Bajaj: ಹೊಸ ಬಜಾಜ್ ಚೇತಕ್ 3001 ಬಿಡುಗಡೆ: ಪೈಸೆ ಖರ್ಚಿಲ್ಲದೆ 127 ಕಿ.ಮೀ ಓಡಿಸಬಹುದು!
ಪ್ರಮುಖ ದ್ವಿಚಕ್ರ ವಾಹನ ಕಂಪನಿಯಾದ ಬಜಾಜ್ (Bajaj), ಹೊಸ ಚೇತಕ್ 3001 ಇವಿ ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ. ಇದು ಅತ್ಯಂತ ಜನಪ್ರಿಯ ಚೇತಕ್ 2903 ಮಾಡಲ್‌ಗೆ ಅಪ್‌ಗ್ರೇಡ್ ಮಾದರಿಯಾಗಿದೆ. ಪ್ರಸಿದ್ಧ ಮತ್ತು ಅತ್ಯಂತ ಯಶಸ್ವಿ ಚೇತಕ್ 35 ಸರಣಿಯಂತೆಯೇ ಅದೇ ಅತ್ಯಾಧುನಿಕ EV ಪ್ಲಾಟ್‌ಫಾರ್ಮ್ ಅನ್ನು ಹಂಚಿಕೊಳ್ಳುವ ಚೇತಕ್ 3001 ಸಹ ಫ್ಲೋರ್‌ಬೋರ್ಡ್ - ಮೌಂಟೆಡ್, 3.0 kWh ಬ್ಯಾಟರಿ ಹೊಂದಿದೆ. ದೊಡ್ಡ ಶೇಖರಣಾ ಸ್ಥಳ ಮತ್ತು ರೇಂಜ್ ಹೆಚ್ಚಿಸುವ ತಂತ್ರಜ್ಞಾನದೊಂದಿಗೆ ಹೆಚ್ಚು ಪ್ರಬುದ್ಧ ಸವಾರಿ ಅನುಭವವನ್ನು ಒದಗಿಸುತ್ತದೆ ಎಂದು ಬಜಾಜ್ ಭರವಸೆ ನೀಡಿದೆ.
ಚೇತಕ್ ಇವಿ 3001 ವಿಶೇಷತೆಗಳು: ಹೊಸ ಫ್ಲೋರ್‌ಬೋರ್ಡ್ ಬ್ಯಾಟರಿ ಆರ್ಕಿಟೆಕ್ಚರ್ ಹೊಂದಿರುವ ಈ ಸ್ಕೂಟರ್ ಉತ್ತಮ ಸ್ಥಿರತೆ, ಹೆಚ್ಚಿನ ಸ್ಥಳಾವಕಾಶ, ಅತ್ಯುತ್ತಮ ಸವಾರಿ ಅನುಭವ ನೀಡುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ 127 ಕಿ.ಮೀ ಓಡಿಸುವಷ್ಟು ರೇಂಜ್ ನೀಡುತ್ತದೆ. ಹೆಲ್ಮೆಟ್‌ಗಳನ್ನು ಇಡಲು ಹಾಗೂ ಶಾಪಿಂಗ್ ಬ್ಯಾಗ್‌ಗಳನ್ನು ಇಡಲು ಬೃಹತ್ 35L ಬೂಟ್ ಸ್ಪೇಸ್ ನೀಡಲಾಗಿದೆ.

ವೇಗದ ಚಾರ್ಜಿಂಗ್‌ಗಾಗಿ 750W ಚಾರ್ಜರ್ ಆಯ್ಕೆಯನ್ನು ಸಹ ಒದಗಿಸಲಾಗಿದ್ದು, ಕೇವಲ 3 ಗಂಟೆ 50 ನಿಮಿಷಗಳಲ್ಲಿ ಶೇ 80% ರಷ್ಟು ಚಾರ್ಜ್ ಮಾಡಬಹುದು. TecPac ವೈಶಿಷ್ಟ್ಯಗಳ ಭಾಗವಾಗಿ ಕರೆ ಸ್ವೀಕರಿಸುವುದು/ತಿರಸ್ಕರಿಸುವುದು, ಮ್ಯೂಸಿಕ್ ಕಂಟ್ರೋಲ್, ಗೈಡ್ ಮಿ ಹೋಮ್ ಲೈಟ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಲೈಟ್, ಆಟೋ - ಫ್ಲಾಶಿಂಗ್ ಸ್ಟಾಪ್ ಲ್ಯಾಂಪ್ಗಳಂತಹ ಫೀಚರ್ಸ್ ನೀಡಲಾಗಿದೆ.
ಮುಂದಿನ ಪೀಳಿಗೆಯ ವೇದಿಕೆಯಲ್ಲಿ ನಿರ್ಮಿಸಲಾದ ಚೇತಕ್ 3001, ಭಾರತೀಯ ಸ್ಕೂಟರ್ ಸವಾರರು ಬಯಸುವ ರೇಂಜ್ ಮತ್ತು ಪರ್ಫಾಮೆನ್ಸ್ ನೀಡುತ್ತದೆ. ಖಚಿತವಾದ ವಿಶ್ವಾಸಾರ್ಹತೆ ಮತ್ತು ಸೇವೆಯೊಂದಿಗೆ ಗೊಂದಲ ಮುಕ್ತ ಸವಾರಿ ಮಾಡಬಹುದು. ಚೇತಕ್ 3001 ಎಲೆಕ್ಟ್ರಿಕ್ ಸ್ಕೂಟರ್ ರೂ. 99,990/- ಎಕ್ಸ್-ಶೋರೂಂ ಬೆಲೆಯಲ್ಲಿ ಈಗ ಖರೀದಿಗೆ ಲಭ್ಯವಿದೆ.

ಚೇತಕ್ 3001 ನಿಜವಾದ ಭಾರತೀಯ ಸವಾರರಿಗೆ ನಾವೀನ್ಯತೆಯನ್ನು ನೀಡುವ ವೇದಿಕೆಯ ವಿಕಸನವಾಗಿದೆ. ಚೇತಕ್ 3001 ದೈನಂದಿನ ಪ್ರಯಾಣ, ವಾರಾಂತ್ಯದ ವಿಹಾರ, ಕಚೇರಿ, ಪ್ರವಾಸ ಮತ್ತು ಕಾಲೇಜುಗಳಿಗೆ ಸೂಕ್ತವಾದ ಕುಟುಂಬ ಇವಿ ಆಗಿದೆ. ಚೇತಕ್ 3001 ಶೀಘ್ರದಲ್ಲೇ ಅಮೆಜಾನ್‌ನಲ್ಲಿಯೂ ಲಭ್ಯವಿರುತ್ತದೆ ಎಂದು ಬಜಾಜ್ ಕಂಪನಿ ತಿಳಿಸಿದೆ.
ತನ್ನ ಇವಿ ಸ್ಕೂಟರ್‌ಗಳ ಮೂಲಕ ಭಾರತದಲ್ಲಿ ಹೊಸ ಅಲೆ ಎಬ್ಬಿಸಿರುವ ಬಜಾಜ್, ಭಾರತದ ನಂ.1 ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ ಆಗಿ FY25 Q4 (ಜನವರಿ-ಮಾರ್ಚ್) ಅನ್ನು ಕೊನೆಗೊಳಿಸಿದೆ. ಚೇತಕ್ ಮಾಡಲ್‌ಗಳಾದ 3501, 3502 ನೇತೃತ್ವದ 35 ಸಿರೀಸ್ ಈಗಾಗಲೇ EV ಕ್ಷೇತ್ರದಲ್ಲಿನ ಎಲ್ಲಾ ಸ್ಕೂಟರ್‌ಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವುದಾಗಿ ಬಜಾಜ್ ಹೇಳಿಕೊಂಡಿದೆ.

ಚೇತಕ್‌ನ ಅತ್ಯಂತ ಕೈಗೆಟುಕುವ ಟ್ರಿಮ್ 2903, ಚೇತಕ್ 3503, ಚೇತಕ್ 3502 ಮತ್ತು ಟಾಪ್-ಆಫ್-ಲೈನ್ ಮಾದರಿಯಾಗಿ ಚೇತಕ್ 3501 ಇದ್ದವು. ಎರಡನೇ ತಲೆಮಾರಿನ ಚೇತಕ್ ಲೈನ್ 3503 ಸ್ಕೂಟರ್ ಬೆಲೆಯು 1.10 ಲಕ್ಷ ರೂ., 3502 ಸ್ಕೂಟರ್ ಬೆಲೆಯು 1.22 ಲಕ್ಷ ರೂ., 3501 ಸ್ಕೂಟರ್ ಬೆಲೆಯು 1.34 ಲಕ್ಷ ರೂ. ಇದೆ.
ಈಗ ಅತ್ಯಂತ ಜನಪ್ರಿಯ ಚೇತಕ್ 2903 ಮಾಡಲ್‌ಗೆ ಅಪ್‌ಗ್ರೇಡ್ ಮಾದರಿಯಾಗಿ ಚೇತಕ್ ಇವಿ 3001 ಎಂಟ್ರಿಕೊಟ್ಟಿದೆ. ಚೇತಕ್ 3001 ಎಲೆಕ್ಟ್ರಿಕ್ ಸ್ಕೂಟರ್ ರೂ. 99,990/- ಎಕ್ಸ್-ಶೋರೂಂ ಬೆಲೆಯಲ್ಲಿ ಈಗ ಖರೀದಿಗೆ ಲಭ್ಯವಿದೆ. ಈ ಸ್ಕೂಟರ್ ಓಲಾ ಎಸ್ 1 ಝಡ್ ಹಾಗೂ ಟಿವಿಎಸ್ ಐಕ್ಯೂಬ್ ಗೆ ಪೈಪೋಟಿ ನೀಡಲಿದೆ.


Click it and Unblock the Notifications








