Suzuki Access 125: ಹೊಸ ರೂಪದಲ್ಲಿ ಸುಜುಕಿ ಆಕ್ಸೆಸ್ 125 ಸ್ಕೂಟರ್ ಬರುತ್ತೆ.. ಬೆಲೆ ಎಷ್ಟಿರಲಿದೆ?

ವಾಹನ ಪ್ರಿಯರಿಗಾಗಿ ಇಲ್ಲಿದೆ ಸಿಹಿಸುದ್ದಿ. ದೆಹಲಿಯ ಭಾರತ ಮಂಟಪದಲ್ಲಿ ಜ.17 ರಿಂದ 22ರವರೆಗೆ 'ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ-2025' ಆಯೋಜಿಸಲಾಗಿದೆ. ಇದರಡಿ 'ಆಟೋ ಎಕ್ಸ್‌ಪೋ' ಒಳಗೊಂಡಂತೆ ವಿವಿಧ ವಾಹನ ಪ್ರದರ್ಶನಗಳನ್ನು ಸಹ ನಡೆಯಲಿವೆ. ಈ ಎಕ್ಸ್‌ಪೋದಲ್ಲಿ ಭಾಗವಹಿಸಲು ಹಲವು ದೇಶೀಯ ಹಾಗೂ ವಿದೇಶಿ ವಾಹನ ತಯಾರಕ ಕಂಪನಿಗಳು ಸಹ ಆಸಕ್ತ ತೋರಿಸಿವೆ. ಸದ್ಯ, ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India) ಕೂಡ ಈ ಎಕ್ಸ್‌ಪೋದಲ್ಲಿ ಪಾಲ್ಗೊಳ್ಳಲಿದೆ ಎನ್ನಲಾಗಿದ್ದು, ಬಹುಬೇಡಿಕೆಯ 'ಆಕ್ಸೆಸ್ 125' ಸ್ಕೂಟರ್‌ನ ಹೊಸ ಮಾಡೆಲ್‌ನ್ನು ಅನಾವರಣಗೊಳಿಸಲಿದೆ ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ.

ಬೆಲೆ (Price): ಮುಂಬರಲಿರುವ ಹೊಸ ತಲೆಮಾರಿನ ಸುಜುಕಿ ಆಕ್ಸೆಸ್ 125 (Suzuki Access 125) ಅತ್ಯಂತ ಕಡಿಮೆ ಬೆಲೆಗೆ ಮಾರಾಟಕ್ಕೆ ಬರುವ ನೀರಿಕ್ಷೆಯಿದೆ. ಈಗಿರುವ ಮಾಡೆಲ್‌ಗಿಂತ ಒಂದೆರಡು ಸಾವಿರ ಹೆಚ್ಚಿನ ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಸುತ್ತ ಗ್ರಾಹಕರ ಖರೀದಿಗೆ ದೊರೆಯುವ ಆಕ್ಸೆಸ್ ಸ್ಕೂಟರ್, ರೂ.83,482 ದಿಂದ ರೂ.94,082 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

Auto Expo 2025 Next-Gen Suzuki Access 125 Likely Unveil Expected Price Mileage Features Details

ವಿನ್ಯಾಸ (Design): ಸುಜುಕಿ ಆಕ್ಸೆಸ್ 125 ಸ್ಕೂಟರ್, ಹೊರಭಾಗದಲ್ಲಿ ಆಕರ್ಷಕ ವಿನ್ಯಾಸವನ್ನು ಒಳಗೊಂಡಿರುವ ಸಾಧ್ಯತೆಯಿದೆ. ಈ ಮೊದಲು ಹಲವು ಬಾರಿ ಆಕ್ಸೆಸ್ ಸ್ಕೂಟರ್ ಪರೀಕ್ಷಾರ್ಥ ಸಂಚಾರ ನಡೆಸುವಾಗಲು ಕಂಡುಬಂದಿತ್ತು. ಆ ವೇಳೆಯಲ್ಲಿ ಮುಂಭಾಗ (ಫ್ರಂಟ್) ಆಕರ್ಷಕವಾದ ಹೆಡ್‌ಲೈಟ್ ಮತ್ತು ಹಿಂಭಾಗ (ರೇರ್) ವಿನೂತನವಾಗಿದ್ದ ಮಡ್‌ಗಾರ್ಡ್ ಹಾಗೂ ಹೀಟ್ ಶೀಲ್ಡ್ ಎಕ್ಸಾಸ್ಟ್ ಸಿಸ್ಟಮ್ ಪಡೆದಿದ್ದನ್ನು ಕಾಣಬಹುದಾಗಿತ್ತು.

ಕಾರ್ಯಕ್ಷಮತೆ (Performance): ನೂತನ ಸುಜುಕಿ ಆಕ್ಸೆಸ್ 125 ಸ್ಕೂಟರ್‌ನ ಪವರ್‌ಟ್ರೇನ್‌ನಲ್ಲಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ ಎನ್ನಲಾಗಿದೆ. ಇದು ಸದ್ಯದ ಮಾಡೆಲ್‌ನಂತೆ 124 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿರಲಿದ್ದು, 8.7 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 10 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸಬಹುದು ಎಂದು ಹೇಳಲಾಗಿದೆ. ಜೊತೆಗೆ 45 ಕೆಎಂಪಿಎಲ್‌ಗಿಂತ ಅಧಿಕ ಮೈಲೇಜ್ ನೀಡಬಹುದು ಎಂದು ತಿಳಿದುಬಂದಿದೆ.

Auto Expo 2025 Next-Gen Suzuki Access 125 Likely Unveil Expected Price Mileage Features Details

ವೈಶಿಷ್ಟ್ಯಗಳು (Features): ಈ ಸ್ಕೂಟರ್ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನೀರಿಕ್ಷೆಯಿದೆ. ಫುಲ್ - ಡಿಜಿಟಲ್ ಇನ್ಫಾರ್ಮಶನ್ ಪ್ಯಾನೆಲ್ ಮತ್ತು ಸುಜುಕಿ ರೈಡ್ ಕನೆಕ್ಟ್, ಯುಎಸ್‌‍ಬಿ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಬಹುದು ಎನ್ನಲಾಗಿದೆ. ಇದರೊಟ್ಟಿಗೆ ಈಗಿರುವ ಮಾಡೆಲ್‌ನಂತೆ 103 ಕೆಜಿ ತೂಕವಿರಲಿದ್ದು, 5-ಲೀಟರ್‌ನ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿರಬಹುದು ಎಂದು ತಿಳಿದುಬಂದಿದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System): ಹೊಸ ತಲೆಮಾರಿನ ಸುಜುಕಿ ಆಕ್ಸೆಸ್ 125 ಸ್ಕೂಟರ್‌ನ ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್‌ನಲ್ಲಿಯೂ ಯಾವುದೇ ಮಾರ್ಪಾಡುಗಳನ್ನು ಮಾಡಲಾಗಿರುವುದಿಲ್ಲ ಎನ್ನಲಾಗಿದೆ. ಇದು ಪ್ರಸ್ತುತವಿರುವ ಮಾಡೆಲ್‌ ರೀತಿಯೇ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿರಲಿದ್ದು, ಡಿಸ್ಕ್ ಅಥವಾ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿರುವ ನಿರೀಕ್ಷೆಯಿದೆ.

ಇನ್ನು, ಮುಂಬರಲಿರುವ ನೂತನ ಸುಜುಕಿ ಆಕ್ಸೆಸ್ 125 ಸ್ಕೂಟರ್‌ಗೆ ಹೋಂಡಾ ಆಕ್ಟಿವಾ ಮತ್ತು ಟಿವಿಎಸ್ ಜುಪಿಟರ್ ಮಾಡೆಲ್‌ಗಳು ನೇರವಾದ ಎದುರಾಳಿಯಾಗಲಿವೆ. ಹೊಸ ಸ್ಕೂಟರ್ ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆದಿರುವ ಸಾಧ್ಯತೆಯಿದ್ದು, ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮೇಲೆ ಇದು ಹೇಗಿರಲಿದೆ ಎಂಬುದು ಗೊತ್ತಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, December 27, 2024, 10:19 [IST]
English summary
Auto expo 2025 next gen suzuki access 125 likely unveil expected price mileage features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+