ಹೊಸ ಬಜಾಜ್ ಪಲ್ಸರ್ ಮೋಡಿ; ನೀವೇ ನೋಡಿ ಆನಂದಿಸಿ
ಕೆಲವು ದಿನಗಳ ಹಿಂದೆಯಷ್ಟೇ ದೇಶದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ನೂತನ ಪಲ್ಸರ್ ರೇಂಜ್ ಬೈಕ್ ಬಿಡುಗಡೆ ಮಾಡುವುದಾಗಿ ನಾವು ವರದಿ ಮಾಡಿದ್ದೆವು. ಇದರ ಬೆನ್ನಲ್ಲೇ ನೂತನ ಬೈಕಿನ ಚಿತ್ರಣ ಹೊರಬಂದಿದೆ.
ಆಟೋಕಾರ್ ಇಂಡಿಯಾ ವೆಬ್‌ಸೈಟ್ ನೂತನ ಬೈಕ್‌ನ ಚಿತ್ರಣ ಬಿಡುಗಡೆಗೊಳಿಸಿದೆ. ದೇಶದಲ್ಲಿ ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆಯಿರುವುದು ಹಾಗೂ ಪಲ್ಸರ್ ಜನಪ್ರಿಯತೆ ನೂತನ ಬೈಕಿನ ಯಶಸ್ಸಿಗೆ ಕಾರಣವಾಗಲಿದೆ.
ಮಾರುಕಟ್ಟೆಯಲ್ಲಿ ಈಗಾಗಲೇ ಪಲ್ಸರ್ 200 ಎನ್‌ಎಸ್ ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಇದಕ್ಕಿಂತಲೂ ಶಕ್ತಿಶಾಲಿ ಬೈಕ್‌ನ ಪರಿಚಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ಮೊದಲ ನೋಟಕ್ಕೆ ಪಲ್ಸರ್ ವಿನ್ಯಾಸವು, ಹೆಸರಾಂತ ಕವಾಸಕಿ ನಿಂಜಾ ಬೈಕ್ ಡಿಸೈನ್ ಹೋಲುತ್ತಿದೆ. ಅದೇ ಹೊತ್ತಿಗೆ ಅಲಾವ್ ವೀಲ್ಸ್ ಕೆಟಿಎಂ ಡ್ಯೂಕ್ ವಿನ್ಯಾಸ ಪಡೆದಿದೆ. ಹಾಗಾಗಿ ನೂತನ ಸ್ಪೋರ್ಟ್ಸ್ ಬೈಕ್ ಯಾವ ರೀತಿ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ನೂತನ ಬಜಾಜ್ ಪಲ್ಸರ್ 390 ಬೈಕ್‌ನಲ್ಲಿ ಕೆಟಿಎಂ 375ಸಿಸಿ ಎಂಜಿನ್ ಆಳವಡಿಸಲಾಗುತ್ತಿದೆ. ಇದು 45 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹಾಗೆಯೇ ದರದ ಬಗ್ಗೆ ಲೆಕ್ಕ ಮಾಡಿದರೆ ಕೆಟಿಎಂ 390ಗಿಂತಲೂ 25,000 ರು.ಗಳಷ್ಟು ಅಗ್ಗದ ದರದಲ್ಲಿ ಲಭಿಸುವ ನಿರೀಕ್ಷೆಯಿದೆ. ಅಂದರೆ 2 ಲಕ್ಷ ರು.ಗಳ ಅಸುಪಾಸಿನಲ್ಲಿ ದೇಶದ ರಸ್ತೆಗೆ ಅಪ್ಪಳಿಸಲಿದೆ.

ನೂತನ ಪಲ್ಸರ್ ಮುಂಬರುವ ಹಬ್ಬದ ಆವೃತ್ತಿಯಲ್ಲಿ ಅನಾವರಣಗೊಳ್ಳಲಿದ್ದು, ಮುಂದಿನ ವರ್ಷ ರಸ್ತೆಗಿಳಿಯಲಿದೆ.

ಬಜಾಜ್ ಪಲ್ಸರ್ 200 ಎನ್‌ಎಸ್

ಬಜಾಜ್ ಪಲ್ಸರ್ 200 ಎನ್‌ಎಸ್


Click it and Unblock the Notifications








