ಸ್ಕೂಟರ್ ಖರೀದಿಸುವ ಪ್ಲಾನ್ ಇದೆಯೇ? ಸ್ವಲ್ಪ ಕಾಯಿರಿ 5 ಬೆಸ್ಟ್‌ ಸ್ಕೂಟರ್‌ಗಳು ಬರುತ್ತಿವೆ

ಬಜಾಜ್, ಹೀರೋ, ಟಿವಿಎಸ್ ಮತ್ತು ಹೋಂಡಾ ದ್ವಿಚಕ್ರ ವಾಹನ ತಯಾರಕರು ಸ್ಕೂಟರ್ ವೀಭಾಗದಲ್ಲಿ ಹೊಸ ಸ್ಕೂಟರ್‌ಗಳನ್ನು ಪರಿಚಯಿಸಲು ಸಜ್ಜಾಗಿದ್ದಾರೆ. ಸಾಮಾನ್ಯ ಇಂಧನ ಚಾಲಿತ ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಕಷ್ಟು ಕ್ರಮವನ್ನು ಕಾಣಲಿವೆ. ಯಾವೆಲ್ಲಾ ಸ್ಕೂಟರ್‌ಗಳು ಬರಲಿವೆ, ಅವುಗಳ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಹೀರೋ ಕ್ಸೂಮ್ 125R ಮತ್ತು ಕ್ಸೂಮ್ 160: ಹೀರೋ ಮೋಟೊಕಾರ್ಪ್ ಮುಂಬರುವ ತಿಂಗಳುಗಳಲ್ಲಿ ಕ್ಸೂಮ್ 125R ಮತ್ತು ಕ್ಸೂಮ್ 160 (Hero Xoom 125R & Xoom 160) ಸ್ಕೂಟರ್‌ಗಳನ್ನು ಪರಿಚಯಿಸಲು ಸಜ್ಜಾಗಿದೆ. ಮೊದಲನೆಯದು ಸ್ಪೋರ್ಟಿ 125 ಸಿಸಿ ಸ್ಕೂಟರ್ ವಿಭಾಗದಲ್ಲಿ ಸ್ಪರ್ಧಿಸಲಿದ್ದು, ಎರಡನೆಯದು ಅಡ್ವೆಂಚರ್ ಸ್ಕೂಟರ್ ಆಗಿ ತನ್ನದೇ ಆದ ಸ್ಥಾನವನ್ನು ಸೃಷ್ಟಿಸಿಕೊಳ್ಳಲಿದೆ. ಎರಡೂ ಮಾದರಿಗಳು ಆಕರ್ಷಕ ಸ್ಟೈಲಿಂಗ್ ಅನ್ನು ಹೊಂದಿವೆ. ಎರಡನೆಯದು 156 ಸಿಸಿ ಲಿಕ್ವಿಡ್ - ಕೂಲ್ಡ್ ಎಂಜಿನ್ ಹೊಂದಿದ್ದು, 15.2 ಬಿಹೆಚ್‌ಪಿ ಪವರ್ ಮತ್ತು 14.1 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

upcoming-scooters-from-honda-bajaj-tvs-hero-details

ಸುಧಾರಿತ ಇಂಧನ ಮಿತವ್ಯಯಕ್ಕಾಗಿ ಇದು ಐ3 ಎಸ್ ತಂತ್ರಜ್ಞಾನವನ್ನು ಹೊಂದಿದೆ. ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಡ್ಯುಯಲ್ ರಿಯರ್ ಶಾಕ್ ಅಬ್ಸಾರ್ಬರ್‌ಗಳನ್ನು ಪಡೆಯಲಿದೆ. ಕ್ಸೂಮ್ 160 ಬೈಕಿನ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್ ಗಳು, ಬ್ಲಾಕ್ ಮಾದರಿಯ ಟೈರ್‌ಗಳನ್ನು ಹೊಂದಿದೆ. 14 ಇಂಚಿನ ಅಲಾಯ್ ವೀಲ್‌ಗಳು, ಟ್ವಿನ್ ಎಲ್ಇಡಿ ಹೆಡ್ ಲ್ಯಾಂಪ್‌ಗಳು, ಎತ್ತರದ ವಿಂಡ್ ಸ್ಕ್ರೀನ್, ಸ್ಮಾರ್ಟ್ ಕೀ ಇತ್ಯಾದಿಗಳನ್ನು ಹೊಂದಿದೆ.

ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್: ಹೋಂಡಾ ಇಂಡಿಯಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ 2024ರ ಡಿಸೆಂಬರ್‌ನಲ್ಲಿ ಕರ್ನಾಟಕದ ಘಟಕದಲ್ಲಿ ಉತ್ಪಾದನೆಯಾಗಲಿದೆ. ಇದು ಕೆ4 ಬಿಎ ಸಂಕೇತನಾಮ ಪಡೆದಿದೆಯಾದ್ರೂ ಇದನ್ನು ಎಲೆಕ್ಟ್ರಿಕ್ ಆಕ್ಟಿವಾ (Honda Electric Scooter) ಎಂದು ಕೂಡ ಹೇಳಲಾಗುತ್ತಿದೆ. ಹೋಂಡಾ ಭಾರತಕ್ಕಾಗಿ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಎಲೆಕ್ಟ್ರಿಕ್ ಮೋಟರ್ ಮತ್ತು ಬ್ಯಾಟರಿಯನ್ನು ದೇಶೀಯವಾಗಿ ತಯಾರಿಸಲಿದೆ.

upcoming-scooters-from-honda-bajaj-tvs-hero-details

ಕೈಗೆಟುಕುವ ಹೀರೋ ವಿಡಾ: ವಿಡಾ ಕೈಗೆಟುಕುವ ಬೆಲೆಯಲ್ಲಿ ಹೊಸ ಸ್ಕೂಟರ್ ಪರಿಚಯಿಸಲು ನೋಡುತ್ತಿದೆ. ಈ ಮುಂಬರುವ ಮಾದರಿಯು ವಿಡಾ ವಿ 1 ಮತ್ತು ವಿಡಾ ವಿ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಅಗ್ಗದ ಬೆಲೆಯನ್ನು ಹೊಂದಿರಲಿದೆ. ಈ ಸ್ಕೂಟರ್‌ನ ಪೇಟೆಂಟ್ ಚಿತ್ರಗಳು ಹಲವಾರು ವಿನ್ಯಾಸದ ವಿವರಗಳನ್ನು ಈಗಾಗಲೇ ಬಹಿರಂಗಪಡಿಸಿವೆ. ಪೇಟೆಂಟ್‌ ಚಿತ್ರಗಳ ಪ್ರಕಾರ ಮುಂಭಾಗದ ಏಪ್ರನ್ ಗಮನಾರ್ಹ ಕ್ರೀಸ್‌ಗಳು ಮತ್ತು ಮಧ್ಯದಲ್ಲಿ ಹೆಡ್‌ಲೈಟ್ ಅನ್ನು ಇರಿಸಲಾಗಿದೆ. ಸೀಟಿನ ಕೆಳಗೆ ವಿಶಾಲವಾದ ಶೇಖರಣಾ ಪ್ರದೇಶವನ್ನು ಸೂಚಿಸುವ ದೊಡ್ಡ ಸೈಡ್ ಪ್ಯಾನೆಲ್‌ಗಳು ಹೊಂದಿದೆ. ಇದು ವಿ 1 ನಂತೆಯೇ ಅದೇ ಪ್ಲಾಟ್ ಫಾರ್ಮ್ ಅನ್ನು ಆಧರಿಸಿರಬಹುದು ಎನ್ನಲಾಗಿದೆ.

ಹೊಸ ಬಜಾಜ್ ಚೇತಕ್: ಬಜಾಜ್ ಆಟೋ 2025 ರ ಆರಂಭದಲ್ಲಿ ಚೇತಕ್‌ನ ನವೀಕರಿಸಿದ ರೂಪಾಂತರವನ್ನು ಬಿಡುಗಡೆ ಮಾಡಲು ಯೋಜಿಸಿದೆ. ಪ್ರಸ್ತುತ, ಚೇತಕ್ ಪ್ರೀಮಿಯಂ ಮತ್ತು ಅರ್ಬನ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಬೆಲೆ ಕ್ರಮವಾಗಿ ರೂ.1.47 ಲಕ್ಷ ಮತ್ತು ರೂ.1.23 ಲಕ್ಷ (ಎಕ್ಸ್ ಶೋರೂಂ) ಇದೆ.

upcoming-scooters-from-honda-bajaj-tvs-hero-details

ಈ ಎರಡೂ ವೇರಿಯೆಂಟ್‌ಗಳ ನಡುವಿನ ಪ್ರಮುಖ ವ್ಯತ್ಯಾಸಗಳು ಬ್ಯಾಟರಿ ಆಯ್ಕೆಗಳು ಮತ್ತು ರೇಂಜ್‌ನಲ್ಲಿವೆ. ಹೊಸ ತಲೆಮಾರಿನ ಚೇತಕ್ ದೊಡ್ಡ ಬ್ಯಾಟರಿ ಪ್ಯಾಕ್, ಹೊಸ ವೈಶಿಷ್ಟ್ಯಗಳು ಮತ್ತು ಸುಧಾರಿತ ರೈಡಿಂಗ್ ರೇಂಜ್ ಅನ್ನು ಹೊಂದುವ ನಿರೀಕ್ಷೆಯಿದೆ. ಈ ಮೇಲಿನ ಎಲ್ಲಾ ಹೊಸ ಸ್ಕೂಟರ್‌ಗಳಲ್ಲಿ ನೀವು ಯಾವುದಕ್ಕಾಗಿ ಕಾಯುತ್ತಿದ್ದೀರಾ ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Friday, May 24, 2024, 12:25 [IST]
English summary
Upcoming scooters from honda bajaj tvs hero details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+