Bajaj: ಮೊನ್ನೆಯಷ್ಟೆ ಬಿಡುಗಡೆ: ಹೊಸ ಚೇತಕ್ ಇವಿ ಸ್ಕೂಟರ್ ಬೆಲೆ, ಫೀಚರ್ಸ್ ವಿಶೇಷತೆಗಳು!

ಭಾರತದ ಜನಪ್ರಿಯ ದ್ವಿಚಕ್ರ ವಾಹನ ಕಂಪನಿಯಾದ ಬಜಾಜ್ (Bajaj), ಮುಂದಿನ ಪೀಳಿಗೆಯ ವೇದಿಕೆಯಲ್ಲಿ ನಿರ್ಮಿಸಲಾದ ಚೇತಕ್ 3001 ಇವಿ ಸ್ಕೂಟರ್ ಅನ್ನು ಮೊನ್ನೆಯಷ್ಟೆ ಬಿಡುಗಡೆ ಮಾಡಿದೆ. ಚೇತಕ್ 3001 ಎಲೆಕ್ಟ್ರಿಕ್ ಸ್ಕೂಟರ್ ದೇಶಾದ್ಯಂತ ಈಗ ರೂ. 99,990/- ಎಕ್ಸ್-ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಭಾರತೀಯ ಸ್ಕೂಟರ್ ಸವಾರರು ಬಯಸುವ ರೇಂಜ್ ಮತ್ತು ಪರ್ಫಾಮೆನ್ಸ್ ನೀಡುತ್ತದೆ. ಖಚಿತವಾದ ವಿಶ್ವಾಸಾರ್ಹತೆ ಮತ್ತು ಸೇವೆಯೊಂದಿಗೆ ಗೊಂದಲ ಮುಕ್ತ ಸವಾರಿ ಮಾಡಬಹುದು ಎಂದು ಬಜಾಜ್ ಹೇಳಿದೆ.

ಈಗ ಅತ್ಯಂತ ಜನಪ್ರಿಯ ಚೇತಕ್ 2903 ಮಾಡಲ್‌ಗೆ ಅಪ್‌ಗ್ರೇಡ್ ಮಾದರಿಯಾಗಿ ಚೇತಕ್ ಇವಿ 3001 ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಓಲಾ ಎಸ್ 1 ಝಡ್ ಹಾಗೂ ಟಿವಿಎಸ್ ಐಕ್ಯೂಬ್‌ಗೆ ಪೈಪೋಟಿ ನೀಡಲಿದೆ. ಹೊಸ ಚೇತಕ್ 3001 ಶೀಘ್ರದಲ್ಲೇ ಅಮೆಜಾನ್‌ನಲ್ಲಿಯೂ ಲಭ್ಯವಿರುತ್ತದೆ ಎಂದು ಬಜಾಜ್ ಕಂಪನಿ ತಿಳಿಸಿದೆ.

newly-launched-bajaj-chetak-3001-ev-price-features

ಚೇತಕ್ 3001 ದೈನಂದಿನ ಪ್ರಯಾಣ, ವಾರಾಂತ್ಯದ ವಿಹಾರ, ಕಚೇರಿ, ಪ್ರವಾಸ ಮತ್ತು ಕಾಲೇಜುಗಳಿಗೆ ಸೂಕ್ತವಾದ ಕುಟುಂಬ ಇವಿ ಆಗಿದೆ. ಚೇತಕ್ 3001 ನಿಜವಾದ ಭಾರತೀಯ ಸವಾರರಿಗೆ ನಾವೀನ್ಯತೆಯನ್ನು ನೀಡುವ ವೇದಿಕೆಯ ವಿಕಸನವಾಗಿದೆ. ಹೊಸ ಫ್ಲೋರ್‌ಬೋರ್ಡ್ ಬ್ಯಾಟರಿ ಆರ್ಕಿಟೆಕ್ಚರ್ ಹೊಂದಿರುವ ಈ ಸ್ಕೂಟರ್, ಒಮ್ಮೆ ಚಾರ್ಜ್‌ ಮಾಡಿದರೆ 127 ಕಿ.ಮೀ ಓಡಿಸುವಷ್ಟು ರೇಂಜ್ ನೀಡುತ್ತದೆ.

ಹೊಸ ಚೇತಕ್ 3001 ಇವಿ ಸ್ಕೂಟರ್ ಫ್ಲೋರ್‌ಬೋರ್ಡ್ - ಮೌಂಟೆಡ್, 3.0 kWh ಬ್ಯಾಟರಿ ಹೊಂದಿದೆ. ದೊಡ್ಡ ಶೇಖರಣಾ ಸ್ಥಳ ಮತ್ತು ರೇಂಜ್ ಹೆಚ್ಚಿಸುವ ತಂತ್ರಜ್ಞಾನದೊಂದಿಗೆ ಹೆಚ್ಚು ಪ್ರಬುದ್ಧ ಸವಾರಿ ಅನುಭವವನ್ನು ಒದಗಿಸುತ್ತದೆ. ಹೆಲ್ಮೆಟ್‌ಗಳನ್ನು ಇಡಲು ಹಾಗೂ ಶಾಪಿಂಗ್ ಬ್ಯಾಗ್‌ಗಳನ್ನು ಇಡಲು ಬೃಹತ್ 35L ಬೂಟ್ ಸ್ಪೇಸ್ ನೀಡಲಾಗಿದೆ. ಒಟ್ಟಾರೆ ಉತ್ತಮ ಸ್ಥಿರತೆ, ಹೆಚ್ಚಿನ ಸ್ಥಳಾವಕಾಶ, ಅತ್ಯುತ್ತಮ ಸವಾರಿ ಅನುಭವ ನೀಡುತ್ತದೆ.

newly-launched-bajaj-chetak-3001-ev-price-features

TecPac ವೈಶಿಷ್ಟ್ಯಗಳ ಭಾಗವಾಗಿ ಕರೆ ಸ್ವೀಕರಿಸುವುದು/ತಿರಸ್ಕರಿಸುವುದು, ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಲೈಟ್, ಆಟೋ - ಫ್ಲಾಶಿಂಗ್ ಸ್ಟಾಪ್ ಲ್ಯಾಂಪ್, ಮ್ಯೂಸಿಕ್ ಕಂಟ್ರೋಲ್, ಗೈಡ್ ಮಿ ಹೋಮ್ ಲೈಟ್‌ಗಳಂತಹ ಫೀಚರ್ಸ್ ನೀಡಲಾಗಿದೆ. ವೇಗದ ಚಾರ್ಜಿಂಗ್‌ಗಾಗಿ 750W ಚಾರ್ಜರ್ ಆಯ್ಕೆಯನ್ನು ಸಹ ಒದಗಿಸಲಾಗಿದ್ದು, ಕೇವಲ 3 ಗಂಟೆ 50 ನಿಮಿಷಗಳಲ್ಲಿ ಶೇ 80% ರಷ್ಟು ಚಾರ್ಜ್ ಮಾಡಬಹುದು.

ಚೇತಕ್‌ನ ಇತರ ಮಾಡಲ್‌ಗಳಾದ 3501, 3502 ನೇತೃತ್ವದ 35 ಸಿರೀಸ್ ಈಗಾಗಲೇ EV ಕ್ಷೇತ್ರದಲ್ಲಿನ ಎಲ್ಲಾ ಸ್ಕೂಟರ್‌ಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವುದಾಗಿ ಬಜಾಜ್ ಹೇಳಿಕೊಂಡಿದೆ. ತನ್ನ ಇವಿ ಸ್ಕೂಟರ್‌ಗಳ ಮೂಲಕ ಭಾರತದಲ್ಲಿ ಹೊಸ ಅಲೆ ಎಬ್ಬಿಸಿರುವ ಬಜಾಜ್, ಭಾರತದ ನಂ.1 ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ ಆಗಿ FY25 Q4 (ಜನವರಿ-ಮಾರ್ಚ್) ಅನ್ನು ಕೊನೆಗೊಳಿಸಿದೆ.

ಬಜಾಜ್ ಚೇತಕ್ ಇವಿ ಶ್ರೇಣಿ:

ಚೇತಕ್‌ನ ಅತ್ಯಂತ ಕೈಗೆಟುಕುವ ಟ್ರಿಮ್ 2903, ಚೇತಕ್ 3503, ಚೇತಕ್ 3502 ಮತ್ತು ಟಾಪ್-ಆಫ್-ಲೈನ್ ಮಾದರಿಯಾಗಿ ಚೇತಕ್ 3501 ಇದ್ದವು. ಎರಡನೇ ತಲೆಮಾರಿನ ಚೇತಕ್ ಲೈನ್ 3503 ಸ್ಕೂಟರ್ ಬೆಲೆಯು 1.10 ಲಕ್ಷ ರೂ., 3502 ಸ್ಕೂಟರ್ ಬೆಲೆಯು 1.22 ಲಕ್ಷ ರೂ., 3501 ಸ್ಕೂಟರ್ ಬೆಲೆಯು 1.34 ಲಕ್ಷ ರೂ. ಇದೆ.

ಒಟ್ಟಾರೆ ಬಜಾಜ್ ಚೇತಕ್ ತನ್ನ ಹಳೆಯ ಗತ್ತನ್ನು ಮತ್ತೊಮ್ಮೆ ಭಾರತದಲ್ಲಿ ಮರಳಿ ಪಡೆಯುತ್ತಿದೆ. ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡು ಹೊಸ ಇವಿ ಸ್ಕೂಟರ್ ರೂಪದಲ್ಲಿ ಎಲ್ಲರ ಮನಗೆಲ್ಲುತ್ತಿದೆ. ಬಜಾಜ್ ಈ ಸ್ಕೂಟರ್ ಅನ್ನು ಕಾಲಕಾಲಕ್ಕೆ ಅಪ್‌ಡೇಟ್‌ ಮಾಡುವ ಮೂಲಕ ಇತರ ಪ್ರತಿಸ್ಪರ್ಧಿಗಳ ಪೈಪೋಟಿಯನ್ನು ಗಟ್ಟಿಯಾಗಿ ಎದುರಿಸುತ್ತಿದೆ ಎಂದು ಹೇಳಬಹುದು.

More from DriveSpark

Article Published On: Friday, June 20, 2025, 10:30 [IST]
English summary
Newly launched bajaj chetak 3001 ev price features
Read more on bajaj india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+