Suzuki: ಜನಪ್ರಿಯ ಸುಜುಕಿ ಆಕ್ಸೆಸ್ 125ಗೆ ಮನಸೋತ ಗ್ರಾಹಕರು.. 60 ಲಕ್ಷ ಸ್ಕೂಟರ್‌ಗಳ ಉತ್ಪಾದನೆ!
ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಹಲವು ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಳ್ಳುತ್ತಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಕಂಪನಿಯು ಜನಪ್ರಿಯ 'ಆಕ್ಸೆಸ್ 125' ಸ್ಕೂಟರ್ ತಯಾರಿಕೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಆ ಬಗ್ಗೆ ಒಲಿದೆ ಹೆಚ್ಚಿನ ಮಾಹಿತಿ.
ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ, 2006ರಲ್ಲಿ 'ಆಕ್ಸೆಸ್ 125' ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಅಂದಿನಿಂದಲೇ ಈ ಸ್ಕೂಟರ್‌ಗೆ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು. ಖರೀದಿದಾರರು ಸಹ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ಕಂಪನಿಯು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಕೂಟರ್‌ಗಳನ್ನು ಉತ್ಪಾದಿಸುತ್ತಿದೆ. ಪ್ರಸ್ತುತ 60 ಲಕ್ಷ ಯುನಿಟ್ ಆಕ್ಸೆಸ್ 125 ಸ್ಕೂಟರ್‌ಗಳನ್ನು ತಯಾರಿಸಿದ ಸಾಧನೆ ಮಾಡಿದೆ.

ಈ ಸುಜುಕಿ ಆಕ್ಸೆಸ್ 125 ಸ್ಕೂಟರ್‌ನ್ನು ಭಾರತದ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿಯೂ ಮಾರಾಟ ಮಾಡಲಾಗುತ್ತದೆ. ಕಳೆದ ತಿಂಗಳು (ನವೆಂಬರ್-2024) ಕೂಡ ಆಕ್ಸೆಸ್ 125 ಸ್ಕೂಟರ್ ಮಾಡೆಲ್‌ಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದು, ಬರೋಬ್ಬರಿ 54,118 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 52,512 ಯುನಿಟ್‌ಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ 3.06% ಪ್ರಗತಿಯಾಗಿದೆ.
ದೇಶೀಯ ಗ್ರಾಹಕರ ಖರೀದಿಗೆ ದೊರೆಯುವ ಹೊಚ್ಚ ಹೊಸ ಸುಜುಕಿ ಆಕ್ಸೆಸ್ 125 (Suzuki Access 125) ಸ್ಕೂಟರ್, ಕನಿಷ್ಠ ರೂ.84,281 ಹಾಗೂ ಗರಿಷ್ಠ ರೂ.95,381 ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ. ಮೆಟಾಲಿಕ್ ಮ್ಯಾಟ್ ಪ್ಲಾಟಿನಂ ಸಿಲ್ವರ್, ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ಮತ್ತು ಸಾಲಿಡ್ ಐಸ್ ಗ್ರೀನ್ ಒಳಗೊಂಡಂತೆ ಹಲವು ಆಕರ್ಷಕ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಈ ಸುಜುಕಿ ಆಕ್ಸೆಸ್ 125 ಸ್ಕೂಟರ್, 124 ಸಿಸಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 45 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಸೆಮಿ-ಡಿಜಿಟಲ್ ಇನ್ಫಾರ್ಮಶನ್ ಪ್ಯಾನೆಲ್ ಹಾಗೂ ಸುಜುಕಿ ರೈಡ್ ಕನೆಕ್ಟ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದು 103 ಕೆಜಿ ತೂಕವಿದ್ದು, 5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ.
ನೂತನ ಸುಜುಕಿ ಆಕ್ಸೆಸ್ 125 ಸ್ಕೂಟರ್ ಸವಾರರ ರಕ್ಷಣೆಗಾಗಿ ಡಿಸ್ಕ್ ಅಥವಾ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಸೆಟಪ್ ಅನ್ನು ಒಳಗೊಂಡಿದೆ. ಈ ಸುಜುಕಿ ಸ್ಕೂಟರ್‌ಗೆ ಹೋಂಡಾ ಆಕ್ಟಿವಾ 125 ಹಾಗೂ ಟಿವಿಎಸ್ ಜುಪಿಟರ್ 125 ಸ್ಕೂಟರ್‌ಗಳು ಪ್ರಬಲವಾದ ಎದುರಾಳಿಯಾಗಿವೆ.

ಇನ್ನು ನವದೆಹಲಿಯಲ್ಲಿ ಜನವರಿ 17ರಿಂದ ಆರಂಭವಾಗುವ 'ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ'ದಲ್ಲಿ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ, 'ಆಕ್ಸೆಸ್ 125' ಸ್ಕೂಟರ್‌ನ ಹೊಸ ಮಾಡೆಲ್‌ನ್ನು ಅನಾವರಣಗೊಳಿಸಲಿದೆ ಎಂದು ಹೇಳಲಾಗಿದೆ. ಇದು ಅತ್ಯಾಧುನಿಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದರೊಟ್ಟಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








