Hero Vida: ಶಕ್ತಿಯುತ ಹೀರೋ ವಿಡಾ ವಿ1 ಪ್ಲಸ್ ಇ-ಸ್ಕೂಟರ್ ಮರು ಬಿಡುಗಡೆ, ರೂ.1.15 ಲಕ್ಷ ಬೆಲೆ.. ವಿಶೇಷತೆಗಳೇನು?

ದೇಶದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೀರೋ ಮೋಟೋಕಾರ್ಪ್ (Hero MotoCorp) ಗುರುತಿಸಿಕೊಂಡಿದೆ. ಈ ಹಿಂದೆ ವಿಡಾ (Vida) ಸ್ಕೂಟರ್‌ನ್ನು ಪರಿಚಯಿಸುವುದರೊಂದಿಗೆ ಎಲೆಕ್ಟ್ರಿಕ್ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಸದ್ಯ, ಈ ಸ್ಕೂಟರ್‌ನ ವಿ1 ಪ್ಲಸ್ (V1 Plus) ರೂಪಾಂತರವನ್ನು ಮರು ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಹೀರೋ ವಿಡಾ (Hero Vida) ಇ-ಸ್ಕೂಟರ್‌ನ್ನು ವಿ1 ಪ್ಲಸ್ (V1 Plus) ಮತ್ತು ವಿ1 ಪ್ರೊ (V1 Pro) ಎಂಬ 2 ರೂಪಾಂತರಗಳ ಆಯ್ಕೆಯಲ್ಲಿ ಲಾಂಚ್ ಮಾಡಲಾಗಿತ್ತು. ಆದರೆ, ನಾನಾ ಕಾರಣಗಳಿಗೆ ವಿ1 ಪ್ಲಸ್ ಮಾದರಿಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಬಿಡುಗಡೆಗೊಳಿಸಿರುವುದು ಗ್ರಾಹಕರಿಗೆ ಸಂತಸವನ್ನು ತಂದಿದೆ.

Hero Vida V1 Plus Electric Scooter Launch Rs 1 15 Lakh Price 100 Km Range

ಹೀರೋ ವಿಡಾ ವಿ1 ಪ್ರೊ ಟಾಪ್ ಎಂಡ್ (ಗರಿಷ್ಠ ಶ್ರೇಣಿ) ಮಾದರಿಯಾದರೆ, ವಿಡಾ ವಿ1 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಮಾದರಿಯಾಗಿದೆ. ಮರು ಬಿಡುಗಡೆಗೊಂಡಿರುವ ಹೀರೋ ವಿಡಾ ವಿ1 ಪ್ಲಸ್ (Hero Vida V1 Plus) ಇ-ಸ್ಕೂಟರ್ ರೂ.1.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಅದೇ ರೀತಿಯಲ್ಲಿ ವಿಡಾ ವಿ1 ಪ್ರೊ ರೂ.1.45 ಲಕ್ಷ ದರವನ್ನು ಪಡೆದಿದೆ.

ಈ ವಿಡಾ ವಿ1 ಪ್ಲಸ್ ಇ-ಸ್ಕೂಟರ್ ಬೆಲೆಯನ್ನು ಫೇಮ್ II ಸಬ್ಸಿಡಿ ಮತ್ತು ಪೋರ್ಟಬಲ್ ಚಾರ್ಜರ್ ಅನ್ನು ಒಳಗೊಂಡಂತೆ ನಿಗದಿಪಡಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುವರಿ ಸಬ್ಸಿಡಿಯಿರುವುದರಿಂದ ಇದೇ ಎಲೆಕ್ಟ್ರಿಕ್ ಸ್ಕೂಟರ್ ರೂ.97,800 ಎಕ್ಸ್ ಶೋರೂಂ ದರವನ್ನು ಪಡೆದಿದೆ. ಆದರೆ, ಈ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಲಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ಹೀರೋ ಶೋರೂಂಗೆ ಭೇಟಿ ನೀಡಿರಿ.

Hero Vida V1 Plus Electric Scooter Launch Rs 1 15 Lakh Price 100 Km Range

ನೂತನ ಹೀರೋ ವಿಡಾ ವಿ1 ಪ್ಲಸ್ ಇ-ಸ್ಕೂಟರ್, 3.44 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್ ನಲ್ಲಿ 100 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. ಗರಿಷ್ಠ ಶ್ರೇಣಿಯ ವಿಡಾ ವಿ1 ಪ್ರೊ ದೊಡ್ಡದಾದ 3.94 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ಪಡೆದಿದ್ದು, ಭರ್ತಿ ಚಾರ್ಜ್ ನಲ್ಲಿ 110 ಕಿಲೋಮೀಟರ್ ಕ್ರಮಿಸುತ್ತದೆ.

ಹೀರೋ ವಿಡಾ ವಿ1 ಪ್ಲಸ್ ಮತ್ತು ವಿ1 ಪ್ರೊ ಇ-ಸ್ಕೂಟರ್‌ಗಳು ಒಂದೇ ತರಹದ 6 ಕೆಡಬ್ಲ್ಯೂ (kW) ಎಲೆಕ್ಟ್ರಿಕ್ ಮೋಟರ್ ಒಳಗೊಂಡಿವೆ. ಗಂಟೆ 80 ಕಿ.ಮೀ ಗರಿಷ್ಠ ವೇಗ (ಟಾಪ್ ಸ್ವೀಡ್)ವನ್ನು ಪಡೆಯಲಿವೆ. ಜೊತೆಗೆ ಕೇವಲ 3.4 ಸೆಕೆಂಡುಗಳಲ್ಲಿ 40 ಕೆಎಂಪಿಹೆಚ್ ವೇಗವನ್ನು ಹೊಂದಲಿವೆ. ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಲೈಟಿಂಗ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿವೆ.

Hero Vida V1 Plus Electric Scooter Launch Rs 1 15 Lakh Price 100 Km Range

ಈ ವರ್ಷಾರಂಭದ ಜನವರಿಯಲ್ಲಿ ಹೀರೋ ಮೋಟೋಕಾರ್ಪ್ 1,494 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸಿ, ಒಂದಷ್ಟು ಕುಸಿತವನ್ನು ದಾಖಲಿಸಿತ್ತು. 2023ರ ಅದೇ ಅವಧಿಗೆ ಹೋಲಿಸಿದರೆ ಶೇಕಡ 6.46% ನಷ್ಟವನ್ನು ಅನುಭವಿಸಿತ್ತು ಫೆಬ್ರವರಿಯನ್ನು ಮಾರಾಟ ಪ್ರಮಾಣ ವೃದ್ದಿಸಿದ್ದು, 1,750 ಯುನಿಟ್‌ಗಳನ್ನು ಮಾರಿದೆ. 'ವಿಡಾ ವಿ1 ಪ್ಲಸ್' ಎಲೆಕ್ಟ್ರಿಕ್ ಸ್ಕೂಟರ್ ಮರು ಬಿಡುಗಡೆಯೊಂದಿಗೆ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸುವ ವಿಶ್ವಾಸದಲ್ಲಿ ಕಂಪನಿಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, March 1, 2024, 13:11 [IST]
English summary
Hero vida v1 plus electric scooter relaunch rs 1 15 lakh price 100 km range
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+