ಸ್ಕೂಟರ್ ಖರೀದಿಸಬೇಕೆ? ವಿಶೇಷ ಹಬ್ಬದ ಬಣ್ಣಗಳಲ್ಲಿ 2 ಸ್ಕೂಟರ್‌ಗಳು ಬಿಡುಗಡೆ

ಸುಜುಕಿ ಮೋಟಾರ್ ತನ್ನ ಆಕ್ಸೆಸ್ 125 ಮತ್ತು ಸುಜುಕಿ ಬರ್ಗ್ ಮ್ಯಾನ್ ಸ್ಟ್ರೀಟ್ ಸ್ಕೂಟರ್‌ಗಳನ್ನು ವಿಶೇಷ ಹಬ್ಬದ ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ಹೊಸ ಬಣ್ಣಗಳ ಪರಿಚಯದೊಂದಿಗೆ ಬೆಲೆ ತುಸು ಹೆಚ್ಚಾಗಿದ್ದು, ಸುಜುಕಿ ಆಕ್ಸೆಸ್ 125 ಬೆಲೆಯು ರೂ.90,500 (ಎಕ್ಸ್‌ ಶೋರೂಂ) ಇದ್ದರೇ ಸುಜುಕಿ ಬರ್ಗ್ ಮ್ಯಾನ್ ಸ್ಟ್ರೀಟ್ ಬೈಕ್ ಬೆಲೆ ರೂ.98,299 (ಎಕ್ಸ್‌ ಶೋರೂಂ) ಗಳಾಗಿದೆ. ಸದ್ಯ ಭಾರತದಾದ್ಯಂತ ಎಲ್ಲಾ ಸುಜುಕಿ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿವೆ. ಆಕ್ಸೆಸ್ 125 ಗಾಗಿ ಮೆಟಾಲಿಕ್ ಸೊನೊಮಾ ರೆಡ್ / ಪರ್ಲ್ ಮಿರಾಜ್ ವೈಟ್ ಮತ್ತು ಬರ್ಗ್ ಮ್ಯಾನ್ ಸ್ಟ್ರೀಟ್ ಗಾಗಿ ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೆ ಡ್ಯುಯಲ್-ಟೋನ್‌ನಲ್ಲಿ ನೀಡಲಾಗಿದೆ.

ಸುಜುಕಿ ಬರ್ಗ್ ಮ್ಯಾನ್ ಸ್ಟ್ರೀಟ್: ಈ ಸ್ಕೂಟರ್ 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್ 124 ಸಿಸಿ ಬಿಎಸ್ 6 ಒಬಿಡಿ 2 ಕಾಂಪ್ಲೈಂಟ್ ಎಂಜಿನ್ ಹೊಂದಿದ್ದು, 6,500 ಆರ್‌ಪಿಎಂನಲ್ಲಿ 8.7 ಬಿಹೆಚ್‌ಪಿ ಮತ್ತು 5,500 ಆರ್‌ಪಿಎಂನಲ್ಲಿ 10 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಎಸ್ಇಪಿ ತಂತ್ರಜ್ಞಾನ ಮತ್ತು ಸುಧಾರಿತ ಇಂಧನ ಇಂಜೆಕ್ಷನ್ ತಂತ್ರಜ್ಞಾನವು ಉತ್ತಮ ಪವರ್, ಪರ್ಫಾಮೆನ್ಸ್ ಮತ್ತು ಮೈಲೇಜ್ ನೀಡುತ್ತದೆ.

suzuki-access-125-and-suzuki-burgman-street-launched-with-2-new-colors

ಸುಜುಕಿ ಬರ್ಗ್ ಮ್ಯಾನ್ ಸ್ಟ್ರೀಟ್ ಎಲ್ಇಡಿ ಹೆಡ್ ಲೈಟ್, ಪೊಸಿಷನ್ ಲ್ಯಾಂಪ್, ಟೈಲ್ ಲ್ಯಾಂಪ್, ಮೇಲ್ಮುಖವಾಗಿ ವಿನ್ಯಾಸಗೊಳಿಸಲಾದ ಮಫ್ಲರ್ ಮತ್ತು ಬಾಡಿ-ಮೌಂಟೆಡ್ ವಿಂಡ್ ಸ್ಕ್ರೀನ್ ಅನ್ನು ಹೊಂದಿದೆ. ಆಕ್ಸೆಸ್ 125 ನಂತೆಯೇ, ಇದು ಸುಜುಕಿ ರೈಡ್ ಕನೆಕ್ಟ್ ನೊಂದಿಗೆ ಬ್ಲೂಟೂತ್-ಸಕ್ರಿಯಗೊಳಿಸಿದ ಮಲ್ಟಿ-ಫಂಕ್ಷನ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಉದ್ದವಾದ ಡ್ಯುಯಲ್-ಟೋನ್ ಸೀಟ್ ಮತ್ತು ಮುಂಭಾಗದ ಫೋರ್ಕ್ ಗಾಗಿ ಟೆಲಿಸ್ಕೋಪಿಕ್ ಸಸ್ಪೆಂಷನ್ ಸೆಟಪ್ ಅನ್ನು ಒಳಗೊಂಡಿದೆ. ಕಂಬೈನ್ಡ್ ಬ್ರೇಕ್ ಸಿಸ್ಟಮ್‌ನೊಂದಿಗೆ ಮುಂಭಾಗದ ಡಿಸ್ಕ್ ಬ್ರೇಕ್ ಅನ್ನು ಸಹ ಹೊಂದಿದೆ. ದೊಡ್ಡ 21.5-ಲೀಟರ್ ಅಂಡರ್-ಸೀಟ್ ಸ್ಟೋರೇಜ್, ಯುಎಸ್‌ಬಿ ಸಾಕೆಟ್ ಹೊಂದಿರುವ ಫ್ರಂಟ್ ಗ್ಲೋವ್ ಬಾಕ್ಸ್, ಫ್ರಂಟ್ ಪಾಕೆಟ್ ಮತ್ತು ಒನ್-ಪುಶ್ ಸೆಂಟ್ರಲ್ ಲಾಕಿಂಗ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

suzuki-access-125-and-suzuki-burgman-street-launched-with-2-new-colors

ಸುಜುಕಿ ಆಕ್ಸೆಸ್ 125: ಸುಜುಕಿ ಆಕ್ಸೆಸ್ 125 ಸ್ಕೂಟರ್, ಕಂಪನಿಯ ಇಕೋ ಪರ್ಫಾರ್ಮೆನ್ಸ್ (ಎಸ್ಇಪಿ) ತಂತ್ರಜ್ಞಾನದೊಂದಿಗೆ ಆಲ್-ಅಲ್ಯೂಮಿನಿಯಂ 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್ 124 ಸಿಸಿ ಬಿಎಸ್ 6 ಒಬಿಡಿ 2 ಕಾಂಪ್ಲೈಂಟ್ ಎಂಜಿನ್‌ ಹೊಂದಿದೆ. ಸುಗಮ ವಿದ್ಯುತ್ ವಿತರಣೆ, ವರ್ಧಿತ ಮೈಲೇಜ್ ಮತ್ತು ಕಡಿಮೆ ಕಾರ್ಬನ್ ಹೊರಸೂಸುವಿಕೆಯೊಂದಿಗೆ ಉತ್ತಮ ಮಾರಾಟ ಕಾಣುತ್ತಿದೆ.

ಸುಜುಕಿ ಆಕ್ಸೆಸ್ 125 ಎಂಜಿನ್ ಬಗ್ಗೆ ಹೇಳುವುದಾದ್ರೆ 6,750 ಆರ್‌ಪಿಎಂನಲ್ಲಿ 8.7 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 10 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸುಜುಕಿ ರೈಡ್ ಕನೆಕ್ಟ್ ನೊಂದಿಗೆ ಬ್ಲೂಟೂತ್-ಸಕ್ರಿಯಗೊಳಿಸಿದ ಮಲ್ಟಿ-ಫಂಕ್ಷನ್ ಡಿಜಿಟಲ್ ಕನ್ಸೋಲ್ ಅನ್ನು ಹೊಂದಿದೆ, ಇದು ಐಒಎಸ್ ಮತ್ತು ಆಂಡ್ರಾಯ್ಡ್ ಎರಡಕ್ಕೂ ಹೊಂದಿಕೆಯಾಗುತ್ತದೆ.

ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಇಟಿಎ ನವೀಕರಣಗಳು, ಕಾಲ್ ಮತ್ತು ಎಸ್ಎಂಎಸ್ ಅಲರ್ಟ್, ಕೊನೆಯ ಪಾರ್ಕ್ ಮಾಡಿದ ಸ್ಥಳವನ್ನು ಪ್ರದರ್ಶಿಸುತ್ತದೆ. ಸುಜುಕಿ ಈಸಿ ಸ್ಟಾರ್ಟ್ ಸಿಸ್ಟಮ್ ಮತ್ತು ಎಲ್ಇಡಿ ಪೊಸಿಷನ್ ಲೈಟ್ ನೊಂದಿಗೆ ಇಂಟಿಗ್ರೇಟೆಡ್ ಎಂಜಿನ್ ಸ್ಟಾರ್ಟ್ ಮತ್ತು ಸ್ಟಾಪ್ ಸ್ವಿಚ್, ಆಂಟಿ-ಥೆಫ್ಟ್ ಲಾಕಿಂಗ್‌ನೊಂದಿಗೆ ಹೆಚ್ಚುವರಿ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಸೈಡ್ ಸ್ಟ್ಯಾಂಡ್ ಇಂಟರ್ ಲಾಕ್ ಸ್ವಿಚ್ ಅನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, July 19, 2024, 11:52 [IST]
English summary
Suzuki access 125 and suzuki burgman street launched with 2 new colors
Read more on suzuki motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+