ಹೊಸ ಬಣ್ಣಗಳೊಂದಿಗೆ ಟಿ-ರೆಕ್ಸ್ ಏರ್ ಅನಾವರಣ: 50 ಕಿ.ಮೀ ರೇಂಜ್, ಬೆಲೆಯೆಷ್ಟು?
ಇ-ಸೈಕಲ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಇಮೊಟೊರಾಡ್ (EMotorad) ತನ್ನ ಜನಪ್ರಿಯ ಟಿ-ರೆಕ್ಸ್ ಏರ್ ಮಾಡೆಲ್‌ಗಾಗಿ ಆರೆಂಜ್ ಬ್ಲೇಜ್ ಮತ್ತು ಟ್ರಾಪಿಕಲ್ ಗ್ರೀನ್ ಎಂಬ ಎರಡು ಬಣ್ಣಗಳನ್ನು ಪರಿಚಯಿಸಿದೆ. ಇದು ಈಗಾಗಲೇ ಅಸಾಧಾರಣವಾದ ಇ-ಸೈಕಲ್‌ಗೆ ಅತ್ಯಾಕರ್ಷಕ ಆಯಾಮವನ್ನು ಸೇರಿಸಿದೆ. ನಗರದ ಬೀದಿಗಳಾಗಿರಲಿ ಅಥವಾ ಒರಟಾದ ಹಾದಿಗಳನ್ನು ಅನ್ವೇಷಿಸುತ್ತಿರಲಿ, ಟಿ-ರೆಕ್ಸ್ ಏರ್ ಸುಗಮ ಮತ್ತು ಉಲ್ಲಾಸದಾಯಕ ಸವಾರಿಯ ಅನುಭವ ನೀಡುವಲ್ಲಿ ಯಾವುದೇ ಅನುಮಾನವಿಲ್ಲ. T-ರೆಕ್ಸ್ ಏರ್ ಯಾವಾಗಲೂ ಸೈಕ್ಲಿಂಗ್ ಉತ್ಸಾಹಿಗಳ ನೆಚ್ಚಿನ ಆಯ್ಕೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಲಭ್ಯತೆ: ಆರೆಂಜ್ ಮತ್ತು ಗ್ರೀನ್‌ನಲ್ಲಿ ಹೊಸ T-ರೆಕ್ಸ್ ಏರ್ ಈಗ Amazon, Flipkart, ಡೀಲರ್‌ಶಿಪ್‌ಗಳು ಮತ್ತು ಅಧಿಕೃತ EMotorad ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಈ ಇ-ಸೈಕಲ್ ಮಹೇಂದ್ರ ಸಿಂಗ್ ಧೋನಿಯನ್ನು ಒಳಗೊಂಡ ವೈರಲ್ 'ಬೋಲೆ ಜೋ ಕೋಯಲ್' ಜಾಹೀರಾತಿನಿಂದ "ಧೋನಿಯ ಸೈಕಲ್" ಎಂದು ಪ್ರಸಿದ್ಧವಾಗಿದೆ, ಇದು ಹೆಮ್ಮೆಯ 'ಮೇಕ್ ಇನ್ ಇಂಡಿಯಾ' ಉತ್ಪನ್ನವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ವಿಶೇಷತೆಗಳು: ಹೊಸ ಟಿ-ರೆಕ್ಸ್ ಏರ್ ವರ್ಧಿತ 27.5-ಇಂಚಿನ ಟೈರ್‌ಗಳನ್ನು ಹೊಂದಿದ್ದು, ವಿವಿಧ ಭೂಪ್ರದೇಶಗಳಲ್ಲಿ ಉನ್ನತ ಸ್ಥಿರತೆ ಮತ್ತು ನಿಯಂತ್ರಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇ-ಸೈಕಲ್ 10.2 AH ತೆಗೆಯಬಹುದಾದ ಬ್ಯಾಟರಿಯನ್ನು ಹೊಂದಿದೆ, 5 ಹಂತಗಳ ಪೆಡಲ್ ಸಹಾಯವನ್ನು ನೀಡುತ್ತದೆ. ಒಂದೇ ಚಾರ್ಜ್‌ನಲ್ಲಿ 50+ ಕಿ.ಮೀ ರೇಂಜ್ ಹಾಗೂ 25 km ವೇಗದಲ್ಲಿ ಓಡಬಲ್ಲದು.
ಬೆಲೆ: ಪ್ರಸ್ತುತ 34,999 ರೂಪಾಯಿಗಳ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಿದ್ದು, ನಗರವಾಸಿಗಳು, ವಿದ್ಯಾರ್ಥಿಗಳು, ಫಿಟ್ನೆಸ್ ಮತ್ತು ಸಾಹಸ ಉತ್ಸಾಹಿಗಳಿಗೆ ಈ ಸೈಕಲ್ ಬೆಸ್ಟ ಆಯ್ಕೆಯಾಗಿದೆ. ಪ್ರಕೃತಿಯ ಸೌಂದರ್ಯ ಮತ್ತು ಚೈತನ್ಯವನ್ನು ಪ್ರತಿಬಿಂಬಿಸಲು ಪ್ರತಿಯೊಂದು ಹೊಸ ಬಣ್ಣವನ್ನು ನಿಖರವಾಗಿ ಆಯ್ಕೆ ಮಾಡಲಾಗಿದೆ ಎಂದು ಕಂಪನಿಯು ಸೈಕಲ್ ಅನ್ನು ವರ್ಣಿಸಿದೆ.
ಆರೆಂಜ್ ಬ್ಲೇಜ್ ಮತ್ತು ಟ್ರಾಪಿಕಲ್ ಗ್ರೀನ್ ಟಿ - ರೆಕ್ಸ್ ಏರ್ ಪ್ರಕೃತಿಯ ಸೌಂದರ್ಯ ಮತ್ತು ಚೈತನ್ಯದಿಂದ ಪ್ರೇರಿತವಾಗಿದ್ದು, ನಮ್ಮ ಸವಾರರಿಗೆ ಸಂತೋಷ ಮತ್ತು ನವ ಯೌವನವನ್ನು ತರುವ ಗುರಿಯನ್ನು ಹೊಂದಿದೆ ಎಂದು ಇಮೊಟೊರಾಡ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಕುನಾಲ್ ಗುಪ್ತಾ ಹೇಳಿದರು.
EMotorad ಇಂದಿನ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ನವೀನ, ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸೈಕಲ್‌ಗಳನ್ನು ರಚಿಸಲು ಬದ್ಧವಾಗಿದೆ. 'ಮೇಕ್ ಇನ್ ಇಂಡಿಯಾ' ಬ್ರ್ಯಾಂಡ್ ಆಗಿ, EMotorad ಉನ್ನತ-ಕಾರ್ಯನಿರ್ವಹಣೆಯ, ಪರಿಸರ ಪ್ರಜ್ಞೆಯ ಉತ್ಪನ್ನಗಳನ್ನು ತಲುಪಿಸಲು ಅಸಾಧಾರಣ ವಿನ್ಯಾಸದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಸಂಯೋಜಿಸುತ್ತದೆ ಎಂದು ಕಂಪನಿ ತಿಳಿಸಿದೆ.
ಎಮೋಟೋರಾಡ್ ಪುಣೆ ಮೂಲದ ಎಲೆಕ್ಟ್ರಿಕ್ ಬೈಸಿಕಲ್ ಕಂಪನಿಯಾಗಿದ್ದು, 2020 ರಲ್ಲಿ ಕಂಪನಿಯನ್ನು ಸ್ಥಾಪಿಸಲಾಗಿದೆ. ಎಲ್ಲಾ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ವಿವಿಧ ವಿಭಾಗಗಳಲ್ಲಿ ವಿವಿಧ ಉತ್ಪನ್ನಗಳನ್ನು ನೀಡುತ್ತಿದೆ. ಕಂಪನಿಯ ಸೈಕಲ್‌ಗಳು ರಾಷ್ಟ್ರದಾದ್ಯಂತ ಇರುವ ಪ್ರತಿಯೊಬ್ಬ ಸವಾರನ ವೈವಿಧ್ಯಮಯ ಅಭಿರುಚಿಗಳು ಮತ್ತು ಭಾವೋದ್ರೇಕಗಳಿಗೆ ಸರಿಹೊಂದುತ್ತವೆ ಎಂದು ಕಂಪನಿ ಭರವಸೆ ನೀಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








