ಹೋಂಡಾ ಆಕ್ಟಿವಾ ಇವಿ ಎದುರಾಳಿ.. ಹೊಸ ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ಬೆಲೆಗೆ 2025ಕ್ಕೆ ಬಿಡುಗಡೆ?

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ಜನಪ್ರಿಯ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ 'ಆಕ್ಸೆಸ್ 125' ಜನಪ್ರಿಯ ಸ್ಕೂಟರ್ ಆಗಿ ಹೊರಹೊಮ್ಮಿದ್ದು, ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಸದ್ಯ, 2025ಕ್ಕೆ ಇದೇ ಸ್ಕೂಟರ್‌ನ್ನು ಎಲೆಕ್ಟ್ರಿಕ್ ರೂಪದಲ್ಲಿ ಮಾರಾಟಕ್ಕೆ ತರಲು ಕಂಪನಿಯು ಯೋಜಿಸಿದೆ ಎಂದು ವರದಿಯಾಗಿದೆ. ಹೊಸ ಸುಜುಕಿ ಆಕ್ಸೆಸ್ ಇವಿಯು ಕೆಲವೇ ದಿನಗಳಲ್ಲಿ ಅನಾವರಣಗೊಳ್ಳಲಿರುವ ಹೋಂಡಾ ಆಕ್ಟಿವಾ ಇವಿಗೆ ನೇರ ಎದುರಾಳಿಯಾಗಲಿದೆ.

ಸುಜುಕಿ ಕಂಪನಿಯು 'ಆಕ್ಸೆಸ್ 125' ಮಾತ್ರವಲ್ಲದೆ, ಬರ್ಗ್‌ಮನ್ ಸ್ಟ್ರೀಟ್ (Burgman Street) ಸ್ಕೂಟರ್‌ನ್ನು ಕೂಡ ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಕಳೆದ 2 ವರ್ಷದಿಂದ ಈ ಸ್ಕೂಟರ್‌ನ್ನು ಎಲೆಕ್ಟ್ರಿಕ್ ಅವತಾರದಲ್ಲಿ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ಈಗಾಗಲೇ ಹಲವು ಬಾರಿ ಬರ್ಗ್‌ಮನ್ ಸ್ಟ್ರೀಟ್ ಇವಿ ಪ್ರಾಯೋಜಿಕ ಸಂಚಾರವನ್ನು ನಡೆಸುವಾಗಲೂ ಕಂಡುಬಂದಿದೆ.

Honda Activa Ev Rival Suzuki Access Electric Scooter Expected Launch In 2025

ಆದರೆ, ಈ ಬರ್ಗ್‌ಮನ್ ಸ್ಟ್ರೀಟ್ ಎಲೆಕ್ಟ್ರಿಕ್ ಸ್ಕೂಟರ್‌ಗೂ ಮೊದಲೇ ಆಕ್ಸೆಸ್ ಐವಿಯನ್ನು ಮಾರಾಟಕ್ಕೆ ತರಲು ಸುಜುಕಿ ಕಂಪನಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, 2025ಕ್ಕೆ ಹೊಚ್ಚ ಹೊಸ ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ರೂ.1.20 ಲಕ್ಷ ಎಕ್ಸ್ ಶೋರೂಂಗೆ ಮಾರಾಟಕ್ಕೆ ಬರಬಹುದು ಎಂದು ಅಂದಾಜಿಸಲಾಗಿದೆ.

ಪ್ರಸ್ತುತ ದೇಶೀಯ ಗ್ರಾಹಕರ ಖರೀದಿಗೆ ದೊರೆಯುತ್ತಿರುವ ಪೆಟ್ರೋಲ್ ಚಾಲಿತ ನೂತನ ಸುಜುಕಿ ಆಕ್ಸೆಸ್ 125 (Suzuki Access 125) ಸ್ಕೂಟರ್, ಕನಿಷ್ಠ ರೂ. 80,700 ಹಾಗೂ ಗರಿಷ್ಠ ರೂ.91,300 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 124 ಸಿಸಿ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 45 ಕೆಎಂಪಿಎಲ್‌ವರೆಗೆ ಕೊಡುತ್ತದೆ.

Honda Activa Ev Rival Suzuki Access Electric Scooter Expected Launch In 2025

ಈ ಸುಜುಕಿ ಆಕ್ಸೆಸ್ 125 ಸ್ಕೂಟರ್ ಸೆಮಿ-ಡಿಜಿಟಲ್ ಇನ್ಫಾರ್ಮಶನ್ ಪ್ಯಾನೆಲ್ & ಸುಜುಕಿ ರೈಡ್ ಕನೆಕ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 5-ಲೀಟರ್‌ನ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಒಳಗೊಂಡಿದೆ. ಸವಾರರ ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಮೆಟಾಲಿಕ್ ಮ್ಯಾಟ್ ಪ್ಲಾಟಿನಂ ಸಿಲ್ವರ್ ಮತ್ತು ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ.

ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಪ್ರಬಲವಾದ ಎದುರಾಳಿಯಾಗಲಿದೆ ಎನ್ನಲಾದ ಹೋಂಡಾ ಆಕ್ಟಿವಾ ಇವಿಯನ್ನು (Honda Activa EV) ಇದೇ ನವೆಂಬರ್ 27ರಂದು ಅನಾವರಣಗೊಳಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಈಗಾಗಲೇ, ಇದರ ವೈಶಿಷ್ಟ್ಯಗಳನ್ನು ತಿಳಿಸಲು ಟೀಸರ್‌ಗಳನ್ನು ಬಿಡುಗಡೆಗೊಳಿಸಲಾಗಿದೆ. ನೂತನ ಆಕ್ಟಿವಾ ಇವಿ ರೂ.1 ಲಕ್ಷದಿಂದ ರೂ.1.20 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಖರೀದಿಗೆ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ.

ಮುಂಬರಲಿರುವ ಹೊಚ್ಚ ಹೊಸ ಹೋಂಡಾ ಆಕ್ಟಿವಾ ಇವಿ 1.3 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಡುಯಲ್-ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿರಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 100 ಕಿಲೋಮೀಟರ್‌ಗೂ ಅಧಿಕ ರೇಂಜ್ (ಮೈಲೇಜ್) ನೀಡಬಹುದು ಎಂದು ಹೇಳಲಾಗಿದೆ. ಪ್ರಯಾಣಿಯರ ರಕ್ಷಣೆಗಾಗಿ ಡಿಸ್ಕ್ & ಡ್ರಮ್ ಬ್ರೇಕ್‌ಗಳನ್ನು ಪಡೆದಿರುವ ನೀರಿಕ್ಷೆಯಿದೆ.

ಇನ್ನು, ಸುಜುಕಿ ಆಕ್ಸೆಸ್ 125 ಸ್ಕೂಟರ್ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಇದರ ಎಲೆಕ್ಟ್ರಿಕ್ ರೂಪದ ಮಾದರಿ (ಮಾಡೆಲ್) ಮೇಲೂ ಗ್ರಾಹಕರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನೂತನ ಇ-ಸ್ಕೂಟರ್ ಬಿಡುಗಡೆಯಾದ ಮೇಲೆ ಮುಂಬರಲಿರುವ ಹೋಂಡಾ ಆಕ್ಟಿವಾ ಇವಿಗೆ ನೇರ ಎದುರಾಳಿಯಾಗುವುದರಲ್ಲಿ ಎರಡು ಮಾತಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, November 18, 2024, 14:28 [IST]
English summary
Honda activa ev rival suzuki access electric scooter expected launch in 2025 details
Read more on suzuki motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+