Honda: ಭಾರತದಲ್ಲಿ ಹೋಂಡಾ ಹೊಸ ಮೈಲಿಗಲ್ಲು: ಎಷ್ಟು ಮಂದಿಯ ಬಳಿ ಆಕ್ಟೀವಾ, ಶೈನ್ ಇದೆ ಹೇಳಿ?
ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಹೋಂಡಾ (Honda) ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಕಂಪನಿಯು ಭಾರತದಲ್ಲಿ 6 ಕೋಟಿ ದೇಶೀಯ ಮಾರಾಟದ ಐತಿಹಾಸಿಕ ಸಾಧನೆಯನ್ನು ಸಾಧಿಸಿದೆ. ಈ ಸಾಧನೆಯು ಹೋಂಡಾದ ಭಾರತೀಯ ಮಾರುಕಟ್ಟೆಗೆ ಅಚಲವಾದ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಹೋಂಡಾ ತನ್ನ ಮೊದಲ ದ್ವಿಚಕ್ರ ವಾಹನವಾದ ಆಕ್ಟಿವಾದೊಂದಿಗೆ 2001 ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಆ ಬಳಿಕ ಉಳಿದದ್ದು ಇತಿಹಾಸ. ಇಷ್ಟು ವರ್ಷಗಳಲ್ಲಿ, ಕಂಪನಿಯು ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದೆ. ಭಾರತದ ಅತ್ಯಂತ ಪ್ರೀತಿಯ ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಗುರ್ತಿಸಿಕೊಂಡಿದೆ. ಭಾರತೀಯ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುತ್ತಾ ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ಸತತವಾಗಿ ಬೆಳೆಸಿಕೊಂಡಿದೆ.

ಜೂನ್ 2001 ರಲ್ಲಿ ತನ್ನ ಪ್ರಯಾಣ ಪ್ರಾರಂಭಿಸಿ, ಹೋಂಡಾ ಎರಡು ದಶಕಗಳಿಂದ ಭಾರತೀಯ ಗ್ರಾಹಕರನ್ನು ಸಂತೋಷಪಡಿಸುತ್ತಿದೆ. ಕಂಪನಿಯು ಮೊದಲ 1 ಕೋಟಿ ಗ್ರಾಹಕರನ್ನು ಪಡೆಯಲು ಹನ್ನೊಂದು ವರ್ಷಗಳನ್ನು ತೆಗೆದುಕೊಂಡರೆ, ಈ ವೇಗವು ಮೂರು ಪಟ್ಟು ಹೆಚ್ಚಾಗಿ ಕೇಲವ ಮೂರು ವರ್ಷಗಳಲ್ಲಿ ಅದು 2 ಕೋಟಿ ಮಾರ್ಕ್ ಅನ್ನು ಮುಟ್ಟಿತು. ಬಳಿಕ 3 ಕೋಟಿ ಮೈಲಿಗಲ್ಲನ್ನು ಏಪ್ರಿಲ್ 2017 ರಲ್ಲಿ ಸಾಧಿಸಲಾಯಿತು.
ಪ್ರಾರಂಭದಿಂದ ಸುಮಾರು 16 ವರ್ಷಗಳಿಗೆ ಮೂರು ಕೋಟಿ ಗ್ರಾಹಕರನ್ನು ಸಂಪಾದಿಸಿದ ಹೋಂಡಾಗೆ ಉಳಿದ 3 ಕೋಟಿ ಗ್ರಾಹಕರನ್ನು ಸೆಳೆಯಲು ಹೆಚ್ಚಿನ ಸಮಯ ಹಿಡಿಯಲಿಲ್ಲ. ಮುಂದಿನ 3 ಕೋಟಿ ಗ್ರಾಹಕರು ಕೇವಲ ಏಳು ವರ್ಷಗಳಲ್ಲಿ ಹೋಂಡಾ ಕುಟುಂಬವನ್ನು ಸೇರಿಕೊಂಡಿದ್ದಾರೆ. ಈ ಮೂಲಕ ಮಾರ್ಚ್ 2024 ರಲ್ಲಿ 6 ಕೋಟಿ ದೇಶೀಯ ಮಾರಾಟದ ಮೈಲಿಗಲ್ಲನ್ನು ತಲುಪಿ ಹೊಸ ಮೈಲಿಗಲ್ಲು ಸಾಧಿಸಿದೆ.

ಈ ಮೈಲಿಗಲ್ಲು ಸಾಧನೆಗೆ ಪ್ರಮುಖವಾದದ್ದು ಹೋಂಡಾದ ಐಕಾನಿಕ್ ಕೊಡುಗೆಗಳಾದ 'ಆಕ್ಟಿವಾ' - ಭಾರತದ ಅತ್ಯಂತ ಪ್ರೀತಿಪಾತ್ರ ಕುಟುಂಬ ಸ್ಕೂಟರ್ ಮತ್ತು ಶೈನ್ ಮೋಟಾರ್‌ಸೈಕಲ್. ಇವುಗಳ ವಿಶ್ವಾಸಾರ್ಹತೆ, ಕಾರ್ಯಕ್ಷಮತೆ ಮತ್ತು ಸುಧಾರಿತ ವೈಶಿಷ್ಟ್ಯಗಳಿಂದ ವ್ಯಾಪಕ ಮೆಚ್ಚುಗೆ ಪಡೆದಿವೆ. ಆಕ್ಟಿವಾ ಮತ್ತು ಶೈನ್ ಎರಡೂ ಭಾರತೀಯ ಗ್ರಾಹಕರ ಉನ್ನತ ಆಯ್ಕೆಗಳಾಗಿ ಹೊರಹೊಮ್ಮಿವೆ.
ಹೋಂಡಾ MD, ಅಧ್ಯಕ್ಷ ಮತ್ತು CEO ಸುತ್ಸುಮು ಒಟಾನಿ ಮಾತನಾಡಿ, ನಾವು 6 ಕೋಟಿ ಸಂತೋಷದ ಗ್ರಾಹಕರನ್ನು ಹೊಂದಿದ್ದೇವೆ. ಈ ಮಾರಾಟದ ಮೈಲಿಗಲ್ಲನ್ನು ಸಾಧಿಸಿರುವುದು ಭಾರತೀಯ ಗ್ರಾಹಕರು ಹೋಂಡಾ ಬ್ರ್ಯಾಂಡ್‌ನಲ್ಲಿ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಈ ಸಾಧನೆಯ ಬಗ್ಗೆ ನಾವು ಅಪಾರವಾಗಿ ಹೆಮ್ಮೆಪಡುತ್ತೇವೆ. ಭಾರತೀಯ ದ್ವಿಚಕ್ರ ವಾಹನ ಉದ್ಯಮದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಧನಾತ್ಮಕವಾಗಿ ಕೊಡುಗೆ ನೀಡಲು ನಾವು ಸಮರ್ಪಿತರಾಗಿದ್ದೇವೆ ಎಂದರು.

ಹೋಂಡಾ ಮಾರಾಟ ಮತ್ತು ಮಾರುಕಟ್ಟೆಯ ನಿರ್ದೇಶಕ ಯೋಗೇಶ್ ಮಾಥುರ್ ಮಾತನಾಡಿ, 6 ಕೋಟಿ ದೇಶೀಯ ಮಾರಾಟದ ಅದ್ಭುತ ಮೈಲಿಗಲ್ಲನ್ನು ಸಾಧಿಸಿದೆ ಎಂದು ಘೋಷಿಸಲು ನಾವು ರೋಮಾಂಚನಗೊಂಡಿದ್ದೇವೆ. ಈ ಸಾಧನೆಯು ಭಾರತೀಯ ಗ್ರಾಹಕರ ಹೃದಯವನ್ನು ಅನುರಣಿಸುವ ಉನ್ನತ ದರ್ಜೆಯ ಉತ್ಪನ್ನಗಳನ್ನು ತಲುಪಿಸುವ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ. ಈ ಅದ್ಭುತ ಪ್ರಯಾಣದಲ್ಲಿ ಎಲ್ಲಾ ನಿಷ್ಠಾವಂತ ಗ್ರಾಹಕರು, ಪಾಲುದಾರರು ಮತ್ತು ಮಧ್ಯಸ್ಥಗಾರರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications