೀಟ್, ಹೆಚ್ಚಿನ ಸ್ಟೋರೇಜ್ ಸ್ಪೇಸ್‌ಗಳನ್ನು ಈ ಸ್ಕೂಟರ್ ಪಡೆದುಕೊಂಡಿದೆ.

ಹೊಸ ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ರಿಜ್ಟಾ ಎಸ್, ರಿಜ್ಟಾ ಝಡ್ ಮತ್ತು ರಿಜ್ಟಾ ಝಡ್ (ಲಾಂಗ್ ರೇಂಜ್) ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಬೇಸ್ ರಿಜ್ಟಾ S ರೂಪಾಂತರವು 2.9kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು2.9kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ . ಈ ಮಾದರಿಯು 123 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು 80 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
ಈ ಸ್ಕೂಟರ್‌ನ ಸ್ಪರ್ಧಿಗಳನ್ನು ನೋಡುವುದಾದರೆ, ಸದ್ಯಕ್ಕೆ ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್, ಬಜಾಜ್ ಚೇತಕ್, ಓಲಾ ಎಸ್1 ಪ್ರೋ, ಹೀರೋ ವೀಡಾ ಮತ್ತು ಸಿಂಪಲ್ ವನ್ ಎಲೆಕ್ಟ್ರಿಕ್ ಸ್ಕೂಟರ್‌ಗಳಿವೆ. ಈ ಎಲ್ಲಾ ಸ್ಕೂಟರ್‌ಗಳಿಗೂ ಏಥರ್‌ನ ಈ ರಿಜ್ಟಾ ಒಂದು ಪ್ರಭಲ ಪ್ರತಿಸ್ಪರ್ಧಿಯಾಗಲಿದೆ ಎಂದು ಈಗಾಗಲೇ ಆಟೋ ಮೊಬೈಲ್ ಪಂಡಿತರು ಭವಿಷ್ಯ ನುಡಿದಿದ್ದಾರೆ. ಈ ಸ್ಕೂಟರ್‌ಗಳ ಬ್ಯಾಟರಿ ಮತ್ತು ರೇಂಜ್‌ಗಳನ್ನು ನೊಡೋಣ.

ಇಷ್ಟು ಸ್ಕೂಟರ್‌ಗಳಲ್ಲಿ ಟಿವಿಎಸ್ ಐಕ್ಯೂಬ್‌ನಲ್ಲಿ ಮಾತ್ರವೇ ರೇರ್ ಹಬ್ ಮೋಟಾರ್ ಸಿಗುತ್ತಿದೆ. ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ಎರಡು ರೂಪಾಂತರಗಳು, 3.04 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಪಡೆದಿವೆ. 140 ಎನ್ಎಂ ಪೀಕ್ ಟಾರ್ಕ್ ಹೊರಹಾಕಬಲ್ಲ 4.4 ಕೆಡಬ್ಲ್ಯೂ (kW) ಹಬ್-ಮೌಂಟೆಡ್ ಮೋಟಾರ್ ಒಳಗೊಂಡಿದ್ದು, ಭರ್ತಿ ಚಾರ್ಜ್ ನಲ್ಲಿ 100 ಕಿಲೋಮಿಟರ್ ಕ್ರಮಿಸಬಲ್ಲವು.
ಓಲಾ ಎಸ್1 ಪ್ರೊ (Ola S1 Pro) ಶಕ್ತಿಯುತ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು 4 ಕೆಡಬ್ಲ್ಯೂಹೆಚ್ (Kwh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಪೂರ್ತಿ ಚಾರ್ಜ್ ನಲ್ಲಿ 195 ಕಿಲೋಮೀಟರ್ ಓಡುತ್ತದೆ. 120 ಕೆಎಂಪಿಹೆಚ್ ಟಾಪ್ ಸ್ವೀಡ್ (ಗರಿಷ್ಠ ವೇಗ) ಹೊಂದಲಿದ್ದು, ಇದರಲ್ಲಿ ಉಪಯೋಗಿಸಿರುವ ಎಲೆಕ್ಟ್ರಿಕ್ ಮೋಟಾರ್ 11 ಕೆಡಬ್ಲ್ಯೂ (kW) ಪವರ್ ಉತ್ಪಾದಿಸುತ್ತದೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹೀರೋ ವಿಡಾ ವಿ1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್, ಸುಮಾರು ರೂ.1.45 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು 3.94 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಭರ್ತಿ ಚಾರ್ಜ್ ನಲ್ಲಿ 110 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.
ಬಜಾಜ್ ಚೇತಕ್ (Bajaj Chetak) ಪ್ರೀಮಿಯಂ (Premium) ರೂಪಾಂತರ ಸಂಪೂರ್ಣ ಚಾರ್ಜ್ ನಲ್ಲಿ 108 ಕಿಲೋಮೀಟರ್ ರೇಂಜ್ ನೀಡುತ್ತದೆ. ಜೊತೆಗೆ 63 kmph ಟಾಪ್ ಸ್ವೀಡ್ ಹೊಂದಿದೆ. 800 ಡಬ್ಲ್ಯೂ ಆನ್-ಬೋರ್ಡ್ ಚಾರ್ಜರ್ ಉಪಯೋಗದಲ್ಲಿ ಇದರ ಬ್ಯಾಟರಿ ಪ್ಯಾಕ್, 3 ಗಂಟೆ 50 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗಿಬಿಡುತ್ತದೆ.

ಸಿಂಪಲ್ ವನ್ ಡಾಟ್ ಬಗ್ಗೆ ನೋಡುವುದಾದರೆ 3.7 kWh ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 151 ಕಿಲೋಮೀಟರ್ ರಿಂದ 160 ಕಿಲೋಮೀಟರ್ ರೇಂಜ್ ನೀಡಲಿದೆ. ಆದರೆ, ಇದರಲ್ಲಿ ಉಪಯೋಗಗೊಳಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್ ಬಗ್ಗೆ ಮಾಹಿತಿಯಿಲ್ಲ. ಶಕ್ತಿಯುತ ಮೋಟಾರ್ ಬಳಕೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








