ಹೊಸ ಜಾವಾ 350 ಬೈಕ್ ಬಿಡುಗಡೆ: ಎದುರಾಳಿ ರಾಯಲ್ ಎನ್‌ಫೀಲ್ಡ್‌ಗೆ ಆತಂಕ ಶುರು

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ ಹೊಸ ಜಾವಾ 350 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಜಾವಾ 350 (Jawa 350) ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 2.14 ಲಕ್ಷವಾಗಿದೆ.

ಹೊಸ ಜಾವಾ 350 ಬೈಕ್ ಪ್ರಸ್ತುತ ಜಾವಾ ಸ್ಟ್ಯಾಂಡರ್ಡ್‌ನ ಹೆಚ್ಚು ನವೀಕರಿಸಿದ ಆವೃತ್ತಿಯಾಗಿದೆ. ಈ ಹೊಸ ಜಾವಾ 350 ಬೈಕ್ ಪವರ್‌ಟ್ರೇನ್, ಚಾಸಿಸ್, ಅಗಲವಾದ ಟೈರ್‌ಗಳು, ಉದ್ದವಾದ ವೀಲ್‌ಬೇಸ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ನವೀಕರಣಗಳನ್ನು ಪಡೆಯುತ್ತದೆ. ಹೊಸ ಜಾವಾ 350 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 , ಹೋಂಡಾ CB350 , ಮತ್ತು ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಗಳಲ್ಲಿ ಲಭ್ಯವಿದೆ.

New Jawa 350

ಹೊಸ ಜಾವಾ 350 ಬೈಕಿನ ಪಡೆದ ದೊಡ್ಡ ಬದಲಾವಣೆಯೆಂದರೆ, 294cc ಎಂಜಿನ್ ಅನ್ನು ದೊಡ್ಡದಾದ 334cc, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಮಿಲ್‌ನೊಂದಿಗೆ ಬದಲಾಯಿಸಲಾಗಿದೆ. ಈ ಎಂಜಿನ್ 22 bhp ಮತ್ತು 28.2 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನ್ನು ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸಂಯೋಜಿಸಲ್ಪಟ್ಟಿದೆ.

ಇನ್ನು ಬೈಕ್‌ನ ಆಯಾಮಗಳೂ ಬದಲಾಗಿವೆ. ಹೊಸ ಜಾವಾ 350 ಬೈಕ್ ಗ್ರೌಂಡ್ ಕ್ಲಿಯರೆನ್ಸ್ 178 ಎಂಎಂ ನಲ್ಲಿ ಗಮನಾರ್ಹವಾಗಿ ಹೆಚ್ಚಿದೆ ಮತ್ತು 802 ಎಂಎಂ ನಲ್ಲಿ ಸೀಟ್ ಎತ್ತರವನ್ನು ಹೊಂದಿದ್ದು, ವೀಲ್‌ಬೇಸ್ ಕೂಡ 1,449 ಎಂಎಂ ಉದ್ದವಾಗಿದೆ. ಇನ್ನು ಇದರ ಹಿಂದಿನ ಗ್ರೌಂಡ್ ಕ್ಲಿಯರೆನ್ಸ್, ಸೀಟ್ ಎತ್ತರ ಮತ್ತು ವೀಲ್‌ಬೇಸ್ ಕ್ರಮವಾಗಿ 165mm, 765mm ಮತ್ತು 1,368mm ಆಗಿತ್ತು.

New Jawa 350

ಇದಲ್ಲದೆ, ಬೈಕ್‌ನ ಕರ್ಬ್ ತೂಕವು 182 ಕೆಜಿಯಿಂದ 194 ಕೆಜಿಗೆ ಏರಿದೆ. ಜಾವಾ 350 ಅದರ ಮುಖ್ಯ ಸ್ಪರ್ಧೆಯಾದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಗಿಂತ ಕೇವಲ 1 ಕಿಜಿ ತೂಕವನ್ನು ಹೊಂದಿದೆ. ಇದರ 13.5-ಲೀಟರ್ ಇಂಧನ ಟ್ಯಾಂಕ್ ಸಂಪೂರ್ಣವಾಗಿ ಫ್ರೇಮ್ ಗಳನ್ನು ಹೊಂದಿದೆ ಈ ಎಲ್ಲಾ ಬದಲಾವಣೆಗಳು ಹೊಸ ಡ್ಯುಯಲ್-ಕ್ರೇಡಲ್ ಚಾಸಿಸ್‌ನ ಸೇರ್ಪಡೆಯಿಂದಾಗಿದೆ.

ಇನ್ನು ಕಂಪನಿಯು ವಿಶಾಲವಾದ ಟೈರ್‌ಗಳನ್ನು ಸಹ ನೀಡಲಾಗಿದ್ದು, ಮುಂಭಾಗದಲ್ಲಿ 100/90 ವಿಭಾಗ ಮತ್ತು ಹಿಂಭಾಗದಲ್ಲಿ 130/80 ವಿಭಾಗವು 18-17-ಇಂಚು ಬದಲಾಗದೆ ಉಳಿದಿದೆ. ಮಲ್ಟಿ-ಸ್ಪೋಕ್ ವ್ಹೀಲ್ ಗಳ ಜೊತೆ ಟೈರ್‌ಗಳು ಚಂಕಿಯರ್ ಆಗಿವೆ. ಹೊಸ ಜಾವಾ 350 ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸ್ವಲ್ಪ ವಿಭಿನ್ನವಾಗಿದೆ.

New Jawa 350

ಇನ್ನು ಈ ಒಟ್ಟಾರೆ ನಿಲುವು ಮತ್ತು ಸಿಲೂಯೆಟ್ ಬಹುತೇಕ ಒಂದೇ ಆಗಿರುವಾಗ, ಸೂಕ್ಷ್ಮ ಬದಲಾವಣೆಗಳು ಈಗ ದಟ್ಟವಾಗಿ ಕಾಣುವಂತೆ ಮಾಡುತ್ತದೆ. ಈ ಬೈಕ್ ಟೈರ್‌ಗಳು ದಪ್ಪವಾಗಿರುತ್ತದೆ, ಎರಡೂ ಫೆಂಡರ್‌ಗಳು ಹೆಚ್ಚು ಆಕರ್ಷಕವಾಗಿದೆ. ಕಂಪನಿಯು ಮರೂನ್ ಮತ್ತು ಬ್ಲ್ಯಾಕ್ ಟ್ರಿಮ್‌ಗಳನ್ನು ಉಳಿಸಿಕೊಂಡು ಹೊಸ ಮಿಸ್ಟಿಕ್ ಆರೆಂಜ್ ಪೇಂಟ್ ಸ್ಕೀಮ್ ಅನ್ನು ಪರಿಚಯಿಸಿದೆ.

ಹೊಸ ಜಾವಾ 350 ಬೈಕಿನ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಇದರ 334cc ಮಿಲ್ ಟ್ರೂ-ಟು-ಫಾರ್ಮ್ ಡಬಲ್ ಕ್ರೇಡಲ್ ಫ್ರೇಮ್‌ನೊಳಗೆ ಮುಂಭಾಗದಲ್ಲಿ 35mm ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಪ್ರಿಲೋಡ್-ಅಡ್ಜಸ್ಟಬಲ್ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ. ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 280mm ಡಿಸ್ಕ್ ಮತ್ತು ಹಿಂಭಾಗದಲ್ಲಿ 240mm ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ, ಡ್ಯುಯಲ್-ಚಾನೆಲ್ ABS ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

New Jawa 350

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, January 15, 2024, 14:44 [IST]
English summary
New jawa 350 launched in india price engine features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+