ಭಾರತದತ್ತ ಮುಖ ಮಾಡಿದ ಹ್ಯೊಸಂಗ್ ಸ್ಪೋರ್ಟ್ಸ್ ಬೈಕ್
ಕೊರಿಯಾದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಡಿಎಸ್‌ಕೆ ಹ್ಯೊಸಂಗ್ ಭಾರತಕ್ಕೆ ಅತ್ಯಾರ್ಷಕ ಕ್ರೀಡಾ ಬೈಕ್‌ಗಳನ್ನು ಸದ್ಯದಲ್ಲೇ ಪರಿಚಯಿಸಲಿದೆ. ಮುಖ್ಯವಾಗಿಯೂ ಭಾರತದಂತಹ ಬೆಳೆದು ಬರುತ್ತಿರುವ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿರುವ ಹ್ಯೊಸಂಗ್, ದೇಶದಲ್ಲಿ ಅಕ್ವಿಲಾ 250 ಕ್ರೂಸರ್ ಮತ್ತು ಜಿಡಿ250ಎನ್ ನೆಕ್ಡ್ ಸ್ಟೀಟ್ ಬೈಕ್‌ಗಳನ್ನು ಲಾಂಚ್ ಮಾಡುವ ಯೋಜನೆ ಹೊಂದಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ
ದೇಶದಲ್ಲಿ ಸ್ಪೋರ್ಟ್ಸ್ ಬೈಕ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದನ್ನು ನಿಕಟವಾಗಿ ಗಮನಿಸುತ್ತಿರುವ ಹ್ಯೊಸಂಗ್, ದೇಶದಲ್ಲಿ ತನ್ನದೇ ಆದ ಮಾರಾಟದ ವಲಯ ಸೃಷ್ಟಿ ಮಾಡುವ ಗುರಿ ಹೊಂದಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಿನ ಪೈಪೋಟಿಗೆ ಎಡೆಮಾಡಿಕೊಡಲಿದೆ.

2014ರ ಫೆಬ್ರವರಿಯಲ್ಲಿ ನಡೆಯಲಿರುವ ಇಂಡಿಯಾ ಆಟೋ ಎಕ್ಸ್‌ಪೋದಲ್ಲಿ ಹ್ಯೊಸಂಗ್ ಮೊದಲ ಕ್ರೂಸರ್ ಬೈಕ್ ಬಿಡುಗಡೆಯಾಗಲಿದೆ. ಅಕ್ವಿಲಾ 250 ಕ್ರೂಸರ್ ದೇಶದ ಗ್ರಾಹಕರು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ಉತ್ಪನ್ನವಾಗಿದೆ.

ಇನ್ನೊಂದೆಡೆ ಜಿಡಿ250ಎನ್ ಎರಡು ತಿಂಗಳು ಅಂತರಾಳದ ಬಳಿಕ ಅಂದರೆ 2014 ಎಪ್ರಿಲ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಎಂಟ್ರಿ ಲೆವೆಲ್ ಕ್ರೂಸರ್ ಬೈಕ್‌ಗಳಲ್ಲಿ ಕಾಣಿಸಿಕೊಂಡಿರುವ ಅಕ್ವಿಲಾ 250 ಬೈಕ್ 249 ಸಿಸಿ ವಿ ಟ್ವಿನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 27 ಅಶ್ವಶಕ್ತಿ (22 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 5 ಸ್ಪೀಡ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಇನ್ನು ದರದ ಬಗ್ಗೆ ಮಾತನಾಡುವುದಾದ್ದಲ್ಲಿ ಹ್ಯೊಸಂಗ್ ಅಕ್ವಿಲಾ 250 ದರ ಎರಡು ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ಇನ್ನೊಂದೆಡೆ ನೆಕ್ಡ್ ಸ್ಟ್ರೀಟ್ ಬೈಕ್ ಆಗಿರುವ ಜಿಡಿ250ಎನ್, ಕೆಟಿಎಂ ಡ್ಯೂಕ್‌ಗೆ ಸಾಮತ್ಯೆಯನ್ನು ಪಡೆದುಕೊಂಡಿದೆ.

ಇದು 249 ಸಿಸಿ, ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ದ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 25 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ.

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಜಿಡಿ250 ಎನ್ ದರ 1.6 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಎರಡು ಮಾದರಿಗಳು ದೇಶದಲ್ಲಿ ಸ್ಥಳೀಯವಾಗಿ ಜೋಡಣೆಯಾಗಲಿದ್ದು, ಇದು ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲು ನೆರವಾಗಲಿದೆ.


Click it and Unblock the Notifications








