ಅಮೆರಿಕ ಬ್ರಾಂಡ್ ಇಂಡಿಯನ್ ಶೈಲಿಯಲ್ಲಿ ಗ್ರಾಂಡ್ ಎಂಟ್ರಿ

By Nagaraja

ಮಗದೊಂದು ಐಕಾನಿಕ್ ಬ್ರಾಂಡ್ ಭಾರತ ಪ್ರವೇಶವಾಗಿದೆ. ಪೊಲರಿಸ್ ಇಂಡಸ್ಟ್ರಿಸ್ ಒಡೆತನದಲ್ಲಿರುವ ಅತಿ ಪುರಾತನ ಹಾಗೂ ಕ್ಲಾಸಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಇಂಡಿಯನ್ ಮೋಟಾರ್‌ಸೈಕಲ್ಸ್ ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ಪ್ರೀಮಿಯಂ ಕ್ರೂಸರ್ ಬೈಕ್‌ಗಳಲ್ಲಿ ಗುರುತಿಸಿಕೊಂಡಿರುವ ಇಂಡಿಯನ್ ಮೋಟಾರ್‌ಸೈಕಲ್ಸ್ ದೈತ್ಯಾಕಾರವನ್ನು ಪಡೆದುಕೊಂಡಿದ್ದು, ವಾಹನ ಪ್ರೇಮಿಗಳಿಗೆ ನೋಡುವುದೇ ಒಂಥರ ಖುಷಿಯಾಗಿದೆ.

ಇವನ್ನೂ ಓದಿ: ಇವನೇನು ಕಮ್ಮಿಯೇನಲ್ಲ ಬಿಡಿ

ಪ್ರಸಕ್ತ ಸಾಲಿನಲ್ಲಿ ದೇಶಕ್ಕೆ ಪರಿಚಯವಾಗಲಿರುವ ಮೂರು ಮಾದರಿಗಳಲ್ಲಿ ಇಂಡಿಯನ್ ಚೀಫ್ ವಿಂಟೇಜ್ ಒಂದಾಗಿದೆ. ಬಿಡುಗಡೆ ಮೊದಲೇ ಈ ಐಕಾನಿಕ್ ಬೈಕ್‌ನಲ್ಲಿ ಅದ್ದೂರಿ ಪಯಣ ಹಮ್ಮಿಕೊಳ್ಳುವಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ಪ್ರತಿನಿಧಿಗಳು ಯಶಸ್ವಿಯಾಗಿದ್ದು, ಎಕ್ಸ್‌ಕ್ಲೂಸಿವ್ ಚಾಲನಾ ವಿಮರ್ಶೆಯನ್ನು ಓದುಗರ ಮುಂದಿಡುತ್ತಿದ್ದೇವೆ.

ಇಂಡಿಯನ್ ಚೀಫ್ ವಿಂಟೇಜ್ ಮೊದಲ ಚಾಲನಾ ಅನುಭವ

1901ನೇ ಇಸವಿಯಲ್ಲಿ ಸ್ಥಾಪನೆಯಾಗಿರುವ ಇಂಡಿಯನ್ ಮೋಟಾರ್‌ಸೈಕಲ್ಸ್ ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿದೆ. ಪ್ರಸ್ತುತ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಚೀಫ್ ವಿಂಟೇಜ್ ಬೈಕ್ ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ಮುಂದಿನ ಒಂದೊಂದೇ ಸ್ಲೈಡರ್ ಮೂಲಕ ತಿಳಿಯಿರಿ...

ಕಿರು ಚಿತ್ರಣ

ಕಿರು ಚಿತ್ರಣ

ಪರೀಕ್ಷಾರ್ಥ ಮಾದರಿ: 2015 ಇಂಡಿಯನ್ ಚೀಫ್ ವಿಂಟೇಜ್

ಎಂಜಿನ್: 1811ಸಿಸಿ, ವಿ-ಟ್ವಿನ್

ಗೇರ್ ಬಾಕ್ಸ್: 6 ಸ್ಪೀಡ್

ರಸ್ತೆ ಪರೀಕ್ಷೆ ಮಾಡಿದ ಸ್ಥಳ: ಥಾಣೆ, ಮಹಾರಾಷ್ಟ್ರ

ಬೆಲೆ: 28,49,600 ರು. (ಎಕ್ಸ್ ಶೋ ರೂಂ ದೆಹಲಿ)

ವಿನ್ಯಾಸ

ವಿನ್ಯಾಸ

ಕ್ರೂಸರ್ ಶೈಲಿಯ ವಿನ್ಯಾಸವನ್ನು ಹೊಂದಿರುವ ಇಂಡಿಯನ್ ಚೀಫ್ ವಿಂಟೇಜ್, ಇದೇ ಮೊದಲ ಬಾರಿಗೆ ದೇಶಕ್ಕೆ ಅನೇಕ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಇದು ಭಾರತೀಯ ಬೈಕರ್ ಪಾಲಿಗೆ ಅದ್ವಿತಿಯ ಅನುಭವ ನೀಡಲಿದೆ. ವಿಶಿಷ್ಟ ರೈಡರ್ ಸಂಪ್ರಾದಾಯವನ್ನು ಉಳಿಸಿಕೊಂಡು ಬಂದಿರುವ ಚೀಫ್ ವಿಂಟೇಜ್, ಫ್ರಂಟ್ ಫೆಂಡರ್ (ಮಡ್ ಗಾರ್ಡ್) ಗ್ರಾಂಡ್ ಲುಕ್ ಕಾಪಾಡಿಕೊಂಡಿದೆ.

ವಿನ್ಯಾಸ

ವಿನ್ಯಾಸ

ಬದಿಯಿಂದಲೂ ನೋಡುವಾಗಲೂ ಕ್ಲಾಸಿಕ್ ವಿನ್ಯಾಸ ಎಲ್ಲರನ್ನು ಒಮ್ಮೆ ಕಣ್ತೆರೆದು ನೋಡುವಂತೆ ಮಾಡುತ್ತದೆ. ಇದು ವಿಂಟೇಜ್ ಅನುಭವದ ಜೊತೆಗೆ ಆಧುನಿಕ ಸ್ಪರ್ಶತೆಯಲ್ಲಿ ಕಿಂಚಿತ್ತು ಕಮ್ಮಿಯೇನಲ್ಲ ಬಿಡಿ. ಗರಿಷ್ಠ ಮಟ್ಟದ ಸುರಕ್ಷತೆಯ ಜೊತೆಗೆ ಅದ್ಭುತ ಚಾಲನಾ ಅನುಭವ ನೀಡುವುದು ಸಂಸ್ಥೆಯ ಪ್ರಮುಖ ಇರಾದೆಯಾಗಿದೆ. ಇದರಲ್ಲಿ ಆಳವಡಿಸಲಾಗಿರುವ ಪ್ರೀಮಿಯಂ ಲೆಥರ್ ಸೀಟು, ಬದಿಯಲ್ಲಿ ಸ್ಯಾಡಲ್ ಬ್ಯಾಗ್ ಇವೆಲ್ಲವೂ ಅದ್ಭುತ ರಸ್ತೆ ಸಾನಿಧ್ಯವನ್ನು ನೀಡುತ್ತದೆ.

ಎಂಜಿನ್

ಎಂಜಿನ್

ನೀವು ನಂಬ್ತೀರೋ ಬಿಡ್ತಿರೋ ನಿಮಗೆ ಬಿಟ್ಟ ವಿಚಾರ. ಅಂದ ಹಾಗೆ ಇಂಡಿಯನ್ ಮೋಟಾರ್‌ಸೈಕಲ್ಸ್ ಚೀಫ್ ವಿಂಟೇಜ್ ಬೈಕ್ ಬರೋಬ್ಬರಿ 1811ಸಿಸಿ ವಿ ಟ್ವಿನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಥಂಡರ್ ಸ್ಟ್ರೋಕ್ 111 ಎಂದೇ ಹೆಚ್ಚು ಸುಪ್ರಸಿದ್ಧ. ನಿಸ್ಸಂಶಯವಾಗಿಯೂ ಇದು 138.9 ತಿರುಗುಬಲದಲ್ಲಿ 100 ಅಶ್ವಶಕ್ತಿ ಉತ್ಪಾದಿಸುತ್ತದೆ. ಅಂತೆಯೇ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆ ಬೆಲ್ಟ್ ಫೈನಲ್ ಡ್ರೈವ್ ವ್ಯವಸ್ಥೆಯು ಇದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಅಮೆರಿಕದ ಈ ವಾಹನ ತಯಾರಿಕ ಸಂಸ್ಥೆಯು ಚೀಫ್ ವಿಂಟೇಜ್ ಬೈಕ್‌ನಲ್ಲಿ ಎಬಿಎಸ್, ಕ್ರೂಸ್ ಕ್ರಂಟ್ರೋಲ್, ಕೀಲೆಸ್ ಎಂಟ್ರಿ, ಕ್ವಿಕ್ ರಿಲೀಸ್ ಲೆಕ್ಸಾನ್ ವಿಂಡ್ ಶೀಲ್ಡ್, ಕ್ವಿಕ್ ರಿಲೀಸ್ ವಿಂಟೇಜ್ ಲೆಥರ್ ಸ್ಯಾಡಲ್ ಬ್ಯಾಗ್, ಹೈವೇ ಮತ್ತು ಲೈಟ್ ಬಾರ್ ಮುಂತಾದ ಸೌಲಭ್ಯವಿರುತ್ತದೆ. ಅಷ್ಟೇ ಯಾಕೆ ಗ್ರಾಹಕರು ತಮ್ಮ ಅಭಿರುಚಿಗೆ ಅನುಸಾರವಾಗಿ ಕಸ್ಟಮೈಸ್ಡ್ ಮಾಡಿಕೊಳ್ಳಬಹುದಾಗಿದೆ.

  • ಥಂಡರ್ ಸ್ಟ್ರೋಕ್ 111 ಎಂಜಿನ್,
  • ಕೀಲೆಸ್ ಸ್ಟಾರ್ಟ್,
  • ಕ್ರೋಮ್ ಸ್ಪರ್ಶ,
  • ಲೆಥರ್ ಬಳಕೆ,
  • ತ್ವರಿತವಾಗಿ ತೆರವುಗೊಳಿಸಬಹುದಾದ ವಿಂಡ್ ಶಿಲ್ಡ್
  • ಚಾಲನಾ ಅನುಭವ

    ಚಾಲನಾ ಅನುಭವ

    ಮೊದಲ ನೋಟದಲ್ಲಿ ದೈತ್ಯಕಾರದಲ್ಲಿರುವ ಈ ಗಾಡಿಯನ್ನು ಚಾಲನೆ ಮಾಡುವುದಾದರೂ ಹೇಗೆ ಎಂಬ ಗೊಂದಲವನ್ನುಂಟು ಮಾಡಿದರೂ ನೈಜ ಪರಿಸ್ಥಿತಿಗೆ ಬಂದಾಗ ಇದರ ಚಾಲನೆ ತುಂಬಾನೇ ಸುಲಭವಾಗಿದೆ. 364 ಕೆ.ಜಿ ತೂಕದ ಈ ಭಾರಿ ಬೈಕ್ ಟ್ರಾಫಿಕ್‌ನಲ್ಲಿ ನಿಲ್ಲುವುದರಿಂದ ಆರಂಭಿಸಿದ ಕ್ಷಣ ಕ್ಷಣದ ಚಾಲನೆಯಲ್ಲೂ ನಿಮಗೆ ರಾಯಲ್ ಅನುಭವ ನೀಡಲಿದೆ.

    ಚಾಲನಾ ಅನುಭವ

    ಚಾಲನಾ ಅನುಭವ

    ವಿಶೇಷವೆಂದರೆ ನಿಮ್ಮ ಬಳಿ ಚೀಫ್ ವಿಂಟೇಜ್ ಬೈಕ್ ಇದ್ದರೆ ನೀವು ಸೆಲೆಬ್ರಿಟಿಯಾದಂತೆ. ನೆರೆದ್ದವರೆಲ್ಲ ನಿಮ್ಮನ್ನೇ ಸುತ್ತುವರಿಯಲಿದ್ದು ರಾಜ ಮರ್ಯಾದೆ ನೀಡಲಿದ್ದಾರೆ. ಒಟ್ಟಿನಲ್ಲಿ ಬೈಕ್ ಪ್ರೇಮಿಗೆ ಫುಲ್ ಮೀಲ್ಸ್ ಮಾಡಿದ ಸುಖ ನೀಡಲಿದೆ.

    ಚಾಲನಾ ಅನುಭವ

    ಚಾಲನಾ ಅನುಭವ

    ಠಾಣೆಯ ಜನನಿಬಿಡ ಟ್ರಾಫಿಕ್‌ ಪ್ರದೇಶದಲ್ಲೂ ಇಂಡಿಯನ್ ಚೀಫ್ ವಿಂಟೇಜ್ ಅದ್ಭುತ ಚಾಲನಾ ಅನುಭವವನ್ನು ಪ್ರದಾನ ಮಾಡಿತ್ತು. ಆರಂಭದಲ್ಲಿ ನಮಗೆ ಬೈಕ್ ಹೀಟಿಂಗ್ ಸಮಸ್ಯೆ ಕಾಡಲಿದೆಯೆಂಬ ಆತಂಕವಿದ್ದರೂ ಇದನ್ನೆಲ್ಲ ಈ ಐಕಾನಿಕ್ ಬೈಕ್ ಅಚ್ಚುಕಟ್ಟಾಗಿ ನಿಭಾಯಿಸಿದೆ.

    ನಮಗಿಷ್ಟವಾದ ಸಂಗತಿಗಳು - ಲಾಂಛನ

    ನಮಗಿಷ್ಟವಾದ ಸಂಗತಿಗಳು - ಲಾಂಛನ

    ಇಂಡಿಯನ್ ಚೀಫ್ ವಿಂಟೇಜ್ ಬೈಕ್‌ನಲ್ಲಿ ನೀಡಲಾಗಿರುವ ದೊಡ್ಡಕಾರದ ರೆಡ್ ಇಂಡಿಯನ್ ವಾರ್ ಬೊನೆಟ್ ಲಾಂಛನವು ಹೆಚ್ಚಿನ ಗಮನ ಸೆಳೆಯುತ್ತಿದೆ. ಇದು ಇಂಡಿಯನ್ ಮೋಟಾರ್‌ಸೈಕಲ್ಸ್‌ನ ಹೆಮ್ಮೆಯ ಸಂಕೇತವಾಗಿದ್ದು, ಎರಡನೇ ಮಹಾಯುದ್ಧದ ಬಳಿಕ 1947ರಿಂದ ಈ ಐಕಾನಿಕ್ ಬೈಕ್‌ನ ಪ್ರತಿಷ್ಠೆಯನ್ನು ಎತ್ತಿ ಹಿಡಿದಿದೆ. ಇಂಡಿಯನ್ ಬೈಕಿಂಗ್ ಪರಂಪರೆಯನ್ನು ಉಳಿಸಿಕೊಳ್ಳುವಲ್ಲಿ ಇದರ ಪಾತ್ರ ಪ್ರಮುಖವಾಗಿದೆ.

    ನಮಗಿಷ್ಟವಾದ ಸಂಗತಿಗಳು - ವಿಂಡ್‌ಶೀಲ್ಡ್

    ನಮಗಿಷ್ಟವಾದ ಸಂಗತಿಗಳು - ವಿಂಡ್‌ಶೀಲ್ಡ್

    ಮುಂಭಾಗದಲ್ಲಿ ಎದ್ದು ಕಾಣಿಸುತ್ತಿರುವ ವಿಂಡ್ ಶೀಲ್ಡ್ ಇಂಡಿಯನ್ ಚೀಫ್ ವಿಂಟೇಜ್ ಬೈಕ್‌ಗೆ ಗ್ರಾಂಡ್ ಲುಕ್ ನೀಡುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದು ಚಾಲಕರಿಗೆ ಸುರಕ್ಷಾ ಕವಚಾ ರೂಪದಲ್ಲೂ ಕೆಲಸ ಮಾಡತ್ತಿದೆ. ಹಾಗೆಯೇ ದೂರ ಪ್ರಯಾಣದ ವೇಳೆ ಎದುರಿನಿಂದ ಬಲವಾಗಿ ಬೀಸುವ ಗಾಳಿಯನ್ನು ತಡೆಯುತ್ತಿದ್ದು ದಣಿವನ್ನು ಕಡಿಮೆ ಮಾಡುತ್ತದೆ.

    ನಮಗಿಷ್ಟವಾದ ಸಂಗತಿಗಳು - ಸ್ಯಾಡಲ್ ಬ್ಯಾಗ್

    ನಮಗಿಷ್ಟವಾದ ಸಂಗತಿಗಳು - ಸ್ಯಾಡಲ್ ಬ್ಯಾಗ್

    ಇಂಡಿಯನ್ ಚೀಫ್ ವಿಂಟೇಜ್ ಬೈಕ್‌ನಲ್ಲಿ ಸ್ಟೋರೆಜ್ ಜಾಗಕ್ಕೆ ಯಾವುದೇ ಕಮ್ಮಿಯೇನಿಲ್ಲ. ಹಿಂದುಗಡೆ ಸೀಟಿನ ಪಕ್ಕದಲ್ಲೇ ದೊಡ್ಡದಾದ ಸ್ಯಾಡಲ್ ಬ್ಯಾಗ್ ನೀಡಲಾಗಿದೆ. ಇದು ಬೈಕ್‌ಗೆ ಕ್ಲಾಸಿಕ್ ಲುಕ್ ನೀಡುವುದಷ್ಟೇ ಅಲ್ಲದೆ ಚಾಲಕರಿಗೆ ಅಗತ್ಯ ವಸ್ತುಗಳನ್ನಿಡಲು ನೆರವು ಮಾಡುತ್ತದೆ.

    ನಮಗಿಷ್ಟವಾದ ಸಂಗತಿಗಳು - ಇನ್ಸ್ಟ್ರುಮೆಂಟ್ ಕ್ಲಸ್ಟರ್

    ನಮಗಿಷ್ಟವಾದ ಸಂಗತಿಗಳು - ಇನ್ಸ್ಟ್ರುಮೆಂಟ್ ಕ್ಲಸ್ಟರ್

    ಇನ್ನೊಂದು ಎತ್ತಿ ಹಿಡಿಯಬೇಕಾದ ವಿಷಯವೆಂದರೆ ಇದರಲ್ಲಿ ಕೊಟ್ಟಿರುವ ಇನ್ಸ್ಟ್ರುಮೆಂಟ್ ಕ್ಲಸ್ಟರ್. ವಿಶೇಷವೆಂದರೆ ಇಂಧನ ಟ್ಯಾಂಕ್ ಮೇಲೆ ಇದನ್ನು ಲಗತ್ತಿಸಲಾಗಿದ್ದು, ಚಾಲಕರಿಗೆ ಪ್ರಯಾಣದ ವೇಳೆ ಅಗತ್ಯ ಮಾಹಿತಿಗಳನ್ನು ನೀಡುತ್ತದೆ. ಇದರಲ್ಲಿ ಅನಲಾಗ್ ಮೀಟರ್, ಸ್ಪೀಡೋಮೀಟರ್ ಹಾಗೂ ಡಿಜಿಟಲ್ ಸ್ಪರ್ಶದೊಂದಿಗೆ ಕ್ರೋಮ್ ಫಿನಿಶಿಂಗ್ ನೋಡಬಹುದಾಗಿದೆ.

    ನಮಗಿಷ್ಟವಾಗದ ಸಂಗತಿಗಳು - ಸ್ವಿಚ್

    ನಮಗಿಷ್ಟವಾಗದ ಸಂಗತಿಗಳು - ಸ್ವಿಚ್

    ಇಂಡಿಯನ್ ಚೀಫ್ ವಿಂಟೇಜ್ ಗಾಡಿಯಲ್ಲಿರುವ ಸ್ವಿಚ್ ಜೋಡಣೆ ಇಕ್ಕಟ್ಟಾಗಿದ್ದು, ಚಾಲನೆ ವೇಳೆ ನಿರ್ವಹಣೆ ಕಷ್ಟಕರವಾಗುತ್ತದೆ. ಸಣ್ಣ ಕಾಯದ ಚಾಲಕರಿಗೆ ಹಾರ್ನ್ ಹಾಗೂ ಸ್ವಿಚ್ ಗೇರ್ ತಲುಪುವುದು ಕಷ್ಟವೆನಿಸುತ್ತದೆ.

    ನಮಗಿಷ್ಟವಾಗದ ಸಂಗತಿಗಳು - ಬ್ಯಾಕ್ ರೆಸ್ಟ್

    ನಮಗಿಷ್ಟವಾಗದ ಸಂಗತಿಗಳು - ಬ್ಯಾಕ್ ರೆಸ್ಟ್

    ಇಷ್ಟೊಂದು ಹೆಚ್ಚು ಮೊತ್ತ ಹೂಡಿಕೆ ಮಾಡುವಾಗ ಸಂಪೂರ್ಣ ಪ್ರೀಮಿಯಂ ಸೌಲಭ್ಯಗಳನ್ನು ಒದಗಿಸುವುದು ಪ್ರತಿಯೊಂದು ವಾಹನ ತಯಾರಿಕ ಸಂಸ್ಥೆಗಳ ಕರ್ತವ್ಯವಾಗಿರುತ್ತದೆ. ಆದರೆ ಇಂಡಿಯನ್ ಚೀಫ್ ವಿಂಟೇಜ್ ಹಿಂದುಗಡೆ ಸಹ ಸವಾರರಿಗೆ ಬ್ಯಾಕ್ ರೆಸ್ಟ್ ಕೊರತೆಯನ್ನು ಎದುರಿಸುತ್ತದೆ. ಇನ್ನು ಗ್ರಾಬ್ ರೈಲ್ ಕೊರತೆ ಸಹ ಕಾಡುತ್ತದೆ.

    ಸ್ಪರ್ಧಿಗಳು

    ಸ್ಪರ್ಧಿಗಳು

    ಇಂಡಿಯನ್ ಚೀಫ್ ವಿಂಟೇಜ್ ಬೈಕ್ ದೇಶದಲ್ಲಿ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ಗ್ಲೈಡ್, ಟ್ರಯಂಪ್ ಥಂಡರ್ ಬರ್ಡ್ ಎಲ್‌ಟಿ, ಹೋಂಡಾ ಗೋಲ್ಡ್ ವಿಂಗ್ ಮತ್ತು ಸುಜುಕಿ ಎಂ1800ಆರ್ ಮಾದರಿಗಳಿಂದ ಸ್ಪರ್ಧೆ ಎದುರಿಸಲಿದೆ. ಆದರೆ ತನ್ನ ಸ್ಪರ್ಧಿಗಿಂತಲೂ ಹೆಚ್ಚು ಪ್ರೀಮಿಂಯ ನೋಟ ಕಾಪಾಡಿಕೊಂಡಿರುವುದು ಇಂಡಿಯನ್ ಮೋಟಾರ್ ಸೈಕಲ್ಸ್ ಪ್ರಯೋಜನವಾಗಿದೆ. ಹಾಗಿದ್ದರೂ ಈ ಪ್ರೀಮಿಯಂ ಬೈಕ್ ತಮ್ಮದಾಗಿಸಲು ದೇಶದ ಗ್ರಾಹಕರು ರೆಡಿಯಾಗಿರುತ್ತಾರೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

    ಇಂಡಿಯನ್ ಮೋಟಾರ್‌ಸೈಕಲ್ ಬಗ್ಗೆ ಒಂದಿಷ್ಟು...

    ಇಂಡಿಯನ್ ಮೋಟಾರ್‌ಸೈಕಲ್ ಬಗ್ಗೆ ಒಂದಿಷ್ಟು...

    ಅಮೆರಿಕದ ಅತಿ ಪುರಾತನ ಕ್ರೂಸರ್ ಬ್ರಾಂಡ್ ಆಗಿರುವ ಇಂಡಿಯನ್ ಮೋಟಾರ್‌ಸೈಕಲ್ಸ್ ಸಂಸ್ಥೆಯನ್ನು 1901ನೇ ಇಸವಿಯಲ್ಲಿ ಜಾರ್ಜ್ ಎಂ. ಹೆಂಡಿ ಮತ್ತು ಆಸ್ಕರ್ ಹೆಡ್ ಸ್ಟ್ರೋಮ್ ಸ್ಥಾಪಿಸಿದ್ದರು. ಅಮೆರಿಕದ ಮೆಸ್ಸಾಸುಸೆಟ್‌ನ ಸ್ಪ್ರಿಂಗ್ ಫೀಲ್ಡ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಂಡಿಯನ್ ಮೋಟಾರ್ ಸೈಕಲ್ಸ್‌ನ ಹೆಸರಾಂತ ಸ್ಕೌಟ್ (1920ರಿಂದ 1946) ಹಾಗೂ (1922ರಿಂದ 1953) ಹಾಗೂ ಚೀಫ್ ಮಾದರಿಗಳಿಂದಾಗಿ ಅಂದಿನ ಕಾಲದಲ್ಲೇ ವಿಶ್ವ ನಂ.1 ದ್ವಿಚಕ್ರ ವಾಹನ ತಯಾರಿಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

    ಆದರೆ 1953ನೇ ಇಸವಿಯಲ್ಲಿ ಸಂಪೂರ್ಣ ದೀವಾಳಿಯಾಗಿದ್ದ ಕಳೆದ ಹಲವಾರು ವರ್ಷಗಳಿಂದ ಹಲವಾರು ಸಂಸ್ಥೆಗಳು ಒಡೆತನದ ಬಳಿಕ ಕೊನೆಗೆ 2011ರಲ್ಲಿ ಪೊಲರಿಸ್ ಇಂಡಸ್ಟ್ರೀಸ್ ತನ್ನ ತೆಕ್ಕೆಗೆ ವಹಿಸಿಕೊಂಡಿತ್ತು. ತದಾ ಬಳಿಕ ಭರ್ಜರಿ ಪುನರಾಗಮನ ನೀಡುವ ತವಕದಲ್ಲಿದೆ.


More from DriveSpark

Article Published On: Wednesday, January 14, 2015, 16:57 [IST]
English summary
First Ride: 2015 Indian Chief Vintage—Ride Into A Storm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+