Suzuki: ಸುಜುಕಿ ಹೊಸ ಸ್ಕೂಟರ್‌ಗಳ ಎಂಜಿನ್ ಅಪ್‌ಡೇಟ್: ಈಗ ಸಖತ್ ಮೈಲೇಜ್!

ಕಮ್ಯೂಟರ್ ಸ್ಕೂಟರ್ ವಿಭಾಗದಲ್ಲಿ ಆಕರ್ಷಕ ಆಯ್ಕೆಗಳಾದ ಪ್ರಮುಖ ಸ್ಕೂಟರ್‌ಗಳಲ್ಲಿ ಅವೆನಿಸ್ ಹಾಗೂ ಬರ್ಗ್‌ಮ್ಯಾನ್ ಭಾರತದಲ್ಲಿ ಉತ್ತಮ ಬೇಡಿಕೆಯನ್ನು ಪಡೆದಿವೆ. ಕೊನೆಗೂ ಸುಜುಕಿ ಕಂಪನಿಯು ಈ ಎರಡೂ ಸ್ಕೂಟರ್‌ಗಳನ್ನು OBD-2B ಎಂಜಿನ್‌ಗಳೊಂದಿಗೆ ನವೀಕರಿಸಿ ಮೈಲೇಜ್ ಹಾಗೂ ಎಂಜಿನ್ ಪರ್ಫಾಮೆನ್ಸ್ ಹೆಚ್ಚಿಸಿದೆ. ಈ ಮೂಲಕ ನವೀಕರಿಸಿದ OBD-2B ಸುಜುಕಿ ಬರ್ಗ್‌ಮನ್ ಸ್ಟ್ರೀಟ್ EX ಈಗ ರೂ. 1,16,200 (ಎಕ್ಸ್‌ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹಾಗೆಯೇ ಬರ್ಗ್‌ಮನ್ ಸ್ಟ್ರೀಟ್ ಬೆಲೆಯು ರೂ.95,800 (ಎಕ್ಸ್‌ ಶೋರೂಂ)ನಿಂದ ಪ್ರಾರಂಭವಾಗುತ್ತದೆ.

ನವೀಕರಿಸಿದ ಸುಜುಕಿ ಅವೆನಿಸ್ ಸಂಪೂರ್ಣವಾಗಿ ಅಲ್ಯೂಮಿನಿಯಂ 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ 124.3 ಸಿಸಿ ಎಂಜಿನ್‌ನಿಂದ ಚಾಲಿತವಾಗಿದ್ದು, ಈಗ OBD-2B ಗೆ ಅನುಗುಣವಾಗಿದೆ. ಹೊಸ ನವೀಕರಣಗಳೊಂದಿಗೆ ಸುಜುಕಿ ಅವೆನಿಸ್ ಎಂಜಿನ್ 6,750 rpm ನಲ್ಲಿ 8.5 bh ಪವರ್ ಮತ್ತು 5,500 rpm ನಲ್ಲಿ 10 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

suzuki-avenis-and-burgman-obd-2b-complaint-engine-features

ಈ ಎಂಜಿನ್‌ನೊಂದಿಗೆ ತನ್ನ ತ್ವರಿತ ಪಿಕಪ್ ಹೆಚ್ಚು ಪರಿಣಾಮಕಾರಿ ಸವಾರಿಯನ್ನು ಹಾಗೆಯೇ ಉಳಿಸಿಕೊಂಡಿದೆ ಎಂದು ಹೇಳಲಾಗಿದೆ. ಇದು ಸುಜುಕಿ ಇಕೋ ಪರ್ಫಾರ್ಮೆನ್ಸ್ (SEP) ತಂತ್ರಜ್ಞಾನ ಮತ್ತು ಸುಧಾರಿತ ಇಂಧನ ಇಂಜೆಕ್ಷನ್ ತಂತ್ರಜ್ಞಾನದಿಂದ ಕೂಡ ಚಾಲಿತವಾಗಿದೆ ಎಂದು ಕಂಪನಿ ಹೇಳಿದೆ. ಗ್ಲಾಸಿ ಸ್ಪಾರ್ಕಲ್ ಬ್ಲಾಕ್, ಪರ್ಲ್ ಮೀರಾ ರೆಡ್, ಚಾಂಪಿಯನ್ ಯೆಲ್ಲೋ, ಗ್ಲಾಸಿ ಸ್ಪಾರ್ಕಲ್ ಬ್ಲಾಕ್, ಪರ್ಲ್ ಗ್ಲೇಸಿಯರ್ ವೈಟ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

OBD-2B ಸುಜುಕಿ ಅವೆನಿಸ್ ರೂ. 93,200, (ಎಕ್ಸ್ - ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಮೆಟಾಲಿಕ್ ಮ್ಯಾಟ್ ಬ್ಲಾಕ್ ನಂ. 2 / ಮ್ಯಾಟ್ ಟೈಟಾನಿಯಂ ಸಿಲ್ವರ್ ಹೊಂದಿರುವ ಹೊಸ ವಿಶೇಷ ಆವೃತ್ತಿಯು ರೂ. 94,000 ಎಕ್ಸ್-ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

suzuki-avenis-and-burgman-obd-2b-complaint-engine-features

ಇನ್ನು ನವೀಕರಿಸಿದ ಸುಜುಕಿ ಬರ್ಗ್‌ಮ್ಯಾನ್ ವಿಷಯಕ್ಕೆ ಬಂದರೆ ಅವೆನಿಸ್ ನಂತೆಯಢ ಅಲ್ಯೂಮಿನಿಯಂ 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ 124.3cc OBD-2B ಕಂಪ್ಲೈಂಟ್ ಎಂಜಿನ್‌ನಿಂದ ಚಾಲಿತವಾಗಿದೆ. 8.5 bhp ಪವರ್ ಮತ್ತು 10 Nm ಗರಿಷ್ಠ ಟಾರ್ಕ್ ಹೊರಹಾಕುತ್ತದೆ. ಬರ್ಗ್‌ಮನ್ ಸ್ಟ್ರೀಟ್ ಅನ್ನು ಸ್ಟ್ಯಾಂಡರ್ಡ್ ಎಡಿಷನ್ ಮತ್ತು ರೈಡ್ ಕನೆಕ್ಟ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ.

ಒಟ್ಟಾರೆ ಸುಜುಕಿ ಕಂಪನಿಯು ತನ್ನ ಎಲ್ಲಾ ಮಾಡಲ್‌ಗಳನ್ನು OBD-2B ಎಂಜಿನ್‌ಗಳೊಂದಿಗೆ ನವೀಕರಿಸಿದೆ. ಆದರೆ ಸುಜುಕಿ ಅವೆನಿಸ್ ಮತ್ತು ಸುಜುಕಿ ಬರ್ಗ್‌ಮನ್ ಸರಣಿಯ ಸ್ಕೂಟರ್‌ಗಳಿಗೆ ಮಾತ್ರ ಈ ನವೀಕರಣ ಬಾಕಿ ಇತ್ತು. ಈಗಾಗಲೇ ಕಂಪನಿಯ ಜನಪ್ರಿಯ ಮಾದರಿಯಾದ ಆಕ್ಸೆಸ್ ಸೇರಿದಂತೆ ಮೋಟಾರ್‌ಸೈಕಲ್‌ಗಳಾದ V-Strom, Gixxer SF 250, Gixxer 250, Gixxer SF ಮತ್ತು Gixxer ಸೇರಿದಂತೆ ಕಂಪನಿಯ ಸಂಪೂರ್ಣ ವಾಹನಗಳು OBD-2B ಕಂಪ್ಲೈಂಟ್ ಆಗಿವೆ.

ಈ ಮೂಲಕ ಸುಜುಕಿ ಕಂಪನಿಯ ಸಂಪೂರ್ಣ ವಾಹನ ಶ್ರೇಣಿಯು OBD-2B ಎಂಜಿನ್‌ಗಳೊಂದಿಗೆ ಖರೀದಿಗೆ ಲಭ್ಯವಿದೆ. ಹೊಸ ನವೀಕರಣವು ಈಗ ಈ ಎರಡೂ ಸ್ಕೂಟರ್‌ಗಳಿಗೆ ಯಾವ ಮಟ್ಟದ ಬೇಡಿಕೆಯನ್ನು ತಂದುಕೊಡಲಿದೆ ಎಂಬುದನ್ನು ಕಾದುನೋಡಬೇಕಿದೆ. ಹೊಸ ಅಪ್‌ಡೇಟ್‌ಗಳ ಬಗ್ಗೆ ನಿಮ್ಮೆ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, March 31, 2025, 12:09 [IST]
English summary
Suzuki avenis and burgman obd 2b complaint engine features
Read more on suzuki motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+