ಶೀಘ್ರದಲ್ಲೇ ರಸ್ತೆ ಪ್ರವೇಶಿಸಲಿರುವ ಇಂಡಿಯನ್ ಬೈಕ್ಸ್

By Nagaraja

ಅಮೆರಿಕ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಇಂಡಿಯನ್ ಮೋಟಾರ್ ಸೈಕಲ್ಸ್ , ಶೀಘ್ರದಲ್ಲೇ ಭಾರತ ರಸ್ತೆ ಪ್ರವೇಶಿಸಲಿದೆ. ಮೂಲಗಳ ಪ್ರಕಾರ ಇಂಡಿಯನ್ ಮೋಟಾರ್ ಸೈಕಲ್ಸ್ 2014ರಲ್ಲಿ ಭಾರತದಕ್ಕೆ ಹೊಸ ಮಾದರಿಗಳನ್ನು ಪರಿಚಯಿಸಲಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಇತ್ತೀಚೆಗಷ್ಟೇ ತವರೂರಾದ ಅಮೆರಿಕದಲ್ಲಿ ಹೊಸ ಮೂರು ಮಾದರಿ ಹಾಗೂ ನೂತನ ಎಂಜಿನ್ ಪರಿಚಿಯಿಸಿದ್ದ ಇಂಡಿಯನ್ ಮೋಟಾರ್ ಸೈಕಲ್ಸ್ ಏಷ್ಯಾದಲ್ಲಿ ತನ್ನ ವ್ಯಾಪಾರ ಕುದುರಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

2014ರಲ್ಲಿ ಇಂಡಿಯನ್ ಮೋಟಾರ್ ಸೈಕಲ್ಸ್ ಲಾಂಚ್

ಒಂದು ಕಾಲದಲ್ಲಿ ವಿಶ್ವದ ಅತಿ ದೊಡ್ಡ ಮೋಟಾರ್ ಸೈಕಲ್ ಎಂಬ ಖ್ಯಾತಿಗೂ ಪಾತ್ರವಾಗಿದ್ದ ಅಮೆರಿಕದ ಈ ಪುರಾತನ ದ್ವಿಚಕ್ರ ಸಂಸ್ಥೆಗಳಲ್ಲಿ ಒಂದಾಗಿರುವ ಇಂಡಿಯನ್ ಮೋಟಾರ್ ಸೈಕಲ್ಸ್ ಪ್ರಸ್ತುತ ಆಫ್ ರೋಡ್ ದೈತ್ಯ ಪೊಲರಿಸ್ ಇಂಡಸ್ಟ್ರೀಸ್ ಅಧೀನತೆಯಲ್ಲಿದೆ.

2014ರಲ್ಲಿ ಇಂಡಿಯನ್ ಮೋಟಾರ್ ಸೈಕಲ್ಸ್ ಲಾಂಚ್

ಇಲ್ಲಿ ಖುಷಿಯ ವಿಷಯವೆಂದರೆ ಅಮೆರಿಕದಲ್ಲಿ ಪರಿಚಯವಾಗಿರುವ ಎಲ್ಲ ಮೂರು ಮಾದರಿಗಳು ಭಾರತ ರಸ್ತೆಯನ್ನು ತಲುಪಲಿದೆ.

ಭಾರತಕ್ಕೆ ಆಗಮನವಾಗಲಿರುವ ಬೈಕ್‌ಗಳು

ಭಾರತಕ್ಕೆ ಆಗಮನವಾಗಲಿರುವ ಬೈಕ್‌ಗಳು

ಚೀಫ್ ಕ್ಲಾಸಿಕ್,

ಚೀಫ್ ವಿಂಟೇಜ್ ಮತ್ತು

ಇಂಡಿಯನ್ ಚೀಫ್ಟೈನ್

2014ರಲ್ಲಿ ಇಂಡಿಯನ್ ಮೋಟಾರ್ ಸೈಕಲ್ಸ್ ಲಾಂಚ್

ಮೂಲತ: ಎಲ್ಲ ಮೂರು ಬೈಕ್‌ಗಳು ಸಮಾನತೆಯನ್ನು ಹೊಂದಿದ್ದರೂ ಬೆಲೆಗೆ ಅನುಸಾರವಾಗಿ ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

2014ರಲ್ಲಿ ಇಂಡಿಯನ್ ಮೋಟಾರ್ ಸೈಕಲ್ಸ್ ಲಾಂಚ್

ಈ ಎಲ್ಲ ಮಾದರಿಗಳು ಎಲ್ಲ ಹೊಸತನದಿಂದ ಕೂಡಿದ ಥಂಡರ್ ಸ್ಟ್ರೋಕ್ 111 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 1819 ಸಿಸಿ ಎಂಜಿನ್ ಆಗಿದ್ದು, 161 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

2014ರಲ್ಲಿ ಇಂಡಿಯನ್ ಮೋಟಾರ್ ಸೈಕಲ್ಸ್ ಲಾಂಚ್

ಅಂದರೆ ಪ್ರೀಮಿಯಂ ಬೈಕ್‌ಗಳನ್ನು ದೇಶಕ್ಕೆ ಪರಿಚಯಿಸಲಿದೆ. ಈ ಪೈಕಿ ಎಂಟ್ರಿ ಲೆವೆಲ್ ಚೆಫ್ ಕ್ಲಾಸಿಕ್ ಬೈಕ್ ಎಬಿಎಸ್, ಕ್ರೂಸ್ ಕಂಟ್ರೋಲ್, ಪ್ರೀಮಿಯಂ ಲೆಥರ್ ಸೀಟು ಮತ್ತು ಕಿಲೆಸ್ ಎಂಟ್ರಿಗಳಂತಹ ಫೀಚರ್‌ಗಳನ್ನು ಪಡೆದುಕೊಳ್ಳಲಿದೆ.

2014ರಲ್ಲಿ ಇಂಡಿಯನ್ ಮೋಟಾರ್ ಸೈಕಲ್ಸ್ ಲಾಂಚ್

ಪ್ರಸ್ತುತ ಬೈಕ್ 18,999 ಅಮೆರಿಕನ್ ಡಾಲರ್ ಅಂದರೆ ಅಂದಾಜು 12 ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರಾಟವಾಗಲಿದೆ.

2014ರಲ್ಲಿ ಇಂಡಿಯನ್ ಮೋಟಾರ್ ಸೈಕಲ್ಸ್ ಲಾಂಚ್

ಇನ್ನು ಚೀಫ್ ವಿಂಟೇಜ್ 13 ಲಕ್ಷ ರು. ಹಾಗೂ ಇಂಡಿಯನ್ ಚೀಫ್ಟೈನ್ 14 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

2014ರಲ್ಲಿ ಇಂಡಿಯನ್ ಮೋಟಾರ್ ಸೈಕಲ್ಸ್ ಲಾಂಚ್

ಅಂದ ಹಾಗೆ ಈ ಎಲ್ಲ ಮಾದರಿಗಳು 2014 ವರ್ಷಾರಂಭದಲ್ಲಿ ದೇಶಕ್ಕೆ ಪರಿಚಯವಾಗುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

More from DriveSpark

Article Published On: Wednesday, December 4, 2013, 15:52 [IST]
English summary
Indian Motorcycles, which revived its product lineup with a brand new engine and three new models earlier this year in the United States earlier, will soon be making it way to India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+