ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಭರ್ಜರಿ ಎಂಟ್ರಿ
ಜಗತ್ತಿನಾದ್ಯಂತದ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕೆಫೆ ರೇಸರ್ ಕೊನೆಗೂ ಆಂಗ್ಲರ ನಾಡಿಗೆ ಭರ್ಜರಿ ಎಂಟ್ರಿ ಕೊಟ್ಟಿದ್ದು, ನಿಕಟ ಭವಿಷ್ಯದಲ್ಲೇ ಭಾರತೀಯ ರಸ್ತೆಗಳಲ್ಲೂ ಸದ್ದು ಮಾಡಲಿದೆ.
ನೂತನ ಕಾಂಟಿನೆಂಟಲ್ ಜಿಟಿ ದರ 5,200 ಬ್ರಿಟಿಷ್ ಪೌಂಡ್‌ಗಳಾಗಿವೆ. ಅಂದರೆ ಇದನ್ನು ಭಾರತೀಯ ರುಪಾಯಿಗೆ ಪರಿವರ್ತಿಸಿದಾಗ 5.2 ಲಕ್ಷ ರು.ಗಳಷ್ಟು ದುಬಾರಿಯಾಗಿದೆ.
60 ವರ್ಷಗಳಲ್ಲೇ ಮೊದಲ ಕೆಫೆ ರೇಸರ್...
ನೂತನ ಕಾಂಟಿನೆಂಟಲ್ ಜಿಟಿ ಕಳೆದ 60 ವರ್ಷಗಳಲ್ಲೇ ರಾಯಲ್ ಎನ್‌ಫೀಲ್ಡ್‌ನಿಂದ ಆಗಮನವಾಗಿರುವ ಮೊದಲ ಕೆಫೆ ರೇಸರ್ ಎಂಬ ಖ್ಯಾತಿಗೆ ಪಾತ್ರವಾಗಿದ್ದು, ಬೈಕ್ ಪ್ರೇಮಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ಎಂಜಿನ್ ಮಾಹಿತಿ
ನೂತನ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿಯಲ್ಲಿ ಸಿಂಗಲ್ ಸಿಲಿಂಡರ್ 535 ಸಿಸಿ ಫ್ಯೂಯಲ್ ಇಂಜೆಕ್ಟಡ್ ಯುಸಿಇ ಎಂಜಿನ್ ಆಳವಡಿಸಲಾಗಿದ್ದು, 29.1 ಪಿಎಸ್ ಪವರ್ (44 ಎನ್‌ಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಟ್ರಾನ್ಸ್‌ಮಿಷನ್
ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಳವಡಿಸಲಾಗಿದೆ.

ಇಂಧನ ಟ್ಯಾಂಕ್
ನೂತನ ಕಾಂಟಿನೆಂಟಲ್ ಜಿಟಿ 184 ಕೆ.ಜಿ ಭಾರವಿದ್ದು, 13.5 ಲೀಟರ್ ತುಂಬಿಸುವ ಸಾಮರ್ಥ್ಯ ಹೊಂದಿದೆ.

ಸ್ಫೂರ್ತಿ
1960ರ ಕಾಲಘಟ್ಟದ ಕೆಫೆ ರೇಸರ್‌ನಿಂದ ಸ್ಫೂರ್ಟಿ ಪಡೆದು ನೂತನ ಕಾಂಟಿನೆಂಟಲ್ ಜಿಟಿ ನಿರ್ಮಾಣ ಮಾಡಲಾಗಿದೆ.

ಸಿಂಗಲ್ ಸೀಟ್
ಇದು ತನ್ನದೇ ಆದ ವಿಶಿಷ್ಟ್ ಕೆಫೆ ರೇಸರ್ ಶೈಲಿಯನ್ನು ಪಡೆದುಕೊಂದಿದ್ದು, ಸಿಂಗಲ್ ಸೀಟರ್ ವ್ಯವಸ್ಥೆ ಪಡೆದುಕೊಂಡಿದೆ.

ಚೆನ್ನೈ ಘಟಕ
ಚೆನ್ನೈನ ಓರಗಡಂ ಘಟಕದಲ್ಲಿ ಉತ್ಪಾದಿಸಲ್ಪಡುವ ಕಾಂಟಿನೆಂಟಲ್ ಜಿಟಿ ಬ್ರಿಟನ್‌ಗೆ ರಫ್ತಾಗಲಿದೆ.

ಪ್ರಸಕ್ತ ಸಾಲಿನಲ್ಲೇ ಭಾರತ ಎಂಟ್ರಿ
ಅಂದ ಹಾಗೆ ಭಾರತೀಯರು ನೂತನ ಕೆಫೆ ರೇಸರ್ ಬರಮಾಡಿಕೊಳ್ಳಲು ಸಜ್ಜಾಗುತ್ತಿದ್ದು, ಬಲ್ಲ ಮೂಲಗಳ ಪ್ರಕಾರ 2013 ವರ್ಷಾಂತ್ಯದಲ್ಲಿ ಆಗಮನವಾಗುವ ನಿರೀಕ್ಷೆಯಿದೆ.

ಮೇಡ್ ಇನ್ ಇಂಡಿಯಾ
ಒಟ್ಟಿನಲ್ಲಿ ಭಾರತ ನಿರ್ಮಿತ ಬೈಕ್‌ವೊಂದು ಬ್ರಿಟನ್ ರಸ್ತೆ ಪ್ರವೇಶಿಸಿರುವುದು ಅಭಿಮಾನಿಗಳಿಗೆ ಅತೀವ ಖುಷಿ ತರುವಂತಾಗಿದೆ.


Click it and Unblock the Notifications