ಹ್ಯೊಸಂಗ್ ಅಕ್ವಿಲಾ ಜಿವಿ250 ಟೆಸ್ಟ್ ಡ್ರೈವ್; ನೈಜತೆ ಕಾಪಾಡಿದೆಯೇ?

By Nagaraja

ಬೆಳೆಯುತ್ತಿರುವ ಭಾರತ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳಿಗೂ ಭಾರಿ ಬೇಡಿಕೆಯಿದೆ. ಇಂದಿನ ಯುವ ಜನಾಂಗವು ವಾಹನೋದ್ಯಮದತ್ತ ಅದರಲ್ಲೂ ವಿಶೇಷವಾಗಿಯೂ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಆಗುತ್ತಿರುವ ಬೆಳವಣಿಗಳ ಬಗ್ಗೆ ನಿಕಟವಾಗಿ ಗಮನಿಸುತ್ತಾರೆ.

ವೆಸ್ಪಾ ಸುಂದರಿಯ ಬಳುಕು ನೋಟ

ಹಾಗಿರುವಾಗ ಇಂದಿನ ಯುವ ಜನಾಂಗದ ಬೇಡಿಕೆಗೆ ಅನುಗುಣವಾಗಿ ಅತ್ಯಾಕರ್ಷಕ ಕ್ರೀಡಾ ಬೈಕ್‌ಗಳನ್ನು ಪರಿಚಯಿಸಲಾಗುತ್ತದೆ. ಇವುಗಳಲ್ಲಿ ಕ್ರೂಸರ್ ಬೈಕ್‌ಗಳು ಪ್ರಮುಖವಾಗಿದೆ. ಸಾಮಾನ್ಯವಾಗಿ ಕ್ರೂಸರ್ ಬೈಕ್‌ಗಳು ತನ್ನದೇ ಆದ ವಿಶಿಷ್ಟ ರೀತಿಯ ವಿನ್ಯಾಸವನ್ನು ಪಡೆದುಕೊಂಡಿದ್ದು, ಸಾಮಾನ್ಯವಾಗಿ ಮುಂದಕ್ಕೆ ವಿಸ್ತರಿಸಿದ ಪಾದ, ಎತ್ತರದಲ್ಲಿ ಹ್ಯಾಂಡಲ್‌ಬಾರ್ ಹಾಗೆಯೇ ದೇಹ ಸ್ವಲ್ಪ ಹಿಂದಕ್ಕೆ ಸರಿದಿರುವ ವಿನ್ಯಾಸವನ್ನು ಪಡೆದುಕೊಂಡಿರುತ್ತದೆ.

ನೀವು ಏಕೆ ದಟ್ಸನ್ ಗೊ ಖರೀದಿಸಬೇಕು?

ಅಂದ ಹಾಗೆ ಇತ್ತೀಚೆಗಷ್ಟೇ ದಕ್ಷಿಣ ಕೊರಿಯಾ ಮೂಲದ ಹ್ಯೊಸಂಗ್ ಸಂಸ್ಥೆಯು ಅಕ್ವಿಲಾ ಜಿವಿ250 ಕ್ರೂಸರ್ ಬೈಕನ್ನು ಪರಿಚಯಿಸಿತ್ತು. ಈ ಸುಂದರವಾದ ಬೈಕ್‌ ಚಾಲನೆ ಮಾಡುವ ಅವಕಾಶವನ್ನು ನಮ್ಮ ಡ್ರೈವ್ ಸ್ಪಾರ್ಕ್ ಉಪ ಸಂಪಾದಕರಾದ ಅಜಿಂಕ್ಯಾ ಪಾರಾಲಿಕರ್ ಪಡೆದಿದ್ದರು. ಅಷ್ಟಕ್ಕೂ ಕ್ರೂಸರ್ ಬೈಕ್‌ಗಳಲ್ಲಿ ಅಕ್ವಿಲಾ ತನ್ನ ನೈಜತೆ ಕಾಪಾಡುವಲ್ಲಿ ಯಶಸ್ವಿಯಾಗಿದೆಯೇ? ಬನ್ನಿ ನಮ್ಮ ತಜ್ಞರ ಮಾತುಗಳಿಂದಲೇ ಟೆಸ್ಟ್ ರೈಡ್ ರಿವ್ಯೂ ಆಲಿಸೋಣವೇ...

ಹ್ಯೊಸಂಗ್ ಅಕ್ವಿಲಾ ಜಿವಿ250 ಟೆಸ್ಟ್ ಡ್ರೈವ್ ರಿವ್ಯೂ

ಪರೀಕ್ಷೆ ಮಾಡಿದ ಮಾದರಿ: 2014 ಹ್ಯೊಸಂಗ್ ಅಕ್ವಿಲಾ ಜಿವಿ250

ಬಿಡುಗಡೆ ದಿನಾಂಕ: 2014 ಫೆಬ್ರವರಿ 6

ಬೆಲೆ: 2.82 ಲಕ್ಷ ರು. (ಮುಂಬೈ)

ಪರೀಕ್ಷಾರ್ಥ ಕೀ.ಮೀ.: 200ಕ್ಕಿಂತಲೂ ಹೆಚ್ಚು

ಸ್ಥಳ: ಲೋನವಾಲಾ, ಪುಣೆ

ಬೈಕ್ ಪರೀಕ್ಷೆ ಮಾಡಿದವರು: ಅಜಿಂಕ್ಯಾ ಪಾರಾಲಿಕರ್ (ಡ್ರೈವ್ ಸ್ಪಾರ್ಕ್ ಉಪ ಸಂಪಾದಕರು)

ವಿನ್ಯಾಸ

ವಿನ್ಯಾಸ

ಯಾವುದೇ ಬೈಕ್ ಆದರೂ ಮೊದಲು ವಿನ್ಯಾಸದ ಬಗ್ಗೆ ತಿಳಿದುಕೊಳ್ಳಲು ಜನರು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ನಿಜ ಹೇಳಬೇಕೆಂದರೆ ತನ್ನ 650 ಸಿಸಿ ಅಕ್ವಿಲಾ ಪ್ರೊ ಗಮನಿಸಿದರೆ ಈ 250ಸಿಸಿ ಬೈಕ್ ಅತ್ಯುತ್ತಮ ವಿನ್ಯಾಸ ಕಾಪಾಡಿಕೊಂಡು ಬಂದಿದೆ. ಅಂತೆಯೇ ಅತ್ಯುತ್ತಮ ರಸ್ತೆ ಉಪಸ್ಥಿತಿಯನ್ನು ಹೊಂದಿದೆ. ಇದರ ಹೆಡ್‌ಲೈಟ್, ಟೈಲ್ ಲೈಟ್ ಹಾಗೂ ಅಲಾಯ್ ವೀಲ್‌ಗಳಂತಹ ಘಟಕಗಳು ಅಕ್ವಿಲಾಗೆ ಸಾಂಪ್ರದಾಯಿಕ ಕ್ರೂಸರ್ ಲುಕ್ ಪ್ರದಾನ ಮಾಡುತ್ತಿದೆ.

ಹ್ಯೊಸಂಗ್ ಅಕ್ವಿಲಾ ಜಿವಿ250 ಟೆಸ್ಟ್ ಡ್ರೈವ್ ರಿವ್ಯೂ

ಇಲ್ಲಿ ಹ್ಯೊಸಂಗ್ ಅಕ್ವಿಲಾ ಜಿವಿ250 ಬಣ್ಣ ಆಯ್ಕೆ ಬಗ್ಗೆ ವಿಶೇಷವಾಗಿ ಮಾತನಾಡಬೇಕಾಗಿದೆ. ಇದರ ಕ್ರೋಮ್ ಸ್ಪರ್ಶ ಪಡೆದ ಎಂಜಿನ್, ಏರ್ ಸ್ಕೂಪ್ ಜತೆ ಇಎಫ್‌ಐ ಲೆಗೊ, ಫ್ರಂಟ್ ಶಾಕ್, ಎಕ್ಸಾಸ್ ಪೈಪ್, ಗ್ರಾಬ್ ರೈಲ್ ಎಲ್ಲವೂ ಈ ಕ್ರೂಸರ್ ಬೈಕ್‌ಗೆ ಪ್ರೀಮಿಯಂ ಟಚ್ ನೀಡುವಲ್ಲಿ ಯಶಸ್ವಿಯಾಗಿದೆ.

ಎಂಜಿನ್, ಇಂಧನ ದಕ್ಷತೆ

ಎಂಜಿನ್, ಇಂಧನ ದಕ್ಷತೆ

ನೂತನ ಅಕ್ವಿಲಾ ಜಿವಿ250 ಕ್ರೂಸರ್ ಬೈಕ್ 250 ಸಿಸಿ, ವಿಟ್ವಿನ್ ಏರ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 26.21 ಅಶ್ವಶಕ್ತಿ (21.37 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಇನ್ನು ಮೈಲೇಜ್ ಬಗ್ಗೆ ಮಾತನಾಡುವುದಾದ್ದಲ್ಲಿ ಈ ಕೊರಿಯಾ ಸಂಸ್ಥೆ ಪ್ರಕಾರ ಪ್ರತಿ ಲೀಟರ್‌ಗೆ 28 ಕೀ.ಮೀ. ಮೈಲೇಜ್ ನೀಡಲಿದೆ. ಆದರೆ ನೀವು ನಗರ ಪ್ರದೇಶದಲ್ಲಿ ಚಾಲನೆ ಮಾಡುವುದಾದ್ದಲ್ಲಿ ಇದರ ಪ್ರಮಾಣ ಗಣನೀಯವಾಗಿ ಕುಸಿಯಲಿದೆ.

ಚಾಲನೆ, ಹ್ಯಾಂಡ್ಲಿಂಗ್, ಆರಾಮದಾಯಕತೆ

ಚಾಲನೆ, ಹ್ಯಾಂಡ್ಲಿಂಗ್, ಆರಾಮದಾಯಕತೆ

ನಯವಾದ ರಸ್ತೆಯಲ್ಲಿ ದೀರ್ಘ ಪಯಣಕ್ಕೆ ಹೇಳಿ ಮಾಡಿಸಿದ ಬೈಕ್ ಇದಾಗಿದೆ. ಇದರ ಹ್ಯಾಂಡಲ್‌ಬಾರ್ ಹಾಗೂ ಸಿಟ್ಟಿಂಗ್ ವ್ಯವಸ್ಥೆಯು ಸುಲಭ ಪಯಣವನ್ನು ಖಾತ್ರಿಪಡಿಸುತ್ತದೆ. ಹಾಗಿದ್ದರೂ ಕಡಿಮೆ ಎತ್ತರದ ಸವಾರರಿಗೆ ಸ್ವಲ್ಪ ಕಷ್ಟವಾಗಲಿದೆ. ಇನ್ನು ಕ್ಲಚ್ ಹಾಗೂ ಗೇರ್‌ಬಾಕ್ಸ್‌ಗಳು ನಯವಾಗಿದ್ದು, ನಿಖರವಾಗಿದೆ. ಆದರೆ ಕ್ರೂಸರ್ ಬೈಕ್‌ಗಳನ್ನು ಮೊದಲು ಬಳಕೆ ಮಾಡುವವರಿಗೆ ಸ್ವಲ್ಪ ಕಷ್ಟಕರವಾಗಬಹುದು. ಅಂತೆಯೇ ಸೀಟು ಬಗ್ಗೆ ಮಾತನಾಡುವುದಾದ್ದಲ್ಲಿ ಹಿಂದುಗಡೆ ಪ್ರಯಾಣಿಕರಿಗೂ ಆರಾಮದಾಯಕ ಸಿಟ್ಟಿಂಗ್ ವ್ಯವಸ್ಥೆ ಹೊಂದಿದೆ. ಆದರೆ ಸಾಮಾನ್ಯ ಕ್ರೂಸರ್‌ಗಳಲ್ಲಿರುವಂತೆಯೇ ಬ್ಯಾಕ್ ರೆಸ್ಟ್ ಕೊರತೆ ಕಾಡಲಿದೆ.

ಬ್ರೇಕಿಂಗ್ ಹಾಗೂ ಭಾರ

ಬ್ರೇಕಿಂಗ್ ಹಾಗೂ ಭಾರ

ಮೊದಲ ನೋಟದಲ್ಲಿ ಅಕ್ವಿಲಾ ದೈತ್ಯಕಾರದ ಬೈಕೆಂದು ಗೋಚರಿಸಿದರೂ ಇದರ ಭಾರ ಕೇವಲ 167 ಕೆ.ಜಿ ಮಾತ್ರವಾಗಿದೆ. ಹಾಗಾಗಿ ಬೈಕ್ ಹ್ಯಾಂಡ್ಲಿಂಗ್ ಸುಲಭವಾಗಿದೆ. ಆದರೆ ಸಸ್ಪೆಷನ್ ಸ್ನೇಹಪರವಾಗಿಲ್ಲದಿದ್ದರಿಂದ ಭಾರತದಂತಹ ರಸ್ತೆ ಪರಿಸ್ಥಿತಿಯಲ್ಲಿ ಸ್ವಲ್ಪ ಕಷ್ಟಕರವಾಗಬಹುದು. ಹಾಗೆಯೇ ವಿಂಡ್ ಡಿಫ್ಲೆಕ್ಟರ್ ಕೊರತೆಯು ಹೆದ್ದಾರಿಗಳಲ್ಲಿ ಹೆಚ್ಚಿನ ವೇಗತೆಯಲ್ಲಿ ಸಾಗುವಾಗ ತೊಂದರೆ ಕೊಡಲಿದೆ. ಇನ್ನು ಬ್ರೇಕಿಂಗ್ ನಾವು ಬಯಸಿದ್ದಷ್ಟು ರೀತಿಯಲ್ಲಿ ತೀಕ್ಷ್ಣವಾಗಿಲ್ಲ. ಹಿಂದಿನ ಬ್ರೇಕ್ ಸಹ ಪ್ರಭಾವಿ ಎನಿಸಿಕೊಂಡಿಲ್ಲ.

ಇನ್ಸ್ಟ್ರಮೆಂಟ್ ಕ್ಲಸ್ಟರ್

ಇನ್ಸ್ಟ್ರಮೆಂಟ್ ಕ್ಲಸ್ಟರ್

ಇದರ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಸ್ಪೀಡೋಮೀಟರ್ ಹಾಗೂ ಆರ್‌ಪಿಎಂ ಕೌಂಟರ್‌ಗಳಿವೆ. ಇದು ಕಪ್ಪು ತಲಹದಿಯೊಂದಿಗೆ ಕೆಂಪು ಹಾಗೂ ಬಿಳಿ ರೀಡಿಂಗ್ ವ್ಯವಸ್ಥೆ ಹೊಂದಿದೆ. ಇದರ ಓಡೋಮೀಟರ್, ಟ್ರಿಪ್ ಮೀಟರ್, ಇಂಧನ ಹಾಗೂ ಟೈಮ್ ಗೇಜ್ ಎಲ್ಲವೂ ಡಿಜಿಟಲ್ ಸ್ಪರ್ಶ ಪಡೆದಿವೆ.

ಸ್ವಿಚ್‌ಗೇರ್

ಸ್ವಿಚ್‌ಗೇರ್

ನೂತನ ಹ್ಯೊಸಂಗ್ ಬೈಕ್‌ನಲ್ಲಿ ಸ್ವಿಚ್‌ಗಳ ಪ್ಲಾಸ್ಟಿಕ್ ಗುಣಮಟ್ಟತೆಯನ್ನು ಹೆಚ್ಚಿಸಲಾಗಿದೆ. ಹಾಗಿದ್ದರೂ ಇನ್ನಷ್ಟು ಸುಧಾರಣೆಯ ಅಗತ್ಯ ಕಂಡುಬರುತ್ತದೆ. ಇದೇ ಸಂದರ್ಭದಲ್ಲಿ ಹಜಾರ್ಡ್ ಲೈಟ್ ಸೌಲಭ್ಯ ಕೂಡಾ ಲಭ್ಯವಿರುತ್ತದೆ.

 ಬಣ್ಣಗಳು

ಬಣ್ಣಗಳು

ಈ ಮೊದಲೇ ತಿಳಿಸಿರುವಂತೆಯೇ ಕಣ್ಮಣ ಸೆಳೆಯುವ ಬಣ್ಣಗಳು ಹ್ಯೊಸಂಗನ್ನು ಇತರ ಕ್ರೂಸರ್‌ಗಳಿಂದ ಭಿನ್ನವಾಗಿಸಲಿದೆ. ಇದು ಮೂರು ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಅವುಗಳೆಂದರೆ

ಬ್ಲ್ಯಾಕ್ ಜತೆಗೆ ಗ್ರೇ ಡಿಕಾಲ್ಸ್,

ವೈಟ್ ಜತೆಗೆ ರೆಡ್ಡೀಶ್ ಬ್ರೌನ್ ಡಿಕಾಲ್ಸ್,

ಬ್ಲ್ಯಾಕ್ ಜತೆಗೆ ರೆಡ್ಡೀಶ್ ಬ್ರೌನ್ ಡಿಕಾಲ್ಸ್.

ಅಂತಿಮ ತೀರ್ವು

ಅಂತಿಮ ತೀರ್ವು

ಪ್ಲಸ್ ಪಾಯಿಂಟ್:

  • ಸಾಂಪ್ರದಾಯಿಕ ಕ್ಲಾಸಿಕ್ ವಿನ್ಯಾಸ,
  • ಫಿಂಟ್ ಆಂಡ್ ಫಿನಿಶ್,
  • ಪವರ್ ಮತ್ತು ವೇಗತೆ,
  • ಆರಾಮ ಸವಾರಿ
  • ಹಿನ್ನಡೆ :

    • ಗಂಟೆಗೆ 100ಕ್ಕೂ ಹೆಚ್ಚು ಕೀ.ಮೀ. ವೇಗತೆಯಲ್ಲಿ ಚಲಿಸಿದಾಗ ವೈಬ್ರೇಷನ್ ಅನುಭವ,
    • ಪ್ರಾಯಾಸಕರ ಹಿಂದಿನ ಸಸ್ಪೆಷನ್,
    • ವಿಸ್ತರಿಸಿದ ಫ್ರಂಟ್ ಫೂಟ್ ರೆಸ್ಟ್ (ವಿಶೇಷವಾಗಿಯೂ ಕಡಿಮೆ ಎತ್ತರದ ಚಾಲಕರಿಗೆ),
    • ಬ್ಯಾಕ್ ರೆಸ್ಟ್ ಹಾಗೂ ವಿಂಡ್‌ಶೀಲ್ಡ್ ಕೊರತೆ,
    • ರಿಯರ್ ಡ್ರಮ್ ಬ್ರೇಕ್, ಎಬಿಎಸ್ ಅಲಭ್ಯತೆ
    • ಎಕ್ಸ್ ಫಾಕ್ಟರ್: ಆಧುನಿಕತೆಗೆ ತಕ್ಕಂತೆ ರೆಟ್ರೊ ವಿನ್ಯಾಸಿತ ಕ್ರೂಸರ್ ಬೈಕ್

      ಹಣದ ಮೌಲ್ಯ: 2.5/5

      ಹ್ಯೊಸಂಗ್ ಬಗ್ಗೆ ಒಂದಿಷ್ಟು

      ಹ್ಯೊಸಂಗ್ ಬಗ್ಗೆ ಒಂದಿಷ್ಟು

      1978ನೇ ಇಸವಿಯಲ್ಲಿ ಹ್ಯೊಸಂಗ್ ಸಂಸ್ಥೆಯ ಉಪ ವಿಭಾಗವಾಗಿ ಸ್ಥಾಪನೆಗೊಂಡಿದ್ದ ಹ್ಯೊಸಂಗ್ ಮೋಟಾರ್ಸ್ ಆಂಡ್ ಮೆಷಿನರಿ, 1979ನೇ ಇಸವಿಯಲ್ಲಿ ದಕ್ಷಿಣ ಕೊರಿಯಾದಲ್ಲಿ ದ್ವಿಚಕ್ರ ವಾಹನಗಳ ಉತ್ಪಾದನೆಯನ್ನು ಆರಂಭಿಸಿತ್ತು. ಬಳಿಕ 1986ನೇ ಇಸವಿಯಲ್ಲಿ ಜಪಾನ್‌ನಲ್ಲಿ ತನ್ನದೇ ಆದ ಸ್ವತಂತ್ರ ಅಧ್ಯಯನ ಹಾಗೂ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ್ದ ಹ್ಯೊಸಂಗ್, ಸಾಮೂಹಿಕ ಉತ್ಪಾದನೆಯನ್ನು ಆರಂಭಿಸಿತ್ತು. ನಿಮ್ಮ ಮಾಹಿತಿಗಾಗಿ, 1988ರ ಸಿಯೋಲ್ ಬೇಸಿಗೆ ಒಲಿಂಪಿಕ್ಸ್‌ಗಾಗಿ ಅಧಿಕೃತ ವಿತರಕರಾಗಿ ಹ್ಯೊಸಂಗ್ ಕೆಲಸ ಮಾಡಿತ್ತು.

      ಸದ್ಯ 20ಕ್ಕೂ ಹೆಚ್ಚು ವರ್ಷಗಳ ಕಾಲ ಯಶಸ್ವಿ ದ್ವಿಚಕ್ರ ವಾಹನಗಳನ್ನು ಉತ್ಪಾದಿಸಿರುವ ಹ್ಯೊಸಂಗ್ ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶಿಷ್ಟಿತೆಯನ್ನು ಕಾಪಾಡಿಕೊಂಡು ಬಂದಿದೆ. ಇನ್ನು ಭಾರತದಲ್ಲಂತೂ ಡಿಎಸ್‌ಕೆ ಜತೆ ಸೇರಿಕೊಂಡು ಹ್ಯೊಸಂಗ್ ಬೈಕ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಸದ್ಯ ಹ್ಯೊಸಂಗ್ ಅಕ್ವಿಲಾ ಜಿವಿ250 ಕ್ರೂಸರ್ ಬೈಕ್ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
Hyosung launched the Aquila GV250 recently and it looks similar to the Kinetic Aquila sans the sissy bar at the rear. Hyosung claim it to be an all-new bike, yet somehow it doesn't seem all that fresh except for the EFI logo and two-into-one exhaust system.
Story first published: Saturday, April 19, 2014, 17:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X