45 Km ಮೈಲೇಜ್.. ಸಿಟಿಗೆ Suzuki Access 125 ಪರ್ಫೆಕ್ಟ್ ಸ್ಕೂಟರ್, 87,000ಕ್ಕೆ ಲಭ್ಯ.. ಏನೆಲ್ಲ ವಿಶೇಷತೆಗಳಿವೆ?
ಬೆಂಗಳೂರಿನಂತಹ ಮಹಾನಗರಗಳಲ್ಲಿ ದಿನನಿತ್ಯ ಕೆಲಸಕ್ಕೆ ತೆರಳುವವರಿಗೆ ಸುಜುಕಿ ಆಕ್ಸೆಸ್ 125 (Suzuki Access 125) ಸ್ಕೂಟರ್ ಅತ್ಯುತ್ತಮವಾದ ಆಯ್ಕೆಯಾಗಲಿದೆ. ಇದನ್ನು 2006ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಯಿತು. ಈ ಸ್ಕೂಟರ್ 125 ಸಿಸಿ ವಿಭಾಗದಲ್ಲಿ ತನ್ನದೇಯಾದ ಛಾಪನ್ನು ಮೂಡಿಸಿದ್ದು, ಎಲ್ಲ ವರ್ಗದ ಗ್ರಾಹಕರಿಗೂ ಕೈಗೆಟುಕುವಂತಿದೆ. ನಾವಿಲ್ಲಿ ಈ ಸ್ಕೂಟರ್‌ನ ಬೆಲೆ, ವಿನ್ಯಾಸ, ಮೈಲೇಜ್ ಮತ್ತು ವೈಶಿಷ್ಟ್ಯಗಳ ಕುರಿತಂತೆ ಎಲ್ಲ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.
ಬೆಲೆ & ರೂಪಾಂತರಗಳು (Price & Variants):
ಹೊಚ್ಚ ಹೊಸ ಸುಜುಕಿ ಆಕ್ಸೆಸ್ ಸ್ಕೂಟರ್ ಅಗ್ಗದ ದರದಲ್ಲೂ ಸಿಗುತ್ತದೆ. ಕನಿಷ್ಠ ರೂ.86,792 ಹಾಗೂ ಗರಿಷ್ಠ ರೂ.1,04,409 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಸ್ಟ್ಯಾಂಡರ್ಡ್ ಎಡಿಷನ್, ಸ್ಪೆಷಲ್ ಎಡಿಷನ್ ಡಿಸ್ಕ್ ಬ್ರೇಕ್, ರೈಡ್ ಕನೆಕ್ಟ್ ಎಡಿಷನ್ ಮತ್ತು ರೈಡ್ ಕನೆಕ್ಟ್ ಟಿಎಫ್‌ಟಿ ಎಡಿಷನ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ.

ವಿನ್ಯಾಸ & ಬಣ್ಣಗಳು (Design & Colors):
ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾದ ಎಲ್ಇಡಿ ಹೆಡ್‌ಲೈಟ್, 'ಯು' ಆಕಾರಕ್ಕೆ ಹೋಲಿಕೆಯಾಗಬಲ್ಲ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಸ್ಟೈಲಿಶ್ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಪಡೆದಿದೆ. ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್, ಸಾಲಿಡ್ ಐಸ್ ಗ್ರೀನ್, ಪರ್ಲ್ ಗ್ರೇಸ್ ವೈಟ್, ಪರ್ಲ್ ಶೈನಿ ಬೀಜ್, ಮೆಟಾಲಿಕ್ ಮ್ಯಾಟ್ ಸ್ಟೆಲ್ಲರ್ ಬ್ಲೂ ಹಾಗೂ ಪರ್ಲ್ ಮ್ಯಾಟ್ ಆಕ್ವಾ ಸಿಲ್ವರ್ ಎಂಬ ಬಣ್ಣಗಳನ್ನು ತನ್ನದಾಗಿಸಿಕೊಂಡಿದೆ.
ಸುತ್ತಳತೆ (Dimensions):
ಈ ಸ್ಕೂಟರ್ ಕೊಂಚ ಮಟ್ಟಿಗೆ ಸಣ್ಣ ಗಾತ್ರದಲ್ಲಿದೆ. ಸರಿ ಸುಮಾರು 106 ಕೆಜಿ ತೂಕವಿದೆ. 1,835 ಎಂಎಂ ಉದ್ದ, 690 ಎಂಎಂ ಅಗಲ ಹಾಗೂ 1,155 ಎಂಎಂ ಎತ್ತರ ಕೂಡ ಇದೆ. 160 ಎಂಎಂ ಗ್ರೌಂಡ್ ಕ್ಲಿಯರೆನ್ ಮತ್ತು 1,260 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.
ಕಾರ್ಯಕ್ಷಮತೆ (Powertrain):
ಹೊಸ ಸುಜುಕಿ ಆಕ್ಸೆಸ್ ಸ್ಕೂಟರ್ ಬಲಿಷ್ಠವಾಗಿರುವ ಪವರ್‌ಟ್ರೇನ್‌ನ್ನು ಹೊಂದಿದೆ. 124 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೋಲ್ಡ್ ಫ್ಯುಯೆಲ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 8.3 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 10.2 ಎನ್ಎಂ (ನ್ಯೂಟನ್ ಮೀಟರ್) ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. 45 ಕಿ.ಮೀ ವರೆಗೂ ಮೈಲೇಜ್ ನೀಡಬಲ್ಲದು. 5 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ.
ವೈಶಿಷ್ಟ್ಯಗಳು (Features):
ನೂತನ ಸುಜುಕಿ ಆಕ್ಸೆಸ್ 4.2-ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಪಡೆದಿದೆ. ಇದರಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಟ್ರಿಪ್ ಶೇರಿಂಗ್ ಹಾಗೂ ಕಾಲ್/ ಎಸ್ಎಂಎಸ್ ಅಲರ್ಟ್ ಒಳಗೊಂಡಂತೆ ಹಲವು ವಿವರಗಳನ್ನು ತೋರಿಸಲಾಗುತ್ತದೆ. ಹಾಗೆಯೇ ಎಕ್ಸ್ಟರ್ನಲ್ ಫ್ಯುಯೆಲ್ ಫಿಲ್ಲರ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಸ್ಕೂಟರ್ ಗರಿಷ್ಠ 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೆಲವೇ 6.93 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. ಅದೇ ರೀತಿಯಲ್ಲಿ 12.93 ಸೆಕೆಂಡುಗಳಲ್ಲಿ 0 ರಿಂದ 80 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):
ಇದು ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಸಿಂಗಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಸಿಬಿಎಸ್ (ಕಾಂಬಿ ಬ್ರೇಕಿಂಗ್ ಸಿಸ್ಟಮ್) ಹಾಗೂ ರೂಪಾಂತರಗಳಿಗೆ ಅನುಗುಣವಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.
ವೀಲ್ & ಟೈರ್ಗಳು (Wheel & Tires)
ಈ ಸ್ಕೂಟರ್ 12-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಮುಂದೆ 90/90-12 ಹಾಗೂ ಹಿಂದೆ 90/100-10 ಅಳತೆಯ ಟೈರ್ಗಳನ್ನು ಪಡೆದಿದೆ. ವಿಶೇಷವಾಗಿ ಇದಕ್ಕೆ ಹೋಂಡಾ ಆಕ್ಟಿವಾ 125, ಹೀರೋ ಜೂಮ್ 125 ಹಾಗೂ ಟಿವಿಎಸ್ ಜೂಪಿಟರ್ 125 ಸ್ಕೂಟರ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








