Suzuki: ಹೊಸ ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರ ಬಿಡುಗಡೆ, ಬೆಲೆ ಎಷ್ಟು.. ವಿಶೇಷತೆಗಳೇನು?
ಸುಜುಕಿ ಇಂಡಿಯಾ, 'ಆಕ್ಸೆಸ್ 125' ಸ್ಕೂಟರ್‌ನ್ನು ಮಾರಾಟ ಮಾಡುತ್ತಿದೆ. ಇದು ಶೋ ಸ್ಟಾಪರ್ ಮಾಡೆಲ್ ಆಗಿದ್ದು, ದಾಖಲೆ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಈ ಸ್ಕೂಟರ್ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳ್ಳಲು ಸಿದ್ದಗೊಂಡಿದೆ. ಬನ್ನಿ, ನೂತನ 'ಸುಜುಕಿ ಇ ಆಕ್ಸೆಸ್'ನ ನಿರೀಕ್ಷಿತ ಬೆಲೆ ಎಷ್ಟಿರಲಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.
ಬೆಲೆ (Price):
ಹೊಚ್ಚ ಹೊಸ ಸುಜುಕಿ ಇ ಆಕ್ಸೆಸ್ (Suzuki e Access), ಇದೇ ತಿಂಗಳು ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಕೈಗೆಟುಕುವ ಬೆಲೆಯಲ್ಲಿಯೂ ಸಿಗುವ ಎಲ್ಲ ಸಾಧ್ಯತೆಗಳಿವೆ. ರೂ.1.10 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ವಿನ್ಯಾಸ & ಬಣ್ಣಗಳು (Design & Colors):
ಈ ಎಲೆಕ್ಟ್ರಿಕ್ ಸ್ಕೂಟರ್ ಕಣ್ಣು ಕುಕ್ಕುವಂತಹ ವಿನ್ಯಾಸವನ್ನು ಒಳಗೊಂಡಿದೆ. ಹ್ಯಾಂಡಲ್‌ಬಾರ್‌ಗಳ ಮೇಲೆ ಆಕರ್ಷಕವಾದ ಹೆಡ್‌ಲೈಟ್‌ನ್ನು ಪಡೆದಿದೆ. ಎಲ್‌ಇಡಿ ಇಂಡಿಕೇಟರ್‌ಗಳು ಮತ್ತು ಟೇಲ್‌ಲೈಟ್‌ನ್ನು ಹೊಂದಿದೆ. ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್, ಮೆಟಾಲಿಕ್ ಮ್ಯಾಟ್ ಬೋರ್ಡೆಕ್ಸ್ ರೆಡ್, ಪರ್ಲ್ ಗ್ರೇಸ್ ವೈಟ್, ಮೆಟಾಲಿಕ್ ಮ್ಯಾಟ್ ಫೈಬ್ರಾಯಿನ್ ಗ್ರೇ, ಪರ್ಲ್ ಜೇಡ್ ಗ್ರೀನ್ ಹಾಗೂ ಮೆಟಾಲಿಕ್ ಮ್ಯಾಟ್ ಫೈಬ್ರಾಯಿನ್ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಸುತ್ತಳತೆ (Dimensions):
ಸುಜುಕಿ ಇ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ 1,860 ಎಂಎಂ ಉದ್ದ, 715 ಎಂಎಂ ಅಗಲ ಹಾಗೂ 1,135 ಎಂಎಂ ಎತ್ತರವು ಇದೆ. 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,305 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 122 ಕೆಜಿ ತೂಕವಿದೆ.

ಕಾರ್ಯಕ್ಷಮತೆ (Permanence):
ಇದು 3.07 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 95 ಕಿ.ಮೀ ಓಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 4.1 ಕೆಡಬ್ಲ್ಯೂ ಅಶ್ವ ಶಕ್ತಿ (ಹಾರ್ಸ್ ಪವರ್) & 15 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ 71 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಡಿಸಿ ಚಾರ್ಜರ್ ಬಳಕೆಯಲ್ಲಿ ಶೇಕಡ 80% ಚಾರ್ಜ್ ಆಗಲು 72 ನಿಮಿಷ ತೆಗೆದುಕೊಳ್ಳುತ್ತದೆ. ಪೋರ್ಟಬಲ್ ಚಾರ್ಜರ್ ಉಪಯೋಗಿಸಿದಾಗ 6 ಗಂಟೆ 42 ನಿಮಿಷಗಳಲ್ಲಿ 0 ರಿಂದ 100% ಚಾರ್ಜ್ ಆಗುತ್ತದೆ.
ವೈಶಿಷ್ಟ್ಯಗಳು (Features)
ಸುಜುಕಿ ಇ ಆಕ್ಸೆಸ್ 4.2-ಇಂಚಿರುವ ಟಿಎಫ್‌ಟಿ ಡಿಸ್‌ಪ್ಲೇ, ಸುಜುಕಿ ರೈಡ್ ಕನೆಕ್ಟ್ ಅಪ್ಲಿಕೇಶನ್, ನ್ಯಾವಿಗೇಷನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರಿಮೋಟ್ ಸ್ಟಾರ್ಟ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಇಕೋ, ರೈಡ್ ಎ ಮತ್ತು ರೈಡ್ ಬಿ ಎಂಬ ರೈಡಿಂಗ್ ಮೋಡ್‌ಗಳನ್ನು ಪಡೆದಿದೆ. ಅಲಾಯ್ ವೀಲ್‌ಗಳು & ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಂಡಿದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):
ಇದು ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ - ಫೋರ್ಕ್ಸ್ ಮತ್ತು ಹಿಂಭಾಗ (ರೇರ್) ಕಾಯಿಲ್ ಸ್ಪ್ರಿಂಗ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಈ ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೋಂಡಾ ಆಕ್ಟಿವಾ ಇ, ಟಿವಿಎಸ್ ಐಕ್ಯೂಬ್ ಹಾಗೂ ಹೀರೋ ವಿಡಾಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








