Bajaj: ಹೊಸ ಬಜಾಜ್ ಮೋಟಾರ್‌ಸೈಕಲ್ ಬಿಡುಗಡೆ: ಹಲವು ರೈಡ್‌ ಮೋಡ್ಸ್, ಆಧುನಿಕ ಫೀಚರ್ಸ್!

ಜನಪ್ರಿಯ ದ್ವಿಚಕ್ರ ವಾಹನ ಕಂಪನಿಯಾದ ಬಜಾಜ್ (Bajaj), 2025 ರ ಅಪ್‌ಡೇಟೆಡ್ ಪಲ್ಸರ್ NS400Z ಮೋಟಾರ್‌ಸೈಕಲ್ ಬಿಡುಗಡೆ ಮಾಡಿದೆ. ಇದು ಸ್ಟ್ರೀಟ್‌ಫೈಟರ್ ಆಗಿದ್ದು, ಸ್ಪೋರ್ಟಿ ಲುಕ್ ಹಾಗೂ ಉತ್ತಮ ಪರ್ಫಾಮೆನ್ಸ್ ಬಯಸುವವರಿಗಾಗಿ ನಿರ್ಮಿಸಲಾಗಿದೆ. ಬಿಡುಗಡೆಯಾಗಿ ಒಂದು ವರ್ಷದ ನಂತರ, 20,000 ಕ್ಕೂ ಹೆಚ್ಚು ಪಲ್ಸರ್ NS400Z ಬೈಕ್‌ಗಳು ದೇಶದ ಬೀದಿಗಳಲ್ಲಿ ಸವಾರಿ ಮಾಡುತ್ತಿವೆ. ಇದು ಬೈಕ್‌ನ ಆಕರ್ಷಣೆ ಮತ್ತು ಪರಾಕ್ರಮಕ್ಕೆ ಸಾಕ್ಷಿಯಾಗಿದೆ. ಇದೀಗ ಬಿಡುಗಡೆಯಾಗಿರುವ ಹೊಸ 2025 ರ ಅಪ್‌ಡೇಟೆಡ್ ಪಲ್ಸರ್ NS400Z ಹೊಸ ತಂತ್ರಜ್ಞಾನದೊಂದಿಗೆ ಯುವಕರ ಫೇವರೆಟ್ ಆಯ್ಕೆಯಾಗಲಿದೆ ಎಂದು ಕಂಪನಿ ಭರವಸೆ ನೀಡಿದೆ.

2025 ಪಲ್ಸರ್ NS400Z ಅಪ್‌ಡೇಟ್‌ಗಳು

2025 ಪಲ್ಸರ್ NS400Z ಬೆಲೆಯು 1,92,328 ರೂ. (ಎಕ್ಸ್ ಶೋರೂಂ) ಇದೆ. ಹೊಸ ಬೈಕ್ ಈಗ 373cc ಎಂಜಿನ್‌ನೊಂದಿಗೆ ಈ ಹಿಂದೆ 40PS ಇದ್ದ ಪವರ್‌ ಅನ್ನು 43PS ಪವರ್‌ಗೆ ಹೆಚ್ಚಿಸಲಾಗಿದೆ. ಇದನ್ನು ಪರಿಷ್ಕೃತ ವಾಲ್ವ್‌ಟ್ರೇನ್, ಕ್ಯಾಮ್ ಟೈಮ್ ಮತ್ತು ಇನ್‌ಟೇಕ್ ಡಕ್ಟ್ ಸಪೋರ್ಟ್ ಮಾಡುತ್ತದೆ. ಹೆಚ್ಚುವರಿ ಪವರ್‌ ನಿರ್ವಹಿಸಲು ಉತ್ತಮ ಥರ್ಮಲ್ ಸ್ಟೆಬಿಲಿಟಿ, ಕಡಿಮೆ ಘರ್ಷಣೆ ಮತ್ತು ಸುಧಾರಿತ ಬಾಳಿಕೆಗಾಗಿ ಫೋರ್ಜ್ಡ್ ಪಿಸ್ಟನ್ ನೀಡಲಾಗಿದೆ.

2025-bajaj-pulsar-ns400z-launched-with-new-updates

2.7 ಸೆಕೆಂಡುಗಳಲ್ಲಿ 60 ಕಿ.ಮೀ ವೇಗ, 6.4 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. 150 ಕಿ.ಮೀ ಗರಿಷ್ಟ ವೇಗವನ್ನು ಹೊಂದಿದ್ದ ಈ ಹಿಂದಿನ ಪಲ್ಸರ್ NS400Z ಈಗ 157 ಕಿ.ಮೀ ಗರಿಷ್ಟ ವೇಗಕ್ಕೆ ಹೆಚ್ಚಿಸಲಾಗಿದೆ. ಎಂಜಿನ್ ಹೀಟ್‌ನಿಂದ ಸವಾರರ ಕಾಲುಗಳ ರಕ್ಷಣೆಗಾಗಿ ರೇಡಿಯೇಟರ್ ಕವರ್ ಅನ್ನು ಕೂಡ ಮರುವಿನ್ಯಾಸಗೊಳಿಸಲಾಗಿದೆ.

ಸುಧಾರಿತ ಗ್ರಿಪ್ ಮತ್ತು ಉತ್ತಮ ಪ್ರತಿಕ್ರಿಯೆಗಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸ ರೇಡಿಯಲ್ ಟೈರ್‌ಗಳನ್ನು ಅಳವಡಿಸಲಾಗಿದೆ. ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ, ಬೈಕ್ ಈಗ ಮುಂಭಾಗದಲ್ಲಿ ಸಿಂಟರ್ಡ್ ಬ್ರೇಕ್ ಪ್ಯಾಡ್ ಅನ್ನು ಹೊಂದಿದೆ. ಜೊತೆಗೆ ಬಜಾಜ್ ಕಂಪನಿಯು ಕ್ಲಚ್-ಲೆಸ್ ಫುಲ್ ಥ್ರೊಟಲ್ ಗೇರ್ ಶಿಫ್ಟಿಂಗ್ ಸಿಸ್ಟಮ್‌ ಅನ್ನು ಪರಿಚಯಿಸಿದೆ. ಈ ಸೆನ್ಸರ್-ಲೆಸ್ ಸಿಸ್ಟಮ್ ಹೆಚ್ಚಿನ ಪರ್ಫಾಮೆನ್ಸ್ಗಾಗಿ ವಿನ್ಯಾಸಗೊಳಿಸಲಾಗಿದೆ, ಇದನ್ನು ಸ್ಪೋರ್ಟ್ಸ್ ಮೋಡ್‌ನಲ್ಲಿ ಬಳಸಬಹುದು.

2025-bajaj-pulsar-ns400z-launched-with-new-updates

ಅಸ್ತಿತ್ವದಲ್ಲಿರುವ ವೈಶಿಷ್ಟ್ಯಗಳು

43 ಎಂಎಂ ಷಾಂಪೇನ್ ಗೋಲ್ಡ್ ಯುಎಸ್‌ಡಿ ಫೋರ್ಕ್‌ಗಳು, ಆಕರ್ಷಕ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್, ಬ್ಲೂಟೂತ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಮ್ಯೂಸಿಕ್ ಕಂಟ್ರೋಲ್, ಲ್ಯಾಪ್ ಟೈಮರ್ ಮತ್ತು ಟ್ರಾಕ್ಷನ್ ಕಂಟ್ರೋಲ್ - ಫುಲ್ಲಿ ಡಿಜಿಟಲ್ ಕಲರ್ ಎಲ್‌ಸಿಡಿ ಕನ್ಸೋಲ್‌, ಸವಾರಿಯಲ್ಲಿದ್ದಾಗ ರೈನ್, ರೋಡ್, ಆಫ್-ರೋಡ್ ಮತ್ತು ಸ್ಪೋರ್ಟ್ ಎಂಬ 4 ವಿಭಿನ್ನ ರೈಡ್‌ ಮೋಡ್‌ಗಳನ್ನು ಹೊಂದಿದೆ.

2025 ಪಲ್ಸರ್ NS400Z ಬಿಡುಗಡೆಯ ಕುರಿತು ಮಾತನಾಡಿದ ಬಜಾಜ್ ಮಾರ್ಕೆಟಿಂಗ್ ಅಧ್ಯಕ್ಷ ಸುಮೀತ್ ನಾರಂಗ್, "ಪಲ್ಸರ್ NS400Z ಅನ್ನು ಕೈಗೆಟುಕುವ ಪರ್ಫಾಮೆನ್ಸ್ ಬೈಕ್ ಬಯಸುವವರಿಗಾಗಿ ನಿರ್ಮಿಸಲಾಗಿದೆ. ಕಳೆದ ವರ್ಷದಲ್ಲಿ, ನಾವು ಸವಾರರ ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ಆಲಿಸಿದ್ದೇವೆ. ಅವರ ಆದ್ಯತೆಗಳಿಗೆ ತಕ್ಕಂತೆ ಈಗ ತೀಕ್ಷ್ಣವಾದ, ಹೆಚ್ಚು ಪವರ್‌ಫುಲ್ ಬೈಕ್ ನೀಡಲು ಹೆಮ್ಮೆಪಡುತ್ತೇವೆ.

ಎಂಜಿನಿಯರಿಂಗ್ ಅಪ್‌ಗ್ರೇಡ್‌ಗಳು ಮತ್ತು ಬಾಷ್‌ನೊಂದಿಗೆ ಸಹ-ಅಭಿವೃದ್ಧಿಪಡಿಸಿದ ಮೊದಲ ರೀತಿಯ ಕ್ಲಚ್-ಲೆಸ್, ಫುಲ್-ಥ್ರೊಟಲ್ ಗೇರ್-ಶಿಫ್ಟಿಂಗ್ ಸಿಸ್ಟಮ್‌ನೊಂದಿಗೆ ಹೊಸ NS400Z ಸ್ಟ್ರೀಟ್‌ಫೈಟರ್ ಮಿತಿಗಳನ್ನು ಮೀರಿ ಪರ್ಫಾಮೆನ್ಸ್ ನೀಡಲಿದೆ. ಪಲ್ಸರ್ ಸವಾರರ ನಿರಂತರವಾಗಿ ವಿಕಸಿಸುತ್ತಿರುವ ಅಗತ್ಯಗಳಿಗೆ ಸ್ಪಂದಿಸುವ ಉದ್ದೇಶಪೂರ್ವಕ ನವೀಕರಣಗಳೊಂದಿಗೆ ಪಲ್ಸರ್ ಅನ್ನು ಬಿಡುಗಡೆ ಮಾಡಿದ್ದೇವೆ" ಎಂದರು.

ಒಟ್ಟಾರೆ ಪರ್ಫಾಮೆನ್ಸ್ ಪರಂಪರೆಯಿಂದ ಹುಟ್ಟಿಕೊಂಡ ಪಲ್ಸರ್ NS (ನೇಕೆಡ್ ಸ್ಪೋರ್ಟ್ಸ್) ಸಿರೀಸ್ ಪಲ್ಸರ್ NS200 ಮತ್ತು ಪಲ್ಸರ್ NS160 ನಂತಹ ಐಕಾನಿಕ್ ಬೈಕ್‌ಗಳನ್ನು ಒಳಗೊಂಡಿದೆ. NS ಮೋಟಾರ್‌ಸೈಕಲ್ ಸಿರೀಸ್ ಸುಧಾರಿತ ತಂತ್ರಜ್ಞಾನ, ಮಸ್ಕುಲರ್ ಡಿಸೈನ್, ಅಥ್ಲೆಟಿಕ್ ಸವಾರಿ ಸ್ಥಾನದೊಂದಿಗೆ ಡಿಸೈನ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

More from DriveSpark

Article Published On: Wednesday, July 9, 2025, 12:18 [IST]
English summary
2025 bajaj pulsar ns400z launched with new updates
Read more on bajaj india new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+