driving licence: ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಈ ಸ್ಕೂಟರ್‌ಗಳನ್ನು ಓಡಿಸಬಹುದು: ಕಡಿಮೆ ಬೆಲೆ

ದ್ವಿಚಕ್ರ ವಾಹನಗಳು ದಿನನಿತ್ಯದ ಜೀವನದ ಒಂದು ಭಾಗವಾಗಿಬಿಟ್ಟಿವೆ. ಆಟೋ, ಕ್ಯಾಬ್‌ಗಳನ್ನು ಅವಲಂಬಿಸುವ ಬದಲು ನಮ್ಮದೇ ಒಂದು ಸ್ಕೂಟರ್ ಇದ್ದರೇ ಹಣ ಉಳಿಸಬಹುದು. ಆದ್ರೆ ನಮ್ಮಲ್ಲಿ ಅದೆಷ್ಟೋ ಜನರಿಗೆ ವಾಹನ ಓಡಿಸಲು ಬಂದರೂ ಡಿಎಲ್ ಇರುವುದಿಲ್ಲ. ಅಂಥವರಿಗಾಗಿ ವಾಹನ ಪರವಾನಗಿ ಇಲ್ಲದಿದ್ದರೂ ಓಡಿಸಬಹುದಾದ ಕಡಿಮೆ ಬೆಲೆಯ ಇವಿ ಸ್ಕೂಟರ್‌ಗಳು ಇಲ್ಲಿವೆ.

ಭಾರತದಲ್ಲಿ ಕಡಿಮೆ ವೇಗವನ್ನು ಹೊಂದಿರುವ ದ್ವಿಚಕ್ರ ವಾಹನಗಳಿಗೆ ಪರವಾನಗಿ (driving licence) ಬೇಕಿರುವುದಿಲ್ಲ. ಅಂದರೆ ಗಂಟೆಗೆ ಕೇವಲ 25 ಕಿ.ಮೀ ವೇಗದಲ್ಲಿ ಚಲಿಸುವ ದ್ವಿಚಕ್ರ ವಾಹನಗಳಿಗೆ ಪರವಾನಗಿ ಪಡೆಯುವ ಅವಶ್ಯಕತೆ ಇರುವುದಿಲ್ಲ. ಪ್ರಸ್ತುತ ಭಾರತದಲ್ಲಿ ಕೆಲವು ಕಂಪನಿಗಳು ಕೇವಲ 25 ಕಿ.ಮೀ ವೇಗದಲ್ಲಿ ಓಡುವ ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿವೆ. ಅವುಗಳಲ್ಲಿ ತೀರಾ ಕಡಿಮೆ ಬೆಲೆ ಇರುವ ಟಾಪ್ ಸ್ಕೂಟರ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ev-scooters-that-can-be-driven-without-driving-license

ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್: ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ (Hero Electric Flash) 28 ಎಹೆಚ್ ಲೆಡ್-ಅಸಿಟೇಟ್ ಬ್ಯಾಟರಿಯನ್ನು ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ 50 ಕಿ.ಮೀ ರೇಂಜ್ ನೀಡುತ್ತದೆ. ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ ಭಾರತದಲ್ಲಿ ರೂ.59,640 (ಎಕ್ಸ್ ಶೋರೂಂ) ಬೆಲೆಯಲ್ಲಿ ಲಭ್ಯವಿದೆ. ಇದು ಸಣ್ಣ 250 ವ್ಯಾಟ್ ಬಿಎಲ್ ಡಿಸಿ ಹಬ್ ಮೋಟರ್ ಹೊಂದಿದೆ.

ಕೈನೆಟಿಕ್ ಜಿಂಗ್: ಕೈನೆಟಿಕ್ ಜಿಂಗ್ (Kinetic Zing) ಬೆಲೆಯು ಭಾರತದಲ್ಲಿ 71,990 ರೂ.ಗಳಿಂದ ಆರಂಭವಾಗಿ 84,990 ರೂ.ಗಳವರೆಗೆ (ಎಕ್ಸ್ ಶೋರೂಂ) ಇದೆ. ಇದು 22 ಎಹೆಚ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ, ಒಮ್ಮೆ ಚಾರ್ಜ್ ಮಾಡಿದ್ರೆ 100 ಕಿ.ಮೀವೆರೆಗೆ ರೇಂಜ್ ನೀಡುವುದಾಗಿ ಕಂಪನಿ ತಿಳಿಸಿದೆ.

ev-scooters-that-can-be-driven-without-driving-license

ಕೊಮಾಕಿ ಎಕ್ಸ್‌ಜಿಟಿ ಕೆಎಂ: ಕೊಮಾಕಿ ಎಕ್ಸ್ ಜಿಟಿ ಕೆಎಂ (Komaki XGT KM) ಸ್ಕೂಟರ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದ್ರೆ ಬರೋಬ್ಬರಿ 85 ಕಿ.ಮೀ ರೇಂಜ್ ನಿಡುವುದಾಗಿ ಕಂಪನಿ ಹೇಳಿದೆ. ಈ ಇವಿ ಸ್ಕೂಟರ್ ಬೆಲೆಯು 56,890 ರೂ.ಗಳಿಂದ ಆರಂಭವಾಗಿ 93,045 ರೂ.ಗಳವರೆಗೆ (ಎಕ್ಸ್ ಶೋರೂಂ) ಇದೆ.

ಹೀರೋ ಎಡ್ಡಿ: ಹೀರೋ ಎಡ್ಡಿ (Hero Eddy) ಸಂಪೂರ್ಣವಾಗಿ ಚಾರ್ಜ್ ಆಗಲು 4-5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. 85 ಕಿ.ಮೀವರೆಗೆ ರೇಂಜ್ ಒದಗಿಸುತ್ತದೆ. ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.72,000 ಆಗಿದೆ. ಇದು 30 ಎಹೆಚ್ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದ್ದು, ಕೇವಲ 25 ಕಿ.ಮೀ ಗರಿಷ್ಟ ವೇಗವನ್ನು ಹೊಂದಿದೆ.

ev-scooters-that-can-be-driven-without-driving-license

ಒಕಿನಾವ ಆರ್‌ 30: ಒಕಿನಾವ ಆರ್‌ 30 (Okinawa R30) ಇವಿ ಸ್ಕೂಟರ್, ಸಿಂಗಲ್ ಚಾರ್ಜ್‌ನಲ್ಲಿ 60 ಕಿ.ಮೀ ರೇಂಜ್ ನೀಡುತ್ತದೆ. ಸಂಪೂರ್ಣವಾಗಿ ಚಾರ್ಜ್ ಮಾಡಲು 4-5 ಗಂಟೆ ತೆಗೆದುಕೊಳ್ಳುತ್ತದೆ. ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 61,998ಗಳಾಗಿದೆ. ಇದು 1.25 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ.

ಡೆಲ್ಟಿಕ್ ಡ್ರಿಕ್ಸ್: ಡೆಲ್ಟಿಕ್ ಡ್ರಿಕ್ಸ್ (Deltic Drixx) 1.58 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ 70 ಕಿ.ಮೀ ನಿಂದ 100 ಕಿ.ಮೀ ರೇಂಜ್ ನೀಡುತ್ತದೆ. ಭಾರತದಲ್ಲಿ ಇದರ ಬೆಲೆಯು 58,490 ರೂ.ಗಳಿಂದ 84,990 ರೂ.ಗಳವರೆಗೆ (ಎಕ್ಸ್ ಶೋರೂಂ) ಖರೀದಿಗೆ ಲಭ್ಯವಿದೆ.

ev-scooters-that-can-be-driven-without-driving-license

ಒಕಿನಾವಾ ಲೈಟ್: ಒಕಿನಾವಾ ಲೈಟ್ (Okinawa Lite) ಭಾರತದಲ್ಲಿ 74,999 ರೂ.ಗಳ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 1.25 ಕಿಲೋವ್ಯಾಟ್‌ನ ತೆಗೆದು ಮತ್ತೆ ಹಾಕಬಹುದಾದ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಇದು 60 ಕಿ.ಮೀ ಸವಾರಿ ರೇಂಜ್ ಹೊಂದಿದೆ. ಸಂಪೂರ್ಣ ಚಾರ್ಜ್ ಮಾಡಲು 4-5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

More from DriveSpark

Article Published On: Monday, March 11, 2024, 12:05 [IST]
English summary
Ev scooters that can be driven without driving license
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+