ಎಕ್ಸ್‌ಕ್ಲೂಸಿವ್; ಹ್ಯೊಸಂಗ್ ಸಿಗ್ನೇಚರ್ ಎಡಿಷನ್ ಲಾಂಚ್
ಬೈಕ್ ಪ್ರೇಮಿಗಳಿಗೊಂದು ಖುಷಿ ಸುದ್ದಿ ಬಂದಿದ್ದು, ಸ್ಪೋರ್ಟ್ಸ್ ಬೈಕ್ ತಯಾರಕ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾದ ಹ್ಯೊಸಂಗ್ ಭಾರತ ಮಾರುಕಟ್ಟೆಗಾಗಿ ವಿಶೇಷವಾದ ಜಿಟಿ250 ಆರ್ ಎಲ್‌ಇ ಸಿಗ್ನೇಚರ್ ಎಡಿಷನ್ ಲಾಂಚ್ ಮಾಡಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ
ಹೆಸರಲ್ಲೇ ಸೂಚಿಸಿರುವಂತೆಯೇ ಪ್ರಸ್ತುತ ಬೈಕ್‌ನಲ್ಲಿ ನಿಮ್ಮ ಸಹಿ ಹೊಂದಿರಲಿದೆ. ಇದು ಗ್ರಾಹಕರಿಗೆ ವಿನೂತನ ಅನುಭವ ನೀಡಲಿದೆ. ಪುಣೆಯಲ್ಲಿ ನಡೆದ ಎಕ್ಸ್‌ಕ್ಲೂಸಿವ್ ಕಾರ್ಯಕ್ರಮದಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ಉಪಸಂಪಾದಕರು ಭಾಗವಹಿಸಿದ್ದರಲ್ಲದೆ ತಾಜಾ ಚಿತ್ರಗಳನ್ನು ನಿಮ್ಮ ಮುಂದಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಕೇವಲ ಸೀಮಿತ 50 ಆವೃತ್ತಿಗಳಲ್ಲಿ ಮಾತ್ರ ಹ್ಯೊಸಂಗ್ ಸಿಗ್ನೇಚರ್ ಎಡಿಷನ್ ಜಿಟಿ250 ಆರ್ ಎಲ್‌ಇ ವರ್ಷನ್ ಲಭ್ಯವಿರಲಿದೆ.

ಹ್ಯೊಸಂಗ್ ಮಾಲಿಕರ ಕ್ಲಬ್ ಆದ ಹ್ಯೊಸಂಗ್ ರೈಡರ್ಸ್ ಹಾಗೂ ಡಿಎಸ್‌ಕೆ ಮತ್ತು ಹ್ಯೊಸಂಗ್ ಪಾಲುದಾರಿಕೆಯ ಒಂದನೇ ವಾರ್ಷಿಕೋತ್ಸವದ ಆಚರಣೆಯ ಭಾಗವಾಗಿ ಈ ಅತ್ಯಾಕರ್ಷಕ ಬೈಕನ್ನು ಬಿಡುಗಡೆ ಮಾಡಲಾಗಿದೆ.

ಡಿಎಸ್‌ಕೆ ಮೊಟೊವೀಲ್ ಮುಖ್ಯಸ್ಥ ಶಿರಿಶ್ ಕುಲಕರ್ಣಿ ಈ ಸೂಪರ್ ಬೈಕನ್ನು ಲಾಂಚ್ ಮಾಡಿದ್ದಾರೆ. ಇದು ವಿಶೇಷವಾದ ಗ್ರಾಫಿಕ್ಸ್ ಹಾಗೂ ಹ್ಯುರಿಕೇನ್ ಹಳದಿ ಬಣ್ಣವು ಹೆಚ್ಚು ಬೇಡಿಕೆಗೆ ಕಾರಣವಾಗಿದೆ.

ಅಂದ ಹಾಗೆ ಹ್ಯೊಸಂಗ್ ಸಿಗ್ನೇಚರ್ ಎಡಿಷನ್ ಪುಣೆ ಎಕ್ಸ್ ಶೋ ರೂಂ ದರ 2.97 ಲಕ್ಷ ರು.ಗಳಾಗಿವೆ.

ಹ್ಯೊಸಂಗ್ ಜಿಟಿ250 ಆರ್ ಎಲ್‌ಇ ಸಿಗ್ನೇಚರ್ ಎಡಿಷನ್ ವಿ ಟ್ವಿನ್ ಸಿಲಿಂಡರ್ ಒಯಿಲ್ ಕೂಲ್ಡ್ 4 ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 27.6 ಬಿಎಚ್‌ಪಿ (22.07 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇದು ಗಂಟೆಗೆ ಗರಿಷ್ಠ 140 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಅಲ್ಲದೆ ಡಬಲ್ ಡಿಸ್ಕ್ ಫ್ರಂಟ್ ಬ್ರೇಕ್, ಟ್ವಿನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಅಪ್‌ಸೈಡ್ ಡೌನ್ ಫಾರ್ಕ್, ಇಎಫ್‌ಐ ಮತ್ತು ಹೊಂದಾಣಿಸಬಹುದಾದ ರಿಯರ್ ಸೆಟ್‌ಗಳಂತಹ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಅಷ್ಟೇ ಯಾಕೆ ದೇಶದಲ್ಲಿ ಸೂಪರ್ ಸ್ಪೋರ್ಟ್ಸ್ ರೈಡಿಂಗ್ ವ್ಯವಸ್ಥೆ ಹೊಂದಿರುವ ಏಕಮಾತ್ರ ಸೂಪರ್ ಬೈಕ್ ಇದಾಗಿದೆ.


Click it and Unblock the Notifications








