ಯುವಕರ ಹಾಟ್‌ ಫೇವರೆಟ್ ಬಜಾಜ್ ಪಲ್ಸರ್ 220F ಬಿಡುಗಡೆ: ಅಗ್ಗದ ಬೆಲೆಯ ಸ್ಟೈಲಿಷ್ ಬೈಕ್

ಬಜಾಜ್ ಪಲ್ಸರ್ 220F ಭಾರತದ ಅತ್ಯಂತ ಜನಪ್ರಿಯ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ, ಈ ಬೈಕ್ ತನ್ನ ಹೈ-ಪರ್ಫಾಮೆನ್ಸ್, ಆರಾಮದಾಯಕ ಸವಾರಿ ಅನುಭವ ಮತ್ತು ಹಣಕ್ಕೆ ತಕ್ಕ ಮೌಲ್ಯ ನೀಡುವ ಬೈಕ್ ಆಗಿ ಗುರ್ತಿಸಿಕೊಂಡಿತ್ತು. ಇದೀಗ ನವೀಕರಿಸಿದ 2025 ಬಜಾಜ್ ಪಲ್ಸರ್ 220F ಭಾರತದಲ್ಲಿ 1.28 ಲಕ್ಷ (ಎಕ್ಸ್‌ ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗುವ ಮುನ್ನವೇ ನವೀಕರಿಸಿದ ಹೊಸ ಬಜಾಜ್ ಪಲ್ಸರ್ 220F ಬೈಕ್ ಮೊನ್ನೆ ಡೀಲರ್‌ಶಿಪ್‌ಗಳನ್ನು ತಲುಪಿತ್ತು. ಈ ಬೈಕ್ ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ.

ಇತ್ತೀಚಿನ ನವೀಕರಣದೊಂದಿಗೆ ಬೈಕ್ ಹೊಸ ಬಣ್ಣಗಳ ಜೊತೆಗೆ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆಯುತ್ತಿದೆ. ಈ ಕಾಸ್ಮೆಟಿಕ್ ಮತ್ತು ವೈಶಿಷ್ಟ್ಯದ ನವೀಕರಣಗಳ ಹೊರತಾಗಿ, ಮೋಟಾರ್‌ಸೈಕಲ್ ಯಾಂತ್ರಿಕವಾಗಿ ಯಾವುದೇ ಬದಲಾವಣೆ ಪಡೆಯದೆ ಅದೇ ಎಂಜಿನ್ ಜೊತೆಗೆ ಮುಂದುವರೆದಿದೆ. ಈ ಬಾರಿ ಹೊಸ ನವೀಕರಣಗಳೊಂದಿಗೆ ಪಲ್ಸರ್ F250 ಯಾವ ಮಟ್ಟಿಗೆ ಯುವಕರನ್ನು ಸೆಳೆಯಲಿದೆ ಕಾದುನೋಡಬೇಕಿದೆ.

bajaj-pulsar-220f-launched-in-india-at-1-28-lakh

ಹೊಸ ಬಜಾಜ್ ಪಲ್ಸರ್ 220F ನಲ್ಲಿರುವ ಅತಿದೊಡ್ಡ ಮತ್ತು ಪ್ರಮುಖ ಅಪ್‌ಗ್ರೇಡ್ ಎಂದರೆ ಸಿಂಗಲ್-ಚಾನೆಲ್ ABS ಸೇರ್ಪಡೆಯಾಗಿದ್ದು, ಇದು ವೀಲ್‌ಗಳು ಹಾರ್ಡ್ ಬ್ರೇಕಿಂಗ್ ಅಡಿಯಲ್ಲಿ ಲಾಕ್ ಆಗುವುದನ್ನು ಮತ್ತು ಸ್ಕಿಡ್ ಆಗುವುದನ್ನು ತಡೆಯುವ ಮೂಲಕ ಸುರಕ್ಷತೆಯನ್ನು ಸುಧಾರಿಸಲಿದೆ. ಹಿಂದಿನ ಮಾಡಲ್‌ಗಳು ಮುಂಭಾಗದಲ್ಲಿ ಮಾತ್ರ ABS ಹೊಂದಿದ್ದವು, ಆದರೆ ಹೊಸ ನವೀಕರಣವು ಹಿಂಭಾಗದಲ್ಲೂ ABS ಸೇರಿಸುತ್ತದೆ.

ಸ್ಪೋರ್ಟಿಯರ್ - ಲುಕಿಂಗ್ ಗ್ರಾಫಿಕ್ಸ್‌ನೊಂದಿಗೆ ಪಲ್ಸರ್ 220F ಎರಡು ಹೊಸ ಬಣ್ಣಗಳನ್ನು ಸಹ ಪಡೆಯುತ್ತಿದೆ. ಒಂದು ರೆಡ್ - ಡಾರ್ಕ್ ಗ್ರೇ ಗ್ರಾಫಿಕ್ಸ್ ಮತ್ತು ಇನ್ನೊಂದು ಬ್ರಾಂಜ್ ಮತ್ತು ಡಾರ್ಕ್ ಗ್ರೇ ಗ್ರಾಫಿಕ್ಸ್ ಒಳಗೊಂಡಿದೆ. ಜೊತೆಗೆ ಸೈಡ್ ಪ್ಯಾನೆಲ್‌ಗಳು ಮತ್ತು ಫೇರಿಂಗ್‌ನಲ್ಲಿ ಮರುವಿನ್ಯಾಸಗೊಳಿಸಲಾದ ಕಾರ್ಬನ್-ಫೈಬರ್ ಮುಖ್ಯಾಂಶಗಳನ್ನು ಹೊಂದಿದೆ.

bajaj-pulsar-220f-launched-in-india-at-1-28-lakh

2025 ರ ಬಜಾಜ್ ಪಲ್ಸರ್ 220F ಬೈಕ್‌ನಲ್ಲಿ ಅದೇ 220cc ಏರ್ - ಕೂಲ್ಡ್, ಸಿಂಗಲ್ - ಸಿಲಿಂಡರ್ ಎಂಜಿನ್ ಮುಂದುವರಿಯಲಿದೆ. ಇದು 5 - ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 20.6 bhp ಗರಿಷ್ಠ ಪವರ್ ಮತ್ತು 18.55 Nm ಟಾರ್ಕ್ ಅನ್ನು ನೀಡುತ್ತದೆ. ಪವರ್, ಸೌಕರ್ಯ ಮತ್ತು ವಿಶ್ವಾಸಾರ್ಹತೆಯ ಈ ಸಮತೋಲನವು ಯಾವಾಗಲೂ ಪಲ್ಸರ್ 220F ಅನ್ನು ತನ್ನ ವಿಭಾಗದಲ್ಲಿ ಅತಿದೊಡ್ಡ ಶಕ್ತಿಯನ್ನಾಗಿಸಿದೆ.

ಬಿಡುಗಡೆಯಾದಾಗಿನಿಂದ, ಪಲ್ಸರ್ 220F ದೊಡ್ಡ ಹ್ಯಾಲೊಜೆನ್ ಇಂಡಿಕೇಟರ್‌ಗಳನ್ನು ಹೊಂದಿತ್ತು, ಈಗ ಬಜಾಜ್ ಅಂತಿಮವಾಗಿ ಇವುಗಳನ್ನು ಸ್ಲೀಕರ್ LED ಇಂಡಿಕೇಟರ್‌ಗಳೊಂದಿಗೆ ಬದಲಾಯಿಸಿದೆ. ಉಳಿದಂತೆ ಅದೇ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಪ್ರಿಲೋಡ್ ಅಡ್ಜಸ್ಟಬಲ್ ಟ್ವಿನ್ ರಿಯರ್ ಶಾಕ್ ಅಬ್ಸಾರ್ಬರ್‌ಗಳೊಂದಿಗೆ ಜೋಡಿಸಲಾದ ಅದೇ ಸ್ಟೀಲ್ ಟ್ಯೂಬ್ ಫ್ರೇಮ್ ಅನ್ನು ಹೊಂದಿದೆ.

280mm - ಮುಂಭಾಗ ಡಿಸ್ಕ್ ಮತ್ತು 230mm - ಹಿಂಭಾಗದ ಡಿಸ್ಕ್ ನೀಡಲಾಗಿದೆ. ಎರಡೂ ತುದಿಗಳಲ್ಲಿ 17 - ಇಂಚಿನ ಅಲಾಯ್ ವೀಲ್‌ಗಳನ್ನು ಒದಗಿಸಲಾಗಿದೆ. 90 - ವಿಭಾಗದ ಮುಂಭಾಗದ ಟೈರ್ ಮತ್ತು ಅಗಲವಾದ 120 - ವಿಭಾಗದ ಹಿಂಭಾಗ ಟೈರ್ ನೀಡಲಾಗಿದೆ. ಇದು ಸ್ಮಾರ್ಟ್‌ಫೋನ್ ಸಂಪರ್ಕ, ಟರ್ನ್ - ಬೈ - ಟರ್ನ್ ನ್ಯಾವಿಗೇಷನ್ ಮತ್ತು SMS/ಕರೆ ಎಚ್ಚರಿಕೆಗಳನ್ನು ಬೆಂಬಲಿಸುವ ಅದೇ LCD ಇನ್ಸ್ಟ್ರುಮೆಂಟ್ ಕನ್ಸೋಲ್ ಉಳಿಸಿಕೊಂಡಿದೆ.

ಪಲ್ಸರ್ 220F ಯಾವಾಗಲೂ ಬಜಾಜ್‌ನ ಬಲವಾದ ಉತ್ಪನ್ನವಾಗಿದ್ದು, ತನ್ನದೇ ಆದ ಅಭಿಮಾನಿಗಳನ್ನು ಹೊಂದಿದೆ. ಬ್ರ್ಯಾಂಡ್ ಅದನ್ನು ಬಜಾಜ್ ಪಲ್ಸರ್ F250 ನೊಂದಿಗೆ ಬದಲಾಯಿಸಲು ಪ್ರಯತ್ನಿಸಿತು, ಆದರೆ ಅಭಿಮಾನಿಗಳು ಐಕಾನಿಕ್ 220F ಅನ್ನು ಇಷ್ಟಪಡುತ್ತಾರೆ ಎಂಬುದನ್ನು ಅರಿತುಕೊಂಡಿದೆ. ಹಾಗಾಗಿಯೇ ಕಂಪನಿಯು ಬೈಕ್ ಅನ್ನು ಸ್ಥಗಿತಗೊಳಿಸಿದ ಕೆಲವೇ ತಿಂಗಳುಗಳಲ್ಲಿ ಮತ್ತೆ ಪರಿಚಯಿಸಿತು.

More from DriveSpark

Article Published On: Wednesday, December 17, 2025, 12:23 [IST]
English summary
Bajaj pulsar 220f reaches dealerships ahead of launch
Read more on bajaj india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+