Ather vs Ampere: ಬೆಸ್ಟ್ ಫ್ಯಾಮಿಲಿ ಸ್ಕೂಟರ್ ಯಾವುದು? ಫೀಚರ್ಸ್ ಬಿಡಿ, ರೇಂಜ್ ನೋಡಿ!

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಆಗಮನ ಹೆಚ್ಚಾಗಿದೆ, ಇತ್ತೀಚೆಗಷ್ಟೆ ಆಂಪಿಯರ್ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ನೆಕ್ಸಸ್ ಬಿಡುಗಡೆಯಾಗಿದೆ. ಇದನ್ನು EX ಮತ್ತು ST ಎಂಬ ಎರಡು ಟ್ರಿಮ್‌ಗಳಲ್ಲಿ ನೀಡಲಾಗುತ್ತಿದೆ. ಇದೇ ಜಾಗದಲ್ಲಿ ಪ್ರಮುಖ ಪ್ರತಿಸ್ಪರ್ಧಿ ಎಥೆರ್ ಕೂಡ ರಿಜ್ಟಾ ಎಂಬ ಮಾದರಿಯೊಂದಿಗೆ S ಮತ್ತು Z ಎಂಬ ಎರಡು ಟ್ರಿಮ್‌ಗಳಲ್ಲಿ ನೀಡುತ್ತದೆ.

ಆದ್ದರಿಂದ, ನಾವು ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳ ಟಾಪ್-ಸ್ಪೆಕ್ ರೂಪಾಂತರಗಳನ್ನು ಹೋಲಿಕೆ ಮಾಡಿ ಫಲಿತಾಂಶಗಳನ್ನು ಇಲ್ಲಿ ನೀಡಿದ್ದೇವೆ. ಖರೀದಿ ಗೊಂದಲವಿದ್ದವರಿಗೆ ಈ ಮಾಹಿತಿ ಉಪಯುಕ್ತವಾಗಬಹುದು. ಎಥೆರ್ ರಿಜ್ಟಾ ಹಾಗೂ ಆಂಪಿಯರ್ ನೆಕ್ಸಸ್ ಎರಡೂ ಸ್ಕೂಟರ್‌ಗಳು ಬಾಕ್ಸಿ ವಿನ್ಯಾಸದೊಂದಿಗೆ ಬರುತ್ತವೆ. ಆದರೆ, ಎಥರ್ ರಿಜ್ಟಾಗೆ ಹೋಲಿಸಿಕೊಂಡರೆ ಆಂಪಿಯರ್ ನೆಕ್ಸಸ್ ಪ್ರಾಯೋಗಿಕ ಮತ್ತು ಕುಟುಂಬ ಆಧಾರಿತ ದೇಹವನ್ನು ಹೊಂದಿದೆ. ಇದು ತುಂಬಾ ಆಡಂಬರ ಅಥವಾ ಸ್ಪೋರ್ಟಿಯಾಗಿ ಕಾಣುವುದಿಲ್ಲ. ಉಳಿದಂತೆ ವಿನ್ಯಾಸದ ವಿಷಯದಲ್ಲಿ ನೆಕ್ಸಸ್ ಮತ್ತು ರಿಜ್ಟಾ ಎರಡರ ಡಿಸೈನ್ ತಟಸ್ಥ ಬದಿಯಲ್ಲಿವೆ ಎಂದು ಹೇಳಬಹುದು.

ather-rizta-z-vs-ampere-nexus-st-price-range-features-comparison

ವೈಶಿಷ್ಟ್ಯಗಳು: ಎಥೆರ್ ರಿಜ್ಟಾ ಝಡ್‌ನಲ್ಲಿ ಸ್ಮಾರ್ಟ್, ಇಕೋ ಮತ್ತು ಜಿಪ್ ಎಂಬ ರೈಡ್‌ ಮೋಡ್‌ಗಳಿವೆ. ಜೊತೆಗೆ ಟ್ರಾಕ್ಷನ್ ಕಂಟ್ರೋಲ್, ಮೊಬೈಲ್ ಚಾರ್ಜಿಂಗ್, ಆಟೋ ಹೋಲ್ಡ್ ಮತ್ತು ರಿವರ್ಸ್ ಮೋಡ್ ಅನ್ನು ಹೊಂದಿದೆ. ಗೂಗಲ್ ಮ್ಯಾಪ್ಸ್‌ಗಾಗಿ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ನೀಡಲಾಗಿದೆ. ಇದು ಲೈವ್ ಟ್ರಾಫಿಕ್ ಡೇಟಾವನ್ನು ಸಹ ಪ್ರದರ್ಶಿಸುತ್ತದೆ. ಕರೆಗಳಿಗೆ ಸ್ವಯಂ ಪ್ರತ್ಯುತ್ತರ ಮತ್ತು ವಾಟ್ಸಾಪ್ ಪೂರ್ವವೀಕ್ಷಣೆ (Preview)ನೋಡಬಹುದು.

ಆಂಪಿಯರ್ ನೆಕ್ಸಸ್ ಎಸ್‌ಟಿ ಬಗ್ಗೆ ಹೇಳುವುದಾದರೆ, ಇಕೋ, ಸಿಟಿ, ಪವರ್, ರಿವರ್ಸ್ ಮತ್ತು ಲಿಂಪ್ ಎಂಬ ಐದು ರೈಡ್ ಮೋಡ್‌ಗಳೊಂದಿಗೆ ಸಜ್ಜುಗೊಳಿಸಲಾಗಿದೆ. ನ್ಯಾವಿಗೇಷನ್, ಮ್ಯೂಸಿಕ್ ಕಂಟ್ರೋಲ್‌ಗಳು ಮತ್ತು ಒಟಿಎ ನವೀಕರಣಗಳಿಗಾಗಿ ಸ್ಮಾರ್ಟ್ ಫೋನ್ ಸಂಪರ್ಕದೊಂದಿಗೆ ಏಳು ಇಂಚಿನ ಟಿಎಫ್‌ಟಿ ಸ್ಕ್ರೀನ್ ನೀಡಲಾಗಿದೆ. ಇವುಗಳನ್ನು ನೆಕ್ಸಸ್ ಎಸ್‌ಟಿಯಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ather-rizta-z-vs-ampere-nexus-st-price-range-features-comparison

ಹಾರ್ಡ್ ವೇರ್: ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಪಡೆಯುತ್ತವೆ. ಆಂಪಿಯರ್ ನೆಕ್ಸಸ್ ಎಸ್‌ಟಿ ಡ್ಯುಯಲ್ ರಿಯರ್ ಸ್ಪ್ರಿಂಗ್‌ಗಳನ್ನು ಪಡೆದರೆ, ರಿಜ್ಟಾ ಮೊನೊಶಾಕ್ ಅನ್ನು ಪಡೆದಿದೆ. ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ 12 ಇಂಚಿನ ವೀಲ್‌ಗಳನ್ನು ಹೊಂದಿರುವ ಫ್ರಂಟ್ ಡಿಸ್ಕ್ ಮತ್ತು ರಿಯರ್ ಡ್ರಮ್ ಬ್ರೇಕ್‌ಗಳನ್ನು ನೀಡಲಾಗಿದೆ. ಆಂಪಿಯರ್ ನೆಕ್ಸಸ್ ಎಸ್‌ಟಿ ಕಡಿಮೆ ಗರಿಷ್ಠ ಪವರ್ ಹೊಂದಿದ್ದರೂ, ಹೆಚ್ಚಿನ ಟಾಪ್ ಸ್ಪೀಡ್ ಹೊಂದಿದೆ. ಇನ್ನು ಎಥೆರ್ ರಿಜ್ಟಾ ತನ್ನ ದೊಡ್ಡ ಬ್ಯಾಟರಿಯೊಂದಿಗೆ ನೆಕ್ಸಸ್‌ಗಿಂತ ಹೆಚ್ಚಿನ ರೇಂಜ್ ಒದಗಿಸುತ್ತದೆ. ಇದರ ವಿವರವಾದ ರೇಂಜ್‌ಗಳನ್ನು ಕೆಳಗೆ ನೋಡೋಣ.

ಮೋಟರ್ ಮತ್ತು ಬ್ಯಾಟರಿ: ಆಂಪಿಯರ್ ನೆಕ್ಸಸ್ ಎಸ್‌ಟಿ 3 ಕಿಲೋವ್ಯಾಟ್ ಬ್ಯಾಟರಿಯನ್ನು 4 ಕಿಲೋವ್ಯಾಟ್ ಮೋಟರ್‌ಗೆ ಜೋಡಿಸಲಾಗಿದೆ. ಇದರ ಚಾರ್ಜಿಂಗ್ ಸಮಯವು 3 ಗಂಟೆ 30 ನಿಮಿಷಗಳಿದ್ದು, ಒಮ್ಮೆ ಚಾರ್ಜ್‌ ಮಾಡಿದ್ರೆ 136 ಕಿ.ಮೀ ರೇಂಜ್ ನೀಡುವುದರ ಜೊತೆಗೆ 93 ಕಿ.ಮೀ ಟಾಪ್ ಸ್ಪೀಡ್ ಅನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ather-rizta-z-vs-ampere-nexus-st-price-range-features-comparison

ಮತ್ತೊಂದೆಡೆ, ಎಥೆರ್ ರಿಜ್ಟಾ ಝಡ್ 4.3 ಕಿಲೋವ್ಯಾಟ್ ಮೋಟರ್ ಮತ್ತು 3.7 ಕಿಲೋವ್ಯಾಟ್ ಬ್ಯಾಟರಿಯನ್ನು ಹೊಂದಿದೆ. ಇದು ಕೂಡ ಮೂರು ಗಂಟೆಗಳ ಚಾರ್ಜ್ ಸಮಯವನ್ನು ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದ್ರೆ 160 ಕಿ.ಮೀ ರೇಂಜ್ ನೀಡುತ್ತದೆ. ಹಾಗೆಯೇ ಇದು 80 ಕಿ.ಮೀ ಟಾಪ್ ಸ್ಪೀಡ್ ಅನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಬೆಲೆ: ಆಂಪಿಯರ್ ನೆಕ್ಸಸ್ ಎಸ್‌ಟಿ ಸ್ಕೂಟರ್ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.1,19,900ಗಳಾದರೆ, ಎಥರ್ ರಿಜ್ಟಾ ಝಡ್ ಸ್ಕೂಟರ್ ಬೆಲೆಯು ರೂ.1,44,999ಗಳಾಗಿದೆ. ಇವೆರಡರಲ್ಲಿ ಎಥರ್ ರಿಜ್ಟಾ ದುಬಾರಿಯಾಗಿದ್ದರೂ, ಇವುಗಳ ಮೈಲೇಜ್ ನೀಡುವ ಆಧಾರದ ಮೇಲೆ ಯಾವುದು ಬೆಸ್ಟ್ ಎಂಬುದನ್ನು ನಾವು ಪರಿಗಣಿಸಬಹುದು. ಮೇಲಿನ ವಿವರಗಳನ್ನು ಆಧರಿಸಿ ಬೆಸ್ಟ್ ಯಾವುದು ಎಂಬುದನ್ನು ನೀವು ನಿರ್ಣಯಿಸಬಹುದು.

More from DriveSpark

Article Published On: Saturday, May 4, 2024, 12:20 [IST]
English summary
Ather rizta z vs ampere nexus st price range features comparison
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+