ಇಂಡಿಯಾ ಬೈಕ್ ವೀಕ್; 8 ಬೆನೆಲ್ಲಿ ಬೈಕ್‌ಗಳ ಆರ್ಭಟ

By Nagaraja

ಗೋವಾದಲ್ಲಿ ಎರಡು ದಿನಗಳ ಪರ್ಯಂತ ಸಾಗುತ್ತಿರುವ ಇಂಡಿಯಾ ಬೈಕ್ ವೀಕ್‌ನ ಮೊದಲ ದಿನದಲ್ಲೇ ಎಂಟು ಬೆನೆಲ್ಲಿ ಬೈಕ್‌ಗಳನ್ನು ಪರಿಚಯಿಸಿರುವ ಡಿಎಸ್‌ಕೆ ಮೊಟೊವೀಲ್ಸ್ ಆರ್ಭಟಿಸಿದೆ.

ನಿಮ್ಮಗೆಲ್ಲರಿಗೂ ತಿಳಿದಿರುವಂತೆಯೇ ಇಟಲಿಯ ಐಕಾನಿಕ್ ಬೆನೆಲ್ಲಿ ಬೈಕ್‌ಗಳನ್ನು ಭಾರತಕ್ಕೆ ಡಿಎಸ್‌ಕೆ ಪರಿಚಯಿಸಿದೆ. ಇದರಂತೆ ಈಗಾಗಲೇ ಅನಾವರಣಗೊಂಡಿರುವ ಬೈಕ್‌ಗಳ ಜೊತೆಗೆ ಹೊಸತಾದ ಮಾದರಿಗಳು ಸೇರ್ಪಡೆಗೊಂಡಿದೆ.

ಇಂಡಿಯಾ ಬೈಕ್ ವೀಕ್; 8 ಬೆನೆಲ್ಲಿ ಬೈಕ್‌ಗಳ ಆರ್ಭಟ

ಡಿಎಸ್‌ಕೆಯಿಂದ ಪ್ರದರ್ಶನಗೊಂಡಿರುವ ಬೆನೆಲ್ಲಿ ಬೈಕ್‌ಗಳು - ಟಿಎನ್‌ಟಿ300, ಟಿಎನ್‌ಟಿ600, ಟಿಎನ್‌ಟಿ 600ಜಿಟಿ, ಟಿಎನ್‌ಟಿ 899, ಟಿಎನ್‌ಟಿ 1130, ಟಿಎನ್‌ಟಿ 25, ಬ್ಲ್ಯಾಕ್‌ಸ್ಟರ್ 250 ಮತ್ತು ಟ್ರೆಕ್ ಅಮಜೋನಸ್. ಈ ಪೈಕಿ ಸೂಪರ್ ಬೈಕ್‌ಗಳಾದ ಟಿಎನ್‌ಟಿ 25, ಬ್ಲ್ಯಾಕ್‌ಸ್ಟರ್ 250 ಮತ್ತು ಟ್ರೆಕ್ ಅಮಜೋನಸ್ ಇದೇ ಮೊದಲ ಬಾರಿಗೆ ಪ್ರದರ್ಶನ ಕಂಡಿದೆ.

ಇಂಡಿಯಾ ಬೈಕ್ ವೀಕ್; 8 ಬೆನೆಲ್ಲಿ ಬೈಕ್‌ಗಳ ಆರ್ಭಟ

2014ನೇ ಸಾಲಿನಲ್ಲಿ ಬೆನೆಲ್ಲಿ ಜೊತೆ ಪಾಲುದಾರಿಕೆ ಮಾಡಿಕೊಂಡಿದ್ದ ಡಿಎಸ್‌ಕೆ ಹೈ ಎಂಡ್ ಬೈಕ್‌ಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ. ಇದರ ಟಿಎನ್25ರಿಂದ ಹಿಡಿದು ಟ್ರಕ್ ಅಮಜೋನಸ್ ಬೈಕ್‌ಗಳು 3.5 ಲಕ್ಷ ರು.ಗಳಿಂದ 14 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತದೆ.

ಇಂಡಿಯಾ ಬೈಕ್ ವೀಕ್; 8 ಬೆನೆಲ್ಲಿ ಬೈಕ್‌ಗಳ ಆರ್ಭಟ

2015ನೇ ಸಾಲಿನಲ್ಲಿ ಭಾರತದ ಸೂಪರ್ ಬೈಕ್ ಮಾರುಕಟ್ಟೆ 15,000 ಯುನಿಟ್‌ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಇದು ಬೆನೆಲ್ಲಿ ಸೂಪರ್ ಬೈಕ್‌ಗಳಿಗೆ ಭಾರತಕ್ಕೆ ಪ್ರವೇಶಿಸಲು ಸದಾವಕಾಶವಾಗಿದೆ.

ಇಂಡಿಯಾ ಬೈಕ್ ವೀಕ್; 8 ಬೆನೆಲ್ಲಿ ಬೈಕ್‌ಗಳ ಆರ್ಭಟ

ಬೆನೆಲ್ಲಿ ಹೊರತಾಗಿ ಹ್ಯೊಸಂಗ್ ಬೈಕ್‌ಗಳನ್ನು ಡಿಎಸ್‌ಕೆ ಮಾರಾಟ ಮಾಡುತ್ತಿದೆ. ಇನ್ನೊಂದೆಡೆ ಮೊದಲನೇ ಹಂತವಾಗಿ ಬೆನೆಲ್ಲಿ ಡೀಲರುಶಿಪ್‌ಗಳನ್ನು ಮುಂಬೈ, ಪುಣೆ, ಗೋವಾ, ದೆಹಲಿ, ಚಂಡೀಗಡ, ಹೈದರಾಬಾದ್, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಮತ್ತು ಅಹಮಾದಾಬಾದ್‌ನಲ್ಲಿ ತೆರೆಯಲಾಗಿದೆ.

Most Read Articles

Kannada
English summary
DSK Motowheels has unveiled 8 new Benelli bike models at the India Bike Week festival in Goa. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X