Bajaj Chetak: ದೊಡ್ಡ ಸವಾಲನ್ನು ಮೆಟ್ಟಿನಿಂತ ದೇಶೀಯ ಬಜಾಜ್: ಚೇತಕ್ ಡೆಲಿವರಿಗಳು ಪುನಾರಂಭ

ಚೀನಾ ಸರ್ಕಾರವು ಅಪರೂಪದ ಆಯಸ್ಕಾಂತ ಖನಿಜಗಳ (Rare-earth magnet) ನ್ನು ವಿಶ್ವದ ಹಲವು ದೇಶಗಳಿಗೆ ರಫ್ತು ಮಾಡುತ್ತದೆ. ಇದು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತವು ಒಂದಾಗಿದೆ. ಇತ್ತೀಚೆಗೆ ಚೀನಾ ಸರ್ಕಾರ ಈ ಅಪರೂಪದ ಆಯಸ್ಕಾಂತ ಖನಿಜಗಳ ರಫ್ತಿಗೆ ನಿಷೇಧ ಹೇರಿತ್ತು, ಇದರಿಂದ ಭಾರತ ಮಾತ್ರವಲ್ಲದೆ ವಿಶ್ವ ಆಟೋಮೊಬೈಲ್ ಉದ್ಯಮಕ್ಕೆ ಆತಂಕ ಶುರುವಾಗಿತ್ತು. ಈ ಖನಿಜಗಳಿಲ್ಲದೆ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ, ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆ ಮತ್ತು ಇತರ ತಾಂತ್ರಿಕ ಕ್ಷೇತ್ರಗಳು ಕುಂಠಿತಗೊಳ್ಳಲಿವೆ ಎಂಬ ಭಯ ಶುರುವಾಗಿತ್ತು.

ಆದರೆ ಇದೀಗ ಭಾರತದ ಪ್ರಮುಖ ದ್ವಿಚಕ್ರ ವಾಹನ ಕಂಪನಿಯಾದ ಬಜಾಜ್ ಆಟೋ (Bajaj Auto), ಅಪರೂಪದ ಆಯಸ್ಕಾಂತ ಖನಿಜಗಳ ಅಲಭ್ಯತೆಯಿಂದ ಉಂಟಾದ ನಿರ್ಬಂಧಗಳನ್ನು ಯಶಸ್ವಿಯಾಗಿ ನಿವಾರಿಸಲಾಗಿದೆ ಎಂದು ಹೇಳಿದೆ. ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬಜಾಜ್ ಚೇತಕ್‌ನ (Bajaj Chetak) ಸರಬರಾಜು ಎಲ್ಲಾ ಡೀಲರ್‌ಶಿಪ್‌ಗಳಲ್ಲಿ ಪುನರಾರಂಭಗೊಂಡಿದೆ ಎಂದು ಘೋಷಿಸಿದೆ.

bajaj-overcomes-global-magnet-supply-challenge-chetak-deliveries-resume

ಇತ್ತೀಚಿನ ವಾರಗಳಲ್ಲಿ, ಈ ಅಂತರರಾಷ್ಟ್ರೀಯ ಆಯಸ್ಕಾಂತ ಖನಿಜಗಳ ಲಭ್ಯತೆಗೆ ಸಂಬಂಧಿಸಿದ ತಾತ್ಕಾಲಿಕ ಪೂರೈಕೆ ನಿರ್ಬಂಧಗಳು ವಾಹನ ಡೆಲಿವರಿಗಳನ್ನು ನಿಧಾನಗೊಳಿಸಿದ್ದವು. ಚೇತಕ್‌ಗೆ ನಿರಂತರ ಮತ್ತು ಬೆಳೆಯುತ್ತಿರುವ ಬೇಡಿಕೆಯು ಪೂರೈಕೆಯ ಮೇಲೆ ಮತ್ತಷ್ಟು ಒತ್ತಡವನ್ನು ಹೆಚ್ಚಿಸಿದೆ. ಇದರಿಂದಾಗಿ ಕಂನಿಯು ಬೇಡಿಕೆ ಪೂರೈಸಲು ತುಸು ಒತ್ತಡಕ್ಕೆ ಗುರಿಯಾಗಿತ್ತಾದರೂ ಈಗ ಅದರಿಂದ ಯಶಸ್ವಿಯಾಗಿ ಹೊರಬಂದಿರುವುದಾಗಿ ತಿಳಿಸಿದೆ.

ಉತ್ಪಾದನೆಯನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪುನಃಸ್ಥಾಪಿಸುವುದರೊಂದಿಗೆ, ಪ್ರತಿಯೊಬ್ಬ ಚೇತಕ್ ಗ್ರಾಹಕರು 'ಲೈಫ್‌ಪ್ರೂಫ್' ಸ್ಕೂಟರ್‌ನ ಸಾಟಿಯಿಲ್ಲದ ವಿಶ್ವಾಸಾರ್ಹತೆ, ಕಾರ್ಯಕ್ಷಮತೆ ಮತ್ತು ಶೈಲಿಯನ್ನು ಆನಂದಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಬಜಾಜ್ ಆಟೋ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಗ್ರಾಹಕರು ಚೇತಕ್ ಬುಕ್ ಮಾಡಿದರೆ ಯಾವುದೇ ತೊಂದರೆಯಿಲ್ಲದೆ ತಮ್ಮ ಸ್ಕೂಟರ್ ಡೆಲಿವರಿ ಪಡೆಯಬಹುದು ಎಂದು ತಿಳಸಿದೆ.

bajaj-overcomes-global-magnet-supply-challenge-chetak-deliveries-resume

ಉತ್ಪಾದನೆ ಮತ್ತು ಸಾಗಣೆಗಳು ಆಗಸ್ಟ್ 20 ರಂದು ಪುನರಾರಂಭಗೊಂಡಿವೆ, ಇದು ಪೂರ್ಣ ಸಾಮರ್ಥ್ಯಕ್ಕೆ ನಿರೀಕ್ಷೆಗಿಂತ ವೇಗವಾಗಿ ಮರಳುವುದನ್ನು ಸೂಚಿಸುತ್ತದೆ. ಇದಲ್ಲದೆ, ಮುಂಬರುವ ಹಬ್ಬದ ಸೀಸನ್‌ನಲ್ಲಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಬಜಾಜ್ ಆಟೋ ಅಪರೂಪದ ಆಯಸ್ಕಾಂತ ಖನಿಜಗಳು ಮತ್ತು ಇತರ ಪ್ರಮುಖ ವಸ್ತುಗಳ ಸಾಕಷ್ಟು ಪೂರೈಕೆಯನ್ನು ಪಡೆದುಕೊಂಡಿದೆ ಎಂದು ಹೇಳಿದೆ.

"ನಮ್ಮ ಗ್ರಾಹಕರ ತಾಳ್ಮೆಗೆ ನಾವು ಕೃತಜ್ಞರಾಗಿರುತ್ತೇವೆ. ಚೇತಕ್‌ಗೆ ಬೇಡಿಕೆ ದೃಢವಾಗಿದೆ, ಸರಬರಾಜು ಸಾಮಾನ್ಯವಾಗಿದೆ. ಬುಕಿಂಗ್ ಮಾಡಿದ್ದವರಿಗೆ ವಿತರಣೆಗಳು ಪ್ರಾರಂಭವಾಗಿವೆ. ನಮ್ಮ ಗುಣಮಟ್ಟದ ಮಾನದಂಡಗಳು ಮತ್ತು ಗ್ರಾಹಕರ ಸಂತೋಷಕ್ಕೆ ನಿಜವಾಗಿ ಉಳಿಯುವಾಗ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಾವು ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದೇವೆ" ಎಂದು ಬಜಾಜ್ ಆಟೋದ ಅರ್ಬನೈಟ್ ಬ್ಯುಸಿನೆಸ್ ಯೂನಿಟ್ ಅಧ್ಯಕ್ಷ ಎರಿಕ್ ವಾಸ್ ಹೇಳಿದ್ದಾರೆ.

bajaj-overcomes-global-magnet-supply-challenge-chetak-deliveries-resume

ಚೇತಕ್‌ನ ಬಲವಾದ ಆವೇಗವು ಮಾರುಕಟ್ಟೆಯಲ್ಲಿಯೂ ಪ್ರತಿಫಲಿಸುತ್ತದೆ. ಕಳೆದ ವರ್ಷ ಏಪ್ರಿಲ್‌ನಿಂದ ಬ್ರ್ಯಾಂಡ್ ತನ್ನ ಮಾರುಕಟ್ಟೆ ಪಾಲನ್ನು ದ್ವಿಗುಣಗೊಳಿಸಿದೆ. FY25 ರ ಅಂತ್ಯದಲ್ಲಿ ದೇಶದಲ್ಲಿ ನಿರ್ವಿವಾದ ನಂ.1 ಎಲೆಕ್ಟ್ರಿಕ್ ಸ್ಕೂಟರ್ ಆಗಿ ಹೊರಹೊಮ್ಮಿದೆ. ಈ ಬೆಳವಣಿಗೆಯು ಬಜಾಜ್ ಆಟೋದ ಎಲೆಕ್ಟ್ರಿಕ್ ಮೊಬಿಲಿಟಿ ಕೊಡುಗೆಯಲ್ಲಿ ಗ್ರಾಹಕರು ಇರಿಸಿರುವ ನಂಬಿಕೆ ಮತ್ತು ವಿಶ್ವಾಸವನ್ನು ಎತ್ತಿ ತೋರಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಇತ್ತೀಚೆಗೆ ಜರ್ಮನಿಯಲ್ಲಿ ಈ ಖನಿಜಗಳಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಬಗ್ಗೆ ಭಾರತ ಕೆಲಸ ಮಾಡುತ್ತಿದೆ ಎಂದು ಇತ್ತೀಚೆಗೆ ಸುಳಿವು ನೀಡಿದ್ದರು. ಹಾಗೆಯೇ ಇತರ ದೇಶಗಳೊಂದಿಗೆ ಸಹಕಾರವನ್ನು ಬಲಪಡಿಸುವ ಮೂಲಕ ಚೀನಾದ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ ಯತ್ನಿಸುತ್ತಿರುವುದಾಗಿ ಹೇಳಿದ್ದರು.

ವಾಹನ ವಲಯ ಮತ್ತು ವಾಹನ ವಲಯವಲ್ಲದ ಕ್ಷೇತ್ರಗಳಿಗಾಗಿ ಭಾರತವು ಸುಮಾರು 200 ಮಿಲಿಯನ್ ಡಾಲರ್ ಮೌಲ್ಯದ ಈ ಅಪರೂಪದ ಆಯಸ್ಕಾಂತ ಖನಿಜಗಳನ್ನು ಆಮದು ಮಾಡಿಕೊಂಡಿದೆ. ಇದರಲ್ಲಿ ಸುಮಾರು 85% ಚೀನಾದಿಂದ ಪಡೆಯಲಾಗಿದೆ. ಇದು ಭಾರತದ ಕಥೆಯಾದರೆ, ಮತ್ತೊಂದೆಡೆ ಈ ಖನಿಜಗಳ ಉತ್ಪಾದನೆಯಲ್ಲಿ ಚೀನಾ ಜಾಗತಿಕ ಮಾರುಕಟ್ಟೆಯಲ್ಲಿ ಶೇ.90ರಷ್ಟು ಪಾಲನ್ನು ಹೊಂದಿದೆ. ಈ ಖನಿಜಗಳನ್ನು 35ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ.

More from DriveSpark

Article Published On: Saturday, August 23, 2025, 13:12 [IST]
English summary
Bajaj overcomes global magnet supply challenge chetak deliveries resume
Read more on bajaj india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+