ಎಲೆಕ್ಟ್ರಿಕ್ ಆಕ್ಟೀವಾಗೆ ಪ್ರತಿಸ್ಪರ್ಧಿಯಾಗಿ ಬರಲಿದೆ ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್!

ಹೊಸ ಹೋಂಡಾ ಆಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಕುರಿತು ಮಾಹಿತಿ ಹೊರ ಬೀಳುತ್ತಿದ್ದಂತೆ, ನೇರ ಪ್ರತಿಸ್ಪರ್ಧಿಯಾಗಿ ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಲು ಸಜ್ಜಾಗಿಬಿಟ್ಟಿದೆ. ಈ ಸ್ಕೂಟರ್ ಬೆಲೆ, ವೈಶಿಷ್ಟ್ಯಗಳು ಹಾಗೂ ಬಿಡುಗಡೆ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಹೋಂಡಾ ತನ್ನ 22 ವರ್ಷಗಳ ದೀರ್ಘಾವಧಿಯಲ್ಲಿ ಭಾರತೀಯ ಸ್ಕೂಟರ್ ಮಾರುಕಟ್ಟೆಯನ್ನು ಸಂಪೂರ್ಣವಾಗಿ ವಶಪಡಿಸಿಕೊಂಡು, ಇದೀಗ ತನ್ನ ಜನಪ್ರಿಯ ಆಕ್ಟಿವಾ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ರೆಡಿಯಾಗಿದೆ. ಇದು ಎಲೆಕ್ಟ್ರಿಕ್ ಆಕ್ಸಿಸ್ ಸ್ಕೂಟರ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ. ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ (Honda Activa Electric) ಸ್ಕೂಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ 2025ರ ಆರಂಭದಲ್ಲಿ ಬಿಡುಗಡೆಯಾಗಲಿದೆ. ಹೊಸ ಇವಿ ಆಕ್ಟೀವಾ ಕರ್ನಾಟಕ ಮೂಲದ ಘಟಕದಲ್ಲಿ ಈ ವರ್ಷದ ಡಿಸಂಬರ್ ತಿಂಗಳಿನಲ್ಲಿ ಉತ್ಪಾದನೆಯಾಗಲಿದೆ. ಸದ್ಯಕ್ಕೆ ಈ ಮಾದರಿಯು K4BA ಎಂಬ ಕೋಡ್ ನೇಮ್ ಅನ್ನು ಹೊಂದಿದೆ.

suzuki-access-electric-scooter-coming-as-a-competitor-to-the-electric-activa

ಜಪಾನಿನ ದ್ವಿಚಕ್ರ ವಾಹನ ತಯಾರಕ ಹೋಂಡಾ, ಈಗಾಗಲೇ ಸ್ಥಿರ ಬ್ಯಾಟರಿ, ಮೋಟಾರ್‌ಗಳು, ನಿಯಂತ್ರಕಗಳು, ಚಾರ್ಜರ್‌ಗಳು ಸೇರಿದಂತೆ ಇವಿ ತಂತ್ರಜ್ಞಾನಕ್ಕಾಗಿ ಪೇಟೆಂಟ್ ಅನ್ನು ಸಲ್ಲಿಸಿದೆ. ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಫ್ಲೋರ್‌ಬೋರ್ಡ್‌ನ ಅಡಿಯಲ್ಲಿ ಸ್ಥಿರ ಬ್ಯಾಟರಿ ಮತ್ತು ಹಿಂಭಾಗದಲ್ಲಿ ಹಬ್ ಮೋಟರ್ ಅನ್ನು ಹೊಂದಿರುತ್ತದೆ ಎಂದು ಪೇಟೆಂಟ್‌ಗಳು ಸುಳಿವು ನೀಡಿವೆ.

ಹೊಸ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಎಥರ್ 450X, ಓಲಾ ಮತ್ತು ಟಿವಿಎಸ್ iQube ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ತೀವ್ರ ಪೈಪೋಟಿ ನೀಡಲಿವೆ. ಹೋಂಡಾ ಆಕ್ಟಿವಾ ಇವಿ, ಇ ಎಂಬ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದನ್ನು ವಿವಿಧ ಬ್ಯಾಟರಿ ಆರ್ಕಿಟೆಕ್ಚರ್ ಮತ್ತು ಇನ್‌ಸ್ಟಾಲೇಶನ್‌ನೊಂದಿಗೆ ಮುಂಬರುವ ತನ್ನ ಅನೇಕ ಎಲೆಕ್ಟ್ರಿಕ್ ಮಾದರಿಗಳಿಗೆ ಬಳಸಲಾಗುತ್ತದೆ.

suzuki-access-electric-scooter-coming-as-a-competitor-to-the-electric-activa

ಇನ್ನು ಸುಜುಕಿ ಕಂಪನಿಯು ಈ ವರ್ಷ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನುಬಿಡುಗಡೆ ಮಾಡಲು ನೋಡುತ್ತಿದೆ. ಇತ್ತೀಚೆಗಷ್ಟೆ ಸುಜುಕಿ ಇ-ಬರ್ಗ್‌ಮ್ಯಾನ್‌ ಅನ್ನು ಅನಾವರಣಗೊಳಿಸಿತ್ತು. ಇದೀಗ ಕಂಪನಿಯು ತನ್ನ ಅತಿ ಹೆಚ್ಚು ಮಾರಾಟವಾಗುವ ಆಕ್ಸೆಸ್ ಸ್ಕೂಟರ್‌ನ ಎಲೆಕ್ಟ್ರಿಕ್ (Suzuki Access EV) ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇ-ಆಕ್ಸೆಸ್ ಎಂದು ಕರೆಯುವ ಸಾಧ್ಯತೆಯಿದೆ. ವಿನ್ಯಾಸದ ವಿಷಯದಲ್ಲಿ, ಸುಜುಕಿ ಇ-ಬರ್ಗ್ ಮ್ಯಾನ್‌ನಂತೆಯೇ ಅದೇ ಡಿಸೈನ್ ಅನ್ನು ಇ-ಆಕ್ಸೆಸ್ ಕೂಡ ಪಡೆಯಲಿದೆ. ಒಟ್ಟಾರೆ ಸ್ಟೈಲಿಂಗ್ ಮತ್ತು ಬಾಡಿ ಕಾಂಪೊನೆಂಟ್‌ಗಳು ಇಂಧನ ಚಾಲಿತ ಸ್ಕೂಟರ್‌ಗಳನ್ನು ಹೋಲುತ್ತವೆ ಎಂದು ಮೂಲಗಳು ಹೇಳಿವೆ.

ಮುಖ್ಯವಾಗಿ ಈ ಸ್ಕೂಟರ್‌ಗಳು ಅವುಗಳ ಪರಿಸರ ಸ್ನೇಹಿ ಸ್ವಭಾವವನ್ನು ಪ್ರದರ್ಶಿಸಲು 'ನೀಲಿ' ಬಣ್ಣವನ್ನು ಹೊಂದಿರುತ್ತವೆ. ಮೂಲಗಳ ಪ್ರಕಾರ, ಸುಜುಕಿ ತಮ್ಮ ಮೊದಲ ಇವಿಯನ್ನು ಈಗಾಗಲೇ ಸಿದ್ಧಪಡಿಸಿದೆ, ಇದನ್ನು ಜಪಾನ್‌ನ ಎಂಜಿನಿಯರ್‌ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಕಂಪನಿಯು ಕಳೆದ ಎರಡು ವರ್ಷಗಳಿಂದ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಎಲೆಕ್ಟ್ರಿಕ್ ಅನ್ನು ಪರೀಕ್ಷಿಸುತ್ತಿದ್ದರೆ, ಇತ್ತ ಎಲೆಕ್ಟ್ರಿಕ್ ಆಕ್ಸೆಸ್ ಭಾರತದಲ್ಲಿ ಮೊದಲು ಪಾದಾರ್ಪಣೆ ಮಾಡಲಿದೆ.

suzuki-access-electric-scooter-coming-as-a-competitor-to-the-electric-activa

ಕಂಪನಿಯು ವೆಚ್ಚವನ್ನು ನಿಯಂತ್ರಣದಲ್ಲಿಡಲು ಸುಜುಕಿ ಈ ಸ್ಕೂಟರ್‌ಗೆ ಹೆಚ್ಚಿನ ಅಲಂಕಾರಿಕ ಆಕ್ಸೆಸೊರಿಗಳನ್ನು ನೀಡುವುದಿಲ್ಲ. ಜೊತೆಗೆ ಹೋಂಡಾ ಮತ್ತು ಯಮಹಾದಂತಹ ಪ್ರತಿಸ್ಪರ್ಧಿ ಉತ್ಪನ್ನಗಳ ಆಧಾರದ ಮೇಲೆ ಸ್ಪರ್ಧಾತ್ಮಕ ಬೆಲೆಗೆ ಬಿಡುಗಡೆ ಮಾಡಲಿದೆ. ಪ್ರಸ್ತುತ, ಮೋಟಾರು ಸಾಮರ್ಥ್ಯ, ಬ್ಯಾಟರಿ ಮತ್ತು ರೈಡಿಂಗ್ ರೇಂಜ್ ಬಗ್ಗೆ ಯಾವುದೇ ವಿವರಗಳಿಲ್ಲ, ಆದರೆ ಇದು 125 ಸಿಸಿ ಸ್ಕೂಟರ್ ಪರ್ಫಾಮೆನ್ಸ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, April 29, 2024, 8:30 [IST]
English summary
Suzuki access electric scooter coming as a competitor to the electric activa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+